ಅಜಾತಶತ್ರು ಒಂದು ಮೆಲುಕು

ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತಿದೆ. ಆದಾಗ್ಯೂ ಅದೆಕೋ ಒಂದೆರಡು ಸಾಲು ಬರೆಯಬೇಕೆನ್ನಿಸಿತು ಅದಕ್ಕಾಗಿ ಬರೆಯುತ್ತಿದ್ದೇನೆ.
ಭಾರತದ ಅತಿ ದೊಡ್ಡ ಶತೃ ಎಂದರೆ ಅದು ಪಾಕಿಸ್ತಾನ ಅಂದಿಗೂ ಇಂದಿಗೂ ಇದು ಸಾರ್ವತ್ರಿಕ ಸತ್ಯ ಇಂತಹ ದೇಶದ ಜೊತೆಗೂ ರಾಜತಾಂತ್ರಿಕ ಸಂಬಂಧವನ್ನು ಬೆಸೆದ ಏಕೈಕ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬಹುಶಃ "ಅಜಾತಶತ್ರು" ಎಂಬ ಬಿರುದು ಅಂದೇ ಬಂದಿದೆ.
ಇದೇ ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭ ಸೇನೆಯ ಮುಖಸ್ಥರಾಗಿದ್ದ ಪರ್ವೇಜ್ ಮುಷರಫ್ ನವಾಜ್ ಷರೀಫ್ ರನ್ನು ಬಂಧಿಸಿ ಪ್ರಧಾನ ಮಂತ್ರಿಯಾದ ನಂತರ ನವಾಜ್ ಷರೀಫ್ ರ ಪುತ್ರ ನಮ್ಮ ತಂದೆಯನ್ನು ಉಳಿಸಿಕೊಡಿ ಎಂದು ಅಂದಿನ ಪ್ರಧಾನಮಂತ್ರಿ ವಾಜಪೇಯಿ ಯವರನ್ನು ಅಂಗಲಾಚಿದ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ಜಗತ್ತಿನ ಏಕೈಕ ನಾಯಕ ನಮ್ಮ ಈ ಅಜಾತಶತ್ರು.
ಭಾರತದ ರಾಜಧಾನಿ ದೆಹಲಿಯಿಂದ ಪಾಕಿಸ್ತಾನದ ರಾಜಧಾನಿ ಲಾಹೋರ್ ಗೆ ರಾಜತಾಂತ್ರಿಕ ಸಂಬಂಧಕ್ಕಾಗಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಲ್ಲದೇ ಪ್ರಥಮ ಬಾರಿಗೆ ಅವರೇ ಅದೇ ಬಸ್ ನಲ್ಲಿ ಪ್ರಯಾಣಿಸಿದ್ದು ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.
