Tel: 7676775624 | Mail: info@yellowandred.in

Language: EN KAN

    Follow us :

ಅವ್ವ

Posted Date: 02 Mar, 2018

ಅವ್ವ

ಅವ್ವ ನೀನೇ ನನ್ನ ದೈವವು     
ಅವ್ವಾ ನೀನೇ ನನ್ನ ಜೀವವು

ಧರೆಗಿಳಿಸಿ ತಂದು ನೀರೆರೆದು ಬೆಳೆಸಿದೆ
ಬಳಲಿ ಬಾಯಾರಿದಾಗ ಅಮೃತ ಉಣಿಸಿದೆ
ಹೊಟ್ಟೆಯ ಹಸಿವಿಗೆ ಕೈತುತ್ತನು ಕೊಟ್ಟೆ
ತಪ್ಪು ಬರೆದಾಗ ತಿದ್ದಿಸಿ ಬರೆಸಿದೆ
ಸೋತಾಗ ಬುಜಕೊಟ್ಟು ಬೆಂಬಲಿಸಿದೆ
ಸರೀಕರಿಗೆ ಸಮನಾಗಿ ಬೆಳೆದಾಗ ಹೆಮ್ಮೆಯಪಟ್ಟೆ

ಹಠದೊಂದಿಗೆ ಆಟವಾಡಿದೆ
ಛಲವನ್ನು ಚೈತನ್ಯವಾಗಿಸಿದೆ
ಕಂಕಣ ಕಟ್ಟಿಸಿ ಜೊತೆಗೂಡಿಸಿದೆ
ಮೊಮ್ಮಕ್ಕಳ ನೋಡಿ ಆನಂದದಿ ತೇಲಿದೆ
ಅಪ್ಪನ ಸಾವಲಿ ಸಂಕಟದಿ ಸೊರಗಿದೆ
ಸೊಸೆಯರ ಅಕ್ಕರೆ ಆರೈಕೆಯಲಿ ಮಿಂದೆದ್ದೆ
ಉಸಿರಾಟದ ತೊಡಕಿಗೆ ಬೆಚ್ಚಿಬಿದ್ದೆ
ತಡವರಿಸಿ ಏಳದೇ ಪ್ರಾಯಾಸಪಟ್ಟೆ

ವಿಧಿಯಾಟದ ಮುಂದೆ 
ನಡೆಯಲಿಲ್ಲ ಐಯ್ವರ ಆಟ
ತೆರೆಯದಾದವು ಕಣ್ಣರೆಪ್ಪೆ
ಬಯಕೆಗಳು ಬಸಿದು ಹೋದವು
ನಮ್ಮಯ ಹಂಬಲ ಅಳಿದು ಹೋಯಿತು
ಮುಂಬೆಳಕಿನ ಮಬ್ಬಿನಲಿ ಎಚ್ಚರವಾಯಿತು 

ಅವ್ವ ಇನ್ನಿಲ್ಲ ಎಂದಾಗ
ಬಾಳನು ಬೆಳಗುವ 
ಸೂರ್ಯ ಮುಳುಗಿದಂತೆ
ಹುಣ್ಣಿಮೆ ಚಂದ್ರ ಕರಗಿದಂತೆ
ಸಪ್ತ ಸಾಗರಗಳು ಬತ್ತಿ ಹೋದಂತೆ
ಗ್ರಹಗಳ ಘರ್ಷಿಸಿ 
ಧರೆ ಹೊತ್ತಿ ಉರಿದಂತೆ, ನಶ್ವರ ಎನಿಸಿತು

ಅವ್ವನ ಕಾಣದ ಕಣ್ಣುಗಳೇಕೆ
ಧ್ವನಿಯನು ಕೇಳದ ಕಿವಿಗಳಿದ್ದೇಕೆ
ಕೈಹಿಡಿದು ನಡೆಸದ ಕರಗಳು ಏಕೆ
ಏಳುಬೀಳಲಿ ಜೊತೆಯಾಗಿ ಸಾಗದ ಪಾದಗಳೇಕೆ
ನಕ್ಕು ನಲಿಸದ ದಂತಪಂಕ್ತಿಗಳೇಕೆ
ನೋವಿಗೆ ಮಿಡಿಯದ ಹೃದಯವಿದ್ದೇಕೆ
ಕಂಬನಿ ಹರಿದು ಹೆಪ್ಪುಗಟ್ಟಿದೆ ಮೈಮನ 

