Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ಮಟ್ಟದ ಜನಪದ ಉತ್ಸವ ಹಾಗೂ ಗೀತ ಗಾಯನ
ರಾಜ್ಯ ಮಟ್ಟದ ಜನಪದ ಉತ್ಸವ ಹಾಗೂ ಗೀತ ಗಾಯನ

ರಾಮನಗರ : ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಜನಪದ ಕಲೆ ಹಾಗೂ ಕಲಾವಿದರನ್ನು ಬೆಳಸಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ತ ಸಹಕಾರವನ್ನು ನೀಡಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಜನಪದ ಗಾಯಕ ಅಮ್ಮ ರಾಮಚಂದ್ರು ನುಡಿದರು. ಡಾ|| ಬಿ.ಆರ್.ಅಂಬೇಡ್ಕರ್ ಯುವ ಸಾಮಾಜಿಕ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಕರ್ಲಹಳ್ಳಿಯ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಉತ್ಸವ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ
ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ

ಕನಕಪುರ : ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಸಬಲೀಕರಣಗೊಂಡರೆ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ, ಎಂದು ಬೆಂಗಳೂರಿನ ವಿಜಯಾ ಕಾಲೇಜು ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.  ಕನಕಪುರದ ಸರÀಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಏಳುದಿನಗಳ ರಾಷ್ಟ್ರೀಯ ಸೇವಾಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಮಹಿಳೆಯರಿಗೆ ಸ್ಥಳೀಯ ಸಂಸ್ಥೆ ಮೊದಲಾಗಿ ಎಲ್ಲಾ ಅಗತ್ಯ ಕ್ಷೇತ್ರಗಳಲ

ವೆಂಕಟೇಶ್ ಅವರಿಗೆ ಡಾಕ್ಟರೇಟ್ ಪದವಿ

ಕನಕಪುರ : ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವೆಂಕಟೇಶ್‍ರವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.  ಡಾ.ವೆಂಕಟೇಶ್ ಅವರು ಪ್ರಾಧ್ಯಾಪಕಿ ಡಾ.ಸಿದ್ದಗಂಗಮ್ಮರವರ ಮಾರ್ಗದರ್ಶನದಲ್ಲಿ ಪ್ರೌಢ ಪ್ರಬಂಧ ಸಲ್ಲಿಸಿದ್ದರು.  ಡಾ.ವೆಂಕಟೇಶ್ ಅವರನ್ನು ಪ್ರಾಂಶುಪಾಲ ಪ್ರೊ.ವೃಷಭೇಂದ್ರಮೂತಿ, ವಿಭಾಗದ ಮುಖ್ಯಸ್ಥೆ ಪ್ರೊ.ರತ್ನಮ್ಮ, ಕುಮಾರ್ ಸೇರಿದಂತೆ ಉಪನ್ಯಾಸಕರುಗಳು ಅಭಿನಂದಿಸಿದ್ದಾರೆ.

ಯಶಸ್ವಿಯಾಗಿ ರಕ್ತದಾನ ಶಿಬಿರ
ಯಶಸ್ವಿಯಾಗಿ ರಕ್ತದಾನ ಶಿಬಿರ

 ಈ ದಿನ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ರಾಮನಗರ ಜಿಲ್ಲಾ ಜೈನ್ ಸಂಘ ದವರ ಸಂಯುಕ್ತ ಆಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ರಕ್ತದಾನ ಶಿಬಿರ ನೆರೆವೇರಿಸಲಾಯಿತು

ಇವಿಎಂ, ವಿವಿಪ್ಯಾಟ್ ಕುರಿತು ತರಬೇತಿ
ಇವಿಎಂ, ವಿವಿಪ್ಯಾಟ್ ಕುರಿತು ತರಬೇತಿ

ರಾಮನಗರ : ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು ನಿರ್ಭಯ,  ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಜ್ಜಾಗುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಅವರು ಕರೆ ನೀಡಿದರು.  ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಇವಿಎಂ-ವಿವಿಪ್ಯಾಟ್ ಮತಯಂತ್ರಗಳನ್ನು ಉಪಯೋಗಿಸುವ ಕುರಿತು ಹಾಗೂ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ವೇಳಾಪಟ್ಟಿ ಪ್ರಕಟ: ನೀತಿ ಸಂಹಿತೆ ತಕ್ಷಣದಿಂದ ಜಾರಿ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ವೇಳಾಪಟ್ಟಿ ಪ್ರಕಟ: ನೀತಿ ಸಂಹಿತೆ ತಕ್ಷಣದಿಂದ ಜಾರಿ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ

ರಾಮನಗರ : ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು, ತಕ್ಷಣದಿಂದಲೇ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಅವರು ತಿಳಿಸಿದರು.  ಅವರು ಮಾ.27ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ಚುನಾವಣೆಗೆ ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಏ

ರಾಮನಗರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷರಾಗಿ ಪಟೇಲ್ ಸಿ ರಾಜು
ರಾಮನಗರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷರಾಗಿ ಪಟೇಲ್ ಸಿ ರಾಜು

ರಾಮನಗರ : ಕಳೆದ 27 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಟೇಲ್ ಸಿ ರಾಜು ಅವರು ರಾಮನಗರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.      ಶೈಕ್ಷಣಿಕ ಕ್ಷೇತ್ರದ ಜೊತೆಗೆ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ, ಭಾರತ ವಿಕಾಸ ಪರಿಷದ್ ಕಾರ್ಯದರ್ಶಿಯಾಗಿ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರಾಗಿ, ಆರೋಗ್ಯ ಭಾರತಿಯ

ಮರಳಿ ಸರ್ಕಾರಿ ಶಾಲೆಗೆ ದಾಖಲು: ಉತ್ತಮ ಬೆಳವಣಿಗೆ-ನಿರಂಜನಾರಾಧ್ಯ

ರಾಮನಗರ : ಜಿಲ್ಲೆಯಲ್ಲಿ ಕಳೆದ ವರ್ಷ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಸುಮಾರು 1500 ಮಕ್ಕಳು ಮರಳಿ ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ ಎಂದು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮುಖ್ಯಸ್ಥರಾದ ಡಾ.ವಿ.ಪಿ. ನಿರಂಜನಾರಾಧ್ಯ ತಿಳಿಸಿದರು. ನಗರದ ಸ್ಕೌಟ್ ಭವನದಲ್ಲಿ, ಬೆಂಗಳೂರಿನ ನ್ಯಾಷನಲ್ ಲಾಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ವತಿಯಿಂದ ಉಚಿತ ಮತ್ತು ಕಡ್ಡಾಯ ಎಲಿಮೆಂಟರಿ ಶಿಕ್ಷಣ

ಕ್ಷಯರೋಗಕ್ಕೆ ಪ್ರತಿದಿನ 6 ಸಾವಿರ ಮಂದಿ ತುತ್ತು: ಡಾ. ಅರುಣ್ ಕುಮಾರ್ 

ರಾಮನಗರ : ಸಾಂಕ್ರಾಂಮಿಕ ರೋಗಗಳ ರಾಜನೆಂದೇ ಕರೆಯಬಹುದಾದ ಕ್ಷಯರೋಗಕ್ಕೆ ಪ್ರತಿ ದಿನ 6000 ಮಂದಿ ತುತ್ತಾಗುತ್ತಿದ್ದಾರೆ, ಪ್ರತಿ ಐದು ನಿಮಿಷಕ್ಕೆ ಇಬ್ಬರು ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಟಿ. ಅರುಣ್ ಕುಮಾರ್ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅರ್ಕಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಘಟಕ ಹಾಗೂ ವಿವಿಧ

ಸಂವೇದನಾ ಶೀಲ ಪ್ರಗತಿಪರ ಪತ್ರಕರ್ತರಾಗಿದ್ದ ಸಿ.ಎಲ್. ನಾಗಾರ್ಜುನ್
ಸಂವೇದನಾ ಶೀಲ ಪ್ರಗತಿಪರ ಪತ್ರಕರ್ತರಾಗಿದ್ದ ಸಿ.ಎಲ್. ನಾಗಾರ್ಜುನ್

ರಾಮನಗರದ ಪತ್ರಿಕಾ ರಂಗಕ್ಕೆ ವಿಶೇಷವಾದ ಇತಿಹಾಸವಿದೆ. ಪತ್ರಿಕಾ ಕ್ಷೇತ್ರದ ಭೀಷ್ಮ-ದ್ರೋಣರೆನಿಸಿಕೊಂಡ ಮಹನೀಯರು ರಾಮನಗರದ ಪತ್ರಿಕಾ ಇತಿಹಾಸವನ್ನು ಶ್ರೇಷ್ಠವೆನಿಸಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗೆ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಪತ್ರಕರ್ತರಾಗಿ ಸೇವೆ ಸಲ್ಲಿಸಲು ತಮ್ಮನ್ನೆ ಸಮರ್ಪಿಸಿಕೊಂಡವರಲ್ಲಿ ಸಿ.ಎಲ್. ನಾಗಾರ್ಜುನ್ ಅವರು ಕೂಡ ಒಬ್ಬರಾಗಿದ್ದರು. ಸಿ.ಎಸ್. ಲಕ್ಷ್ಮಣಯ್ಯ ಹಾಗೂ ಶಾರದಮ್ಮ ದಂಪತಿಗಳ ಮಗನಾಗಿ 24.5.1956ರಲ್ಲಿ ಜನಿಸಿದ ನಾಗಾರ್ಜುನ ಅವರು

Top Stories »  Top ↑