ಕೇವಲ ಇಪ್ಪತ್ತೇಳನೇ ವಯಸ್ಸಿಗೆ ಸಕ್ರಿಯ ರಾಜಕಾರಣಕ್ಕೆ ಬಂದು ಸೊನ್ನೆ ಯಿಂದ ದಶಕೋಟಿ ಜನಗಳವರೆಗೆ ಬಿಜೆಪಿ ಪಕ್ಷವನ್ನು ಕಟ್ಟಿದ ವಾಜಪೇಯಿಯವರು ಸಂಸದರಾಗಿ, ವಿದೇಶಾಂಗ ಸಚಿವರಾಗಿ ಪ್ರಧಾನಮಂತ್ರಿ ಯಾಗಿ ಅತ್ಯುತ್ತಮ ಆಡಳಿತವನ್ನು ಈ ದೇಶಕ್ಕೆ ಕೊಟ್ಟ ಏಕೈಕ ಪ್ರಧಾನಿ ಈ ನಮ್ಮ ವಾಜಪೇಯಿ ಯವರು.
ವಿರೋಧ ಪಕ್ಷಗಳಿಂದಲೂ ಅತಿ ಹೆಚ್ಚು ಹೊಗಳಿಸಿಕೊಂಡ, ಗಾಂಭೀರ್ಯ, ಹಾಸ್ಯ ಧಾಟಿಯ ತಮ್ಮ ಕವನಗಳ ಮೂಲಕ ರಾಜಕೀಯ ವಿರೋಧಿ ನಾಯಕರನ್ನು ಸೂಕ್ಷ್ಮವಾಗಿ ತಿವಿದೆಬ್ಬರಿಸುತ್ತಾ ಉತ್ತಮ ಸಂಸದೀಯ ಪಟುವಾಗಿ ಗುರುತಿಸಿಕೊಂಡ ಭಾರತರತ್ನ ಬಿರುದಾಂಕಿತ ಈ ನಮ್ಮ ಅಜಾತಶತ್ರು ವಾಜಪೇಯಿಯವರು.
ಬಹುಶಃ ಭಾರತದ ರಾಜಕಾರಣಿಗಳಲ್ಲಿ ಶತೃಗಳೇ ಇಲ್ಲದ, ಉತ್ತಮ ಆಡಳಿತ ಕೊಟ್ಟ, (ಲಾಲ್ ಬಹದ್ದೂರ್ ಶಾಸ್ತ್ರಿ ಹೊರತಾಗಿ) ಒಬ್ಬ ಮಹತ್ತರವಾದ ನಾಯಕನಿದ್ದ ಎಂದರೆ ಅದು ವಾಜಪೇಯಿ ಯೊಬ್ಬರೇ,
ಕಾಂಗ್ರೆಸ್ ನ ವ್ಯಕ್ತಿಗತ ಹೆಸರಿನ ಯೋಜನೆಗಳಿಗೆ ಸಡ್ಡುಹೊಡೆದು ಹುದ್ದೆಯ ಹೆಸರನ್ನು ಬಳಸಿ (ಪ್ರಧಾನಮಂತ್ರಿ ಆವಾಸ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಇನ್ನೂ ಮುಂತಾದವು) ಯೋಜನೆಗಳನ್ನು ರೂಪಿಸಿದ ಮಹಾನ್ ಮಾನವತಾವಾದಿ ಅಜನ್ಮ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯಿಯವರು.
ಇಂದು ಅವರು ನಮ್ಮ ಭಾರತ ಅಷ್ಟೇ ಅಲ್ಲ ಇಡೀ ವಿಶ್ವವನ್ನೇ ಅಗಲಿದ್ದಾರೆ, ಅವರು ನಮ್ಮನ್ನು ಬಿಟ್ಟು ಹೋಗಿಲ್ಲಾ, ನಾವುಗಳು ಅವರನ್ನು ಕಳೆದುಕೊಂಡಿದ್ದೇವೆ, ಸರ್ ಜೀ ಮತ್ತೊಂದು ಬಾರಿ ಮಾನವ ಜನ್ಮ ಎಂಬುದೊಂದಿದ್ದರೇ ಮತ್ತೇ ನಮ್ಮ ದೇಶದಲ್ಲೇ ಜನ್ಮ ತಳೆದು ಬರಲೆಂದು ಪ್ರಾರ್ಥಿಸೋಣ ಬನ್ನಿರಿ.
ಗೋ ರಾ ಶ್ರೀನಿವಾಸ...
ಮೊ; !9845856139.
Recent news in nation »

ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?
ಚನ್ನಪಟ್ಟಣ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು* ಇದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ ಭೀಮರಾವ್ ಅಂಬೇಡ್ಕರ್ ರವರ ದೃಢ ನಿರ

ಅಯೋಧ್ಯಾ ಐತಿಹಾಸಿಕ ತೀರ್ಪು (೯/೧೧) ನೀಡಿದ ಸುಪ್ರೀಂ, ದೇಶಾದ್ಯಂತ ಕಟ್ಟೆಚ್ಚರ. ಶಾಂತಿಯುತ ಸಂಭ್ರಮ
ರಾಮನಗರ (ದೆಹಲಿ): ೧೫೦ ವರ್ಷಗಳಿಗೂ ಹೆಚ್ಚು ಕಾಲ ವಿವಾದವಿದ್ದ

ರೈಲು ಢಿಕ್ಕಿ ಚಿರತೆ ಸಾವು
ಚನ್ನಪಟ್ಟಣ: ತಾಲೂಕಿನ ಹೆದ್ದಾರಿ ಬಳಿಯ ಮಂಚಶೆಟ್ಟಿಹಳ್ಳಿದೊಡ್ಡಿ (ನಾದ ಗ್ರಾಮ) ಗ್ರಾಮದ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸ

ಕೇಸರಿಮಯವಾದ ಲೋಕಸಭೆ, ಗಟಾರ ಸೇರಿದ ಮಹಾಘಟಬಂಧನ್, ರಾಜ್ಯಕ್ಕೆ ಮೂರೇ ಗೆಲುವು !
ವಿರೋಧ ಪಕ್ಷದಲ್ಲಿ ಕೂರಲು ಅನರ್ಹ
ಇಡೀ ದೇಶದಲ್ಲಿ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೆ ನರೇಂದ್ರ ಮೋದಿಯವರು ಪ್ರ

ನಿಮ್ಮಅಮೂಲ್ಯ ಮತ ಅರ್ಹವ್ಯಕ್ತಿಯನ್ನೇ ಆಯ್ಕೆ ಮಾಡಲಿ...?
ನಮ್ಮ ಭಾರತದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಪ್ರಜೆಗಳೇ ಪ್ರಭುಗಳು ಅಂದರೆ ಅವನು ತನ್ನ ಹಕ್ಕು ಚಲಾಯಿಸಿ ಒಬ್ಬ ನಾಯಕನನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆ.
ಪ್

ಹೆದ್ದಾರಿಯಲ್ಲಿ ಬೀದಿನಾಯಿ ಮತ್ತು ಸಾಕು ಪ್ರಾಣಿಗಳ ಮಾರಣಹೋಮ ! ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇ ?
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿನಿತ್ಯವೂ ಅನೇಕ ಬೀದಿ ನಾಯಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ, ಒಂದು ಸಣ್ಣ ಪೆಟ್ಟಾದ ನಾಯಿ ರಸ್ತೆಯಲ್ಲಿ ಬಿದ್ದರಷ್ಟೇ ಸಾಕು ಅದು ಎದ್ದು ಸಾವರಿಸಿ ಮು

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಜಾತಶತ್ರು ಒಂದು ಮೆಲುಕು
ಅಜಾತಶತ್ರು ವ್ಹಾವ್ ಎಂತ ಅತ್ಯದ್ಭುತ ಪದ.
ಈ ಬಿರುದಾಂಕಿತ ಅಟಲ್ ಬಿಹಾರಿ ವಾಜಪೇಯಿ ಯವರ ಬಗ್ಗೆ ಬರೆಯುವಂತ ವಿದ್ವಾಂಸನೂ ಅಲ್ಲಾ, ಹಿರಿಯ ಮುಖಂಡ, ಒಡನಾಡಿ, ಸಂಬಂದಿಯೂ ಅಲ್ಲಾ ಬಹಳ ಮುಖ್ಯವಾಗಿ ಆ ಯೋಗ್ಯತೆಯೂ ನನಗಿಲ್ಲ ಎಂದು ನನಗೆ ಗೊತ್ತ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್: 6 ದಿನ ತಿಮ್ಮಪ್ಪನ ದರ್ಶನವಿಲ್ಲ
ತಿರುಪತಿ: ಆಗಸ್ಟ್ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್ ಅವರು

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್ ಇನ್ನು ಮೊಬೈಲ್ನಲ್ಲಿ ಇದ್ದರೆ ಸಾಕು
ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್ನಲ್ಲೇ ಡಿಜಿ ಲಾಕರ್&zw
ಪ್ರತಿಕ್ರಿಯೆಗಳು