Tel: 7676775624 | Mail: info@yellowandred.in

Language: EN KAN

    Follow us :

ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

Posted Date: 07 Aug, 2019

ಹಾಡಹಗಲೇ ಸಾರ್ವಜನಿಕರ ಎದುರು ಯುವಕನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು

ಮಂಡ್ಯ/ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಇಂದು ಬೆಳಿಗ್ಗೆ ೧೦:೪೦ ರ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಅಂಗಡಿಯೊಳಗೆ ನುಗ್ಗಿ ಯುವಕನೋರ್ವನನ್ನು ನೂರಾರು ಸಾರ್ವಜನಿಕರ ಎದುರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ, ಕೊಲೆಯಾದ ವ್ಯಕ್ತಿ ಕನಕಪುರ ತಾಲ್ಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಚಿಕ್ಕಮಾದಯ್ಯನ ಪುತ್ರ ರಾಮು (೩೦) ಎಂದು ಗುರುತಿಸಲಾಗಿದ್ದು, ಈತ ಕಳೆದ ಹದಿಮೂರು ವರ್ಷಗಳಿಂದ ಬಿ ಕೆ ಪ್ರಾವಿಷನ್ ಸ್ಟೋರ್ ನಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತಿದ್ದುದಾಗಿ ತಿಳಿದುಬಂದಿದೆ.

ನಾಲ್ಕೈದು ದಿನಗಳ ಹಿಂದೆ ವೈನ್ ಶಾಪ್ ಬಳಿ‌ ಹಣಕಾಸು ವಹಿವಾಟಿನ ಬಗ್ಗೆ ಸಣ್ಣ ಗಲಾಟೆ ನಡೆದಿದ್ದು ಆ ಗಲಾಟೆ ನಡೆಸಿದ ವ್ಯಕ್ತಿಯೇ ಇಂದು ನಾಲ್ಕೈದು ಮಂದಿ ಮುಸುಕುಧಾರಿಗಳೊಂದಿಗೆ ಆಗಮಿಸಿ ಮಚ್ಚು ಲಾಂಗುಗಳಂತಹ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಇರಿದು ಕೊಂದಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.

ಪ್ರಮುಖ ಆರೋಪಿ ಈ ಹಿಂದೆಯೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಳಿವು ದೊರೆತಿದ್ದು, ಪಲಾಯನಗೈದಿರುವ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಡಿವೈಎಸ್ಪಿ ಶೈಲೇಂದ್ರ ರವರು ತಿಳಿಸಿದ್ದಾರೆ.

ವೃತ್ತ ನಿರೀಕ್ಷಕ ಮಂಜುನಾಥ, ಸಬ್ ಇನ್ಸ್‌ಪೆಕ್ಟರ್ ಶಿವರುದ್ರ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಬಂದೋಬಸ್ತ್ ನಿಯೋಜನೆಗೊಳಿಸಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಹಾಡಹಗಲಿನ ಜನಜಂಗುಳಿಯ ನಡುವೆ ನಡೆದ ಈ‌ ಮಾರಣ ಹೋಮ ಸಾರ್ವಜನಿಕರಲ್ಲಿ ಆತಂಕ‌ಮೂಡಿಸಿದ್ದು ಪೋಲಿಸ್ ಇಲಾಖೆಯ ಅಧಿಕಾರಿಗಳು ಇಂತಹ ದುಷ್ಕರ್ಮಿಗಳನ್ಮು ಮಟ್ಟಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಉಜ್ವಲ ಯೋಜನೆಯ ಗ್ರಾಹಕರಿಗೆ ೩ ತಿಂಗಳ ಉಚಿತ ಎಲ್‌ಪಿಜಿ
ಉಜ್ವಲ ಯೋಜನೆಯ ಗ್ರಾಹಕರಿಗೆ ೩ ತಿಂಗಳ ಉಚಿತ ಎಲ್‌ಪಿಜಿ

ರಾಮನಗರ ಏ. ೦೧ (ಕರ್ನಾಟಕ ವಾರ್ತೆ):- ಕೊರೋನಾ ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಉಜ್ವಲ ಯೋಜನೆಯಡಿ ರಾಮನಗರ

ಕರೋನಾ ಬಾಧೆ, ಬೈಕ್ ಮತ್ತು ಕಾರುಗಳ ನಿಷೇಧಕ್ಕೆ ಚಿಂತನೆ
ಕರೋನಾ ಬಾಧೆ, ಬೈಕ್ ಮತ್ತು ಕಾರುಗಳ ನಿಷೇಧಕ್ಕೆ ಚಿಂತನೆ

ಬೆಂಗಳೂರು:ಏ/೦೧/೨೦/ಬುಧವಾರ. ರಾಜ್ಯದಲ್ಲಿ ಕರೋನಾ ವೈರಸ್ (ಕೊವಿಡ್-೧೯) ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಏಪ್ರ

ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೪೨ ಲೀಟರ್ ಮದ್ಯ ವಶ ದೂರು ದಾಖಲು
ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೪೨ ಲೀಟರ್ ಮದ್ಯ ವಶ ದೂರು ದಾಖಲು

ಚನ್ನಪಟ್ಟಣ:ಏ/೦೧/ಬುಧವಾರ. ತಾಲ್ಲೂಕಿನ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಕ್ಕೂರು ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿ

ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?
ಪುಟ್ ಪಾತ್ ತೆರವು ಓಕೆ, ತೆರೆದ ಮಾಂಸದಂಗಡಿ ಯಾಕೆ ?

