Tel: 7676775624 | Mail: info@yellowandred.in

Language: EN KAN

    Follow us :


ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ

Posted Date: 01 Mar, 2018

ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ

(ಚನ್ನಪಟ್ಟಣದಲ್ಲಿ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಚಿಕ್ಕಚನಯ್ಯ ಅವರು ಮಾಡಿದ ಸಮ್ಮೇಳನಾಧ್ಯಕ್ಷರ ಸಂಪೂರ್ಣ ಭಾಷಣದ ವಿವರ)

ಈ ದಿನ ನನ್ನ ಪಾಲಿಗೆ ಮಹತ್ವದ ದಿನ. ಇದೊಂದು ಸ್ಮರಣಾರ್ಥ ದಿನವೂ ಹೌದು. ನನ್ನ ಹುಟ್ಟೂರು ಚನ್ನಪಟ್ಣ ತಾಲ್ಲೂಕಿನ ದ್ಯಾವಾಪಟ್ಣ ಗ್ರಾಮ. ನನ್ನಪ್ಪ ಒಬ್ಬ ಸಣ್ಣ ರೈತ. ಕೆಲವು ಕಾಲ ಜೀತವನ್ನು ಮಾಡಿದ್ದ. ಆತ ಎಲ್ಲ ಸಣ್ಣ ರೈತರಂತೆ ರಕ್ತ ಬಸೆದು ಬದುಕಿದ ಶ್ರಮಜೀವಿ. ``ಶಿವನಾರಾಯಣ ಅಂತ ದೇವರನ್ನು ನೆನ್ಕೋಬೇಕು’’, ಕಷ್ಟಪಟ್ಟು ದುಡಿಬೇಕು ಇರಂಬೆತ್ತೇಳು ಕೋಟಿ ಜೀವರಾಶಿ ಚೆನ್ನಾಗಿರಬೇಕು ಎಂಬ ಜೀವನ ಸತ್ಯ ಕಂಡವನು ಅದರ ಹೊರತು ಇನ್ಯಾವ ಗೊಂದಲವೂ ಅವನಲ್ಲಿ ಇರಲಿಲ್ಲ. ನನ್ನ ಪಾಲಿಗೆ ಅವನೊಬ್ಬ ಅನಕ್ಷರಸ್ಥ ಸಂತ. ಯಾರಿಗೂ ಕೇಡಂಟು ಮಾಡಬಾರದು. ಒಂದು ಹುಲ್ಲುಕಡ್ಡಿಯನ್ನು ವ್ಯರ್ಥ ಮಾಡಬಾರದೆಂಬ ಸರಳ ಅರಿವು ಅವನಿಗಿತ್ತು. ವ್ಯಕ್ತಿಯೊಬ್ಬನ ಪರಿಪೂರ್ಣ ಅರಿವಿಗೆ ನನ್ನಪ್ಪನ ಕೃಷಿ ಸಂಬಂಧಿ ಕಾಯಕ ನನಗೊಂದು ಅದ್ಭುತ ಪಾಠ. ಉಳಿಮೆ, ಅಗೆತ, ಬಿತ್ತುವುದು, ಕಳೆ ಕೀಳುವುದು, ಉಳು (ರೇಷ್ಮೆ) ಸಾಕುವುದು, ಸೊಪ್ಪು ಕೀಳುವುದು, ಕಸ ತೆಗೆಯುವುದು, ಗೂಡು ಬಿಡಿಸುವುದು, ಹೊಲ ಕುಯ್ಯುವುದು, ಮೆದೆ ಕಟ್ಟುವುದು, ಕಣ ಮಾಡಿ ಒಕ್ಕಣೆ ಮಾಡುವುದು, ಮೆದೆ ಹಾಕುವುದು, ದನಕರು ಮೇಯಿಸುವುದು, ಗೊಂತಿಗೆ ಕಟ್ಟುವುದು, ಮೈ ತೊಳೆಯುವುದು, ಕುರಿ ಮೇಯಿಸುವುದು, ಆಡು ಸಾಕುವುದು,,,,,, ಹೀಗೆ ಹತ್ತು ಹಲವು ಕೆಲಸಗಳು ದಿನ ನಿತ್ಯ ಕೆಲಸವೇ ಇಲ್ಲದ ದಿನಗಳೂ ಅವನ ಪಾಲಿಗೆ ಇರಲಿಲ್ಲ. ಭೂಮ್ತಾಯಿ ಕೊಡಬೇಕು. ಮಳೆರಾಯ ಕರುಣಿಸಬೇಕು ಎಂಬುದೇ ಅವನ ದೊಡ್ಡ ಆಧ್ಯಾತ್ಮ ಅನುಭವ. ನನ್ನಪ್ಪನ ಹೃದಯದಲ್ಲಿ ಬುದ್ಧ ಬಸವಣ್ಣ ಗಾಂಧಿಯಾದಿಯಾಗಿ ಮಹಾತ್ಮರು ನೆಲೆಸಿದ್ದು ಅವು ಅವನ `ಗೇಮೆ’ಯ ರೂಪದಲ್ಲ ಸದಾ ಪ್ರಕಟವಾಗುತ್ತಿದ್ದವು. 

ನನ್ನ ತಾಯಿ ಅನಕ್ಷರಸ್ಥೆ, ಅಡಿಗೆ ಮಾಡುವುದು, ಕಸ ಗುಡಿಸುವುದು, ಊಟ ಬಡಿಸುವುದು, ಉಳಿದ ಮನೆಕೆಲಸ ನೋಡುವುದು, ಬಟ್ಟೆ ಒಗೆಯುವುದು, ಗೊಂತಿನ ಕಸ ತಿಪ್ಪೆಗೆ ಸುರಿಯುವುದು, ಹುಲ್ಲು ಹಾಕುವುದು, ಕುಯ್ಯುವುದು, ಪಾತ್ರೆ ಬೆಳಗುವುದು, ಎಲ್ಲರನ್ನೂ ಸಲಹುವುದು ಅಂದರೆ ನನ್ನಪ್ಪ ನನ್ನವ್ವರಂತೆ ಈ ನೆಲದ ಅಪ್ಪ ಅಮ್ಮಂದಿರ ಬದುಕು. ದುಃಖ, ನೋವು, ಸಂಕಟ, ಸಂತೋಷ ಏನೇ ಇರಲಿ ಅವು ಶಿವನ ಕೃಪೆಯೋ ಶಾಪವೋ ಎಂದು ತಿಳಿಯುತ್ತಲೇ ಜೀವನವನ್ನು ಕಾಯಕ ಮಾಡಿಕೊಂಡ ಅನಕ್ಷರಸ್ಥ ಸಂತರಿಗೆ ನಾವೆಲ್ಲ ಋಣಿಗಳೇ. ಇವರೇ ನಮ್ಮ ಮೌಖಿಕ ಸಾಹಿತ್ಯದ ಪರಿಚಾರಕರು. ಹಾಡು, ಕುಣಿತ, ಆಟ, ಗಾದೆ, ಒಗಟು, ಕಥೆಗಳನ್ನು ತಮ್ಮಷ್ಟಕ್ಕೆ ತಾವು ಕಟ್ಟಿಕೊಂಡು ಬದುಕನ್ನು ಕಲೆಯನ್ನಾಗಿಸಿಕೊಂಡರು. ಇಂತಹ ಬದುಕುವ ಕಲೆಯೇ ಅವರ ಪಾಲಿಗೆ ಸಂಸ್ಕøತಿ, ಚರಿತ್ರೆಯಾದವು. ಅವರದು ನೆಲ ಸಂಬಂಧಿ ಜೀವನ ದೃಷ್ಟಿಕೋನ. ಲೋಕೋದ್ಧಾರಕ ಚಿಂತನೆ. ಆಕಾಶ ಆಸರೆಯಷ್ಟೇ ನಾವು ನಿಂತ ನೆಲವೇ ಎಲ್ಲವೂ. ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಮಣ್ಣು ಸೇರಬೇಕು ಅನ್ನೋ ಸಾಮಾನ್ಯ ತಿಳುವಳಿಕೆ. ಪಸಂಡಿತರ, ಪಾಮರರ, ದಾರ್ಶನಿಕರ ಇನ್ನೊಂದು ಲೋಕದ ಚಿಂತನೆ ನಡೆಸಿದ್ದು ಕಡಿಮೇನೆ. ಶಿಷ್ಟ ಪರಂಪರೆಯೆಂಬುದು ಜನಪದ ಸಾಹಿತ್ಯ ಛಾಯೆಯಷ್ಟೇ. 
ಆಕಾಶಕ್ಕಿಂತ ಅಗಲವಾಗಿರೋದೇನು? - ಆಸೆ
ಭೂಮಿಗಿಂತ ತೂಕವಾಗಿರೋದೇನು? - ಬುದ್ಧಿ
`ಮೂಲೇಲಿ ಮುದ್ಕಿ ಕೂಯ್ತಾರೆ’ - ಹಲಸಿನ ಹಣ್ಣು
ಹೀಗೆ ಹಾಸ್ಯದ ಮೂಲಕ ಒಗಟು ಬಿಡಿಸುವ ಅವರ ಬೌದ್ಧಿಕ ಆಟದೊಳಗೆ ಒಂದು ದರ್ಶನವೂ ಇರುತ್ತದೆ. 
ಜನಪದದಲ್ಲಿ ತಾವು ಹುಟ್ಟಿ ಬೆಳೆದ ನೆಲದ ಪ್ರೀತಿ ಪ್ರಕಟವಾಗುವುದೇ ಒಂದು ವಿಶಿಷ್ಠ ಅಭಿವ್ಯಕ್ತಿ. ಚನ್ನಪಟ್ಣ ತಾಲ್ಲೂಕಿನ ಹಲವು ಊರುಗಳ ಸಂದರ್ಭಗಳು ಈ ನೆಲದ ವೈಶಿಷ್ಠ್ಯ ಸಾರುತ್ತವೆ. 
ಚನ್ನಪಟ್ಣದ ಚಿನ್ನದೇರಿ ಮೇಲೆ 
ಚಂದಕೆ ನನ್ನಣ್ಣ ಪಗಡೇಯ| ಆಡುಕೋಗಿ
ಸುಣ್ಣಕ್ಕೆ ನೂರಾಳ ಕಳುತಾನೆ.
ಇಲ್ಲಿ ಬರುವ ಪಗಡೆ ಪ್ರಸಿದ್ಧ ಆಟವಾಗಿತ್ತು ಹಾಗೂ ಸುಣ್ಣ ಇಲ್ಲಿ ತಯಾರಾಗುತ್ತಿದ್ದ ಸಂಗತಿ ತಿಳಿಯುತ್ತದೆ. 
ಕೊಂಬು ಹಿತ್ತಾಳೆ, ಚೆಂಬು ಮಾಟದ ಹೆಣ್ಣೆ
ನಾರೀ ನೀನೆಲ್ಲಿ ದೊರಕಿದೆ| ಚನ್ನಪಟ್ನದ
ಬಾಳೆ ತೋಟದ ಅರಗಿಣಿಯೇ
ಅಂದೆ ಚನ್ನಪಟ್ನದ ಚೆಂದುಳ್ಳಿಯರ ಕುರಿತ ಈ ತ್ರಿಪದಿ ಸಾಲು ಇಂದಿಗೂ ಪ್ರಸ್ತುತವೆನ್ನುವಂತಿದೆ.
ಮಳೂರು ತೋಟದಲಿ ಮಲ್ಲಿಗೆ ಗಿಡಹುಟ್ಟಿ 
ಮೆಲುಮೆಲುಗೆ ಬೇಕು| ಹರಿದಾವೋ
ಕೂಡ್ಲುರೆಲೋಗಿ ಕುಡಿ ಒಡೆದೋ
ಅಬ್ಬೂರಲೋಗಿ ಹಬ್ಬಿಕೊಂಡೋ
ಬೆಂಗಳೂರಲ್ಲಿ ಬೆರೆಯೋದೋ ಮಲ್ಲಿಗೆ
ಚನ್ನಪಟ್ಣದದಲ್ಲಿ ಇಳಿದಾವೋ
ಚನ್ನಪಟ್ಣದಲ್ಲಿ ಇಳಿದಂತಾ ಮಲ್ಲಿಗೆ
ಒಂದಾಣಿಗೊಂದ ಬೆಲೆಯಾದೋ
ಚನ್ನಪಟ್ಣದ ವೀಳೆಯದೆಲೆಗೆ ಹೊನ್ನಿನಂಥ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಿದ್ದುದನ್ನು ಇದು ಸೂಚಿಸುತ್ತದೆ.
ಇವಿಷ್ಟೇಯಲ್ಲದೇ ಚನ್ನಪಟ್ನದ ಶತಮಾನಗಳ ಹಿಂದೆಯೇ ತಮಿಳು ನಾಡಿನೊಂದಿಗೆ ಹೊಂದಿದ್ದ ಸಂಪರ್ಕ-ಸಂಬಂಧ ಕುರಿತ ಹಲವು ಜನಪದ ಗೀತೆಗಳಿವೆ.
ಕೊಂಗನಾಡ ಸೀಮಿಂದ ಬಂದಳಲ್ಲೆ ಚಲ್ಲವ್ವ
ಕೆಂಗಾರು ಕೊಟ್ಟ ಕುದಿರೇಯ| ಏರಿಕೊಂಡು
ಬಂದಾಳು ಕೂಡಲೂರ ರಾಜಬೀದಿಗೆ.
ಎನ್ನುವಾಗ ಚಲ್ಲಮ್ಮ ಈ ಭಾಗದ ಒಬ್ಬ ಪ್ರಭಾವಿ ನಾಯಕಿಯಾಗಿ ಕಾಣುತ್ತಾಳೆ. ಮಳೂರು ಪಟ್ನದ ಚೌಡೇಶ್ವರಿ ಕೂಡ ಕೊಂಗುನಾಡಿನವಳೇ. ಕಂಚಿಯ ತಾಯಟ್ಟೆಯ ಮಗಳು ಕಳ್ಳಿಮೇಳಮ್ಮ ಇಲ್ಲಿಂದ ಸ್ಥಳಾಂತರಿಸಿ ಪ್ರತಿಷ್ಠೆಗೊಂಡವಳು ಇದೆಲ್ಲ ತ್ರಿ.ಳ ಒಂದು ಮತ್ತು ಎರಡನೇ ಶತಮಾನದ ಸಂದರ್ಭವನ್ನು ನೆನಪಿಸುತ್ತದೆ. ಕಳ್ಳಿಮೆಳೆಯನ್ನು ಕುಲ ಲಾಂಛನವಾಗಿ ಪಡೆದಿದ್ದ ವೃಕ್ಷದೇವತೆಗಳನ್ನು ಆರಾಧಿಸುತ್ತಿದ್ದ ಚಿತ್ರವನ್ನು ಕೊಡುತ್ತದೆ. 

