Tel: 7676775624 | Mail: info@yellowandred.in

Language: EN KAN

    Follow us :


ಏನೋ ಮಾಡಲು ಹೋಗಿ ಏನು ಮಾಡಿದೆ ನೀನು...!?! ಅಂಬರೀಶಣ್ಣ

Posted Date: 25 Nov, 2018

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು...!?! ಅಂಬರೀಶಣ್ಣ

ಅಂಬಿ ಎರಡಕ್ಷರದಲ್ಲೇ ಅಡಗಿತ್ತು ಆ ಅಭಿಮಾನ, ಮಳವಳ್ಳಿ ಹುಚ್ಚೇಗೌಡ ಅಮರನಾಥ್, ಅಂಬರೀಶ್ ಆಗಿ, ಜಲೀಲನಾಗಿ, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡಿಗರ ಮನಗೆದ್ದ ಈ ಅಂಬಿ ಈ ಜಗತ್ತಿನೊಳಗಿಲ್ಲ, ನಿಜವೇ... ಊಹೂ ನಂಬಲಸಾಧ್ಯ ಎಂದೇ ಹೇಳುತ್ತಾರೆ ಎಲ್ಲರೂ, ಆದರೂ‌ ಸತ್ಯ ಸತ್ಯವೇ, ಸಾವು ಸಾವೇ ಜಗತ್ತಿನಲ್ಲಿ ಏನು ಬೇಕಾದರೂ ಕಾಸು ಕೊಟ್ಟು ಕೊಂಡುಕೊಳ್ಳಬಹುದು ಆದರೇ ಈ ಉಸಿರು ?

ಕಣ್ಣಿಗೆ ಕಾಣದ ಗಾಳಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆಯಾದರೂ ದೇಹಕ್ಕೆ ಬೇಕಾದ ಗಾಳಿಯನ್ನು ಹಿಡಿದಿಟ್ಟುಕೊಳ್ಳಲಾಗುವುದಿಲ್ಲ.

ಆದುದರಿಂದಲೇ ಈ ಎರಡಕ್ಷರದ ಸಾವು ಎಂಬ ಪದಕ್ಕೆ ಎಲ್ಲಿಲ್ಲದ ಮನ್ನಣೆ, ಕಳ್ಳ, ಪುಂಡ, ಪೋಕರಿ, ರಾಜಮಹಾರಾಜ, ಪ್ರಧಾನಮಂತ್ರಿ, ಸಹಸ್ರಾರು ಕೋಟಿಗಳ ಒಡೆಯ ಅಷ್ಟೇ ಏಕೆ ಸತ್ಯಶೀಲ, ಮಹಾತ್ಮ ಎಂದೆನಿಸಿಕೊಳ್ಳುವವನು ಸಹ *ಆಯಸ್ಸು* ಮುಗಿದ ಒಂದು ಕ್ಷಣವೂ ಭೂಮಿ ಮೇಲಿರಲು ಅರ್ಹನಾಗಿರುವುದಿಲ್ಲ ಈ ಸಾಲಿಗೆ ಖಡಕ್ ಮಾತುಗಾರ ಕನ್ನಡದ ಕಂದ ಹಲವು ಬಿರುದಾಂಕಿತ ರೆಬೆಲ್ ಸ್ಟಾರ್ ಡಾ ಅಂಬರೀಶ್ ಇಂದು ನಮ್ಮೆಲ್ಲರ ಮುಂದೆ ಮಣ್ಣಾಗುವ ತನಕ ಒಂದು ನಿರ್ಜೀವ ವಸ್ತು, ಮಣ್ಣಾದ ನಂತರ ನೆನಪು ಅಷ್ಟೇ.

ಯಾರೂ ಏನು ಬೇಕಾದರೂ ಹೇಳಲಿ, ಟೀಕಿಸಲಿ ಕೆಲವು ವಿಷಯಗಳಲ್ಲಿ ಅದರಲ್ಲೂ ದಾನ ಧರ್ಮ ಸಿನಿಮಾ ರಂಗದ ಬಿಕ್ಕಟ್ಟು ಬಗೆಹರಿಸುವ ಬಗ್ಗೆ ಹೀಗೆ ಅನೇಕ ವಿಷಯಗಳಲ್ಲಿ ಮೇರುನಟರಾದ ಡಾ ರಾಜಕುಮಾರ್, ಡಾ ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ರವರನ್ನು ಮೀರಿಸುವ ಏಕೈಕ ಕಲಾವಿದ ಎಂದರೆ ತಪ್ಪಾಗಲಾರದು, ದೊಡ್ಡವರಿರಲಿ, ಚಿಕ್ಕವರಿರಲಿ ಬಡವ ಬಲ್ಲಿದನಿರಲಿ, ಅವನೆಂತ ರಾಜಕಾರಣಿಯೇ ಆಗಿರಲಿ *ಏಕ್ ಮಾರ್ ದೋ ತುಕಡಾ* ಅನ್ನೋ ಹಾಗೆ ಒಂದೇ ಮಾತು, *ಏಯ್ ಏನಿವಾಗ, ಏನ್ಮಾಡ್ತೀಯಾ ?* ಎಂಬ ಖಡಕ್ ಮಾತುಗಳೇ ಎದುರುಗಡೆಯವರನ್ನು ಅಧೀರಗೊಳಿಸಿಬಿಡುತ್ತಿದ್ದವು.

