Tel: 7676775624 | Mail: info@yellowandred.in

Language: EN KAN

    Follow us :


ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

Posted Date: 16 Dec, 2018

ಸಾಮಾಜಿಕ ಅರಣ್ಯ ಇಲಾಖೆಯ ಯೋಜನೆಯಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ

ತಾಲ್ಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಗಿಡ ನೆಡಲು ಗುಂಡಿಗಳ ಅಳತೆ ಪ್ರಮಾಣದಲ್ಲಿ ಪ್ರತಿ ಗಿಡಕ್ಕೆ ತಲಾ ನಲವತ್ತೊಂದು ಮತ್ತು ಎಂಭತ್ತನಾಲ್ಕು ರೂಪಾಯಿಗಳಂತೆ ೨೦೧೭/೧೮ ಸಾಲಿನಲ್ಲಿ ಐವತ್ತೆಂಟೂವರೆ ಲಕ್ಷ ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್ ಪುಟ್ಟಮ್ಮ ತಿಳಿಸಿದರು.

ಸಸ್ಯಗಳು ಲಕ್ಷ, ಹಣವೂ ಲಕ್ಷ ಲಕ್ಷ ವಾದರೂ ತಾಲ್ಲೂಕಿನಲ್ಲಿ ಶಾಶ್ವತವಾಗಿ ಎಷ್ಟು ಗಿಡಗಳು ಉಳಿದಿವೆ ಎಂಬ ಲೆಕ್ಕ ಮಾತ್ರ ಕೃಷ್ಣನ ಲೆಕ್ಕವಾಗಿದೆ.


ವರ್ಷದಲ್ಲಿ ಐವತ್ತೆಂಟೂವರೆ ಲಕ್ಷ ರೈತರ ಖಾತೆಗೆ


ಪ್ರತಿ ವರ್ಷವೂ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗಕ್ಕೆ ಎರಡು ಕಾಲು ಕೋಟಿ ಮಂಜೂರಾಗುತ್ತದೆ, ಚನ್ನಪಟ್ಟಣ ತಾಲೂಕಿಗೆ ಐವತ್ತೆಂಟೂವರೆ ಲಕ್ಷ ಹಣ ಬಿಡುಗಡೆಯಾಗುತ್ತದೆ ಆ ಹಣವನ್ನು ನಿಯಮಗಳ ಪ್ರಕಾರ ದಾಖಲೆಗಳನ್ನು ಸಲ್ಲಿಸಿ ನಮ್ಮ ಸಸ್ಯಕಾಶಿಯಲ್ಲೇ ಸಸಿಗಳನ್ನು ತೆಗೆದುಕೊಂಡು ಹೋಗುವ ರೈತರ ಖಾತೆಗೆ ಅಷ್ಟು ಹಣವನ್ನು ಜಮಾ ಮಾಡಲಾಗುತ್ತದೆ.


ರೈತರು ಸಸಿಗಳನ್ನು ಪಡೆಯಲು ಬೇಕಾದ ದಾಖಲೆಗಳು


ಇಲಾಖೆಯಲ್ಲಿ ರೈತರು ಸಸ್ಯಗಳನ್ನು ಪಡೆದುಕೊಳ್ಳಬೇಕಾದರೆ ಗ್ರಾಮ ಪಂಚಾಯತಿಯಿಂದ ಶಿಫಾರಸ್ಸು ಪತ್ರ, ಆ ಸಾಲಿನ ಪಹಣಿ, ಉದ್ಯೋಗ ಚೀಟಿ ಯ ಪ್ರತಿ, ಬಿಪಿಎಲ್ ರೇಷನ್ ಕಾಡ್೯ ಅಥವಾ ಸಣ್ಣ ರೈತರ ಧೃಡೀಕರಣ ಪತ್ರ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣದ ಪ್ರತಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಪೋಟೋಗಳನ್ನು ಕೊಟ್ಟರೆ ಸಸಿಗಳನ್ನು ವಿತರಿಸುತ್ತಾರೆ, ನಂತರ ಯಾವ ಗಿಡಗಳು, ಎಷ್ಟು ಅಳತೆಯ ಗುಂಡಿಗಳು ಎಂಬುದರ ಮೇಲೆ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ, ಉದ್ಯೋಗ (job card) ಚೀಟಿ ಇಲ್ಲವಾದರೆ ಅವರಿಗೆ ಸಸ್ಯಗಳನ್ನು ಮಾತ್ರ ವಿತರಿಸಲಾಗುತ್ತದೆ. ಹಣ ಸಿಗುವುದಿಲ್ಲ.ಸಸಿ ಮತ್ತು ಗುಂಡಿಗೆ ಎಷ್ಟು ಹಣ


