Tel: 7676775624 | Mail: info@yellowandred.in

Language: EN KAN

    Follow us :


ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ

Posted Date: 14 Feb, 2020

ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ

ಚನ್ನಪಟ್ಟಣ:ಫೆ/೧೪/೨೦/ಗುರುವಾರ.


ಭಾರತ ದೇಶ ಯಾರಪ್ಪನ ಸ್ವತ್ತಲ್ಲ, ಆರ್ ಎಸ್ ಎಸ್, ವಿ ಹೆಚ್ ಪಿ ಅಥವಾ ಬಿಜೆಪಿಯವರು ಕಟ್ಟಿದ ದೇಶ ನಮ್ಮದಲ್ಲ, ಸ್ವಾತಂತ್ರ್ಯ ಬಂದಾಗ ಇಂದಿನ ಬಿಜೆಪಿಯ ನಾಯಕರು ಹುಟ್ಟೇ ಇರಲಿಲ್ಲ, ಇಂತಹವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಅವರು ಇಂದು ನಗರದ ಪೆಟ್ಟಾ ಸರ್ಕಾರಿ ಶಾಲೆಯ ಬಳಿ ಮುಸ್ಲಿಮರು ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.


*ಪೌರತ್ವ ಕಾಯಿದೆ ಎಲ್ಲರಿಗೂ ಅನ್ವಯ*


ಪೌರತ್ವ ಕಾಯಿದೆ ಕೇವಲ ಮುಸ್ಲಿಮರಿಗಷ್ಟೇ ಅನ್ವಯಿಸುವುದಿಲ್ಲ, ದೇಶದ ಎಲ್ಲಾ ಧರ್ಮದ, ಜಾತಿಯ ಜನರಿಗೂ ಅನ್ವಯಿಸುತ್ತದೆ. ಆದರೆ ಕೆಲವರಿಗೆ ಅರ್ಥವಾಗುತ್ತಿಲ್ಲ. ಅಸ್ಸಾಂ ರಾಜ್ಯವೇ ಇವರಿಗೆ ಉದಾಹರಣೆಯಾಗಿದೆ. ಶೀಘ್ರವಾಗಿ ದೇಶದ ಎಲ್ಲಾ ನಾಗರೀಕರು ದಾಖಲೆ ಹಿಡಿದು ಸರಣಿಯಲ್ಲಿ ನಿಂತಾಗಲೇ ಅರಿವಾಗುತ್ತದೆ ಎಂದರು.


*ಮೋದಿ, ಷಾ, ಹೆಗಡೆ, ವಿರುದ್ದ ಗುಡುಗು*


ಮೋದಿ ಇಲ್ಲಿ ಮಾತನಾಡಿದರೆ ಚೀನಾ ಮತ್ತು ಪಾಕಿಸ್ತಾನ ಗಡಗಡ ಎನ್ನುತ್ತವಂತೆ, ಇಲ್ಲಿಯ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಸರಿಪಡಿಸಲಾಗದ ಮೋದಿಗೆ ಹೆದರುತ್ತಾರೆಯೇ ?.

ನೆಹರು ಮಾಡಿದ ತಪ್ಪನ್ನು ಷಾ ಈಗ ಸರಿ ಮಾಡುತ್ತಾರಂತೆ ! ನೆಹರು ಸತ್ತ ನಾಲ್ಕು ದಿನಗಳ ನಂತರ ಹುಟ್ಟಿದ ಷಾ ಗೆ ನೆಹರು ಮಾಡಿದ ತಪ್ಪು ಹೇಗೆ ಗೊತ್ತಾಯಿತು ?.

ಸಂಸದ ಅನಂತ ಕುಮಾರ ಹೆಗಡೆ ನಾಲ್ಕು ವರ್ಷಗಳ ಹಿಂದೆಯೇ ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಾರೆ, ಇಂತಹ ಸಾವಿರ ಮಂದಿ ಬಂದರೂ ಸಾಧ್ಯವಿಲ್ಲ ಎಂದರು.