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಅವರು ನಟಿಸಿರುವ ಚಿತ್ರಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಹಾಡುಗಳು ಇದ್ದೇ ಇರುತ್ತಿದ್ದವು, ಅವುಗಳ ಜೊತೆಗೆ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಬಗ್ಗು ಬಡಿಯುವ ಪಾತ್ರಕ್ಕೆ ಹೆಚ್ಚು ಮಹತ್ವ ಕೊಡುತ್ಯಿದ್ದರು. ಗಜೇಂದ್ರ ಚಿತ್ರದ ಅಕ್ಕಿಇಲ್ಲಾ, ಬೇಳೆಇಲ್ಲಾ, ಸ್ವಾತಂತ್ರ್ಯ ಬಂದಾದರೂ... ಚಕ್ರವ್ಯೂಹ ಚಕ್ರವ್ಯೂಹ ಚಕ್ರವ್ಯೂಹ, ಇನ್ನಿತರೆ ದೇಶದ ರಾಜ್ಯದ ರಾಜಕಾರಣಿಗಳ ಥ ಬಯಲಿಗೆಳದಂತ ಚಿತ್ರಗಳು.

ಏನೋ ಮಾಡಲೂ ಹೋಗಿ ಏನು ಮಾಡಿದೆ ನೀನೂ...

ಏಳುಸುತ್ತಿನಕೋಟೆ ಯ ಈ ಚಿತ್ರದ ಹಾಡು ಅವರ ಬದುಕಿನ ಕೆಲವು ಒಳ ಅಂಶಗಳನ್ನು ತೆರೆದಿಡಬಲ್ಲದು, ಅವರು ಚಟವಾಗಿಸಿಕೊಂಡ ಸಿಗರೆಟ್ ಮತ್ತು ಮದ್ಯಪಾನ ಅವರ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿತ್ತು ಎಂಬುದು ಎಲ್ಲರ ವಿಶ್ಲೇಷಣೆ ಆಗಿದೆ. ಆದರೂ ಅರವತ್ತಾರು ಸಾಯುವ ವಯಸ್ಸಲ್ಲ, ಅದೂ ಒಬ್ಬ ಮಹಾನ್ ಕಲಾವಿದ, ಯಾವುದೇ ಜಾತಿ, ಧರ್ಮ, ಪಕ್ಷ, ವ್ಯಕ್ತಿ ಎಲ್ಲವನ್ನೂ ಮೀರಿ ಬೆಳೆದ ವ್ಯಕ್ತಿ ಇಂದು ನಮ್ಮೊಡನಿಲ್ಲ‌, ಛೇ ಇದೆಂತಹ ದುರ್ವಿಧಿ.

ಅವರಿನ್ನೂ ಇರಬೇಕಾಗಿತ್ತು, ಇದೀಗ ತಾನೆ ಚಿತ್ರರಂಗದಲ್ಲಿ ಅಂಬೆಗಾಲಿಡಲು ಸಜ್ಜಾಗಿರುವ ಮಗ ಅಭಿಷೇಕ್, ಪ್ರೀತಿಯ ಮಡದಿ ಸುಮಲತಾ, ಎಂದೆಂದಿಗೂ ಬಗೆಹರಿಯದ ಕೆಲವು ಚಿತ್ರರಂಗ ಮತ್ತು ಚಿತ್ರ ನಟರ ಸಮಸ್ಯೆಗಳನ್ನು ಬಗೆಹರಿಸಲು ನೊಂದು ಬೆಂದವರಿಗೆ ಸಹಾಯ ಮಾಡಲು ಆತ ಇರಬೇಕಾಗಿತ್ತು ಆದರೆ ಸಾವು ಯಾರಪ್ಪನ ಸ್ವತ್ತು ಅಲ್ಲಾ ಇಂದು ಅವರು ನಾಳೆ ನಾವು, ನಾಡಿದ್ದು ಯಾರೋ ಹೀಗೆ ಜಗತ್ತಿನಲ್ಲಿ ಅತ್ಯಂತ ಕ್ರೂರಿ ಎಂದರೆ ಅದು ಸಾವು. ಆದರೂ ಅವರಿರಬೇಕಾಗಿತ್ತು.

