Tel: 7676775624 | Mail: info@yellowandred.in

Language: EN KAN

    Follow us :


ಸಲ್ಮಾನ್ ಖಾನ್ ಗೆ ಎರಡು ವರ್ಷ ಜೈಲು ಶಿಕ್ಷೆ, ಐವತ್ತು ಸಾವಿರ ದಂಡ

Posted Date: 05 Apr, 2018

ಸಲ್ಮಾನ್ ಖಾನ್ ಗೆ ಎರಡು ವರ್ಷ ಜೈಲು ಶಿಕ್ಷೆ, ಐವತ್ತು ಸಾವಿರ ದಂಡ

ಜೈಪುರ್‌‌: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖ ಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ ತೀರ್ಪನ್ನು ರಾಜಸ್ತಾನದ ಜೋಧ್ಪುರ ನ್ಯಾಯಾಲಯ ಪ್ರಕಟಿಸಿದ್ದು, ಸಲ್ಮಾನ್ ರನ್ನು ದೋಷಿ ಎಂದು ತೀರ್ಪು ನೀಡಿ, 2 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ.

ಆದರೆ ಪ್ರಾಸಿಕ್ಷೂಷನ್‌ ಪರ ವಕೀಲರು ಇದಕ್ಕೆ ತಕರಾರು ಎತ್ತಿದ ಪರಿಣಾಮ ವಾದ-ವಿವಾದ ಮುಂದುವರಿದಿದ್ದು, ಅಂತಿಮ ತೀರ್ಪು ಇನ್ನೂ ಬರಬೇಕಿದೆ.

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು, ಸಲ್ಮಾನ್ ಜತೆ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರ, ನೀಲಂ ಕೂಡ ಆರೋಪಿಗಳಾಗಿದ್ದಾರೆ. ತೀರ್ಪು ಪ್ರಕಟಿಸಿ ರುವ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ದೋಷಿ ಎಂದು ತೀರ್ಪು ನೀಡಿದ್ದು, ಇತರೆ ಆರೋಪಿಗಳನ್ನು ಖುಲಾಸೆ ಗೊಳಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಅವರನ್ನು ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖಾತ್ರಿ ಅವರು ದೋಷಿ ಎಂದು ತೀರ್ಪು ನೀಡಿದ್ದಾರೆ. ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರ ಅವರನ್ನು ಖುಲಾಸೆಗೊಳಿಸಿದ್ದಾರೆ. ಚಾಲಕನ ಸೀಟಿನಲ್ಲಿ ಕುಳಿತಿದ್ದ ಸಲ್ಮಾನ್ ಆ ಹಿಂಡಿನತ್ತ ಗುಂಡು ಹಾರಿಸಿದ್ದು, 2 ಕೃಷ್ಣಮೃಗಗಳು ಮೃತಪಟ್ಟಿದ್ದವು. ಸಾರ್ವಜನಿಕರು ಬೆನ್ನಟ್ಟಿದಾಗ, ಮೃತ ಕೃಷ್ಣಮೃಗಗಳನ್ನು ಅಲ್ಲಿಯೇ ಬಿಟ್ಟು ಸಲ್ಮಾನ್ ಮತ್ತು ತಂಡ ಸ್ಥಳದಿಂದ ಪರಾರಿಯಾಗಿತ್ತು ಎಂದು ಹೇಳಲಾಗಿತ್ತು.

ಚಿಂಕಾರ ಬೇಟೆ ಕುರಿತ ಪ್ರಕರಣದಲ್ಲೂ ಸಲ್ಮಾನ್ ಖಾನ್ ದೋಷಿ ಎಂದು ಸಾಬೀತಾಗಿ, 5 ವರ್ಷ ಶಿಕ್ಷೆಯಾಗಿತ್ತು. ಆದರೆ, ರಾಜಸ್ತಾನ ನ್ಯಾಯಾಲಯ ಸಲ್ಮಾನ್ ರನ್ನು ಖುಲಾಸೆಗೊಳಿಸಿತ್ತು. ರಾಜಸ್ತಾನ ಸರಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬಾಕಿಯಿದೆ.

(ಸಂಗ್ರಹ ವರದಿ)

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in nation »

ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?
ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?

ಚನ್ನಪಟ್ಟಣ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು* ಇದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ ಭೀಮರಾವ್ ಅಂಬೇಡ್ಕರ್ ರವರ ದೃಢ ನಿರ

ರೈಲು ಢಿಕ್ಕಿ ಚಿರತೆ ಸಾವು
ರೈಲು ಢಿಕ್ಕಿ ಚಿರತೆ ಸಾವು

ಚನ್ನಪಟ್ಟಣ: ತಾಲೂಕಿನ ಹೆದ್ದಾರಿ ಬಳಿಯ ಮಂಚಶೆಟ್ಟಿಹಳ್ಳಿದೊಡ್ಡಿ (ನಾದ ಗ್ರಾಮ) ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸ

ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !
ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !

ವಿರೋಧ ಪಕ್ಷದಲ್ಲಿ ಕೂರಲು ಅನರ್ಹ


ಇಡೀ ದೇಶದಲ್ಲಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೆ ನರೇಂದ್ರ ಮೋದಿಯವರು ಪ್ರ

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?
ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?

ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.


ಪ್

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?
ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮು

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ
ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ

ತಿರುಪತಿ: ಆಗಸ್ಟ್‌ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್‌ ಅವರು

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು
ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್‌.ಸಿ., ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್&zw

Top Stories »  


Top ↑