ಕಳ್ಳಿಮೇಳಮ್ಮನ ಆರಾಧಕರು ಸ್ಥಳೀಯರು, ಚೌಡೇಶ್ವರಿಯ ಆರಾಧಕರು ಕಳ್ಳರು. ಮಾಳಗಾಳು ಅರಸ ಕುಲದವರು ಮೊದಲ ಪೂಜೆ ಸಲ್ಲಿಸುತ್ತಾರೆ. ಈಕೆ ಭತ್ತ ಬಡಿದು ಕದ್ದೊಯ್ಯುವಾಗ ಬಂಡೆ ಏರಿ ಬಂದ ಈಕೆ ನೆಲೆನಿಂತಳು. ಅಲ್ಲಿನ ಕಳ್ಳಿಮೇಳಮ್ಮನ ತಾಯಿಯನ್ನು ಓಡಿಸಿದ ಸಂಗತಿ ಜನಪದದ ಚರಿತ್ರೆಯ ಸಂಗತಿಗಳು ಈ ಬಗೆಯಲ್ಲಿ ಮಡುಗಟ್ಟಿರುವುದನ್ನು ನೋಡಬಹುದು. ಪ್ರಾಚೀನ ಚನ್ನಪಟ್ಣದ ತಾಲ್ಲೂಕಿನ ಚರಿತ್ರೆ ಜನಪದದೊಂದಿಗೆ ಕಟ್ಟಿಕೊಂಡ ಹಲವು ಕಥೆಗಳಿವೆ. ಸೌರಂಗಧರನ ತಾಯಿ ತನ್ನ ಮಗನ ಗೋಳು ನೋಡಿ ಸಹಾಯಕ್ಕೆ ಬಾರದ ಊರುಗಳ ಕುರಿತು ಶಾಪ ಕೊಟ್ಟ ವಿಚಾರ ಗಂಗರ ಕಾಲದಲ್ಲಿ ನಡೆದಿರುವ ಘಟನೆಯೇ ಸರಿ.
ಹರೂರು ಹಾಳಾಗಲಿ
ಮೈಲನಾಯಕನಹಳ್ಳಿ ಮಾಳವಾಗಲಿ
ಪಟ್ಲು ನಾಶವಾಗಲಿ
ಮುಕುಂದ ರಾಜನಿಗೆ ಕುಷ್ಠ ರೋಗ ಪ್ರಾಪ್ತಿಯಾಗಲಿ ಚಿಕ್ಕ ಗಂಗವಾಡಿ ಬಾಣತಳ್ಳಿನಾಡು ಸಿಂಗರಾಜಸೀಮೆ ಇತ್ಯಾದಿ ನಾವು ಗ್ರಹಿಸಿಕೊಂಡಿರುವ ಗಂಗಾ, ಚೋಳ, ಹೊಯ್ಸಳ, ವಿಜಯನಗರ, ಮೈಸೂರು ಅರಸರ ಕಾಲದ ಕೆಲ ಘಟನೆಗಳು ಜನಪದ ಸಾಹಿತ್ಯದಲ್ಲಿ ದಾಖಲುಗೊಂಡಿದ್ದು ಜನಪದವನ್ನು ಚರಿತ್ರೆಯ ಆಕಾರವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜನಪದ ಸಾಹಿತ್ಯವನ್ನು ಬಳಸಿಕೊಂಡು ಸೃಜನಾತ್ಮಕ ನೆಲೆಯಲ್ಲಿ ಮರು ನಿರ್ವಚಿಸುವ ಅಗತ್ಯವೂ ಇದೆ. 

ಚನ್ನಪಟ್ಣ ತಾ|| ಭೂ ವೈವಿಧ್ಯತೆಯಿಂದ ಕೂಡಿರುವ ಸ್ಥಳ. ಇದು ಅಕ್ಷಾಂಶ 12 30.55-12 ಡಿಗ್ರಿ 41.18ಯಿಂದ ರೇಖಾಂಶ 77 09 57-77 1531 ವರೆಗೆ ವಿಸ್ತರಿಸಿದೆ. ಇದು ಸಮುದ್ರ ಮಟ್ಟದಿಂದ 697 ಮೀಟರ್ ಎತ್ತರದಲ್ಲಿದೆ. ಮಾಗಡಿ, ರಾಮನಗರಕ್ಕಿಂತಲೂ ಕಡಿಮೆ ಎತ್ತರದಲ್ಲಿದೆ. ಇಲ್ಲಿಯ ವಾಡಿಕ್ಯ ಮಳೆ 845 ಮಿ.ಮೀ. ಆದರೆ ವಾಸ್ತವಿಕವಾಗಿ ಆಗುತ್ತಿರುವ ಸರಾಸರಿ ಮಳೆ 645 ಮಿ.ಮೀ.
1


ಚನ್ನಪಟ್ಣ ತಾಲ್ಲೂಕಿನ ಭೌಗೋಳಿಕ ಮಾಹಿತಿಗಳು/ ಅಂಕಿ ಅಂಶಗಳ ವಿವರ.
ಚನ್ನಪಟ್ಣ ತಾಲ್ಲೂಕು ಭೌಗೋಳಿಕವಾಗಿ ಅರೆಮಲೆನಾಡಿನಂತಿದೆ. ಪೂರ್ವಘಟ್ಟಗಳ ಸಾಲುಸಾಲು ಬೆಟ್ಟಗಳು ಇಲ್ಲಿರುವುದು ವಿಶೇಷ. ಒಂದೆಡೆ ಭತ್ತ, ಕಬ್ಬು, ತೆಂಗು, ರೇಷ್ಮೆ, ವೀಳ್ಯೆದೆಲೆ, ಬಾಳೆ ಮುಂತಾದ ಬೆಳೆ ಬೆಳೆಯುವ ಫಲವತ್ತಾದ ಭೂಮಿ ಇದ್ದರೆ ಆರಕ, ಹುರುಳಿ, ರಾಗಿ, ನವಣೆ, ಸಾಮೆ, ತೊಗರಿ ಮುಂತಾದ ಬೆಳೆ ಬೆಳೆಯುವ ಒಣ ಅಷ್ಟೇನು ಫಲವತ್ತಾಗಿಲ್ಲದ ಕೆಂಪು ಮಿಶ್ರಿತ ನುಜ್ಜುಗಲ್ಲಿನ ಭೂಮಿಯೂ ಇದೆ. ಕಣ್ವ ನದಿಯ ಇಕ್ಕೆಲಗಳಲ್ಲಿ ತೆಂಗು ಸಮೃದ್ಧವಾಗಿ ಬೆಳೆದು ನಿಂತಿದೆ. ನೀರಿಲ್ಲದೆ ಸುಳಿ ಒಣಗಿ ಇಲ್ಲವೇ ರೋಗಕ್ಕೆ ತುತ್ತಾಗಿ ತೆಂಗು ಇತ್ತೀಚೆಗೆ ನಾಶವೂ ಆಗಿದೆ. ದಶವಾರ, ನಾಗವಾರ, ತಿಟ್ಟಮಾರನಹಳ್ಳಿ, ಮೈಲನಾಯಕನ ಹೊಸಹಳ್ಳಿ, ಮಳೂರು, ಮಳೂರು ಪಟ್ನ, ಕೂಡ್ಲೂರು, ಇಗ್ಗಲೂರು ವರೆಗೆ ನೀರಾವರಿ ಇಲ್ಲವೇ ಅರೆನೀರಾವರಿ ವ್ಯವಸ್ಥೆ ಪ್ರಾಚೀನ ಕಾಲದಿಂದಲೂ ಕಲ್ಪಿಸಲಾಗಿತ್ತು.
ಭೂಹಳ್ಳಿ, ಮೆಣಸಿಗನಹಳ್ಳಿ, ವಂಡೂರು ವರಗೇರಹಳ್ಳಿ, ವಂಗನೂರು, ಕೋಡಂಬಳ್ಳಿ ಗ್ರಾಮಗಳೂ ಸಹ ಇದರ ವ್ಯಾಪ್ತಿಗೆ ಬಂದರೂ ಹೆಚ್ಚು ಮಳೆ ಆಶ್ರಿತ ಬೇಸಾಯವನ್ನೇ ಅವಲಂಬಿಸಿದವು. 