೮*೧೨ ಅಳತೆಯ ಗಾತ್ರದ ಸಸಿಗಳನ್ನು ನೆಡಲು ೦.೬೦*೦.೬೦*೦.೬೦ ಅಳತೆಯ ಗುಂಡಿ ಮಾಡಿ ಸಸಿ ನೆಡಲು ೮೪ ರೂಪಾಯಿಗಳನ್ನು, ೬*೯ ಅಳತೆಯ ಗಿಡ ನೆಡಲು ೦.೫೦*೦.೫೦*೦.೫೦ ಅಳತೆಯ ಗುಂಡಿ ತೆಗೆದು ನೆಟ್ಟರೆ ೪೧ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಅಥವಾ ಕೂಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.


ಯಾವಯಾವ ಸಸ್ಯಗಳು ದೊರೆಯುತ್ತವೆ


ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ರೈತರಿಗೆ *ಹೆಬ್ಬೇವು, ಸಿಲ್ವರ್, ತೇಗ, ನುಗ್ಗೆ, ನೇರಳೆ, ರಕ್ತಚಂದನ, ಶ್ರೀಗಂಧ, ಬೇವು, ಮಹಾಗನಿ, ಹೊಂಗೆ,ಹುಲಚಿಯ ಜೊತೆಗೆ ಪಕ್ಷಿಗಳಿಗೆ ಉಪಯೋಗವಾಗುವ ಅನೇಕ ಹಣ್ಣಿನ ಗಿಡಗಳು, ನೆರಳಿಗಾಗಿ ಬೆಳೆಸುವ ಗಿಡಗಳು ದೊರೆಯುತ್ತವೆ.


ರೈತರಲ್ಲದ ಸಾಮಾಜಿಕ ಕಾರ್ಯಕರ್ತರಿಗೂ ವಿತರಣೆ


ಬೇಡಿಕೆಯ ಮೇರೆಗೆ ಆಸಕ್ತ ರಸ್ತೆ ಬದಿ ನೆಡುವವರು, ಗ್ರಾಮ ಪಂಚಾಯತಿ ಆವರಣ, ಶಾಲಾ ಕಾಲೇಜುಗಳಲ್ಲಿ, ಸ್ಮಶಾನ, ಉದ್ಯಾನವನ ಇನ್ನಿತರ ಕಡೆಗಳಲ್ಲಿ ಗಿಡ ನೆಡುವವರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸಲಾಗುತ್ತದೆಯಾದರೂ ಅವರಿಗೆ ಪ್ರೋತ್ಸಾಹ ಧನ ಸಿಗುವುದಿಲ್ಲ, ಪ್ರತಿ ವರ್ಷವೂ ಸುಮಾರು ಹತ್ತು ಸಾವಿರ ಸಸ್ಯಗಳನ್ನು ಸಾಮಾಜಿಕವಾಗಿ ನೆಡುವವರಿಗೆ ಹಾಗೂ ರೈತರಿಗೆ ಒಂದು ಕಾಲು ಲಕ್ಷ ಗಿಡಗಳನ್ನು ವಿತರಿಸಲಾಗುತ್ತದೆ.


ಕೊಟ್ಟಿದ್ದೆಷ್ಟು ? ಬೆಳೆಸಿದ್ದೆಷ್ಟು ? ಉಳಿದದ್ದೆಷ್ಟು ?