*ಕಲ್ಲಡ್ಕ ಭಟ್ಟ ಮತ್ತು ಯೋಗೇಶ್ವರ್ ಮತ್ತು ಸರ್ಕಾರದ ವಿರುದ್ಧ ಕಿಡಿ*


ರಾಮನಗರ ಜಿಲ್ಲೆಯಲ್ಲಿ ಸರ್ವಧರ್ಮ ದ ಜನರು ಒಗ್ಗಟ್ಟಾಗಿ ಬಾಳುತ್ತಿದ್ದಾರೆ. ಇಂತಹ ಜಿಲ್ಲೆಯ ಜನರನ್ನು ಧರ್ಮದ ಹೆಸರಿನಲ್ಲಿ ಒಡೆದಾಳಲು ಕಲ್ಲಡ್ಕ ಪ್ರಭಾಕರ್ ಭಟ್ಟ ರಾಮನಗರಕ್ಕೆ ಬಂದಿದ್ದು ಅವನಿಗೆ ಇಲ್ಲಿನ ಶಾಸಕ ಸಾತ್ ನೀಡಿದ್ದು ಇಂತಹ ಚಡ್ಡಿಗಳ ಅವಶ್ಯಕತೆ ನಮಗಿಲ್ಲ. ಮೆಗಾಸಿಟಿ ಹೆಸರಲ್ಲಿ ಬಡವರ ಹಣ ದೋಚಿದವನು ಶಿಸ್ತಿನ ಸಿಪಾಯಿಯಂತೆ ಎಂದು ಯೋಗೇಶ್ವರ್ ಹೆಸರೇಳದೆ ಕುಟುಕಿದರು.

ಮುಸ್ಲಿಮರು ಪ್ರತಿಭಟನೆ ನಡೆಸುತ್ತಾರೆ ಎಂದೇ ೧೪೪ ಸೆಕ್ಷನ್ ಜಾರಿಗೆ ತರುತ್ತಾರೆ. ಇದನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿ ಪೋಲಿಸ್ ವರಿಷ್ಠಾಧಿಕಾರಿಗೆ ಛೀಮಾರಿ ಹಾಕಿದೆ. ಕನಕಪುರ ದ ಚಚ್೯ ವಿಷಯವಾಗಿ ಮಾತನಾಡುವ ಇವರು ಇವರದೇ ಸರ್ಕಾರ ಇದೆ. ತಾಕತ್ತಿದ್ದರೆ ಜಮೀನು ವಾಪಸು ಪಡೆಯಲಿ ಎಂದು ಸವಾಲು ಹಾಕಿದರು.

ಜನರನ್ನು ಪ್ರತಿಬಾರಿ ಮೋಸ ಮಾಡಲು ಆಗುವುದಿಲ್ಲ. ನಿಮ್ಮ ಜೊತೆ ನಾವಿರುತ್ತೇವೆ. ಮೋದಿ ಷಾ ತೊಲಗುವವರೆಗೂ ಪ್ರತಿಭಟಿಸೋಣಾ. ಪೌರತ್ವ ಕಾಯಿದೆಯನ್ನು ವಿರೋಧಿಸೋಣಾ ಎಂದು ಕರೆ ನೀಡಿದರು.


*ಕೇಂದ್ರ ಸರ್ಕಾರದ ವಿರುದ್ಧ ಕುಹಕವಾಡಿದ ಸಿ ಎಂ ಇಬ್ರಾಹಿಂ*


ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವರಸೆ ಹೇಗಿದೆ ಎಂದರೆ ಜನರಿಗೆಲ್ಲಾ ಚೋರ್ ಚೋರ್ (ಕಳ್ಳ ಕಳ್ಳ) ಅಲ್ಲಿ ಅಲ್ಲಿ ಎಂದು ಕೂಗುವುದು, ಅವರ ಗಮನ ಆಕಡೆ ಹೋದ ನಂತರ ಪಕ್ಕದಲ್ಲಿದ್ದವನ ಜೇಬಿಗೆ ಕತ್ತರಿ ಹಾಕುವುದು. ನಮ್ಮ ದಾಖಲೆ ಕೇಳಲಿ ಕೊಡೋಣಾ, ನಮ್ಮ ಅಪ್ಪ ಅಮ್ಮ, ಅವರ ಅಪ್ಪ ಅಮ್ಮ, ಹುಟ್ಟಿದ ಜಾತಕ, ಮದುವೆಯಾದ ಜಾತಕ ಎಲ್ಲಿಂದ ಕೊಡುವುದು ?.

