Tel: 7676775624 | Mail: info@yellowandred.in

Language: EN KAN

    Follow us :


ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

Posted Date: 22 Apr, 2020

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಚನ್ನಪಟ್ಟಣ:ಏ/೨೨/೨೦/ಬುಧವಾರ ನಗರದ ಸಾತನೂರು ರಸ್ತೆಯಲ್ಲಿರುವ ಕನಕನಗರ ನಾಲ್ಕನೇ ತಿರುವಿನಲ್ಲಿ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.


ಮನೆಯಲ್ಲೇ ನೇಣು ಬಿಗಿದುಕೊಂಡಿರುವ ಬಾಣಂತಿ ಹರ್ಷಿಣಿ (೩೫) ಎಂದು ಹೇಳಲಾಗಿದ್ದು ತಾಲ್ಲೂಕಿನ 

ಬೆಳಕೆರೆ ಗ್ರಾಮದ ಈಕೆಯನ್ನು ತಾಲ್ಲೂಕಿನ ತಗಚಗೆರೆ ರಸ್ತೆಯ ಟಿ.ತಿಮ್ಮಸಂದ್ರ (ಮೂಲ ಅರಳಾಳುಸಂದ್ರ ನಿವಾಸಿ)

ಗ್ರಾಮದ ಅರ್ಕೇಶ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

೦೮ ತಿಂಗಳ ಗಂಡು ಮಗು ಹೊಂದಿರುವ ಈಕೆ ಆತ್ಮಹತ್ಯೆಗೆ ಮುನ್ನ ತನ್ನ ತಾಯಿಗೆ ಕರೆ ಮಾಡಿ 

ಬರುವಂತೆ ತಿಳಿಸಿ ತಾಯಿ ಬರುವುದರೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣ 

ತಿಳಿದ ಬಂದಿಲ್ಲದಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ 

ಸುದರ್ಶನ್, ಪೊಲೀಸ್ ಉಪವಿಭಾಗಾಧಿಕಾರಿ ಓಂ ಪ್ರಕಾಶ್, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ 

ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮೃತದೇಹವನ್ನು ನೇಣಿನಿಂದ ಇಳಿಸಿರುವ ಗ್ರಾಮಾಂತರ ಪೊಲೀಸರು ಮೃತರ ಪತಿ, ಅತ್ತೆ, 

ಆಕೆಯ ತಾಯಿಯ ಹೇಳಿಕೆಗಳನ್ನು ಪಡೆದು ನಂತರ ಆಕೆಯ ಪತಿಯನ್ನು ವಶಕ್ಕೆ 

ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ
ವೈ ಟಿ ಹಳ್ಳಿ ಎಲ್ ಐ ಸಿ ಮರಿಯಪ್ಪ ನಿಧನ

ಚನ್ನಪಟ್ಟಣ:ಜೂನ್/೦೧/೨೦/ಸೋಮವಾರ. ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಎಲೆತೋಟದಹಳ್ಳಿ ಗ್ರಾಮದ ನಿವಾಸಿ ಲೇಟ್ ಎಂ ಶಿವಬಸಪ್ಪ ರವರ ಪುತ್ರ ಮರಿಯಪ

ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ
ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ

ಚನ್ನಪಟ್ಟಣ:ಮೇ/೦೯/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ನಿವೃತ್ತ ಶಿಕ್ಷಕ ವಿ ಭುಜಗಯ್ಯ (೯೧) ವಯೋಸಹಜ ಕಾಯಿಲೆಯಿಂದ ಬಳಲುತ್ತಿ

ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು
ನಿನ್ನೆ ಎಣ್ಣೆ ಕುಡಿದ ಮತ್ತಿನಲ್ಲಿ ಗಲಾಟೆ, ಇಂದು ನೇಣು ಬಿಗಿದು ಓರ್ವ ಸಾವು