ನರೇಗಾ ಯೋಜನೆ ಬರುವ ಮೊದಲು ಮತ್ತು ಈಗ ಸೇರಿದಂತೆ ಪ್ರತಿವರ್ಷವೂ ಒಂದು ಲಕ್ಷದ ಮೂವತ್ತೈದು ಸಾವಿರ ಗಿಡಗಳನ್ನು ವಿರಿಸಲಾಗುತ್ತದೆ ಎಂದು ಅಧಿಕಾರಿ ಪುಟ್ಟಮ್ಮ ಹೇಳುತ್ತಾರಾದರೂ ಕೇವಲ ಹತ್ತೆನ್ನೆರೆಡು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಒಂದೂವರೆ ಕೋಟಿ ಗಿಡಗಳು ಇಂದು ಮರಗಳಾಗಬೇಕಿತ್ತು, ಐವತ್ತು ಲಕ್ಷ ಗಿಡಗಳು ಅನೇಕ ಕಾರಣಗಳಿಂದ ಹಾಳಾಗಿವೆ ಎಂದುಕೊಂಡರೂ ಒಂದು ಕೋಟಿ ಮರಗಳು ತಾಲ್ಲೂಕಿನಲ್ಲಿ ಇವೆಯೇ ?


ಸಸಿ ಮತ್ತು ಹಣ ಕೊಡುವುದಷ್ಟೇ ಇಲಾಖೆಯ ಕೆಲಸವೇ?


ಗಿಡಗಳನ್ನು ಬೆಳೆಸಲು ಒಂದು ಇಲಾಖೆಯೇ ಇದ್ದು ಅದನ್ನು ನೆಡಲು ಹಣದ ನೆರವು ನೀಡಿಯೂ ಸಹ ಅಷ್ಟೊಂದು ಮರಗಳು ಏನಾದವು, ಹತ್ತು ವರ್ಷಗಳಲ್ಲಿ ಎಲ್ಲಾ ಗಿಡಗಳು ಹೆಮ್ಮರವಾಗಿ ಬೆಳೆದು ಒಟ್ಟಿಗೆ ಕಡಿದು ಬಿಟ್ಟರೆ ? ರೈತರಿಗೆ ಅಥವಾ ಮತ್ತಿತರರಿಗೆ ಗಿಡ ಕೊಟ್ಟ ನಂತರ ಅದರ ಉಸಾಬರಿ ಇಲಾಖೆಗಿಲ್ಲವೇ ? ಇದ್ದರೆ ಆ ಗಿಡಗಳೆಲ್ಲವೂ ಏನಾದವು ಎಂಬ ಪ್ರಶ್ನೆಯೂ ಇಲಾಖೆಯ ಅಧಿಕಾರಿಗಳ ಮುಂದೆ ಪ್ರಶ್ನೆಗಳಾಗಿಯೇ ಉಳಿದುಹೋದವು.


ವಾಹನ ಇಲ್ಲ ಎನ್ನುವುದು ಬಿಟ್ಟರೆ ಸಿಬ್ಬಂದಿ ಕೊರತೆ ಇಲ್ಲಾ


ಇಲಾಖೆಯಲ್ಲಿ ಬಹುತೇಕ ಎಲ್ಲಾ ಸಿಬ್ಬಂದಿಗಳು ಇದ್ದು ಸಿಬ್ಬಂದಿಗಳ ಕೊರತೆ ಇಲ್ಲಾ ಆದಾಗ್ಯೂ ಕೃಷಿ ಭೂಮಿಯಲ್ಲಿ ಶೇಕಡಾವಾರು ಒಣ ಪ್ರದೇಶವೇ ಕಂಡುಬರುತ್ತದೆ, ಇಲಾಖೆಯಲ್ಲಿ ಸರ್ಕಾರದ ಒಂದು ವಾಹನವೂ ಇಲ್ಲದಿರುವುದು ರೈತರು ಗಿಡಗಳನ್ನು ಬೆಳೆಸುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿಯಲಾಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲು.


