ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್ ಇನ್ನು ಮೊಬೈಲ್ನಲ್ಲಿ ಇದ್ದರೆ ಸಾಕು

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್ನಲ್ಲೇ ಡಿಜಿ ಲಾಕರ್ನಲ್ಲಿ ದಾಖಲೆಗಳನ್ನು ಇಟ್ಟುಕೊಂಡು, ಅಧಿಕಾರಿಗಳು ಕೇಳಿದಾಗ ಅದನ್ನೇ ತೋರಿಸಿದರೆ ಸಾಕು!
ಹೌದು, ಕೇಂದ್ರ ಮೋಟಾರು ವಾಹನ ನಿಯಮಾವಳಿಗಳಿಗೆ ತರಲಾದ ತಿದ್ದುಪಡಿಯಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ. ಈ ಹೊಸ ನಿಯಮಗಳು ವಾಹನಗಳ ಮಾಲಿಕರಿಗೆ ನೆಮ್ಮದಿ ತರಲಿವೆ. ಜತೆಗೆ ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, 8 ವರ್ಷ ಮೀರಿದ ವಾಹನಗಳ ಪರವಾನಿಗೆ ನವೀಕರಣ, ಸರಕು ಸಾಗಣೆ ಮತ್ತಿತರ ವಿಚಾರಗಳಿಗೂ ಸಂಬಂಧಿಸಿದ ಅನೇಕ ಪ್ರಸ್ತಾವಗಳನ್ನು ರಸ್ತೆ ಸಾರಿಗೆ ಸಚಿವಾಲಯ ಇದರಲ್ಲಿ ಸೇರಿಸಿದೆ.
ಆ.11ರೊಳಗೆ ಪ್ರತಿಕ್ರಿಯಿಸಿ: ಸಾರ್ವಜನಿಕರು ಈ ತಿದ್ದುಪಡಿ ಪ್ರಸ್ತಾವಕ್ಕೆ ಪ್ರತಿಕ್ರಿಯೆ, ಸಲಹೆ ಹಾಗೂ ಆಕ್ಷೇಪಗಳಿದ್ದರೆ ಆ.11ರೊಳಗೆ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಪ್ರತಿಕ್ರಿಯೆಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ(ಸಾರಿಗೆ) ಕಳುಹಿಸುವಂತೆ ಹೇಳಿದೆ.
ತಿದ್ದುಪಡಿಯಲ್ಲೇನಿದೆ?
– ವಾಹನ ಚಾಲಕರು ಚಾಲನಾ ಪರವಾನಿಗೆ, ಆರ್ಸಿ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಡಿಜಿಟಲ್ ರೂಪದಲ್ಲೂ ಕೊಂಡೊಯ್ಯಬಹುದು.
– ರಾಷ್ಟ್ರೀಯ ಪರವಾನಗಿ ಹೊಂದಿರುವ ಎಲ್ಲ ವಾಣಿಜ್ಯ ವಾಹನಗಳಿಗೂ ಫಾಸ್ಟ್ಯಾಗ್ಗಳು, ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಕಡ್ಡಾಯ.
– ರಾಷ್ಟ್ರೀಯ ಪರ್ಮಿಟ್ ಪಡೆಯಬೇಕೆಂದರೆ, ವಾಹನದ ಮುಂಭಾಗ, ಹಿಂಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ನ್ಯಾಶನಲ್ ಪರ್ಮಿಟ್ ಅಥವಾ ಎನ್/ಪಿ ಎಂದು ಬರೆಯುವುದು ಕಡ್ಡಾಯ.
– ಅಪಾಯಕಾರಿ ಅಥವಾ ಹಾನಿಕಾರಕ ಸರಕುಗಳನ್ನು ಒಯ್ಯುವ ಟ್ಯಾಂಕರ್ ಗಳಿಗೆ ಬಿಳಿ ಬಣ್ಣವನ್ನೇ ಬಳಿಯಬೇಕು. ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫಲಿತ ಟೇಪ್ ಅಂಟಿಸಬೇಕು.
Recent news in nation »

ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?
ಚನ್ನಪಟ್ಟಣ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು* ಇದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ ಭೀಮರಾವ್ ಅಂಬೇಡ್ಕರ್ ರವರ ದೃಢ ನಿರ

ಅಯೋಧ್ಯಾ ಐತಿಹಾಸಿಕ ತೀರ್ಪು (೯/೧೧) ನೀಡಿದ ಸುಪ್ರೀಂ, ದೇಶಾದ್ಯಂತ ಕಟ್ಟೆಚ್ಚರ. ಶಾಂತಿಯುತ ಸಂಭ್ರಮ
ರಾಮನಗರ (ದೆಹಲಿ): ೧೫೦ ವರ್ಷಗಳಿಗೂ ಹೆಚ್ಚು ಕಾಲ ವಿವಾದವಿದ್ದ

ರೈಲು ಢಿಕ್ಕಿ ಚಿರತೆ ಸಾವು
ಚನ್ನಪಟ್ಟಣ: ತಾಲೂಕಿನ ಹೆದ್ದಾರಿ ಬಳಿಯ ಮಂಚಶೆಟ್ಟಿಹಳ್ಳಿದೊಡ್ಡಿ (ನಾದ ಗ್ರಾಮ) ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸ

ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !
ವಿರೋಧ ಪಕ್ಷದಲ್ಲಿ ಕೂರಲು ಅನರ್ಹ
ಇಡೀ ದೇಶದಲ್ಲಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೆ ನರೇಂದ್ರ ಮೋದಿಯವರು ಪ್ರ

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?
ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.
ಪ್

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮು

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್: 6 ದಿನ ತಿಮ್ಮಪ್ಪನ ದರ್ಶನವಿಲ್ಲ
ತಿರುಪತಿ: ಆಗಸ್ಟ್ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್ ಅವರು

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್ ಇನ್ನು ಮೊಬೈಲ್ನಲ್ಲಿ ಇದ್ದರೆ ಸಾಕು
ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್ನಲ್ಲೇ ಡಿಜಿ ಲಾಕರ್&zw
ಪ್ರತಿಕ್ರಿಯೆಗಳು