ಚನ್ನಪಟ್ನ| ಚನ್ನಪಟ್ನ ಚಂದದ ನಾಡು, ಸೊಬಗಿನ ಸೀಮೆ, ಇದು ಚೋಳರು ಕಾದಿರಿಸಿದ ನಂತರವೇ `ಚಂದಪಟ್ಟಣ’ ಚನ್ನಪಟ್ಟಣ ಎಂಬ ಹೆಸರು ಬಂದಿದೆ. ಗಂಗಾ, ಚೋಳರ ಕಾಲದಲ್ಲಿ ಇದು ಅಸ್ತಿತ್ವದಲ್ಲಿದ್ದ ದಾಖಲೆಗಳು ಲಭ್ಯವಿಲ್ಲ. 1387 ರ ಕೃಷ್ಣಾಪುರ ಗ್ರಾಮದ ಶಾಸನದಲ್ಲಿ `ಚಂಗಪಟ್ಟಣ’ ಎಂಬ ಉಲ್ಲೇಖ ಸಿಗುತ್ತದೆ. ವಿಜಯನಗರದ ಅರಸ ಪ್ರೌಢದೇವರಾಯ ಚಿಕ್ಕಪೆರುಮಾಳ ದೇವ ಒಡೆಯನಿಗೆ ಚನ್ನಪಟ್ನ ಸೀಮೆಯನ್ನು ದಯಪಾಲಿಸಿದ್ದ ವಿಚಾರ ತಿಳಿಯುತ್ತದೆ. 1513 ರಲ್ಲಿ ಹೊಟ್ಟಿಗನ ಹೊಸಹಳ್ಳಿ ಶಾಸನವೂ `ಚಂಗಪಟ್ಟಣ’ವನ್ನು ಒಂದು ರಾಜಕೀಯ ಘಟಕವಾಗಿ ಪರಿಗಣಿಸಿ `ಸೀಮೆ’ ಎಂದು ಹೆಸರಿಸಿದೆ. 1534 ರಲ್ಲಿ ಬಂಡಾರದ ತಿಮ್ಮಪ್ಪ ನಾಯಕ ಆಳುತ್ತಿದ್ದನು. ವಿಜಯನಗರದ ಪಾಳೆಯಗಾಯರಾದ ಇಮ್ಮಡಿ ಜಗದೇವರಾಯನ ವಂಶಸ್ಥರು ಚನ್ನಪಟ್ನವನ್ನು ಮುಖ್ಯ ಆಡಳಿತ ಕೇಂದ್ರವಾಗಿ ಮಾಡಿಕೊಂಡು ಆಡಳಿತ ನಡೆಸಿದರು. ಇವರು ಸುಮಾರು 60 ವರ್ಷಗಳ ಕಾಲ ಕ್ರಿ.ಶ. 1570 ರಿಂದ 1630 ರವರೆಗೂ ಆಳ್ವಿಕೆ ನಡೆಸಿದ ಮಾಹಿತಿ ಇದೆ. 1623 ರ ದಶವಾರ ಗ್ರಾಮ ಶಾಸನ ಇಮ್ಮಡಿ ಜಗದೇವರಾಯನ `ಚನ್ನಪಟ್ಲಂ’ ರಾಜ್ಯದ ಪಾಳೆಯಗಾರ ಎಂದಿದೆ. ಇವನ ರಾಜ್ಯ ತಮಿಳುನಾಡಿನ ಬಾರಾಮಹಲ್ ಬೆಟ್ಟದಿಂದ ನಾಗಮಂಗಲದವರೆವಿಗೂ ವಿಸ್ತರಿಸಿತ್ತೆಂದು ಹೇಳಲಾಗಿದೆ. 1759 ರ ಮೈಸೂರು ಒಡೆಯರ ಕಾಲದ (ಕೃಷ್ಣರಾಜ ಒಡೆಯರ್) ಚಂನಪಟ್ನ ಪ್ರಸಿದ್ಧಿಗೆ ಬಂದಿದ್ದನ್ನು ಸೂಚಿಸುತ್ತದೆ. 1873 ರಲ್ಲಿ ಕ್ಲೋಸ್‍ಪೇಟೆಯ ಉಪತಾಲ್ಲೂಕಾಗಿತ್ತು. 1892 ರಲ್ಲಿ ಪೂರ್ಣಪ್ರಮಾಣದ ತಾಲ್ಲೂಕಾಗಿ ಅಸ್ತಿತ್ವಕ್ಕೆ ಬಂದು ರಾಮನಗರ ಚನ್ನಪಟ್ಣದ ಉಪ ತಾಲ್ಲೂಕಾಗಿತ್ತು. 
ಕಣ್ವ ನದಿಯ ಇಕ್ಕೆಲಗಳಲ್ಲಿ ತೆಂಗು, ಕಂಗು, ಬಾಳೆ, ವೀಳ್ಯದೆಲೆ, ಭತ್ತದ ಗದ್ದೆಗಳಿಂದ ಹಚ್ಚಹಸಿರಿನಿಂದ ತುಂಬಿ ಹೋಗಿದ್ದರಿಂದ ಪ್ರಾಚೀನ ವೈಷ್ಣವ ದಾಖಲೆಗಳಲ್ಲಿ ಚಂದಾಪುರ ಎಂತಲೂ ಕರೆಸಿಕೊಂಡಿತ್ತು. 1580 ರಲ್ಲಿ ಜಗದೇವರಾಯ ಇಲ್ಲೊಂದು ಕೋಟೆ ನಿರ್ಮಿಸಿದ. 1630 ರಲ್ಲಿ ಚಾಮರಾಜ ಒಡೆಯರ್ ಚನ್ನಪಟ್ನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1759 ರಲ್ಲಿ ಮರಾಠ ನಾಯಕ ಗೋಪಾಲ ಹರಿ ದಾಳಿಗೂ ತುತ್ತಾಯಿತು. ಹೈದರ್ ಆಲಿ ಇದನ್ನು ಗೆದ್ದನು. ಟಿಪ್ಪು 1790 ರಲ್ಲಿ ಇಲ್ಲಿನ ಕೋಟೆ ನಾಶಗೊಳಿಸಿದನು. ದಿವಾನ್ ಪೂರ್ಣಯ್ಯ ಕೋಟೆಯನ್ನು ದುರಸ್ಥಿಗೊಳಿಸಿದನು. 


1553 ರ ಕಾಲಕ್ಕೆ ಸೇರಿರುವ ಇಲ್ಲಿನ ಕನ್ನಡ ಶಾಸನದಲ್ಲಿ ವಿಜಯನಗರದ ಅರಸ ಸದಾಶಿವರಾಯನ ಕಾಲದಲ್ಲಿ ಚನ್ನಪಟ್ನ ಸೀಮೆ ಎಂಬ ಹೆಸರಿನಿಂದ ಕರೆದಿರುವ ಉಲ್ಲೇಖವೂ ಇದೆ. ಕ್ರಿ.ಶ. 1800 ರಲ್ಲಿ ಟಿಪ್ಪುವಿನ ಮರಣಾ ನಂತರ ಚನ್ನಪಟ್ನಕ್ಕೆ ಭೇಟಿ ಕೊಟ್ಟಿದದ ಬುಕಿನಾನ್ “veಡಿಥಿ beಚಿuಣiಜಿuಟ ಛಿouಟಿಣಡಿಥಿ“ಎಂದು ಇಲ್ಲಿ ಸಾವಿರ ಮನೆಗಳಿದ್ದವೆಂದು ತೆಂಗಿನ ಮರ ಮತ್ತು ಕಬ್ಬಿನ ಗದ್ದೆಗಳಿಂದ ಕಂಗೊಳಿಸುತ್ತಿದ್ದವೆಂದು ವರ್ಣಿಸಿದ್ದಾನೆ. ಸೀಸದ ಬಾಟೆಲ್ ಗಳು, ಬಳೆಗಳು, ಸ್ಟೀಲ್ ವೈರ್ ಗಳು, ಸಕ್ಕರೆ ಮತ್ತು ಬೆಲ್ಲ ತಯಾರಿಸುತ್ತಿದ್ದ ವಿವರ ಕೊಡುತ್ತಾನೆ. 1936 ರಲ್ಲಿ ಇಲ್ಲಿನ ಸ್ಪ್ಯಾನ್ ಸಿಲ್ಕ್ ಮಿಲ್ ಅನ್ನು ಮಿರ್ಜಾ ಇಸ್ಮಾಯಿಲ್ ಸ್ಥಾಪಿಸಿದರು.

3ನೇ ಕೃಷ್ಣರಾಜ ಒಡೆಯರ್ ಸಂಬಂಧಿ ತಿಮ್ಮಪ್ಪ ರಾಜ ಅರಸ್ ಪುಟ್ಟ ಅರಮನೆಯನ್ನು 2 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದನು. ಇದು ಜೆಸಿ ರಸ್ತೆಯ ಅಂಚಿನಲ್ಲಿತ್ತು. ತಿಮ್ಮಪ್ಪ ಮ್ಯಾನ್ ಸನ್ ಎಂಬ ಫಲಕವೂ ವರ್ಣಮಯವಾಗಿರುವ ಗೋಡೆ, ತೊಲೆಗಳಿದ್ದವು. ಇದು ಮೂರು ಅಂತಸ್ತಿನ ಕಟ್ಟಡವಾಗಿತ್ತು. ತಿಮ್ಮಪ್ಪರಾಜ ಇಲ್ಲಿಯ ಪೌಜುದಾರನಾಗಿದ್ದ. ಈ ಅರಮನೆಗೆ ಕುನ್ನೀರಕಟ್ಟೆಯ ನೀರನ್ನು ಬಳಸಲಾಗುತ್ತಿತ್ತು. ಈ ಅರಮನೆಯ ಉತ್ತರಕ್ಕಿರುವ ಶಿಲಾ ಶಾಸನದಲ್ಲಿ ಕ್ರಿ.ಶ. 1756 ವೀರಯ್ಯ ಎಂಬಾತ ಕಳಲೆ ನಂಜರಾಜನ ಆದೇಶದಂತೆ ಕೆರೆಯೊಂದನ್ನು ಕಟ್ಟಿಸಿದ. ಇದೇ ಈಗಿನ ರಾಮಮ್ಮನ ಕೆರೆ. ಆಗಿನ ಶುಕ್ರವಾರ ಪೇಟೆ ಕರಕುಶಲ ಕೈಗಾರಿಕೆಗಳಿಗೆ ಹೆಸರಾಗಿತ್ತು. ಪೇಟೆಯ ಬೀದಿಯಲ್ಲಿ ಬಣ್ಣದ ಸಾಮಾನುಗಳನ್ನು, ವೀಣೆಯ ತಂತಿಗಳನ್ನು, ಸಂಗೀತ ಪರಿಕರಗಳನ್ನು, ಗಾಜಿನ ಸಾಮಾನುಗಳನ್ನು ತಯಾರಿಸಲಾಗುತ್ತಿತ್ತು.
ಶ್ರೀ ರಾಮಾನುಜಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತ್ತೆಂದು ಹೇಳಲಾಗಿರುವ ಕೋಟೆಯ ಒಳಗಿನ ವರದರಾಜಸ್ವಾಮಿ ದೇವಾಲಯವು ವಿಜಯನಗರ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇಲ್ಲಿ ರಾಮಾನುಜಾಚಾರ್ಯರು ಹಾಗೂ ಆಳ್ವಾರರ ಸಣ್ಣ ಮೂರ್ತಿಗಳೂ ಇವೆ. ವರದರಾಜಸ್ವಾಮಿಯ ದೇಗುಲ ಹತ್ತಿರವೇ ವ್ಯಾಸ ತೀರ್ಥರಿಂದ ಸ್ಥಾಪಿಸಲ್ಪಟ್ಟ ಕುಂದಾಪುರ ವ್ಯಾಸರಾಯ ಮಠವಿದೆ. ಇಲ್ಲಿನ ಶ್ರೀನಿವಾಸ ಮೂರ್ತಿಯನ್ನು ವ್ಯಾಸತೀರ್ಥರು ಸ್ಥಾಪಿಸಿದರೆಂಬ ಮಾಹಿತಿಯಿಂದೆ. ಇಲ್ಲಿಯೇ ಪುರಂದರ ಮಂಟಪವಿದೆ. ಪುರಂದರ ದಾಸರು ಇಲ್ಲಿ ಕೀರ್ತನೆಗಳನ್ನು ರಚಿಸಿದರೆಂಬ ಪ್ರತೀತಿ ಇದೆ. ನೃತ್ಯ ಸಂಗೀತಗಳೊಂದಿಗೆ ಕೀರ್ತನೆಗಳನ್ನು ಹಾಡಲಾಗುತ್ತಿತ್ತು. ಇಲ್ಲಿಯೇ ವಿಜಯದಾಸರ ಮೂರ್ತಿಯೂ ಪ್ರತಿಷ್ಠಾಪಿಸಲಾಗಿದೆ. ಪ್ರತಿ ವರ್ಷವೂ ಇಲ್ಲಿ ಪುರಂದರ ದಾಸರ ಆರಾಧನೆಯು ಜರುಗುತ್ತದೆ. ಇಲ್ಲಿನ ಮಂಗಾರ ಆಂಜನೇಯನನ್ನು ವ್ಯಾಸತೀರ್ಥರೇ ಪ್ರತಿಷ್ಠಾಪಿಸಿದರು. ಇಲ್ಲಿ ವ್ಯಾಸತೀರ್ಥ ಮಠವೂ ಇದೆ. 

