Tel: 7676775624 | Mail: info@yellowandred.in

Language: EN KAN

    Follow us :


ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

Posted Date: 25 Nov, 2018

ನಿನ್ನೆಯಿಂದಾದ ಸಾವಿನ ಸುರಿಮಳೆಗೆ ಅಶ್ರುತರ್ಪಣ

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ, ಎದೆ ಬಡಿದು‌ ಅತ್ತು‌ ಬಿಡಲೇ ಎನಿಸುತ್ತಿದೆ.

ಅವರಾರು ನೆಂಟರಿಸ್ಟರಲ್ಲಾ, ಬಂಧು ಬಳಗವೂ ಅಲ್ಲಾ,
ಆದರೂ ಮನ ಕೇಳುತ್ತಿಲ್ಲ, ಒಳಗಿನ ವೇದನೆ ತಡೆಯಲಾಗುತ್ತಿಲ್ಲ.

ಅಯ್ಯೋ ವಿಧಿಯೇ ನೀನೆಂಥ ಕ್ರೂರಿ ಆ ಹಸುಗಂದಗಳೇನು‌ ತಪ್ಪು ಮಾಡಿದೋ !
ಮೋಸ ದಗಾ ವಂಚನೆ ಏನೆಂಬುದನ್ನೇ ಅರಿಯದ ಮಕ್ಕಳ ಮೇಲೇಕೆ ಈ ನಿನ್ನ ಆಟಾಟೋಪ ?

ನಿನ್ನದೇಕೋ ಅತಿಯಾಯ್ತು ವಿಧಿಯೇ ಇಂದೇ ಎಚ್ಚೆತ್ತಿಕೋ ಈ ನಿನ್ನ ದ್ವೇಷವನ್ನೆಲ್ಲಾ ಸಮಾಜದ ಕಂಟಕರನ್ನು, ಅವಧಿ ಮೀರಿದವರನ್ನು ವಾಸಿಯಾಗದ ಖಾಯಿಲೆಯಿಂದ ನರಳುವವರನ್ನು ಬರಸೆಳೆದು ಅಪ್ಪಿಕೋ,

ದಯಮಾಡಿ ಬಿಟ್ಟುಬಿಡು ಸಮಾಜಕ್ಕೆ ಕೊಡುಗೆ ನೀಡುವವರ, ದಯಮಾಡಿ ಬಿಟ್ಟುಬಿಡು ಏನೂ ಅರಿಯದ ಕಂದಮ್ಮಗಳ ಹೆತ್ತವರ ಅಭಿಮಾನಿಗಳ ಕ್ರೋಧ ಹೆಚ್ಚಾಗಿ ನಿನ್ನನ್ನು ಶಪಿಸುವ ಮುನ್ನಾ.

ಯಾಕೋ ಗೊತ್ತಿಲ್ಲ ಕಣ್ಣಂಚಲ್ಲಿ ನೀರು ಉಕ್ಕುಕ್ಕಿ ಬರುತ್ತಿದೆ, ಸಾವಿನ ಕಥೆ ಕೇಳಿ ಎದೆಬಡಿದು ಅತ್ತುಬಿಡಲೇ ಎನಿಸುತ್ತಿದೆ.


ಗೋ ರಾ ಶ್ರೀನಿವಾಸ...
ಮೊ:9845856139.

(೨೪/೨೫/೧೧/೨೦೧೮ ರ ಶನಿವಾರ ಪಾಂಡವಪುರ ದ ಬಳಿ ಕಾಲುವೆಗೆ ಡಕೋಟಾ ಬಸ್ ಉರುಳಿ ಮಕ್ಕಳು ಸೇರಿದಂತೆ ಮೂವತ್ತು ಮಂದಿ, ಅದೇ ರಾತ್ರಿ ಖ್ಯಾತ ನನ್ನ ನೆಚ್ಚಿನ ಕಲಾವಿದ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಮಾರನೆ ದಿನ ಮಾಜಿ ಕೇಂದ್ರ ರೈಲ್ವೆ ಸಚಿವ ಜಾಫರ್ ಸಾವು ಕುರಿತ ನೋವು ಮತ್ತು ಅಭಿಮಾನದಿಂದ ಬಂದ ಸಾಲುಗಳಿವು.)



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ
ಹೊಸ ಕಲಾವಿದರನ್ನು ಹುಟ್ಟು ಹಾಕಲು ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾಕಾರಂಜಿ ಪೂರಕ

ಚನ್ನಪಟ್ಟಣ: ಸರ್ಕಾರದ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯು ಸಂಘಸಂಸ್ಥೆಗಳಿಗೆ ಕೊಡಮಾಡುವ ಅನುದಾನದ ಬದಲು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಕಲೆಗೆ ಸಂ

ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ
ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಮಾನವನ ದುರಾಸೆಯೇ ಕಾರಣ ಸಂಜಯ್ ಗುಬ್ಬಿ

ಮಂಡ್ಯ/ಮಳವಳ್ಳಿ: ಬಹುತೇಕ ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆದ ಬೆಳೆಯನ್ನು ತಿನ್ನುವುದಲ್ಲದೆ ತುಳಿದು ಹಾಳು ಮಾಡುವುದು ಹಾಗೂ

ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ
ಡಿ ಕೆ ಶಿ ಆರೆಸ್ಟ್, ಪ್ರತಿಭಟನೆಗೂ ಒಂದಾದ ಮೈತ್ರಿ, ರಾಷ್ಟ್ರ ಮಟ್ಟದ ನಾಯಕ ಚಿದಂಬರ್ ಬಂಧನಕ್ಕಿಂತಲೂ ಭಿನ್ನ ಡಿಕೆಶಿ ಬಂಧನ

