Tel: 7676775624 | Mail: info@yellowandred.in

Language: EN KAN

    Follow us :


ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

Posted Date: 06 Aug, 2019

ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚಿತರಾಗಿದ್ದ ಕೃಷ್ಣೇಗೌಡರು (೭೮) ನಿನ್ನೆ ನಿಧನ ಹೊಂದಿದರು.


ರಾಮನಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಅವರು ವ್ಯವಸಾಯದ ಜೊತೆಗೆ ಕವನಗಳನ್ನು ಬರೆಯುವುದು, ನಾಡು-ನುಡಿಗಳ ಬಗ್ಗೆ ಅಭಿಮಾನದಿಂದ ಮಾತನಾಡುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಗುರುತಿಸಿಕೊಂಡಿದ್ದರು.


ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಮ್ಮಿಕೊಂಡಿದ್ದ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣೇಗೌಡರ ಮನೆಯಲ್ಲಿ ವಾಸ್ತವ್ಯ ಹೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈಗಾಗಲೇ *ಸಂಕ್ರಾಂತಿ* ಎಂಬ ಕವನ ಸಂಕಲನವನ್ನು ಪ್ರಕಟಿಸಿ ಬಿಡುಗಡೆ ಮಾಡಿದ್ದ ಅವರು ದೇ ಜವರೇಗೌಡರ ಮುನ್ನುಡಿ ಇರುವ *ಮುಂಗೋಳಿ* ಎಂಬ ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದ್ದರು.


ಬೆಂಗಳೂರು ಮೈಸೂರು ಹೆದ್ದಾರಿಯ ಮತ್ತಿಕೆರೆ ಬಳಿ ಇರುವ ಅವರ ತೋಟದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದೆ ವೇಳೆ ಜಿಲ್ಲೆಯ ಸಾಹಿತ್ಯ ಪ್ರೇಮಿಗಳು, ನಾಡು-ನುಡಿಯ ಹೋರಾಟಗಾರರು ಸೇರಿದಂತೆ ಅನೇಕ ಗಣ್ಯರು ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ವಿದಾಯ ಹೇಳಲಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಅನಾರೋಗ್ಯದಿಂದ ಸುಮಂತ್ ನಿಧನ
ಅನಾರೋಗ್ಯದಿಂದ ಸುಮಂತ್ ನಿಧನ

ನ್ನಪಟ್ಟಣ: ತಾಲ್ಲೂಕಿನ ಪೌಳಿದೊಡ್ಡಿ ಗ್ರಾಮದ ಯಜಮಾನ್ ಜಯರಾಮಣ್ಣ ನವರ ಮೊಮ್ಮಗ ರವಿ (ಪೋಲಿಸ್) ಯವರ ಪುತ್ರ ಸುಮಂತ್ (೧೫) ಇಂದು ಅನಾರೋಗ್ಯ ನಿಮಿ

ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ
ಸಾಹಿತ್ಯ ಪ್ರೇಮಿ ತೋಟದಮನೆ ಕೃಷ್ಣೇಗೌಡ ಅಸ್ತಂಗತ

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಉಪಾಧ್ಯಕ್ಷ, ಕವಿ, ನಿವೃತ್ತ ಸಬ್ ರಿಜಿಸ್ಟ್ರಾರ್ *ತೋಟದಮನೆ ಕೃಷ್ಣೇಗೌಡ* ಎಂದೇ ಚಿರಪರಿಚ

ಟ್ರ್ಯಾಕ್ಟರ್ ನಾಗರಾಜು ನಿಧನ

ನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಟ್ರ್ಯಾಕ್ಟರ್ ನಾಗರಾಜು ಎಂದೆ ಹೆಸರುವಾಸಿಯಾದ ನಾಗರಾಜು (೭೬) ರವರು ಇಂದು (೧೧/೦೬/೧೯) ರಂದು ನಿಧನರಾದರು.

ಮೃತರ ಅಂತ್ಯಕ್ರಿಯೆಯು ಸ್ವಗ್

ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ
ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ದ ಪ್ರಧಾನ ಆಗಮಿಕ ಸಂಪತ್ ಕುಮಾರ್ ನಿಧನ

ಚನ್ನಪಟ್ಟಣ: ಕಳೆದ ಐವತ್ತು ದಶಕಗಳಿಂದಲೂ ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಅರ್ಚಕರಾಗಿ, ಪ್ರಮುಖ ಆಗಮಿಕರಾಗಿ, ಸೇವೆ ಸಲ್ಲಿಸುತ್ತಿದ *ಉಭಯ ವೇ