ಚನ್ನಪಟ್ಟಣ:ಏ/೦೧/೨೦/ಬುಧವಾರ. ನಗರದ ಎಪಿಎಂಸಿ ಮಾರುಕಟ್ಟೆ,  ಎಂ ಜಿ ರಸ್ತೆ, ಡಿ ಟಿ ರಾಮು ಸರ್ಕಲ್ ಮತ್ತಿತರ ರಸ್ತೆಯ ಇಕ್ಕೆಲಗಳಲ್ಲಿ ತರಕಾ

ಪ್ರತಿ ಮನೆಗೆ ಎರಡು ಮಾಸ್ಕ್, ಗ್ರಾಮ ಪಂಚಾಯತಿಗೆ ಸ್ಯಾನಿಟೈಸರ್ ನೀಡುತ್ತೇವೆ ಡಿ ಕೆ ಸುರೇಶ್
ಪ್ರತಿ ಮನೆಗೆ ಎರಡು ಮಾಸ್ಕ್, ಗ್ರಾಮ ಪಂಚಾಯತಿಗೆ ಸ್ಯಾನಿಟೈಸರ್ ನೀಡುತ್ತೇವೆ ಡಿ ಕೆ ಸುರೇಶ್

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ತಾಲ್ಲೂಕಿನಾದ್ಯಂತ ಇರುವ ಪ್ರತಿ ಗ್ರಾಮದ ಪ್ರತಿ ಮನೆಗಳಿಗೂ ತಲಾ ಎರಡು ಮುಖಗವಸು (ಮಾಸ್ಕ್) ಗಳನ್ನು ಹಾಗೂ ಪ್ರತ

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಿ ಕೆ ಸುರೇಶ್, ವೆಂಟಿಲೇಟರ್ ಕೊಡಿಸುವುದಾಗಿ ಭರವಸೆ
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ ಡಿ ಕೆ ಸುರೇಶ್, ವೆಂಟಿಲೇಟರ್ ಕೊಡಿಸುವುದಾಗಿ ಭರವಸೆ

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ಆಸ್ಪತ್ರೆಗೆ ಎರಡು ವೆಂಟಿಲೇಟರ್, ಒಂದು ಲಕ್ಷ ಮಖಗವಸು (ಮಾಸ್ಕ್), ಮತ್ತು ಸ್ಯಾನಿಟೈಸರ್ ಗಳನ್ನು ಶೀಘ್ರವಾಗಿ ಒ

ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್
ದವಸ ಧಾನ್ಯ ಸಂಗ್ರಹಿಸಲು ಎಲೆಕೇರಿ ಮೊರಾರ್ಜಿ ವಸತಿ ಶಾಲೆಯನ್ನು ಗೋದಾಮಾಗಿ ಪರಿವರ್ತಿಸಿದ ತಹಶಿಲ್ದಾರ್

ನಗರದ ಎಲೆಕೇರಿ ಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತಾಲ್ಲೂಕು ಆಡಳಿತವೂ ವಶಕ್ಕೆ ಪಡೆದಿದ್ದು, ಕೊರೊನಾ ವೈರಸ್ ನಿಂದ ಊಟಕ್ಕಾಗಿ ಪರದಾಡುತ್ತಿರುವ ಕೂಲಿ ಕಾರ್ಮಿಕರಿಗೆ ನೀಡಲು ದಾನಿಗಳು ಉದಾರವಾ

ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ
ನೂರು ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾದ ಹೊನ್ನನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ

ಚನ್ನಪಟ್ಟಣ:ಮಾ/೩೧/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ವೈರಸ್ ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಗಡಿಭಾಗದ ಹೊನ್ನನಾಯಕನಹಳ್ಳಿ ಹೊರ ಭಾಗದಲ್ಲಿ

ಅಗ್ನಿಶಾಮಕ ದಳದ ಜೊತೆಗೂಡಿ ಔಷಧ ಸಿಂಪಡಿಸುತ್ತಿರುವ ನಗರಸಭೆ
ಅಗ್ನಿಶಾಮಕ ದಳದ ಜೊತೆಗೂಡಿ ಔಷಧ ಸಿಂಪಡಿಸುತ್ತಿರುವ ನಗರಸಭೆ

ಚನ್ನಪಟ್ಟಣ:ಮಾ/೩೦/೨೦/ಸೋಮವಾರ. ಕರೋನಾ (ಕೋವಿಡ್-೧೯) ವೈರಸ್ ನಿಂದ ಮುಂದಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಲು ನಗರಸಭೆಯು ಔಷಧ ಸಿಂಪಡಣೆ ಮಾಡಲು

ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು
ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು

ಚನ್ನಪಟ್ಟಣ:ಮಾ/೨೯/೨೦/ಭಾನುವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಕಣ್ವ ರಸ್ತೆಯಲ್ಲಿರುವ ಖಾಸಗಿಯವರ ತೆಂಗಿನ ತೋಟವೊಂದರಲ್ಲಿ ಜೂಜು ಆಡುತ್ತಿದ್

Top Stories »  

Top ↑