ಚನ್ನಪಟ್ನ ತಾಲ್ಲೂಕಿನಲ್ಲಿ ಚಾರಿತ್ರಿಕವಾಗಿ ಮಹತ್ವವುಳ್ಳ ರಾಜಧಾನಿಯಾಗಿ, ಸೈನಕ ನೆಲೆಯಾಗಿ, ಆಡಳಿತ ಕೇಂದ್ರಗಳಾಗಿ ಮಹತ್ವದ ಪಾತ್ರ ವಹಿಸಿದ ಹಲವು ಗ್ರಾಮಗಳ ಪಾತ್ರ ಹಿರಿದು. 
ಮಂಕುಂದ ಗಂಗರ ಕಾಲದಲ್ಲಿ ತಾತ್ಕಾಲಿಕ ರಾಜಧಾನಿಯಾಗಿ, ಸೈನಿಕ ಕೇಂದ್ರವಾಗಿ ಪ್ರಸಿದ್ಧಿಗೆ ಬಂದ ಒಂದು ಜೈಲು ಕೇಂದ್ರವಾಗಿತ್ತು. ಕ್ರಿ.ಶ. 913 ರಲ್ಲಿ ಗಂಗ ದೊರೆ ನೀತಿಮಾರ್ಗನ ಶಾಸನದಲ್ಲಿ ಮನ್ಖಗ್ಧ ಎಂಬ ಉಲ್ಲೇಖ ಸಿಗುತ್ತದೆ. ಮಾನಕುಂದ ಮಾಣಿಕ್ಯಪುರಿ ಎಂದು ಇದಕ್ಕೂ ಪೂರ್ವದಲ್ಲಿ ಕರೆಯುತ್ತಿದ್ದರು. ಗಂಗರ ಚರಿತ್ರೆ ಕುರಿತು ಅಧ್ಯಯನ ಮಾಡಲು ಸೂಕ್ತ ಸ್ಥಳವಾಗಿದ್ದು ಇಲ್ಲಿ ಗಂಗೋತ್ಸವವನ್ನು ನಡೆಸುವ ಮೂಲಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಇಲ್ಲಿ ಬಸವಣ್ಣ ಹಾಗೂ ಲಿಂಗದ ಮೂರ್ತಿಗಳು ಅಗೆಯುವಾಗ ಸಿಕ್ಕಿದ್ದು ಇತಿಹಾಸವನ್ನು ಪುನಃರಚಿಸಲು ಸಹಕಾರಿಯಾಗಿದೆ.


ಚನ್ನಪಟ್ಣ ಕತ್ತಲ ರಾಜ್ಯದ ಒಂದು ಭೌಗೋಳಿಕ ಸೀಮೆಯಾಗತ್ತು. ಇದು ಕ್ರಿ.ಪೂ.ದ ಸ್ಥಿತಿಯನ್ನು ನೆನೆಸೊದರೂ ಗಂಗಾಳ್ವಿಕೆಯೊಂದಿಗೆ ಇದು ನಾಗರೀಕಗೊಳ್ಳುತ್ತಿದ್ದು ನಾಡಾಗಿ ಗುರ್ತಿಸಿಕೊಂಡಿತ್ತು. ಜೈನರು ಮೊದಲು ಈ ನೆಲವನ್ನು ಸೃಷ್ಟಿಸಿದರು. ನಿಂಬಗ್ರಾಮ ಖ್ರಾಸಿಯ ಬೊವೊರ, ಕೂಡ್ಲೂರು, ಅಬ್ಬೂರು, ಸೋಗಾಲ, ಮಂಕುಂದ, ಅಪ್ಪಿತಿಪ್ಪೂರು ಈ ಭಾಗದ ಜೈನ ಸಂಪರ್ಕ ಹೊಂದಿದ್ದು ಗ್ರಾಮಗಳಾಗಿದ್ದವು. ನಂತರ ಚನ್ನಪಟ್ಣಕ್ಕೆ ತಮಿಳುನಾಡಿನ ಧಾರ್ಮಿಕ ನಾಯಕರಾದ ಆಳ್ವಾರರು. ಶಲ್ಪಿಗಳು, ಆಡಳಿತಗಾರರು ಆಗಮಿಸಿದರು. ಕ್ರಿ.ಶ. 10ನೇ ಶತಮಾನದೊತ್ತಿಗೆ ತಮಿಳು ಶಾಸನಗಳನ್ನು ಇಲ್ಲಿ ಕೆತ್ತಿಸಲಾಗಿತ್ತು. ಹೊಂಗನೂರು, ಮಳೂರು, ಮಳೂರುಪಟ್ಣ, ಕೂಡ್ಲೂರು ಈ ಭಾಗಗಳಲ್ಲಿ ತಮಿಳರು, ತಮಿಳು ದೈವಗಳು ನೆಲೆಯೂರಿದವು. ನಂತರ ಸುಬ್ರಹಣ್ಯ ತೀರ್ಥರು ಬ್ರಾಹ್ಮಣೀಪುರವನ್ನು ಕೇಂದ್ರವಾಗಿಸಿಕೊಂಡರು. ಇಲ್ಲಿಂದ ಮೌರ್ಯಪಂಥ ಪ್ರಚಾರಕ್ಕೆ ಬಂದು ಅಪ್ಪಿಯೂರು ಅಥವಾ ಅಬ್ಬೂರು ಮಾಧ್ಯ ಧರ್ಮದ ಕೇಂದ್ರವಾಯಿತು. ನರಸಿಂಹ ತೀರ್ಥರು ಇಲ್ಲಿಯೇ ತಪಸನ್ನಾಚರಿಸಿದರೆಂಬ ಪ್ರತೀತಿ ಇದೆ. ಶೃಈ ಪಾದರಾಯರು ಕೋಲಾರದ ಮುಳುಬಾಗಿಲಿನಿಂದ ಅಬ್ಬೂರಿಗೆ ಬಂದು ಶಿಕ್ಷಣ ಪಡೆದು ರಾಜಗುರು ಖ್ಯಾತಿ ವ್ಯಾಸತೀರ್ಥರು ಶ್ರೀ ಪಾದರಾಯರ ಪರಮಶಿಷ್ಯರಾಗಿದ್ದರು. ಇವರು ಬನ್ನೂರು ಗ್ರಾಮದವರಾಗಿದ್ದರು. ( ಮೈಸೂರಿನ ಸಮೀಪ ಸೋಸಲೆ ಗ್ರಾಮ) ಬ್ರಾಹಣ್ಯ ತೀರ್ಥರು ಇವರಿಗೆ ಸನ್ಯಾಸ ದೀಕ್ಷೆ ನೀಡಿದರು. ಕರ್ನಾಟಕದಲ್ಲಿ ಮಾರ್ಧಯ ಪಂಥ ಬೆಳವಣಿಗೆಗೆ ಚನ್ನಪಟ್ಣ ತಾಲ್ಲೂಕು ಬಹುದೊಡ್ಡ ಕೊಡುಗೆಯನ್ನೇ ನೀಡಿದೆ. ಇಲ್ಲಿಗೆ ಮಿತಾಕ್ಷರ ಗ್ರಂಥ ರಚಿಸಿದ ವಿಜ್ಞೇಶ್ವರನು ಕ್ರಿ.ಶ. 11ನೇ ಶತಮಾನದಲ್ಲಿ ಅಪ್ರಮೇಯ ಸ್ವಾಮಿ ದೇಗುಲಕ್ಕೆ ಭೇಟಿಕೊಟ್ಟಿದ್ದನೆಂಬ ಪ್ರತೀತಿಯೂ ಇದೆ. ಇಲ್ಲಿಯೇ ಮಿತಾಕ್ಷರ ಗ್ರಂಥ ರಚಿಸಿದನೆಂಬ ನಂಬಿಕೆ ಇದೆ. 14-15 ನೆ ಶತಮಾನದ ಕಾಲಘಟ್ಟದೊತ್ತಿಗೆ ಪುರಂದರದಾಸರು ಚನ್ನಪಟ್ಣದ ಕೋಟೆಯ ವರದರಾಜು ಸ್ವಾಮಿ ದೇವಾಲಯದ ಬಳಿ ತಂಗಿದ್ದರಲ್ಲದೇ ಆಡಿಸಿದಲೇ ಯಶೋಧೆ ಎಂಬ ಗೀತೆಯನ್ನು ಅಪ್ರಮೇಯ ಸ್ವಾಮಿಯ ಬಾಲಕೃಷ್ಣನನ್ನು ಕುರಿತು ರಚಿಸಿದರು. ಇದನ್ನು ಮುಂಚೆ ರಾಮಾನುಜಚಾರ್ಯರು ಭೇಟಿಕೊಟ್ಟು ಹೋಗಿದ್ದರು. ಚನ್ನಪಟ್ಣ ತಾಲ್ಲೂಕಿನ ಹಲವೆಡೆ ಶೈವ ಮಡಗಳಿದ್ದವು ಮಳೂರು, ಬೇವೂರು, ದ್ಯಾವಪಟ್ಣ, ಕೂಡ್ಲೂರು, ಮಳೂರು ಪಟ್ಣ ಇತರೆಡೆ ಪುಲಿಗೆರೆ  ಯಡಿತಯೂರಿನ ಸಿದ್ಧಲಿಂಗೇಶ್ವರ, ಕುಂದಾಪುರದ ವ್ಯಾಸರಾಜರ ಮಠಗಳೋಮದಿಗೆ ಸಂಪರ್ಕ ಹೊಂದಿದ್ದವು.