ಪೌರತ್ವ ಕಾಯಿದೆಯಿಂದ ಮೂವತ್ತು ಕೋಟಿ ಮಂದಿ ದಾಖಲೆ ನೀಡಲು ಆಗುವುದಿಲ್ಲ, ಯಾಕೆಂದರೆ ಇವರಲ್ಲಿ ಬಡವರು, ಆದಿವಾಸಿಗಳು ಇನ್ನಿತರರು ಸೇರುತ್ತಾರೆ. ಇಂತಹವರು ಎಲ್ಲಿಂ ದಾಖಲೆ ತರುತ್ತಾರೆ.


*ಅಂಬೇಡ್ಕರ್ ಗೆಲ್ಲಿಸಿದ್ದು ಮುಸ್ಲಿಮರು*


ಹಿಂದೂಗಳು ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಸಿದ ನಂತರ ಗೆಲ್ಲಿಸಿದ್ದು ಮುಸ್ಲಿಮರು. ಶೇಕಡಾ ೭೦ ರಷ್ಟು ಮೂಲ ಪಾಕಿಸ್ತಾನದವರು ದೆಹಲಿಯಲ್ಲಿದ್ದಾರೆ, ಮುಸ್ಲಿಮರ ವಿರುದ್ಧ ಮಾತಾಡಿದ್ದಕ್ಕೆ ದೆಹಲಿಯನ್ನು ಬಿಜೆಪಿ ಕಳೆದುಕೊಂಡಿದೆ. ಏರ್ಪೋರ್ಟ್, ಪೆಟ್ರೋಲಿಯಂ ಮತ್ತು ಎಲ್ ಐ ಸಿ ಯಂತಹ ಕಂಪೆನಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಹತ್ತು ಲಕ್ಷ ಕೋಟಿ ರೂಪಾಯಿ ಲುಕ್ಸಾನಾಗಿದೆ ಎಂದು ಆರೋಪಿಸಿದರು.


*ಹೇ ರಾಮ್, ಶ್ರೀ ರಾಮ್, ಸರ್ವೇಜನ ಸುಖಿನೋ ಭವತು*


ನಾಥೂರಾಂ ಗೋಡ್ಸೆ ಸಾಯುವಾಗ ಶ್ರೀ ರಾಮ್ ಅಂತಾನೆ, ಮಹಾತ್ಮ ಗಾಂಧಿ ಸಾಯುವಾಗ ಹೇ ರಾಮ್ ಅಂತಾರೆ, ಅವರಿಗೂ ಇವರಿಗೂ ಇರುವ ವ್ಯತ್ಯಾಸ ಇದು. ಮದುವೆಗೆ ಮತ್ತು ಆಸ್ತಿಗೆ ಮಾತ್ರ ದಾಖಲೆ ಬೇಕು, ನಮ್ಮ ಧರ್ಮದಲ್ಲಿ ನಾಲ್ಕು ಮದುವೆ ಮಾಡಿಕೊಳ್ಳಲು ಅವಕಾಶ ಇದೆ. ಐದನೆಯದನ್ನು ಮಾಡಿಕೊಂಡರೆ ಅವನ ಕತೆ ಕಲಾಸ್ ಮಾಡುತ್ತಾರೆ.

ಬಿಜೆಪಿ ಸರ್ಕಾರಕ್ಕೆ ಬದ್ದತೆ ಇದ್ದರೆ ಇವಿಎಂ ತೆಗೆದು ಹಾಕಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಗೆಲ್ಲಲಿ ಎಂದು ಸವಾಲು ಹಾಕಿದರು.

ಹಿಂದೂ ಧರ್ಮದಲ್ಲಿ ಸರ್ವೇಜನ ಸುಖಿನೋ ಭವತು ಎಂದರೆ, ಹಸಿದವನ ಜೊತೆ ಹಂಚುಣ್ಣು ಎನ್ನುವುದು ನಮ್ಮ ಧರ್ಮ. ಇಂತಹ ಒಗ್ಗಟ್ಟಿನ ಧರ್ಮವನ್ನು ಒಡೆಯಬೇಡಿ ಎಂದರು.