ಸಮಾಜ ಸೇವಕ ವಿ ಪುಟ್ಟಯ್ಯ ನಿಧನ
ಸಮಾಜ ಸೇವಕ ವಿ ಪುಟ್ಟಯ್ಯ ನಿಧನ

ನಗರದ ವಿವೇಕಾನಂದ ಬಡಾವಣೆಯ ನಿವಾಸಿ, ಆಗ್ರೋ ಇಂಡಸ್ಟ್ರೀಸ್ ಕಂಪನಿಯ ಮಾಜಿ ಉದ್ಯೋಗಿ, ಅಗಸನಪುರ ಕಲ್ಲು ಕೈಗಾರಿಕಾ ಸಂಘದ ಕಾರ್ಯದರ್ಶಿ, ಸಮಾಜ ಸೇವಕ ಪುಟ್ಟಯ್ಯ ವಿ (೭೨) ಅವರು ಇಂದು ಮುಂಜಾನೆ ಬೆಂಗಳೂರಿನ

ಬಿ ಟಿ ಚಿಕ್ಕಪುಟ್ಟೇಗೌಡ ರ ಮಾತೃಶ್ರೀ ನಿಂಗಮ್ಮ ನಿಧನ
ಬಿ ಟಿ ಚಿಕ್ಕಪುಟ್ಟೇಗೌಡ ರ ಮಾತೃಶ್ರೀ ನಿಂಗಮ್ಮ ನಿಧನ

ಚನ್ನಪಟ್ಟಣ ತಾಲ್ಲೂಕು ಬಿ ವಿ ಹಳ್ಳಿ ಗ್ರಾಮದ ತಮ್ಮಣ್ಣಗೌಡರ ಧರ್ಮಪತ್ನಿ ನಿಂಗಮ್ಮ ನವರು (೯೦) ಇಂದು ನಿಧನರಾದರು.


ನಾಳೆ ಅಂದರೆ ೧೫/೦೪/೧೯ ರ ಸೋಮವಾರ ಬೆಳಿಗ್ಗೆ ೧೦:೦೦&nb

ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡರು ಇಂದು ವಿಧಿವಶ
ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡರು ಇಂದು ವಿಧಿವಶ

ತೋಟದ ಚಿಕ್ಕಪುಟ್ಟಣ್ಣ ಎಂದೇ ಹೆಸರುವಾಸಿಯಾಗಿದ್ದ ಗೋವಿಂದೇಗೌಡನದೊಡ್ಡಿ ಮತ್ತು ಚನ್ನಂಕೇಗೌಡನದೊಡ್ಡಿ ಗ್ರಾಮದ ನಿವಾಸಿ ಚಿಕ್ಕಪುಟ್ಟೇಗೌಡ ರು ಇಂದು ವಿಧಿವಶರಾದರು, ಮೃತರ ಅಂತ್ಯ ಕ್ರಿಯೆಯು ಸ್ವಗ್ರಾಮದಲ್ಲಿ ಇಂದು 11:00 ಗಂಟೆಗೆ ನಡೆಯಲಿದೆ ಎಂದ

ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ
ಸಾಹಿತಿ, ರೊಟೇರಿಯನ್ ಸಿ ಎಸ್ ಜಗದೀಶ್ ನಿಧನ

ಸ್ನೇಹ ಪುಸ್ತಕದ ಕತೃ, ರೋಟರಿ ಕ್ಲಬ್ ನ ರೊಟೇರಿಯನ್ ಆಗಿದ್ದ ಹಾಗೂ ಪನಸಾರಿ ಅಂಗಡಿ ಎಂದರೆ ಪೇಟೆ ಬೀದಿಯ ಜಗದೀಶ್ ಎಂದು ಹೇಳುವ ಮಟ್ಟಿಗೆ ತಾಲ್ಲೂಕಿನಾದ್ಯಂತ ಚಿರಪರಿಚಿತರಾಗಿದ್ದ ಸಿ ವಿ ಜಗದೀಶ್ (೭೨) ಇಂದು

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ
ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥರಾಗಿದ್ದು ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಮೊಗೇನಹಳ್ಳಿಯಲ್ಲಿ ಸಂಜೆ 04:00 ಗಂಟೆಗೆ ನೆರವೇರಲಿದೆ.

ಅಭಿಷೇಕ್ (೨೬) ಅಕಾಲಿಕ ಮರಣ
ಅಭಿಷೇಕ್ (೨೬) ಅಕಾಲಿಕ ಮರಣ

ಸಜ್ಜನ ರಾಜಕಾರಣಿ ಎಂದೇ ಹೆಸರಾದ ಚನ್ನಪಟ್ಟಣ ತಾಲ್ಲೂಕು ಪಂಚಾಯತ ಹಾಲಿ ಅಧ್ಯಕ್ಷರಾದ ಹರೂರು ರಾಜಣ್ಣರವರ ಪುತ್ರ ಅಭಿಷೇಕ್( ೨೬) ಅಕಾಲಿಕ ಮರಣ ಹೊಂದಿದ್ದು ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ವಗ್ರಾಮ ಹರೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

Top Stories »  


Top ↑