ಸ್ಮರಿಸಬಹುದಾದ ಕ್ರಿಯಾಶೀಲರು
ಸಾಹಿತ್ಯ ಕ್ಷೇತ್ರ : ಸಾಹಿತ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಮಹನೀಯರು ಚನ್ನಪಟ್ಣದಲ್ಲಿ ಎಲಸಿದ್ದರೆಂಬುದೇ ಹೆಮ್ಮೆಯ ಸಂಗತಿ.
ಕಾನೂನಿನ ಪ್ರಪ್ರಥಮ ಕೃತಿ ``ಮಿತಾಕ್ಷರ’’ ಬರೆದ ವಿಜ್ಞಾನೇಶ್ವರ ದೊಡ್ಡ ಮಳೂರಿನವನು ಎಂಬ ಮಾಹಿತಿ ಇದೆ. ಅದ್ವೈತ ಪರಂಪರೆಯನ್ನು ಪ್ರಚಾದಿಸಿದ ನರಸಿಂಹತೀರ್ಥರು, ಬ್ರಾಹ್ಮಣ್ಯ ತೀರ್ಥರು, ವ್ಯಾಸರಾಯರು, ಶ್ರೀಪಾದರಾಯರು ಇಲ್ಲಿಯೇ ಇದ್ದು ಖ್ಯಾತರಾದವರು. ಕನ್ನಡ ಸಂಸ್ಕøತಗಳಲ್ಲಿ ಕೀರ್ತನ ಸಾಹಿತ್ಯ ರಚಿಸಿದವರು ಅಂಬೇಗಾಲು ಕೃಷ್ಣ ಕುರಿತು ``ಆಡಿಸಿದಳೇ ಶೋಧೆ ಜಗದೋದ್ಧಾರನಾ’’ ಎಂಬ ಗೀತೆ ಹಾಡಿದ ಪುರಂದರದಾಸರು ಕೆಲವು ಕಾಲ ಚನ್ನಪಟ್ಣದ ವರದರಾಜ ಸ್ವಾಮಿಯ ಆವರಣದಲ್ಲಿ ತಂಗಿದ್ದರು.
ಈ ತಾಲ್ಲೂಕಿನ ಹಿರಿಯ ಸಾಹಿತಿಗಳಲ್ಲಿ ಚ. ವಾಸುದೇವಯ್ಯನವರು ಎಂ.ಎಸ್. ಪುಟ್ಟಣ್ಣನವರು, ಸಿ.ಕೆ. ವೆಂಕಟರಾಮಯ್ಯನವರು, ಪ್ರಮುಖರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸಾಪ ಸಮ್ಮೇಳನದ ಪ್ರಥಮ ಅಧ್ಯಕ್ಷರಾಗಿದ್ದ ಸಿ.ಕೆ. ವೆಂಕಟರಾಮಯ್ಯನವರು ಕನ್ನಡ ಸಂಸ್ಕøತದಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದ್ದರು. ಎಂ.ಎಸ್. ಪುಟ್ಟಣ್ಣನವರು ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. 
ಆನಪದ ತಜ್ಞರಾದ ನಾಡೋಜ ದೇ.ಜ.ಗೌ. ಮತ್ತು ಕಾಳೇಗೌಡ ನಾಗವಾರದ ಹೆಸರು ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದುದು. 2001ರಲ್ಲಿ ಜರುಗಿದ ಬೆ. ಗ್ರಾ. ಈಲ್ಲೆಯ ಏಳನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಾದಂಬರಿಕಾರ್ತಿ ಸಿ.ಎಸ್. ಜಯಲಕ್ಷ್ಮಿದೇವಿ ಮಹಿಳಾ ಸಾಹಿತ್ಯದಲ್ಲಿ ಗುರ್ತಿಸಿಕೊಂಡ ಪ್ರಮುಖರು. ಇವರಂತೆಯೇ ಸರಸ್ವತಿಗೌಡ ಒಬ್ಬ ಪ್ರಸಿದ್ಧಿ ಕಾದಂಬರಿಕಾರ್ತಿ ಕವಿಯತ್ರಿ. 
ಮಕ್ಕಳ ಸಾಹಿತಿ ರಸಿಗೆ ಪುತ್ತಿಗೆ, ಪತ್ತೇದಾರಿ ಕಾಂದಂಬರಿ ಬ್ರಹ ಟಿ.ಕೆ. ರಾಮರಾವ್, ಭಾಷಾ ವಿಜ್ಞಾನಿ ಕೆ. ಕೇಂಪೇಗೌಡ, ಪತ್ರಕರ್ತ ಸು.ತ. ರಾಮೇಗೌಡ, ಶಿವರಾಮೇಗೌಡ, ಮನೋವಿಜ್ಞಾನ ಸಾಹಿತ್ಯ ಕ್ಷೇತ್ರದ ಡಾ. ಸಿ.ಆರ್. ಚಂದ್ರಶೇಖರ್, ವೆಂಕಟಯ್ಯ ಅಪ್ರಸೆರೆ, ಭುಹಳ್ಳಿ ಪುಟ್ಟಸ್ವಾಮಿ, ಚಕ್ಕರೆ ಶಿವಶಂಕರ್, ಕೂಡ್ಲೂರು ವೆಂಕಟಪ್ಪ, ಎಸ್. ರಾಮಲಿಂಗೇಶ್ವರ(ಸಿಸಿರಾ) ಇವರೆಲ್ಲರನ್ನೂ ಈ ಹೊತ್ತು ಸ್ಮರಿಸುವುದು ನನ್ನ ಕರ್ತವ್ಯವಾಗಿದೆ. 
ಇತ್ತೀಚಿನ ಕ್ರಿಯಾಶೀಲ ಸಾಹಿತಿಗಳಲ್ಲಿ ಚನ್ನವೀರೇಗೌಡ, ಡಾ. ಮಧುಸೂಧನ ಜೋಷಿ, ಎನ್. ಶಿವಲಿಂಗಯ್ಯ, ರೂಪಾ ಮತ್ತಿಕೆರೆ, ಅಖಿಲಾ ವಿದ್ಯಾಸಂದ್ರ, ಎಂ.ಕೆ. ಮಂಜುನಾಥ, ವಿಜಯ್ ರಾಂಪುರ, ಎಲೆಕೇರಿ ಶಿವರಾಂ, ಎಲೆಕೇರಿ ಡಿ. ರಾಜಶೇಖರ್, ಎಂಜಿ. ಸತ್ಯ ನಾರಾಯಣ, ಬಿ.ಟಿ. ಚಿಕ್ಕಪುಟ್ಟೇಗೌಡ, ಕೆ. ಶಿವಪ್ಪ, ಸಿ. ಪುಟ್ಟಸ್ವಾಮಿ, ಬಿ.ಟಿ. ಮುನ್ನೇಶ್ ಹೀಗೆ ಹತ್ತು ಹಲವು ಸಾಹಿತಿಗಳು ಕನ್ನಡದ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.  
ಕಲಾವಿದರು : ಚಾಮರಾಜ ಒಡೆಯರ್ ಆಸ್ಥಾನವನ್ನಾಲಂಕರಿಸಿದ್ದ ಬೈರವೀ ಕೇಂಪೇಗೌಡರು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು, ಅಪ್ಪಗೆರೆ ತಿಮ್ಮರಾಜು ಅಂತರಾಷ್ಟ್ರೀಯ ಜನಪದ ಗಾಯಕರಾಗಿದ್ದು,ಡ ಹೊನ್ನಿಗಾನಹಳ್ಳಿ ಸಿದ್ಧರಾಜು, ಬ್ಯಾಡರಹಳ್ಳಿ ಶಿವಕುಮಾರ್, ಅಸಪ್ಪಗೆರೆ ಸತೀಶ್ ಇವರು ಜನಪ್ರಿಯ ಗಾಯಕರಾಗಿದ್ದಾರೆ.
ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞ ಪ್ರೊ. ಕೆ. ವೆಂಕಟಗಿರಿಗೌಡರದು ಅಪ್ರತಿಮ ಸಾಧನೆ.


ಚಲನಚಿತ್ರ ಕ್ಷೇತ್ರ :  ಬಹುಭಾಷಾ ತಾರೆ ಪದ್ಮಶ್ರೀ ವಿಜೇತೆ ಬಿ. ಸರೋಜಾದೆವಿ ಸಂಗೀತಬ್ರಹ್ಮ ಬೈರವೀ ಕೇಂಪೇಗೌಡ, ಸಿ.ಆರ್. ಸಿಂಹ, ಶ್ರೀನಾಥ್, ಪೋಷಕ ನಟರಾದ ಮಂಗಳವಾರ ಪೇಟೆಯ ತಿಮ್ಮಯ್ಯನವರು ನಾಯಕಿ ಪಾತ್ರದಲ್ಲಿ ಹಲವಾರು ಸಿನಿಮಾ ಮಾಡಿದ ಶಾಸಕ ಯೋಗೀಶ್ವರ್, ನಿರ್ದೇಶಕ ಶಿವರುದ್ರಯ್ಯ, ಜೂನಿಯರ್ ಜಯಂತಿ, ಧಾರವಾಹಿ, ಸಿನಿಮಾಗಳಲ್ಲಿ ನಟಿಸುತ್ತಿರುವ ಹಂಸರಾಜ್( ಉಜ್ಜನಹಳ್ಳಿ ಕುಮಾರ್) ಕಿರುತೆರೆ ನಟ ಸುನಿಲ್, ಆದೀಶ್ವರ್ ಇನ್ನೂ ಹತ್ತು ಹಲವು ಹಿರಿಯ ಕಲಾವಿದರು ಸಂಗೀತಗಾರರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಚನ್ನಪಟ್ಣಕ್ಕೆ ಕೀರ್ತಿ ತಂದಿದ್ದಾರೆ. 

ಚನ್ನಪಟ್ಣ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಚಾರಿತ್ರಿಕ ಸಂಬಂಧ ಹೊಂದಿರುವ  ಹಲವು ವೀರಗಲ್ಲುಗಳು  ಈ ಗ್ರಾಮಗಳ ಮಾಸ್ತಿಕಲ್ಲುಗಳು , ಶಾಸನಗಳು ದೇವಾಲಯಗಳನ್ನು ಹೊಂದಿರುತ್ತವೆ. ಈ ಗ್ರಾಮಗಳ ಕುರಿತ ಆಳವಾದ ಅಧ್ಯಯನ ಜರುಗಿಲ್ಲ ನಮ್ಮಮ ಜನಪದ ಪರಂಪರೆಗೂ ಈ ಗ್ರಾಮಗಳು ಪ್ರಸಿದ್ಧಿಯಾಗಿವೆ. ಸ್ಥಳೀಯ ಇತಿಹಾಸ ಕಟ್ಟುವಾಗ ಮಳೂರು, ಮಂಕುಂದ, ಅಬ್ಬೂರು, ಮಳೂರುಪಟ್ಣ, ಕೂಡ್ಲೂರು ಹೊಂಗನೂರುಗಳಷ್ಟೇ ಪ್ರಾಚೀನ ಐತಿಹ್ಯಹೊಂದಿವೆ. ಅವುಗಳಲ್ಲಿ ಸಿಂಗರಾಜಿಪುರ, ಹನಿಯೂರು, ಉಜ್ಜನಹಳ್ಳಿ, ವಿಡವೇನಹಳ್ಳಿ, ಭೂಹಳ್ಳಿ , ಕೋಡಂಬಳ್ಳಿ, ಇಗಗ್ಲೂರು, ದ್ಯಾವಪಟ್ಣ, ಅರಳಾಳುಸಂದ್ರ, ಗರಕಹಳ್ಳಿ, ನೇಡ್ಲೂರು, ಹಾರೇಕೊಪ್ಪ, ನುಣ್ನೂಋಉ, ಸೋಗಾಲ, ಮಾಗೇನಹಳ್ಳಿ, ಮಾಕಳಿ, ದಸವಾರ, ನಾಗವಾರ, ಬೇವೂರು ಇನ್ನು ಮುಂತಾದ ಗ್ರಾಮಗಳ ಕುರಿತು ಅಧ್ಯಯನ ನಡೆಸಿದ ಚನ್ನಪಟ್ಣ ತಾಲ್ಲೂಕಿನ ಇತಿಹಾಸವು ಇನ್ನಷ್ಟು ಸ್ಪಷ್ಟಗೊಳ್ಳುತ್ತದೆ. ಅದರಲ್ಲೂ ಗ್ರಾಮ ಹಾಗೂ ಕುಲದೇವತೆಗಳಾದ ಕನ್ನಮ್ಮ(ದ್ಯಾವಾಪಟ್ಣ) ಕಂಚಿತಾಯಬೈ ಕಳ್ಳಿಮೇಳಮ್ಮ(ಮಳೂರು ಪಟ್ಣ) ಹುಟ್ಟಮ್ಮ( ವಿರುಪಸಂದ್ರ) ಕೆಂಪಮ್ಮ(ಸೋಗಾಲ) ಮಾರಮ್ಮ, ಮಸಣತಮ್ಮ ಹೊನ್ನಮ್ಮ(ಹಾರೋಕೊಪ್ಪೆ) ಹಟ್ಟಿಮಾರಮ್ಮ ಚೌಡಯ್ಯ, ರಕ್ಕಸಮ್ಮ ಮುಳ್ಳಂಗ ಸಿದ್ಧಯ್ಯ, ಮಾಧವಮ್ಮ ದೋಮಕೋಳಪ್ಪ(ಹಾರೋಕೊಪ್ಪ ಹರಿಜನ ಕಾಲೋನಿ) ಗ್ರಾಮದೇವತೆಗಳ ಅಧ್ಯಯನವು ಸ್ಥಳೀಯ ಚರಿತ್ರೆಯ ನೆಲೆಯಲ್ಲಿ ಸಂಶೋಧನೆಗೆ ಒಳಗಾಗಬೇಕಾಗಿದೆ( ಸಿಂಗರಾಜಿ ಕೆಂಚಮ್ಮ ಕರಿಯಮ್ಮ) ಕೂಡ್ಲೂರಿನ ಮಳವಮ್ಮ, ಮಾಪಣಮ್ಮ ಮೂಗಮ್ಮ, ಪದತಮ್ಗಮ, ಕರಿಚೆಲ್ಲಮ್ಮ ಚೌಡೇಶ್ವರಿ ಇಗ್ಗಲೂರಿನ ಚಿಕ್ಕಮ್ಮ, ಕೊನ್ನಮ್ಮ, ದೇವಮ್ಮ ಬೀರಪ್ಪ ಹೊಂಗನೂರಿನ ಕೊಳದಮ್ಮ ಮಾರಮ್ಮ ಮುಂತಾದ ಗ್ರಾಮದೇವತೆಯರ ಅಧ್ಯಯನವೂ ಚನ್ನಪಟ್ಣ ತಾಲ್ಲೂಕಿನ ಗ್ರಾಮದೇವತೆಗಳ ಅಧ್ಯಯನಕ್ಕೆ ಸೂಕ್ತವಾಗಿದೆ. ಬೆವೂರಿನ ಉಸಲಮ್ಮ ಕೆಮಪಮ್ಮ ಚೌಡೇಶ್ವರಿ ಮಾರಮ್ಮ