ಜನಸಂಘದ ಅಮೂಲ್ಯ ಮತ್ತು ಮುಸ್ಲಿಂ ಧರ್ಮಗುರುಗಳು ಮಾತನಾಡಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಗಂಗಾಧರ, ವಕೀಲ ಗಿರೀಶ್, ನಗರಸಭೆ ಮಾಜಿ ಸದಸ್ಯ ವಾಸೀಲ್ ಅಲಿಖಾನ್, ವೀಣಾಕುಮಾರಿ, ಪಾರ್ವತಮ್ಮ, ಕೆ ಟಿ ಲಕ್ಷ್ಮಮ್ಮ, ಕೋಕಿಲಾ, ಜೆಡಿಎಸ್ ಮುಖಂಡರಾದ ಜಯಮುತ್ತು, ಲಿಂಗೇಶಕುಮಾರ್, ರಾಂಪುರ ರಾಜಣ್ಣ, ಗೋವಿಂದಳ್ಳಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ
ಇನ್ನು ಮುಂದೆ ಪ್ಯಾರಾಮಿಲ್ಟ್ರಿ ಕ್ಯಾಂಟೀನ್ ಗಳಲ್ಲಿ ಸ್ವದೇಶಿ ವಸ್ತುಗಳಷ್ಟೇ ಮಾರಾಟ ಅಮಿತ್ ಷಾ

ದೆಹಲಿ:ಮೇ/೧೩/೨೦/ಬುಧವಾರ. ದೇಶ ಕಾಯುತ್ತಿರುವ ಅರೆಸೈನಿಕ ಪಡೆಯ ದೇಶದ ನಾನಾ ಭಾಗದ ಎಲ್ಲಾ ಕ್ಯಾಂಟೀನ್ ಗಳಲ್ಲೂ ಜೂನ್ ಒಂದನೇ ತಾರೀಖಿನಿಂದ ಸ್ವದೇಶ

ಮೇ ಹದಿನೇಳ ರವರೆಗೆ ಲಾಕ್ಡೌನ್ ಮುಂದುವರಿಕೆ, ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಮೇ ಹದಿನೇಳ ರವರೆಗೆ ಲಾಕ್ಡೌನ್ ಮುಂದುವರಿಕೆ, ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ:ಬೆಂಗಳೂರು:ಮೇ/೦೧/೨೦/ಶುಕ್ರವಾರ. ಕೇಂದ್ರ ಸರ್ಕಾರವು ಹಂತಹಂತವಾಗಿ ಸ್ವಲ್ಪ ಸ್ವಲ್ಪ ದಿನಗಳೇ ಲಾಕ್ ಡೌನ್ ಮಾಡುತ್ತಿದ್ದು ಮೇ ೦೩ ತನಕ ಇದ

ಭಾರತ ಆಹಾರ ನಿಗಮವು ರಾಷ್ಟ್ರಕ್ಕೆ ಆಹಾರ ಪೂರೈಸುವ ಜೀವನಾಡಿ
ಭಾರತ ಆಹಾರ ನಿಗಮವು ರಾಷ್ಟ್ರಕ್ಕೆ ಆಹಾರ ಪೂರೈಸುವ ಜೀವನಾಡಿ

ಭಾರತ ಆಹಾರ ನಿಗಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯಡಿಯಲ್ಲಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ನಿರಂತರವಾಗಿ ಪೂರೈಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾದ ಪಾತ್ರವನ್ನು

ಕೊರೊನಾ ಲಸಿಕೆ ಸಂಶೋಧನಾ ತಂಡದಲ್ಲಿ ಕನ್ನಡಿಗ ವಿಜ್ಞಾನಿ
ಕೊರೊನಾ ಲಸಿಕೆ ಸಂಶೋಧನಾ ತಂಡದಲ್ಲಿ ಕನ್ನಡಿಗ ವಿಜ್ಞಾನಿ

