Tel: 7676775624 | Mail: info@yellowandred.in

Language: EN KAN

  Follow us :


ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

Posted Date: 09 Apr, 2018

ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯಾತರಾಗಿದ್ದ ಇವರು ಸ್ನೇಹಜೀವಿಯಾಗಿದ್ದರು.

 

ಆ ಕಾಲದಲ್ಲೇ ಬಿ.ಎಸ್‌ಸಿ ಪದವೀಧರರಾಗಿದ್ದ ಇವರು ಸಂಘಟನಾ ಶಕ್ತಿಯನ್ನು ಹೊಂದಿದ್ದರು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮಗೆ ಅನಿಸಿದನ್ನು ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ಮೊದಲು ವ್ಯವಸಾಯದಲ್ಲಿ ತೊಡಗಿಸಿಕೊಂಡ ಇವರು ಉತ್ತಮ ಕೃಷಿಕರಾದರು. ರಾಮನಗರಕ್ಕೆ ಪಂಪ್‌ ಸೇಟ್‌ಗಳನ್ನು ಪರಿಚಯಿಸಿದ ಕೀರ್ತಿ ಅಕ್ಕೂರು ರಾಮಕೃಷ್ಣಯ್ಯ ಅವರಿಗೆ ಸಲ್ಲುತ್ತದೆ. 

 

1960ರ ಸಮಯದಲ್ಲಿ ಇವರು ಪಿಎಸ್‌ಜಿ ಪಂಪ್‌ಸೆಟ್‌ಗಳ ಡೀಲರ್ ಆಗಿದ್ದರು. ಈಗಲೂ ಇವರು ನೀಡಿರುವ ಪಂಪ್‌ ಮೋಟಾರ್‌ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹಲವು ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯರು ಈಗಲೂ ನೆನೆಸಿಕೊಳ್ಳುತ್ತಾರೆ.

ಕೃಷಿ ಚಟುವಟಿಕೆಯ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡ ರಾಮಕೃಷ್ಣಯ್ಯ ಅವರು ಮೊದಲು ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ನಂತರ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದರು. ಕೂಟಗಲ್‌ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಆ ಕಾಲದಲ್ಲಿಯೆ ಇವರು ಪ್ರಮುಖ ಪಾತ್ರ ವಹಿಸಿದ್ದರು. 

 

ಈಗ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಎಂ. ಲಿಂಗಪ್ಪ ಅವರು ಶಾಸಕರಾಗಿ ಆಯ್ಕೆಯಾಗಲು ರಾಮಕೃಷ್ಣಯ್ಯ ಅವರ ಕೊಡುಗೆಯು ಇದೆ.

 

ಅಕ್ಕೂರು : ಮಾಗಡಿ, ಚನ್ನಪಟ್ಟಣ, ಕುಣಿಗಲ್‌ ಹಾಗೂ ರಾಮನಗರ ತಾಲ್ಲೂಕುಗಳ ಗಡಿ ಗ್ರಾಮವಾಗಿರುವ ಅಕ್ಕೂರು ಗ್ರಾಮಕ್ಕೆ ವಿದ್ಯುತ್‌ ಸಂಪರ್ವಕವನ್ನು ಕಲ್ಪಿಸಿದ ಕೀರ್ತಿ ರಾಮಕೃಷ್ಣಯ್ಯ ಅವರಿಗೆ ಸಲ್ಲುತ್ತದೆ. ಈಗಲೂ ಹಲವು ಮಂದಿ ರಾಮಕೃಷ್ಣಯ್ಯ ಅವರನ್ನು ಅಕ್ಕೂರುರಾಮಕೃಷ್ಣಯ್ಯ ಎಂದೇ ಕರೆಯುತ್ತಿದ್ದರು. 