ಚನ್ನಪಟ್ಣ ತಾಲ್ಲೂಕಿನ ದಲಿತ ಕನ್ನಡ ಪರ ಹಾಗೂ ರೈತಪರ ಹೋರಾಟಗಳು
ನಾಡಿನ ಕನ್ನಡ ಭಾಷೆ, ಗಡಿ ಸಮಸ್ಯೆ, ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಅನುಷ್ಠಾನಕ್ಕೆ ತರುವ ವಿಷಯವಾಗಿ ಹಾಗೂ ರೈತರ ಸಮಸ್ಯೆಗಳು ದಲಿತರ ಶೋಷಣೆ ದಬ್ಬಾಳಿಕೆಗಳ ವಿರುದ್ಧ ವಿವಿಧ ಸಂಘಟನೆಗಳು ಹೋರಾಟ ನಡೆಸಿರುವುದು ಕಂಡು ಬರುತ್ತದೆ. ಸ್ವತಂತ್ರ್ಯ ಪೂರ್ವದಲ್ಲೇ ದಲಿತರು ಸಾರ್ವಜನಿಕ ಬಾಔಇಗಳಲ್ಲಿ ನೀರು ಉಪಯೋಗಿಸುವ ಖಾದಿಯನ್ನು ಪ್ರಚಾರ ಮಾಡುವ ಕಾರ್ಯವನ್ನು ಮಹಾತ್ಮಗಾಂಧೀಜಿಯವರು ಮಾಡಿದ್ದರು. 1946-50ರ ಅವಧಿಯಲ್ಲಿಯೇ ರೈತ ಪ್ರತಿಭಟನೆಗಳು ಜರುಗಿದ್ದವು. ಅರಳಾಳುಸಂದ್ರದಲ್ಲಿ ಸಾಮಾನ್ಯ ಸಣ್ಣ ರೈತರಿಗೆ ನೀರಾವರಿಗೆ ಅನುಕೂಲಿಸುವ 35 ಎಕರೆ ಸಾಗುವಳಿಗೆ ಹದವಾಗಿದ್ದ ಒಂದು ಕೆರೆ ಶಿಥಲವಾಗಿತ್ತು. ಆ ಭೂಮಿಯ ಮೇಲೆ ಗ್ರಾಮಾಧಿಕಾರಿಗಳ ಕಣ್ಣು ಬಿದ್ದು ತಮ್ಮ ಬಳಕೆಗೆ ಮಂಜೂರಾತಿ ಮಾಡಿಕೊಂಡರು. ಅವರ ಅಕ್ರಮ ಸಾಗುವಳಿ ವಿರುದ್ಧ ಅರಳಾಳೂಸಂದ್ರ ಗ್ರಾಮದ ಎ. ಶಿವಲಿಂಗಪ್ಪ, ಸಿ. ಚನ್ನಯ್ಯ, ಎಲ್. ಲಿಂಗಯ್ಯ ಹೋರಾಡಿದರು. 1979-80ರ ಹೊತ್ತಿಗೆ ಇಲ್ಲಿ ಸ್ಪಷ್ಟವಾದ ರೈತ ಹೋರಾಟದ ಆಯಾಮ ಪ್ರೊ. ನಂಜುಂಡಸ್ವಾಮಿ ಎನ್.ಡಿ. ಸುಂದರೇಶ್ ಎಚ್.ಎಸ್. ರುದ್ರಪ್ಪನವರು ಪ್ರೊ. ರವಿವರ್ಮಕುಮಾರ್ ಇಲ್ಲಿಗೆ ಭೇಟಿಕೊಟ್ಟರು. 1962ರಲ್ಲೇ ಕೆರೆಗೆ ವಂಡು ಕಟ್ಟಿದ್ದರ ವಿರುದ್ಧ ಹೋರಾಟವು ಚನ್ನಪಟ್ಣದಲ್ಲಿ ಜರುಗಿತ್ತು. ವಿ. ಸೋಮಲಿಂಗಯ್ಯ, ಅನುಸೂಯಮ್ಮ ಸಿ.ಪುಟ್ಟಸ್ವಾಮಿ, ಸು.ತಾ.ರಾಮೇಗೌಡ, ಬೈರಪಟ್ನದ ಕೃಷ್ಣೇಗೌಡರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ರೈತರ ಸಂಘಟನೆ ಮಾಡಲಾಗಿತ್ತು. ಅರಳಾಳು ಸಂದ್ರದಲ್ಲಿ ಸಲುವೆ ವಿದ್ಯಾಲಯವನ್ನು ಸ್ಥಾಪಿಸಿ ರೈತ ಶಿಬಿರಗಳನ್ನು ಏರ್ಪಡಿಸಲಾಗುತ್ತಿತ್ತು. ನಂತರ 1980-85 ರ ಅವಧಿಯಲ್ಲಿ ಗ್ರಾನೈಟ್ ಚಳುವಳಿ ವಿರುದ್ಧ ಹೋರಾಟಕ್ಕೆ ಧುಮುಕಿದರು. 1998 ರಲ್ಲಿ ಕಬ್ಬು ಬೆಲೆಯ ಸೂಕ್ತ ನಿಗಧಿಗಾಗಿ ಹೋರಾಟ ಮಾಡಿದರು. ಬ್ಯಾಂಕ್ ಅಧಿಕಾರಿಗಳು ಗ್ರಾಮ ಪ್ರವೇಶಿಸದಂತೆ ಬೋರ್ಡ್ ಬರೆಸಿ ಹಾಕಿದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಗಿರವಿದಾರರ ವಿರುದ್ಧವೂ ಹೋರಾಡಿದರು. ರೇಷ್ಮೆ ಗೂಡಿನ ತೂಕ ಮತ್ತು ಅಳತೆಯಲ್ಲಾಗುವ ಮೋಸ, ರೈತರಿಗೆ ವಿದ್ಯುತ್, ನ್ಯಾಯ ಬೆಲೆ ಅಂಗಡಿ ಸ್ಥಾಪನೆ, ಸಾರಾಯಿ ನಿಷೇಧ ಚಳುವಳಿ, ಕಡಿಮೆ ಕೃಷಿ ಕೂಲಿ ವಿರುದ್ಧದ ಚಳುವಳಿಯು ಈ ಭಾಗದಲ್ಲಿ ಗಟ್ಟಿಯಾಗಿ ನಡೆಯಿತು. 
ಹರಿಜನರಿಗೆ ದೇವಸ್ಥಾನ ಪ್ರವೇಶ, ಸಾರ್ವಜನಿಕ ಬಾವಿಗಳ ನೀರು ಉಪಯೋಗಿಸಲು ಇದ್ದ ನಿರ್ಬಂಧವನ್ನು ಹಾಗೂ ಸರಳ ವಿವಾಹಗಳನ್ನು ಏರ್ಪಡಿಸುವ ಮೂಲಕ ವರದಕ್ಷಿಣೆ ವಿರುದ್ಧವೂ ಹೋರಾಟಕ್ಕಿಳಿಯಿತು. ಕಲಗೆರೆ ರಾಜು, ಕೆ.ಎನ್. ನಂಜೇಗೌಡ ವೀರೇಗೌಡ, ಎಂ.ರಾಮು, ಲಕ್ಷ್ಮಣ್, ಕೆ.ಎಂ.ರಾಜು, ರಾಮಕೃಷ್ಣಯ್ಯ ಮುಂತಾದವರು ಸಕ್ರಿಯವಾಗಿ ಭಾಗವಹಿಸಿದ್ದರು. 
ಡಾ||ರಾಜ್ ಕುಮಾರ್ ನೇತೃತ್ವದ ಗೋಕಾಕ್ ಚಳುವಳಿ, ಹಿಂದಿ ಹೇರಿಕೆ, ಕನ್ನಡ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಕನ್ನಡ ಬೋರ್ಡುಗಳನ್ನೆ ವ್ಯಾಪಾರ ಮಳಿಗೆ, ಅಂಗಡಿ, ಹೋಟೆಲ್‍ಗಳ ಬಳಿ ಫಲಕ ಹಾಕುವ ಇಂಗ್ಲೀಷ್ ಬೋರ್ಡ್ ತೆರವುಗೊಳಿಸುವಲ್ಲಿ ಯು.ಸಿ.ಚಿಕ್ಕಣ್ಣ, ಸಿ.ಲಿಂ. ನಾಗರಾಜು, ಸು.ತಾ.ರಾಮೇಗೌಡ, ಶಿವರಾಮೇಗೌಡ ನಾಗವಾರ, ರೆಹಮಾನ್‍ಖಾನ್, ಕೋಡಿಹೊಸಹಳ್ಳಿ ರಾಮಣ್ಣ, ಗೋಪಾಲ ದ್ಯಾವಪಟ್ಣ ಮುಂತಾದವರು ಭಾಗವಹಿಸಿದ್ದರು. ಈ ಹೋರಾಟದಲ್ಲಿ ಕನ್ನಡ ಸಂಘರ್ಷ ಸಮಿತಿ ಮುಂಚೂಣಿಯಲ್ಲಿತ್ತು. ನಂತರ ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ನೇತೃತ್ವದಲ್ಲಿ ಕನ್ನಡಿಗರ ಹಾಗೂ ಕಾವೇರಿ ಜಲ ವಿವಾದ, ಬೆಳಗಾವಿ ಗಡಿವಿವಾದ, ನೀರಾ ಹಾಗೂ ಕುಡಿಯುವ ನೀರಿನ ಸಮಸ್ಯೆ, ಮೇಕೆದಾಟು ಅಣೆಕಟ್ಟು ನಿರ್ಮಾಣ ಹೀಗೆ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. 

ಚನ್ನಪಟ್ನ ತಾಲ್ಲೂಕಿನ ಪತ್ರಿಕೋದ್ಯಮ ನಡೆದು ಬಂದ ದಾರಿಯನ್ನು ನೆನೆಸಿಕೊಳ್ಳುವುದು ಮುಖ್ಯವಾಗಿದೆ. 1907 ರಲ್ಲಿ ಶುಭಾಶಿನಿ ಎಂಬ ಪತ್ರಿಕೆಯನ್ನು ಯಶಸ್ ಶರ್ಮ ಆರಂಭಿಸಿದರು. 1918 ರಲ್ಲಿ ಕರ್ತವ್ಯ ಎಂಬ ವಾರಪತ್ರಿಕೆಯನ್ನು ಹೊರತರಲಾಗುತ್ತಿತ್ತು. ನಂತರ ಜಬತ್ ಹುಲ್ ಮುಲ್ನಾ (1915), ಖಾಫಿಲ್ (1919), ಕರ್ನಾಟಕ ವಿದ್ಯಾರ್ಥಿ (1920) ರಲ್ಲಿ ಆರಂಭಗೊಂಡು ಅಲ್ಪಕಾಲದಲ್ಲೇ ನಿಂತು ಹೋದವು. 1925 ರಲ್ಲಿ ಮುಸ್ಲಿಂ ಡೆಕನ್ ಪತ್ರಿಕೆ, 1932 ಹಿದಾಯತ್, ಹಾಲ್ ಬಷೀರ್ ಉರ್ದು ಮಾಸಿಕ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದವು. 1976 ರಲ್ಲಿ ಸು.ತಾ.ರಾಮೇಗೌಡರ ನೇತೃತ್ವದಲ್ಲಿ ಆರಂಭವಾದ ಬಯಲುಸೀಮೆ ಪತ್ರಿಕೆ 42 ವರ್ಷಗಳಿಂದಲೂ ಪ್ರಕಟವಾಗುತ್ತಾ ಬರುತ್ತಲಿದೆ. ನಂತರ ಸಿ.ಲಿಂ.ನಾಗರಾಜು ರವರ ಬಲಿದಾನ (1978-79) ಚಿಕ್ಕಲೂರು ಚನ್ನಪ್ಪ ಸಂಪಾದಕತ್ವದ ತೊರೆ (1989) ರಲ್ಲಿ ಅನ್ನಪೂರ್ಣ ನಾಗವಾರ ಸಂಪಾದಕತ್ವದ ನಾಗವಲ್ಲಿ (1989) ರಲ್ಲಿ ದಿನೇಶ್ ಸುದರ್ಶನ ಸಂಪಾದಕತ್ವದ ದಿನೇಶ ಪತ್ರಿಕೆ ರೆಹಮಾನ್ ಖಾನ್‍ರ ಬಿಂಬ ಜಿಲ್ಲಾವಾಹಿನಿ, ತಿಮ್ಮೇಶ್ ಪ್ರಭು ಸಂಪಾದಕತ್ವದ ಸುದ್ದಿ ಸಲಗ ಪತ್ರಿಕೆಗಳು ಪ್ರಕಟವಾದವು. ರೇಷ್ಮೆ ಸೀಮೆ (ರಮೇಶ್) ಕೆಂಗಲ್ (ರಾಮಗರಿ) ಜಯವಾಹಿನಿ (ಶಾಂತಕುಮಾರ) ಕ್ರಾಂತಿರಂಗ (ರಾಗೇಶ್ ಕೊಂಡಾಪುರ) ಮಾಸ್ತಮವಾಣಿ (ಬಿ.ಎಲ್. ಮಂಜುನಾಥಪ್ಪ) ಭೂಮಿಪುತ್ರ (ನಂದಕುಮಾರ) ಸುದ್ದಿಜಾಲ (ಗೋಪಾಲದ್ಯಾವ ಪಟ್ನ) ಸಿಯಾಸಾತ್ (ಉರ್ದು ಪತ್ರಿಕೆ ವರದಿಗಾರ) ರೇಷ್ಮೆಸೀಮೆ (ರಮೇಶ) ಹಕ್ಕೂರು ರಮೇಶ (ಈ ಸಂಜೆ). 