ಚನ್ನಪಟ್ಟಣ:ಮೇ/೦೫/೨೦/ಮಂಗಳವಾರ. ನಗರದ ಆನಂದಪುರ ದ ಯುವಕನೋರ್ವ ಮದ್ಯ ಸೇವಿಸಿ ಬಂದಿದ್ದರಿಂದ ಮನೆಯಲ್ಲಿ ಗಲಾಟೆಯಾಗಿ ಇಂದು ಬೆಳಿಗ್ಗೆ ನೇಣು ಬಿಗಿ

ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ
ನಾಡೋಜ, ಸಮನ್ವಯ, ನಿತ್ಯೋತ್ಸವ ಬಿರುದಾಂಕಿತ ಕವಿ ನಿಸಾರ್ ಅಹಮದ್ ನಿಧನ

ಬೆಂಗಳೂರು:ಮೇ/೦೩/೨೦/ಭಾನುವಾರ. ಸಮನ್ವಯ ಕವಿ, ನಿತ್ಯೋತ್ಸವ ಕವಿ ಎಂಬ ಬಿರುದನ್ನು ಹೊಂದಿದ್ದ, ಶಿವಮೊಗ್ಗದಲ್ಲಿ ನಡೆದ ೭೩ ನೇ ಕನ್ನಡ ಸಾಹಿತ್ಯ ಸಮ

ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ
ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ, ಪೌಳಿದೊಡ್ಡಿ ಗ್ರಾಮದ ಸರ್ವೇ ನಂ ೨೦ ರ ಗೋಮಾಳದಲ್ಲಿ ಸುಟ್ಟು ಕರಕಲಾದ ಅಪರಿಚ

ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ
ಮೇರು ವ್ಯಕ್ತಿತ್ವದ, ಜಾನಪದ ವಿದ್ವಾಂಸ ಹೊಸಹಳ್ಳಿ ಡಾ ರಾಜೇಗೌಡ ನಿಧನ

ಬೆಂಗಳೂರು:ಏ/೨೯/೨೦/ಬುಧವಾರ. ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ, ಹಲವಾರು ಕೃತಿಗಳ ಕತೃ, ಕಥೆಸಾಹಿತ್ಯವನ

ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು
ರಸ್ತೆ ಅಪಘಾತ ಸಂಕಲಗೆರೆ ರಮೇಶ್ ಸಾವು

ಚನ್ನಪಟ್ಟಣ:ಏ/೨೭/೨೦/ಸೋಮವಾರ. ತಾಲ್ಲೂಕಿನ ಸಂಕಲಗೆರೆ ಗ್ರಾಮದ ರಮೇಶ್ ಹಾಗೂ ಅನುಕುಮಾರ್ ಎಂಬಿಬ್ಬರು ಸೈಕಲ್ ಮೋಟಾರ್‌ನಲ್ಲಿ ಬರುತ್ತಿದ್ದ ವೇಳೆ ಅವರಿಗ

ಜೀವನದಲ್ಲಿ ಜಿಗುಪ್ಸೆ, ಯುವಕ ನೇಣಿಗೆ ಶರಣು

ಚನ್ನಪಟ್ಟಣ:ಏ/೨೨/೨೦/ಬುಧವಾರ. ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತ ಯುವಕನೋರ್ವ ಮಾನಸಿಕವಾಗಿ ಮನನೊಂದು 

ನೇಣುಬಿಗಿದುಕೊಂ

ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಚನ್ನಪಟ್ಟಣ:ಏ/೨೨/೨೦/ಬುಧವಾರ ನಗರದ ಸಾತನೂರು ರಸ್ತೆಯಲ್ಲಿರುವ ಕನಕನಗರ ನಾಲ್ಕನೇ ತಿರುವಿನಲ್ಲಿ ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ
ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ

ರಾಮನಗರ:ಏ/೨೧/೨೦/ಮಂಗಳವಾರ. ಪಬ್ಲಿಕ್ ಟಿ ವಿ ಯ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿದ್ದ ಹನುಮಂತು ಜಿಲ್ಲಾ ಕಾರಾಗೃಹ ಬಳಿ ಇಂದು ವರದಿ ಮಾಡುತಿದ್ದ ವೇಳೆ ಅಪಘಾತ

Top Stories »  


Top ↑