 

ಅಭಿವೃದ್ಧಿಯ ದೃಷ್ಟಿಯಿಂದಲೂ ಹಿಂದುಳಿದಿದ್ದ, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಕ್ಕೂರು ಗ್ರಾಮದ ಅಭಿವೃದ್ಧಿಗೆ ದಿಕ್ಸೂಚಿಯಾದವರು ರಾಮಕೃಷ್ಣಯ್ಯನವರು. ಅಕ್ಕೂರು ಗ್ರಾಮ ಪಂಚಾಯತ್‌ನ ಚೇರ್ಮನ್‌ ಆಗಿ ಸತತ 16 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಯಾರಿಗೂ ಎದರದೆ ನೇರ ನಡೆ ನುಡಿಗೆ ರಾಮಕೃಷ್ಣಯ್ಯ ಅವರು ಹೆಸರುವಾಸಿಯಾಗಿದ್ದರು ಎಂದು ಇವರ ಸಮಕಾಲೀನರು ತಿಳಿಸುತ್ತಾರೆ.

 

ತಾಯಿ ತಾಳ್ಮೆಯ ಪುಟ್ಟಗೌರಮ್ಮ : 70 ವರ್ಷದ ಪುಟ್ಟಗೌರಮ್ಮ ಅವರು ರಾಮಕೃಷ್ಣಯ್ಯ ಅವರ ಪತ್ನಿ. ಇವರು ಪ್ರಗತಿಪರ ರೈತ ಮಹಿಳೆ. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಇವರು ತಮ್ಮ ಇಳಿ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

 

3,500 ಕ್ಕೂ ಹೆಚ್ಚು ಮಾವಿನ ಮರಗಳಿರುವ ತೋಟವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಬಾಳೆ, ರೇಷ್ಮೆ ಮೊದಲಾದವುಗಳನ್ನು ಬೆಳೆದಿದ್ದಾರೆ. 

 

ಆರ್. ಕುಮಾರಸ್ವಾಮಿ : ರಾಮನಗರ ಜಿಲ್ಲೆಯಲ್ಲಿ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳು ತನ್ನದೇ ಆದ ಗುರುತನ್ನು ಮೂಡಿಸಿದೆ. ಈ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿಯಾಗಿ ಆರ್. ಕುಮಾರಸ್ವಾಮಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ಕೂರು ರಾಮಕೃಷ್ಣಯ್ಯ ಅವರ ಮಗನಾದ ಇವರು ಬಿ.ಇ. ಪದವೀಧರರು. ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡುತ್ತಿದ್ದಾರೆ. ಜೊತೆಗೆ ವಿವಿಧ ಉದ್ಯಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಘಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.

 

ಸೂಕ್ತ ಸ್ಥಾನಮಾನ ಸಿಗಲಿಲ್ಲ : ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ದುಡಿದ ಅಕ್ಕೂರು ರಾಮಕೃಷ್ಣಯ್ಯ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಕಾಂಗ್ರೆಸ್ ಪಕ್ಷ ನೀಡಲಿಲ್ಲ ಎಂದು ಇವರ ಸ್ನೇಹಿತರು ಬೇಸರದಿಂದ ಹೇಳುತ್ತಾರೆ. ಈಗಲಾದರೂ ಇವರ ಪತ್ನಿ ಪುಟ್ಟಗೌರಮ್ಮ ಅವರಿಗೆ ಪಕ್ಷದ ವತಿಯಿಂದ ಸೂಕ್ತ ಸ್ಥಾನಮಾನಗಳನ್ನು ನೀಡಬೇಕು ಎಂದು ಮನವಿ ಮಾಡುತ್ತಾರೆ.

 

ಲೇಖನ : ಎಸ್. ರುದ್ರೇಶ್ವರ

ಸಂಶೋಧನಾ ವಿದ್ಯಾರ್ಥಿ

ಬೆಂಗಳೂರು ವಿಶ್ವವಿದ್ಯಾಲಯ

ಪ್ರತಿಕ್ರಿಯೆಗಳು

 • nayana wrote:
  10 Apr, 2018 01:26 pm

  ಆರ್. ಕುಮಾರಸ್ವಾಮಿ : ರಾಮನಗರ ಜಿಲ್ಲೆಯಲ್ಲಿ ಶಾಂತಿನಿಕೇತನ ಸಮೂಹ ಶಿಕ್ಷಣ

 • nayana wrote:
  10 Apr, 2018 01:26 pm

  ಸೂಕ್ತ ಸ್ಥಾನಮಾನ ಸಿಗಲಿಲ್ಲ : ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ದುಡಿದ ಅಕ್ಕೂರು ರಾಮಕೃಷ್ಣಯ್ಯ