ಸ್ವಾತಂತ್ರ್ಯ ಚಳುವಳಿ ಕಾಲಘಟ್ಟ.
1927 ರಲ್ಲಿ ಗಾಂಧೀಜಿ ರಾಮನಗರ ಮತ್ತು ಚನ್ನಪಟ್ಟಣಕ್ಕೆ ಭೇಟಿ ಕೊಟ್ಟು ಖಾದಿ ಪ್ರಚಾರ ಮಾಡಿದರು. 1929 ರಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿ ವಿ.ವೆಂಕಟಪ್ಪ ಅಧ್ಯಕ್ಷರಾಗಿದ್ದರು. ಅಬ್ಬೂರು ಗೋಪಣ್ಣ, ಡಿ.ಆರ್.ಲಿಂಗಯ್ಯ, ವೆಂಕಟರಾಮರೆಡ್ಡಿ, ಪರಂ ಅಶ್ವತ್ಥ ನಾರಾಯಣರಾವ್, ಅಬ್ಬೂರು ಕೃಷ್ಣಮೂರ್ತಿ ಭಾಗವಹಿಸಿದ್ದರು. ಹೆಚ್.ಕೆ. ವೀರಣ್ಣಗೌಡರು 1930-31 ರಲ್ಲಿ ಚಿತ್ರಗುಪ್ತ ಪತ್ರಿಕೆ ಆರಂಭಿಸಿದರು. 1930-31 ರಲ್ಲಿ ಇರವಿನ್ ನಾಲೆ ರೈತ ಜಾಥಾ ಹಮ್ಮಿಕೊಂಡರು. ನಾಲ್ಕು ಸಾವಿರ ಜನ ಈ ಜಾಥಾದಲ್ಲಿ ಭಾಗವಹಿಸಿದ್ದರು. 1930 ರಲ್ಲಿ ಸಾರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಪೂನಾದಿಂದ ವಕೀಲಿ ಶಿಕ್ಷಣ ಮುಗಿಸಿ ಬಂದ ಕೆಂಗಲ್ ಹನುಮಂತಯ್ಯನವರು ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಪೂನಾದಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿ ಬಂದರು. 
1934 ರಲ್ಲಿ ಗಾಂಧಿ ಮಹಾತ್ಮ ಗಾಂಧೀಜಿಯವರು ಚನ್ನಪಟ್ಟಣಕ್ಕೆ ಮೊಟ್ಟಮೊದಲು ಭೇಟಿ ಕೊಟ್ಟರು. ಹರಿಜನೋದ್ಧಾರ ಖಾದಿ ಪ್ರಚಾರದಲ್ಲಿ ತೊಡಗಿದ್ದ ಹೈ ಮೂರ್ತಿಯವರು ಇಂದಿನ ಗಾಂಧಿ ಭವನ ಜಾಗದಲ್ಲಿ ಸಾರ್ವಜನಿಕ ಬಾವಿಯನ್ನು ಉದ್ಘಾಟಿಸಿದರು. ಅಲ್ಲಿಯೇ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. 1937 ರಲ್ಲಿ ಕಮಲಾದೇವಿ ಚನ್ನಪಟ್ಣ, ಬೈರಾಪಟ್ಣ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದರು. 1938 ಏಪ್ರಿಲ್ 10, 11 ಮತ್ತು 12 ನೇ ದಿನಾಂಕಗಳಂದು ಶಿವಪುರ ಧ್ವಜ ಸತ್ಯಾಗ್ರಹ ನಡೆಯಿತು. ಚನ್ನಪಟ್ಣ ತಾಲ್ಲೂಕಿನ ರೈತ ಮುಖಂಡರು, ಸ್ವಾತಂತ್ರ್ಯ ಹೋರಾಟಗಾರರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. 1938-39 ರಲ್ಲಿ ರೈತರನ್ನು ಸಂಘಟಿಸಿ ಸಮ್ಮೇಳನ ನಡೆಸಲಾಯಿತು. ಟಿ. ವೆಂಕಟಪ್ಪನವರು ಲಕ್ಷ್ಮೀಪುರದಲ್ಲಿ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿದ್ದರು. 1942 ರಲ್ಲಿ ಮೈಸೂರು ಕಾಂಗ್ರೆಸ್ಸಿನ 5ನೇ ಅಧಿವೇಶನ ತಿಟ್ಟಮಾರನಹಳ್ಳಿಯಲ್ಲಿ ವಿ.ವೆಂಕಟಪ್ಪನವರ ನೇತೃತ್ವದಲ್ಲಿ ತಾಳೆಕೆರೆ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ನಂತರ ತಾಲ್ಲೂಕಿನ ಜನರು ರೈಟ್ ಇಂಡಿಯಾ ಚಳುವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಚನ್ನಪಟ್ಣ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟ ಆರಂಭವಾದುದೇ ಒಂದು ರೋಚಕ ಸನ್ನಿವೇಶದಿಂದ. 1890 ರಲ್ಲಿ ಮೈಸೂರು ರಾಜ್ಯದಲ್ಲಿ ಪ್ಲೇಗ್ ಖಾಯಿಲೆಯಿಂದ ಬಳಲುತ್ತಿದ್ದು ಅವರಲ್ಲಿ 12273 ಜನ ಮರಣ ಹೊಂದಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ 4472 ಜನ ಪ್ಲೇಗ್ ಖಾಯಿಲೆಯಿಂದ ಸತ್ತರು. ಈ ಘಟನೆ ಬ್ರಿಟೀಷರ ವಿರುದ್ಧ ಹೋರಾಡಲು ಸ್ಥಳೀಯರು ಸಂಘಟಿತರಾಗಲು ಪ್ರೇರಣೆ ಒದಗಿಸಿತು. ನಂತರ ಬ್ರಹ್ಮಸಮಾಜ, ಆರ್ಯಸಮಾಜ, ಥಿಯೋಸಫಿಕಲ್ ಸೊಸೈಟಿಗಳು ಸ್ಥಾಪನೆಗೊಂಡವು. ಹೆಚ್.ಕೆ. ವೀರಣ್ಣಗೌಡರು ವಿ.ವೆಂಕಟಪ್ಪನವರು ಈ ಭಾಗದ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರಾಗಿ ಮೊದಲು ಕಾಣಿಸಿಕೊಂಡರು. ಬ್ರಾಹ್ಮಣೇತರ ರಾಜಕೀಯ ಸಂಘಟನೆಯನ್ನು ಮೈಸೂರು ಸಂಸ್ಥಾನದಲ್ಲಿ ಮಾಡುವ ಕಾರ್ಯಕ್ಕೆ ಚಾಲನೆ ಕೊಟ್ಟರು. 1907 ರಲ್ಲಿ ಶುಭಾಶಿನಿ ಸಂಪಾದಕರಾದ ಯಶಸ್ ಶರ್ಮ ಸ್ವಾತಂತ್ರ್ಯ ಹೋರಾಟಕ್ಕೆ ಜನ ಸಂಘಟಿತರಾಗಬೇಕಾದ ಅಗತ್ಯತೆ ಕುರಿತು ಲೇಖನಗಳನ್ನು ಬರೆಯುತ್ತಿದ್ದರು. ಇವರು ತಿಲಕರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. 1908 ರಲ್ಲಿ ಈ ಪತ್ರಿಕೆಯ ಪ್ರಕಟಣೆಯ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಚನ್ನಪಟ್ಣದ ಮುಂದಿನ ಪ್ರಸಿದ್ಧ ವಕೀಲರಾದ ಎಸ್.ಎಸ್.ಸೆಲ್ವಾರ್ ಶೆಟ್ಟಿಹಳ್ಳಿ ಗ್ರಾಮದವರಾಗಿದ್ದು ತಿಲಕರ ಸ್ನೇಹ ಸಂಪರ್ಕವನ್ನು ಹೊಂದಿದ್ದ ಇವರು ನಂತರ ಮೈಸೂರಿನ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ವಿ.ವೆಂಕಟಪ್ಪ, ಕೆಂಗಲ್ ಹನುಮಂತಯ್ಯ ಇವರನ್ನು ಮೈಸೂರು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು.
ಮಹಾತ್ಮ ಗಾಂಧೀಜಿಯವರು 1920 ರಲ್ಲಿ ಬೆಂಗಳೂರಿಗೆ ಖಿಲಾಫತ್ ಚಳುವಳಿಯ ಪ್ರಚಾರಕ್ಕಾಗಿ ಬಂದಿದ್ದರು. ನ್ಯಾಷನಲ್ ಶಾಲೆಯ ಥಿಯೋಸಫಿಕಲ್ ಸೊಸೈಟಿಯ ಕೇಂದ್ರವಾಗಿದ್ದು ಹೆಚ್.ಕೆ.ವೀರಣ್ಣಗೌಡ ರಾಮನಗರಕ್ಕೆ ಕೆ.ಸುಬ್ಬರಾವ್, ಮಾದೇಗೌಡ ಇವರು 1916 ರಲ್ಲೆ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. 1924 ರಲ್ಲಿ ಹಿಂದೂಸ್ಥಾನಿ ಸೇವಾದಳದ ಸಕ್ರಿಯ ಸದಸ್ಯರಾದರು. ಬೆಳಗಾವಿ ಕಾಂಗ್ರೆಸ್ ಅಧ್ಯಕ್ಷತೆಯನ್ನು 1924 ರಲ್ಲಿ ಮಹಾತ್ಮ ಗಾಂಧಿ ವಹಿಸಿದ್ದ ಆ ಸಭೆಗೆ ಹೆಚ್.ಕೆ.ವೀರಣ್ಣಗೌಡ, ವಿ.ವೆಂಕಟಪ್ಪ, ಕೆ.ಎ.ವೆಂಕಟರಾಮಯ್ಯ ಹೋಗಿ ಭಾಗವಹಿಸಿದರು. 1917 ರಲ್ಲಿ ಪ್ರಜಾಮಿತ್ರ ಮಂಡಳಿ ವಿ.ವೆಂಕಟಪ್ಪನವರು ಹುಟ್ಟುಹಾಕಿದರು. ನಂತರ 1930 ರಲ್ಲಿ ಕೆ.ಸಿ.ರೆಡ್ಡಿ ವೆಂಕಟಪ್ಪನವರು ಪ್ರಜಾಪಕ್ಷ ಸ್ಥಾಪಿಸಿ ಮೈಸೂರು ಸಂಸ್ಥಾನ ಪ್ರಜಾಪ್ರತಿನಿಧಿ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಸವಲತ್ತು ಹಾಗೂ ಪ್ರಾತಿನಿಧ್ಯ ನೀಡಲು ಒತ್ತಾಯ ತಂದರು. ನಂತರ ಅದನ್ನು ಪ್ರಜಾಮಿತ್ರ ಮಂಡಳಿ ಎಂದು ಬದಲಾಯಿಸಲಾಗಿತ್ತು. 1934 ರಲ್ಲಿ ಪ್ರಜಾಮಿತ್ರ ಮಂಡಳಿ ಪ್ರಜಾಸಂಯುಕ್ತ ಪಕ್ಷವಾಗಿ ಅಸ್ತಿತ್ವಕ್ಕೆ ಬಂದು 1937 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಲೀನವಾಗಿತು. 

ಇಲ್ಲಿನ ಅಣ್ಣಾತಮ್ಮನ ಗುಡ್ಡ ಜೈನರ ಕಾಲದ ಇತಿಹಾಸ ಸಾರುತ್ತದೆ. ಇಲ್ಲಿ ಮೂರು ಜನ ರಾಜಮನೆತನದ ಸೈನಿಕರು ಸತ್ತಿರುವ ವೀರಗಲ್ಲುಗಳನ್ನು ನಿರ್ಮಿಸಲಾಗಿದೆ. 
ಹೊಯ್ಸಳರ ಕಾಲದಲ್ಲಿ ಚನ್ನಪಟ್ಣವನ್ನು ವಿವಿಧ ಆಡಳಿತ ಘಟಕಗಳಾಗಿ ತೆರೆದು ಕಳಲೈನಾಡು, ಕಳಲೆನಾಡು, ವಂಗನೂರುನಾಡು, ಕೋಡಂಬಳ್ಳಿಸೀಮೆ, ಬಾಣ್ತಳ್ಳಿಸೀಮೆ, ಕೊಡ್ಲೂರು ಸೀಮೆ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟಿವೆ. ಗಂಗರ ಕಾಲದಲ್ಲೇ ಸೋಗಾಲ, ಮಳ್ಳೂರು, ನೆಲ್ಲೂರು, ಇಗ್ಗಲೂರು, ಸಿಂಗರಾಜಪುರ, ಮಳೂರುಪಟ್ಣ, ಕೂಡ್ಲೂರು, ಮಳೂರು ಬೈರಶೆಟ್ಟಿಹಳ್ಳಿ, ಹನಿಯೂರು, ಬೇವೂರು ಬೆರಕಳ್ಳಿ ಮುಂತಾದ ಗ್ರಾಮಗಳು ಪ್ರಸಿದ್ಧಿಗೆ ಬಂದಿದ್ದವರು. ಸಿಂಗಿರಾಜ ಎಂಬ ಪಾಳೇಗಾರ ಸಿಂಗರಾಜಪುರವನ್ನು ಆಳುತ್ತಿದ್ದನೆಂದು ಉಲ್ಲೇಖವಿದೆ. ಹನಿಯೂರು ಸಂತೆ ಮುಗಿಸಿಕೊಂಡು ಹೋಗುತ್ತಿದ್ದ ಇಬ್ಬರು ಸಹೋದರರನ್ನು ಕಳ್ಳರು ಅಡ್ಡಗಟ್ಟಿ ಹಣ ದೋಚಿಕೊಂಡು ಹೋದ ಸಂಗತಿಯನ್ನು ಕಬ್ಬಾಳ ಶಾಸನ ತಿಳಿಸುತ್ತದೆ. ವಿಟಲೇನಹಳ್ಳಿಯಲ್ಲಿರುವ ಅವಶೇಷಗಳು ಅಲ್ಲಿ ಆಯುಧ ತಯಾರಿಸುವ ಕಬ್ಬಿಣದ ಸಾಮಾನುಗಳನ್ನು ತಯಾರಿಸುವ ಪಾಂಚಾಲರು ಇದ್ದ ಮಾಹಿತಿ ಅಲ್ಲಿನ ವೀರಗಲ್ಲಿನಿಂದ ಸ್ಪಷ್ಟವಾಗುತ್ತದೆ. ನೇರಳೆ ಮಠದಿಂದ ಆವೃತ್ತವಾಗಿದ್ದ ಗರಕಳ್ಳಿ ಜಂಬೂಕ್ಷೇತ್ರ ಎಂಬ ನಾಮಧೇಯವನ್ನು ಹೊಂದಿತ್ತು. ಇಲ್ಲಿನ ಶರಣಪ್ಪನ ಗುಡ್ಡೆ ಜೈನ ಕೇಂದ್ರವಾಗಿತ್ತು. ಈ ಗ್ರಾಮ ಬ್ರಾಹ್ಮಣರಿಗೆ ಬಿಟ್ಟ ಅಗ್ರಹಾರವಾಗಿತ್ತು. 1666 ದೇವರಾಜ ಒಡೆಯರ್ ದಾನವಾಗಿ ಬಿಟ್ಟ ವಿಷಯವನ್ನು ಶಾಸನದಲ್ಲಿ ತಿಳಿಸುತ್ತದೆ. 

ಒಟ್ಟು 261 ಗ್ರಾಮಗಳು ಚನ್ನಪಟ್ಣ ತಾಲ್ಲೂಕಿನಲ್ಲಿವೆ. ಇದರ ಭೌಗೋಳಿಕ ವಿಸ್ತೀರ್ಣ 539 ಚದರ ಕಿಲೋಮೀಟರ್. ಇಲ್ಲಿನ ಜನಸಂಖ್ಯೆ 2,61,304 ಇಲ್ಲಿನ ಭೂಹಿಡುವಳಿಯ ಭೂಮಿ 21878 ಹೆಕ್ಟೇರ್ ಪ್ರದೇಶವಿದ್ದರೆ ಒಟ್ಟು ಭೂಸಾಗುವಳಿದಾರರು 39738. ಕೃಷಿ ಕಾರ್ಮಿಕರು 29604 (20.49%). 17.08 ರಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ .52% ರಷ್ಟು ಇದೆ. ಶೇ.88 ರಷ್ಟು ಹಿಂದೂಗಳು (2,22,022) ಶೇ.11 ರಷ್ಟು (28,838) ಶೇ.0.41 ಕ್ರಿಶ್ಚಿಯನ್ನರು (1038) ಶೇ.0.03 ರಷ್ಟು (81) ಇಬ್ಬರು ಸಿಖ್ಖರು 13 ಜನ ಬೌದ್ಧ ಧಮೀಯರು ಇಲ್ಲಿದ್ದು ಬಹು ಧರ್ಮೀಯರ ಸೀಮೆ ಎನಿಸಿದೆ. ಪುರುಷರಿಗಿಂತ ಹೆಣ್ಣು ಮಕ್ಕಳ ಸಂಖ್ಯೆ 1000ಕ್ಕೆ 1004 ರಷ್ಟು ಹೆಚ್ಚಿದೆ. ಕೃಷಿಯೇತರ ಕೆಲಸಗಾರರು 56,446 (52.66). ಒಟ್ಟು ಜನಸಂಖ್ಯೆಯಲ್ಲಿ ಶೇ.70.31 ರಷ್ಟು ಅಕ್ಷರಸ್ಥರಿದ್ದಾರೆ. ಗೃಹಕೈಗಾರಿಕೆಗಳ ಕೆಲಸಗಾರರು 4,430. ಒಟ್ಟು ಕುಟುಂಬಗಳು 62,384 ಪ್ರತಿ ವರ್ಷ ಶಾಲೆ ಬಿಟ್ಟವರ ಪ್ರಮಾಣ ಶೇ.11 ಪದವಿ ಹಂತದ ಶಿಕ್ಷಣ ಪೂರೈಸುವವರು 1,00,000 ಜನಸಂಖ್ಯೆ. 1085 ಅಂದರೆ ಶೇ.10.75 ರಷ್ಟು ಈ ಅಂಕಿಅಂಶಗಳು ಚನ್ನಪಟ್ಣ, ರಾಮನಗರ ತಾಲ್ಲೂಕಿಗಿಂತಲೂ ಆರೋಗ್ಯ ಶಿಕ್ಷಣ ಹೊರತುಪಡಿಸಿದರೆ ಹಿಂದುಳಿದ ತಾಲ್ಲೂಕೆನಿಸಿದೆ.

ತೀರಾ ಆರಂಭಿಕ ಕಾಲದಲ್ಲಿ ಶುದ್ಧ ದೇಶೀಯ (ಜಾನಪದ) ದೇಶೀಯವೇ ವಿಜೃಂಭಿಸಿರಬೇಕು. ಸಂಸ್ಕøತ ಸಾಹಿತ್ಯದ ಪ್ರವೇಶ ನಮ್ಮ ದೇಶೀ ಸಾಹಿತ್ಯವನ್ನು ಹಿಂದೆ ಸರಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಕವಿರಾಜಮಾರ್ಗ ``ನುಡಿಗೆಲ್ಲಂ ಸಲ್ಲದ ಕನ್ನಡ’’ ಎಂಬ ಮಾತನ್ನು ಆಡುತ್ತಾನೆ ಹಾಗೂ ಆತನ ಚಿತ್ರಣ, ಬೆದಂಡೆ ದವಳದ ಅಥವಾ ಮದುವೆ ಹಾಡುಗಳು ಪಾಳುಗಚ್ಚಂ ಏರ್ಪಾಡುಗಳು ಪಗರಣ, ನಾವೀಗರಣ ಎಂಬ ಉಲ್ಲೇಖಗಳು ಶಬ್ಧಮಾಡಿ ಜನಸಮೂಹದ ಅಭಿವ್ಯಕ್ತಿಯಾಗಿ ದೇಶೀಯ ಸ್ಪಷ್ಟಪಡಿಸುತ್ತಾರೆ. ಧರ್ಮನಾಥ ಪ್ರಕರಣದ ಮಲ್ಲಣ ಕವಿಯ ಉಲ್ಲೇಖವೂ ಇದನ್ನೇ ಸಮರ್ಥಿಸುತ್ತದೆ. 
ಪಂಡಿತರುಂ ವಿವಿಧ ಕಳ| ಮಂಡಿತರುಂ ಕೇಳತಕ್ಕ ಕ್ಷಿಥಿಯೊಳ್|
ಕಂಡರ್ ಕೇಳ್ಪಡೆ ಗೊರವರ್| ಡುಂಡುಚಿಯೆ ಬೀದಿವರೆಯ ಬಿಡನ ಕಥೆಯೇ ಎಂದು ವಿಡಂಬಿಸುವುದು. ಶಿಷ್ಟ ಸಾಹಿತ್ಯ ದೇಶೀಯತೆಯನ್ನು ಕಡೆಗಣಿಸಿದ್ದನ್ನು ತಿಳಿಸುತ್ತದೆ. 
ಆದರೆ ನಾಯಿಸೇನನ ಕಾಲದಲ್ಲಿ ಈ ದೃಷ್ಟಿ ಬದಲಿಸಬಹುದು. 
``ಕನ್ನಡಮಂ ಚಿಂತಿಸಿ ಕೂಡಲಚ್ಚಿದಕ್ಕಟ ಮಿಸುಕರ ಸಿಕ್ಕಧಮನಿಕ್ಕು ಒವಗುಂ ಕವಿಯೆ? (ಧರ್ಮಾಮೃತ-1-4) ಎಂದು ಪ್ರಶ್ನಿಸಿ ಸಕ್ಕದುಮಂ ಪೇಳ್ಗೆ ಸದ್ದುಗನ್ನಡದೊಳ್‍ಥಂ-| ದಿಕ್ಕುವುದೆ ಸಕ್ಕದವು ತಕ್ಕುದೆ ಬೆರಸಲ್ಕೆ ಘೃಥಮೂಮಂ ತೈಲಮಮಾಂ ಎನ್ನುತ್ತಾನೆ ಇದು ಸಂಸ್ಕøತ ಬಗೆಯ ಬಂಡಾಯವೇ ಸರಿ. 

ಚನ್ನಪಟ್ಣ ತಾಲ್ಲೂಕಿನಲ್ಲಿ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೭೫: ಆತ್ಮಹತ್ಯೆಯನ್ನು ಹಿಂದೂ ಮತವು ಸನ್ಮತಿಸುವುದೇ ?
ತಾಳೆಯೋಲೆ ೨೭೫: ಆತ್ಮಹತ್ಯೆಯನ್ನು ಹಿಂದೂ ಮತವು ಸನ್ಮತಿಸುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೭೪: ಒಳ್ಳೆಯ ಹಾಗೂ ದುಷ್ಟ ಸಾಧನೆಗಳ ನಡುವಿನ ವ್ಯತ್ಯಾಸವನ್ನು ನಾವು ಹೇಗೆ ಗ್ರಹಿಸಬಲ್ಲೆವು ?
ತಾಳೆಯೋಲೆ ೨೭೪: ಒಳ್ಳೆಯ ಹಾಗೂ ದುಷ್ಟ ಸಾಧನೆಗಳ ನಡುವಿನ ವ್ಯತ್ಯಾಸವನ್ನು ನಾವು ಹೇಗೆ ಗ್ರಹಿಸಬಲ್ಲೆವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೭೩: ಓಂ ಶಾಂತಿ, ಶಾಂತಿ, ಶಾಂತಿ; ಎಂದು ನಾವು ಏಕೆ ಹೇಳುವೆವು ?
ತಾಳೆಯೋಲೆ ೨೭೩: ಓಂ ಶಾಂತಿ, ಶಾಂತಿ, ಶಾಂತಿ; ಎಂದು ನಾವು ಏಕೆ ಹೇಳುವೆವು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ
ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೭೧: ಶಕುನಕ್ಕಿರುವ ಪ್ರಾಧಾನ್ಯತೆ ಏನು ?
ತಾಳೆಯೋಲೆ ೧೭೧: ಶಕುನಕ್ಕಿರುವ ಪ್ರಾಧಾನ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೭೦: ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ
ತಾಳೆಯೋಲೆ ೨೭೦: ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?
ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?
ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೬೭: ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?
ತಾಳೆಯೋಲೆ ೨೬೭: ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?

**


*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸ

ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?
ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

Top Stories »  


Top ↑