*ಹೊತ್ತಿ ಉರಿದ ಕನಕಪುರ ಮತ್ತು ಸಾತನೂರು,* *ರಾಮನಗರದಲ್ಲಿಯೂ ಉಗ್ರ ಪ್ರತಿಭಟನೆ,* *ಚನ್ನಪಟ್ಟಣ ದಲ್ಲಿ ಹೇಳಿಕೊಳ್ಳುವಂತ ಪ್ರತಿಭಟನೆ* *ಇಲ್ಲಾ, ಮಾಗಡಿಯಲ್ಲಿಯೂ ಸಹ ತಣ್ಣನೆ* *ಪ್ರತಿಭಟನೆ. ರಾಜ್ಯದಾದ್ಯ

ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ
ನಾಟಿ ಹಸು, ಎಮ್ಮೆಗಳು ಸೇರಿದಂತೆ ೨೧ ಗೋವುಗಳ ರಕ್ಷಿಸಿದ ಚನ್ನಪಟ್ಟಣದ ಯುವಕರು, ಎಚ್ಚೆತ್ತಗೊಳ್ಳಬೇಕಿದೆ ಪೋಲಿಸ್ ಇಲಾಖೆ

ಚನ್ನಪಟ್ಟಣ: ನಗರದ ಸಾತನೂರು ಮುಖ್ಯ ರಸ್ತೆಯ ಸುಣ್ಣಘಟ್ಟ ಗ್ರಾಮದ ಬಳಿ ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಟೆಂಪೋ (ಕೆಎ೧೩-ಸಿ

ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ
ದೈವ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರ‌ ನಡುವೆ ಕಗ್ಗೊಲೆ

ಪಾಂಡವಪುರ: ಗ್ರಾಮದೇವತೆ ದೇವಿರಮ್ಮನ ಹಬ್ಬದ ಆನಂದದಲ್ಲಿ ಮಿಂದೇಳುತ್ತಿದ್ದ ಗ್ರಾಮದ ಭಕ್ತ ವೃಂದದವರಿಗೆ ಬೆಳಗಿನ ಜಾವ ಮೂರು ಗಂಟೆಗೆ ದೇವರ ಮುಂದೆಯೇ ನಡೆದ ಕೊಲೆ ನೆರೆದಿದ್ದ ಸಹಸ್ರಾರು ಭಕ್ತರನ್ನು ಅಧೀರ

ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ ಆಹ್ವಾನ

೨೦೧೯/೨೦ ನೇ ಸಾಲಿನ ಆರನೇ ತರಗತಿಗೆ ಸೇರಲು ರಾಮನಗರ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ

ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ
ಮಧುಕರ್ ಶೆಟ್ಟಿ ಎಂಬ ಅನರ್ಘ್ಯ ರತ್ನ

(ಆತ್ಮೀಯ ಓದುಗರೇ ಪ್ರತಿ ಸೋಮವಾರ ಪ್ರಕಟವಾಗುವ ಈ ಅಂಕಣದಲ್ಲಿ ತಾಲ್ಲೂಕಿನ ಅಧಿಕಾರಿ ಮತ್ತು ಇಲಾಖೆಯ ಬಗ್ಗೆ ಬರೆಯುತ್ತಿದ್ದೆ, ಆದರಿಂದು ಚನ್ನಪಟ್ಟಣದಲ್ಲಿ ಕೇವಲ ಹದಿನೆಂಟು ತಿಂಗಳು ಕೆಲಸ ಮಾಡಿ ಹದಿನೆಂ

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ
ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦

ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್
ಮುಖ್ಯಮಂತ್ರಿ ಕ್ಷೇತ್ರದಲ್ಲೇ ರೈತರಿಗೆ ಕೋರ್ಟ್ ನಿಂದ ನೋಟೀಸ್

ಸಾಲ ಬಾಕಿ ಉಳಿಸಿಕೊಂಡ ಮಹಿಳೆಗೆ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ನೋಟೀಸ್‌ಜಾರಿ ಮಾಡಿದ್ದರಿಂದ ರೈತಸಂಘದ ಪದಾಧಿಕಾರಿಗಳು ಆಕ್ರೊಶ ವ್ಯಕ್ತಪಡಿಸಿದರು.

 ಅತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಹಾತ್ವಾಕಾಂಕ್ಷಿ ಸಾಲ

ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು
ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿ ಗರಿ, ಲಾವಣಿಗೊಂದು ಸಹಕ್ಕಾರಕೊಂದು

ಅರವತ್ಮೂರನೇ ಕನ್ನಡ ರಾಜ್ಯೋತ್ಸವ ಸಾಲಿನಲ್ಲಿ ರಾಮನಗರ ಜಿಲ್ಲೆಗೆ ಎರಡು ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಚನ್ನಪಟ್ಟಣ ತಾಲ್ಲೂಕಿನ ಲಾವಣಿ ಹಾಡುಗಾರ ಮತ್ತು ರಂಗಭೂಮಿ ನಟರಾದ ಮಳೂರು ಪುಟ್ಟಸ್ವಾಮಿಗೌಡರಿಗೆ ಸಂದರೆ ಸಹಕಾರಿ ಕ್ಷೇತ್ರದಲ್ಲಿ ಮಾ

Top Stories »  


Top ↑