 • shobha wrote:
  10 Apr, 2018 01:27 pm

  dadasdasdas tetsing ರಾಮಕೃಷ್ಣಯ್ಯರಾಮಕೃಷ್ಣಯ್ಯ

 • Nayana wrote:
  10 Apr, 2018 02:29 pm

  Abshvs vshve vsbsbvsbe vsv dbvsbjsjj

 • Sunitha wrote:
  10 Apr, 2018 02:33 pm

  Bdhdjhdrbbbebsssbbsbsbss

 • Nayana wrote:
  10 Apr, 2018 02:35 pm

  Ahshdnejsvf

 • sunitha wrote:
  12 Apr, 2018 10:24 am

  fdg fghfd fgjhndfj fgh

 • Ravi Boregowda wrote:
  03 May, 2018 02:35 pm

  ಅವರ ಪತ್ನಿಗಾದರೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು...

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ಅನುರಾಗ
ಅನುರಾಗ

ಎದೆಬಾನ ಹೊಂಗೊಳಕೆ 

ತಿಂಗಳೊಲಿದಿಳಿದಂತೆ

ನೈದಿಲೆಯ ನಗುವಾಗಿ ಬಾ

ಹುಣ್ಣಿಮೆಯ ಹಸೆಗೆ.... 


ನೋವೆಲ್ಲ ನಗುವಾಗಿ

ನಮ್ಮೊಲವೇ ಜೊತೆಗಿರ

ಹುತಾತ್ಮ
ಹುತಾತ್ಮ

ಹುತಾತ್ಮ

ನಾನು ಒಂದು ತಿಂಗಳ

ರಜೆ ಪಡೆದು ಬಂದಿದ್ದೆ

ಹೊಸಚೈತ್ರದ ಆಗಮನಕ್ಕಾಗಿ॥


ಇರಲಿಲ್ಲ ನನಗೆಂದೂ

ಹಸೆಮಣೆ ಏರುವಾ ಧಾವಂತ

ಭರವಸೆ ಇರದ ಬದುಕ ಆತಂಕ॥


ಹೆತ್ತವರ ವಂಶಬ

“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     
“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....
ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು. 

&nb

ಅಂಬೇಡ್ಕರರ ಆಕ್ರಂಧನ
ಅಂಬೇಡ್ಕರರ ಆಕ್ರಂಧನ

ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ
ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು
ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ
ನೊಂದವರು ದಮನಿತರು ಎಲ್ಲರಿಗೂ ಅನ್ವಯ
ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ

ಭೀಮ ಪ್ರಭುಗೆ ನಮಿಸೊಣ ಬನ್ನಿರೊ
ಭೀಮ ಪ್ರಭುಗೆ ನಮಿಸೊಣ ಬನ್ನಿರೊ

ಅಣ್ಣಾ ತಮ್ಮಾ ಬನ್ನಿರೊ

ಅವ್ವ ಅಯ್ಯ ಬನ್ನಿರೋ

ಜಗದ ಬೆಳಕ ಬೆಳಗಿದ 

ಜೈಬೀಮನ ಜನುಮದಿನಕೆ ಬನ್ನಿರೋ

ಬಡಜನರ ಬೆವರಿಗೆ

ಬೆಲೆ ತಂದ ಬಾಬಾಸಾಹೇಬರಿಗೆ

ಜೈ ಜೈ ಎನ್ನಿರೊ

ನನ್ನವಳು

ಅರಸೊತ್ತಿನ ಸುತ್ತೋಲೆಗಳೆಲ್ಲಾ ..

ಬೇಗೆಬಿದ್ದಿದೆ ಮನ

ಬೋರಿಡುತಿದೆಯೆಲ್ಲಾ ..

ಅಂದುಕೊಂಡಿಹೆನು

ಬದುಕು ಅವಳೊಂದಿಗೆ

ನೊಂದಿಕೊಂಡಿಹೆನು

ಅವಳು ದೂರಾದರೆ ಹೇಗೆ ..

ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.

    ರಾಮನಗರ ಜಿ

Top Stories »  


Top ↑