ದೇವರಿರದ ಗುಡಿಯಲ್ಲಿ ಘಂಟೆಯ ನಾದ ಇನ್ನೆಲ್ಲಿ
ಕಾಲ್ಗೆÉಜ್ಜೆಯ ಸಪ್ಪಳ ಕನಸಾಯ್ತು
ಭವ್ಯ ಗೋಪುರ ಮಂಜಾಯ್ತು
ಉತ್ಸವವೆಲ್ಲ ಉಡುಗೋಯ್ತು
ತಿರುಗುವ ಚಕ್ರವೆ ಮುರಿದೊಯ್ತು
ತೂಗುವ ತಕ್ಕಡಿ ತುಂಡಾಯ್ತು
ಭಕ್ತಿಯ ಭಾವ ಚಿರವಾಯ್ತು

ನನ್ನಯ ನೆತ್ತರ ಹನಿಹನಿಯಲಿ 
ಬೆರೆತಿದೆ ನಿನ್ನಯ ಬೆವರು
ಉಸಿರಿನ ಪ್ರತಿ ಕಣಕಣದಲ್ಲಿ 
ಅಡಗಿದೆ ನಿನ್ನಾ ಹೆಸರು
ಮಕ್ಕಳ ಮುಖದಲಿ ನಿನ್ನದೇ ಚಿತ್ರ
ನೀನೇ ಅವತರಿಸಿ ಬಂದಂತೆ
ಹೊಲ ಜಲದಲಿ ಗಿಡಮರದಲಿ
ಫಲಪುಷ್ಪದಿ ಬೆಟ್ಟಗುಡ್ಡದಲಿ
ಗಾಳಿ ಬೆಳಕಿನಲ್ಲಿ ನೀನೇ ಬೆರೆತಿರುವೆ

ಅವ್ವನ ನೆರಳಲ್ಲಿ ನಲಿದಾಡಿದ ಈ ಕಂದ
ನರಳಾಡಿದರೇನು ಚಂದ
ನಿನ್ನಯ ವಯಸ್ಸಿನವರೆಲ್ಲರೂ ಅವ್ವರೆ
ನೆರೆಹೊರೆಯ ತಾಯಂದಿರಲ್ಲಿ ನಿನ್ನನು ಕಂಡು
ನೋವನು ನುಂಗುವೆ
ನಿನ್ನಾದರ್ಶಕೆ ಶಿರಬಾಗಿಸಿ ಬಾಳುವೆ
ಅವ್ವ ಹರಸು ನನ್ನನು ಅನವರತ

- ಕೊತ್ತೀಪುರ ಜಿ.ಶಿವಣ್ಣ
 
ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೭೫: ಆತ್ಮಹತ್ಯೆಯನ್ನು ಹಿಂದೂ ಮತವು ಸನ್ಮತಿಸುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೭೪: ಒಳ್ಳೆಯ ಹಾಗೂ ದುಷ್ಟ ಸಾಧನೆಗಳ ನಡುವಿನ ವ್ಯತ್ಯಾಸವನ್ನು ನಾವು ಹೇಗೆ ಗ್ರಹಿಸಬಲ್ಲೆವು ?

ತಾಳೆಯೋಲೆ ೨೭೩: ಓಂ ಶಾಂತಿ, ಶಾಂತಿ, ಶಾಂತಿ; ಎಂದು ನಾವು ಏಕೆ ಹೇಳುವೆವು ?

ಕನಡಕ್

ತಾಳೆಯೋಲೆ ೧೭೨: ಧೂತ ಲಕ್ಷಣ ಫಲಿತವು ಯಾವ ವಿಷಯವನ್ನು ಸೂಚಿಸುತ್ತದೆ

ತಾಳೆಯೋಲೆ ೧೭೧: ಶಕುನಕ್ಕಿರುವ ಪ್ರಾಧಾನ್ಯತೆ ಏನು ?

ತಾಳೆಯೋಲೆ ೨೭೦: ಸ್ವರ್ಗವು ಎಂತಹ‌ ಗುಣವನ್ನು ಸೂಚಿಸುತ್ತದೆ

ತಾಳೆಯೋಲೆ ೨೬೯: ಭಾರತೀಯ ಸಂಪ್ರದಾಯದ ಪ್ರಕಾರ ಹೆಂಡತಿ ಎಂತಹವಳು ?

ತಾಳೆಯೋಲೆ ೨೬೮: ಗೃಹಸ್ಥನು ಸನ್ಹಾಸಿಗಳಿಗಿಂತ ಹೇಗೆ ಉನ್ನತನಾಗಿ ಇರಬಹುದು ?

ತಾಳೆಯೋಲೆ ೨೬೭: ವ್ಯಕ್ತಿಯೊಬ್ಬನ ‌ಪ್ರಧಾನ ನೈತಿಕತೆ ಯಾವುದು ?

**

*ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸ

ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?
ತಾಳೆಯೋಲೆ ೨೬೬: ನೈತಿಕ ಜೀವನವನ್ನು ನಾವು ಏಕೆ ನಡೆಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

Top Stories »  

Top ↑