ಅರಕಲಗೂಡು: ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧಿಸಲು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ಯುರೋಪಿಯನ್ ಟಾಸ್ ಫೋರ್ಸ್ ಫಾರ್ ಕೊರೊನಾ ವೈರಸ್ ತಂಡದಲ್ಲ

ಅಮೂಲ್ಯ ಜೊತೆಗೆ ಆಯೋಜಕರನ್ನು ಗಡಿಪಾರು ಮಾಡಲಿ ಹಿಂಜಾವೇ
ಅಮೂಲ್ಯ ಜೊತೆಗೆ ಆಯೋಜಕರನ್ನು ಗಡಿಪಾರು ಮಾಡಲಿ ಹಿಂಜಾವೇ

ಚನ್ನಪಟ್ಟಣ:ಫೆ/೨೧/೨೦/ಶುಕ್ರವಾರ.


ಪಾಕಿಸ್ತಾನದ ಪರ ಘೋಷಣೆ ಕೂಗಿ ಅನ್ನ ತಿನ್ನುತ್ತಿರುವ ದೇಶಕ್ಕೆ ದ್ರೋಹ ಬಗೆದ ಅಮೂಲ್ಯ ಜೊತೆಗೆ, ಈಕೆಯನ್ನು ವೇದಿಕೆಗೆ ಕರೆಸಿದ ಆಯೋಜಕರು

ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ
ಭಾರತ ಯಾರಪ್ಪನ ಸ್ವತ್ತಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವಿದೆ ಕುಮಾರಸ್ವಾಮಿ

ಚನ್ನಪಟ್ಟಣ:ಫೆ/೧೪/೨೦/ಗುರುವಾರ.


ಭಾರತ ದೇಶ ಯಾರಪ್ಪನ ಸ್ವತ್ತಲ್ಲ, ಆರ್ ಎಸ್ ಎಸ್, ವಿ ಹೆಚ್ ಪಿ ಅಥವಾ ಬಿಜೆಪಿಯವರು ಕಟ್ಟಿದ ದೇಶ ನಮ್ಮದಲ್ಲ, ಸ್ವಾತಂತ್ರ್ಯ ಬಂದಾಗ ಇಂದಿನ ಬ

ಕನ್ನಡದ ಟ್ವಿಟರ್ ಆ್ಯಪ್ ಸಂಶೋಧಿಸಿದ ಯುವಕರು
ಕನ್ನಡದ ಟ್ವಿಟರ್ ಆ್ಯಪ್ ಸಂಶೋಧಿಸಿದ ಯುವಕರು

ಮಂಡ್ಯ: ಇದುವರೆಗೆ ಹಿಂದಿ, ಇಂಗ್ಲೀಷ್ ಭಾಷೆಯ‌ ಟ್ವಿಟರ್ ಗಳಲ್ಲೆ ಕನ್ನಡದ ಟ್ವೀಟ್ ಮಾಡುತ್ತಿದ್ದ ಕನ್ನಡಿಗರಿಗೆ ಸಿಹಿ ಸುದ್ದಿಯೊಂದನ್ನು ಯುವಕರೀರ್ವರು ಹೊರತ

ಬಡ ಮಹಿಳೆ ಖಾತೆಗೆ ಮೂವತ್ತು ಕೋಟಿ ! ಅನುಮಾನ ಮೂಡಿಸಿರುವ ಜನ ‘ಧನ’
ಬಡ ಮಹಿಳೆ ಖಾತೆಗೆ ಮೂವತ್ತು ಕೋಟಿ ! ಅನುಮಾನ ಮೂಡಿಸಿರುವ ಜನ ‘ಧನ’

ಚನ್ನಪಟ್ಟಣ:ಫೆ/೦೩/೨೦೨೦/ಸೋಮವಾರ.


ವಹಿವಾಟು ನಡೆಸದೇ ಸ್ಥಗಿತ ಗೊಂಡಿದ್ದ ಖಾತೆಗೆ ಮೂವತ್ತು

ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?
ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?

ಚನ್ನಪಟ್ಟಣ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು* ಇದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ ಭೀಮರಾವ್ ಅಂಬೇಡ್ಕರ್ ರವರ ದೃಢ ನಿರ

Top Stories »  


Top ↑