ಅಂಬರೀಶ್ ಇಂದು ಇಹಲೋಕ ತ್ಯಜಿಸಿದ್ದಾರೆ, ಅವರನ್ನು ಎಲ್ಲಿ ಮಣ್ಣು ಮಾಡಬೇಕು, ಸುಡಬೇಕಾ ? ಹೂಳಬೇಕಾ ? ದೇಹದಾನ ಮಾಡಬೇಕಾ ? ಅಭಿಮಾನಿದ ಜೊತೆಗೆ ಬರಹಗಾರನಾದ ನಾನು ಓದುಗರಾದ ನೀವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಅದಕ್ಕೆಂದೇ ಬೇರೆಯವರಿದ್ದಾರೆ, ನಮ್ಮಗಳ ಕೆಲಸವಿಷ್ಟೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಕಾಣದ ಆ ಭಗವಂತನಲ್ಲಿ ಪ್ರಾರ್ಥಿಸುವುದರ ಜೊತೆಗೆ ಆ ಕಲಾವಿದನ ಹೆಸರು ಶಾಶ್ವತವಾಗಿ ನೆಲೆಯೂರಬೇಕಾದರೆ ತೆಗೆದುಕೊಳ್ಳಬಹುದಾದ ನಿರ್ಧಾರವಷ್ಟೇ ನಮ್ಮ ಕೆಲಸ, ಆದುದರಿಂದ ನಿಂತಲ್ಲೇ ಆತ್ಮಾಭಿನಾದಿಂದ, ಅವರಿಗೆ ಗೌರವ ಸಮರ್ಪಿಸೋಣಾ.

 

(*ಆತ್ಮೀಯರೇ ವಯುಕ್ತಿಕವಾಗಿ ನಾನೊಬ್ಬ ಬಹುದೊಡ್ಡ ಅಭಿಮಾನಿ. ನಾನು ಪಾಂಡವಪುರ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದಿದ್ದಕ್ಕೋ ಅಥವಾ ಅವರು ದುರಾಡಳಿತ ಆಡಳಿತಾಧಿಕಾರಿಗಳ ವಿರುದ್ಧ ಸಿಡಿದೇಳುವ ಪಾತ್ರಗಳಲ್ಲಿ ನಟಿಸಿದ್ದಕ್ಕೋ ಗೊತ್ತಿಲ್ಲ, ಅವರನ್ನು ಕಂಡರೆ ಎಲ್ಲಿಲ್ಲದ ಅಭಿಮಾನ. ರಾತ್ರಿ ಪೂರಾ ನಿದ್ರೆ ಬರಲಿಲ್ಲ, ಆ ಸಮಯದಲ್ಲಿ ಅಂದರೆ ೨೫/೧೧/೨೦೧೮ ಬೆಳಿಗ್ಗೆ ಒಂದು ಗಂಟೆಯ ಸಮಯದಲ್ಲಿ ಬರೆದ ಲೇಖನ.*)*

ಗೋ ರಾ ಶ್ರೀನಿವಾಸ...

ಮೊ:9845856139


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

೨೦೧೯/೨೦ ನೇ ಸಾಲಿನ ಆರನೇ ತರಗತಿಗೆ ಸೇರಲು ರಾಮನಗರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂ

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ
ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ

ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು

ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾ

ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ
ಮೇಕೆದಾಟು ಯೋಜನೆ ಕೇಂದ್ರ ಒಪ್ಪಿಗೆ, ಇಚ್ಛಾಶಕ್ತಿ ಪ್ರದರ್ಶಿಸುತ್ತಾ ರಾಜ್ಯ ಸರ್ಕಾರ

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಹಂತದ ಅನುಮತಿ ದೊರಕಿದ್ದು, ಯೋಜನೆಯ ರೂಪುರೇಷೆಗಳನ್ನು ಶೀಘ್ರವಾಗಿ ತಲುಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮೇಕೆದಾಟು ಯೋಜನೆ ಕುರಿತ ರಾಜ್ಯದ

ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ
ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು‌ ಅತ್ತು‌ ಬಿಡಲೇ ಎನಿಸುತ್ತಿದೆ.

ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ,
ಆದರೂ ಮನ ಕೇಳುತ್ತಿಲ್ಲ, ಒಳಗ

 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ
 ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ; ಆದಿಶ್ರೀ ಜತೆ ಭಿನ್ನಾಭಿಪ್ರಾಯ ಇತ್ತು ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಹಳೆಯ ನೆನಪು ಮೆಲಕು ಹಾಕಿದ ದೇವೇಗೌಡ

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ನನ್ನ ಏಳ್ಗೆ ಸಹಿಸಲಿಲ್ಲ, ಅದಕ್ಕಾಗಿ ನಾನು ನೀರಾವರಿ ಸಚಿವನಾಗಿದ್ದಾಗ ನನ್ನ ಖಾತೆಗೆ ಸರಿಯಾಗಿ ಅನುದಾನ ನೀಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.
ತಾಲೂಕಿನ ಸಾಮಂದಿಪುರ ಗ್ರಾಮದಲ

Top Stories »  


Top ↑