ಮುಂದಾದರೂ ಎಚ್ಚೆತ್ತುಕೊಳ್ಳಲಿ


ಕಳದೆರಡು ವರ್ಷಗಳ ಹಿಂದೆ ಜಿಲ್ಲಾಡಳಿತವೂ ಸಹ ಕೋಟಿ ಗಿಡ ನೆಟ್ಟಿದ್ದೇವೆ ಎಂದು ಘೋಷಿಸಿಕೊಂಡರೇ ವಿನಹ ಆ ಗಿಡಗಳು ಇದ್ದಾವೆಯೇ ಎಂಬುದು ಯಾರಿಗೂ ಗೊತ್ತಿಲ್ಲ, ಸಾಮಾಜಿಕ ಅರಣ್ಯ ಇಲಾಖೆಯವರು ಇನ್ನು ಮುಂದಾದರು ಸಸ್ಯ ಮತ್ತು ಹಣ ಕೊಟ್ಟು ಕೈತೊಳೆದುಕೊಳ್ಳದೆ ಅವುಗಳನ್ನು ಬೆಳೆಸಿಸಲು ಕ್ರಮ ಕೈಗೊಂಡು ಬೇರೆ ತಾಲ್ಲೂಕಿನ ಅಧಿಕಾರಿಗಳಿಗೆ ಮಾದರಿಯಾಗಲಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ
ಆದಿಚುಂಚನಗಿರಿ ಜಾತ್ರಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಭಕ್ತವೃಂದ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವು ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ರಾಜ್ಯ ಮತ್ತು ಅಂತರರಾಜ್ಯಗಳಿಂದಲೂ ಭಕ್ತಾಧಿಗ

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.


ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ
ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

ಚನ್ನಪಟ್ಟಣ: ಸಣ್ಣಪುಟ್ಟ ಗಾಯಗಳಾದವರು, ಕೆಲ ಪೋಲಿಯೊ ಪೀಡಿತರು, ಕೆಲ ವಿಕಲಚೇತನರು, ವೃದ್ಧವೃದ್ದೆಯರು, ಒಟ್ಟಾರೆ ಸೋಮಾರಿಗಳು ಭಿಕ್ಷೆ ಬೇಡುವುದರಲ್ಲಿ

ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ
ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ

ಮಂಡ್ಯ: ಮೋಜು-ಮಸ್ತಿ ಮಾಡಲು ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ೦೯ ಮಂದಿ ಆರೋಪಿಗಳು ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿ ಬಿದ್

ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ
ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ

ಬೆಂಗಳೂರು/ ಚನ್ನಪಟ್ಟಣ:ಫ್ರಾನ್ಸ್  ದೇಶದ ವಿದ್ಯಾಲಯದಿಂದ ಭಾರತಕ್ಕೆ ಅಧ್ಯಯನಕ್ಕಾಗಿ  ೨೧ ವಿದ್ಯಾರ್ಥಿಗಳ ತಂಡ ಆಗಮಿಸಿದೆ. ಬೆಂಗಳೂರಿಗೆ ಭೇ

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್
ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್

ಚನ್ನಪಟ್ಟಣ: ಎನ್ ಡಿ ಎ ನೇತೃತ್ವದ ಕೇಂದ್ರ ಸರ್ಕಾರವು ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಸರಿಯಾದ ಕ್ರಮವಲ್ಲ, ಸಿಎಎ, ಎನ್ಆರ್ಸಿ, ಎನ

ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್
ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್

ಬೆಂಗಳೂರು: ೨೦೧೫ ರಲ್ಲಿ ಭಾರಿ ಸದ್ದು ಮಾಡಿ ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಸಿಬಿಐ ಕ್ಲೀ

ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್
ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್

ಚನ್ನಪಟ್ಟಣ: ಹಲವಾರು ಪಕ್ಷಗಳ ಸುತ್ತಿ, ರಾಜ್ಯದಲ್ಲಿ ಹೆಸರಿಲ್ಲದ ಪಕ್ಷದಿಂದಲೂ ಸ್ಪರ್ಧಿಸಿ ಗೆದ್ದು ಬಂದಿದ್ದ ಸ್ವತಂತ್ರ ನಾಯಕ, ಮಾಜಿ ಸಚಿವ ಹಾಗೂ

Top Stories »  


Top ↑