Tel: 7676775624 | Mail: info@yellowandred.in

Language: EN KAN

    Follow us :


ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?

Posted Date: 14 Aug, 2019

ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?

ಚನ್ನಪಟ್ಟಣ: ತಾಲ್ಲೂಕಿನ ಸಂಪದ್ಭರಿತ ಮರಳು ಲೂಟಿ ಕೇಂದ್ರ ಎನಿಸಿಕೊಂಡಿರುವ ವಿರುಪಾಕ್ಷಿಪುರ ಹೋಬಳಿಯ ನಾಡ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೆ ಎರಡು ಹುದ್ದೆಗಳನ್ನು ನಿಭಾಯಿಸಿತ್ತಿರುವ ವರ್ಗಾವಣೆಗೊಂಡು ತಿಂಗಳಾದರೂ ಕುರ್ಚಿಗೆ ಅಂಟಿಕೊಂಡಿರುವ ರಾಜಸ್ವ ನಿರೀಕ್ಷಕ ಕಂ ಉಪ ತಹಶಿಲ್ದಾರ *ಕೆ ಓ ನಟರಾಜು (ಮಧು) ಎಂಬುವವರ ಮೇಲೆ ಹೋಬಳಿಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರಿಗೆ ೧೩/೦೮/೧೯ ರಂದು ಲಿಖಿತ ದೂರು ಸಲ್ಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.


ಕಳೆದ ಹತ್ತು ವರ್ಷಗಳಿಂದ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿರುವ ನಟರಾಜು ವಿರುಪಾಕ್ಷಿಪುರ ಹೋಬಳಿಯ ಹೆಸರಿನಲ್ಲಿ ನಾಮಕವಾಸ್ಥೆಗಷ್ಟೇ ಕೆಲಸ ನಿರ್ವಹಿಸುತ್ತಿದ್ದು ಅವರ ಕೆಲಸದ ಅಡ್ಢೆ ಸಂಪೂರ್ಣ ನಗರದ ಖಾಸಗಿ ಹೋಟೆಲ್‌ಗಳಲ್ಲಿ ಮಧ್ಯವರ್ತಿಗಳ ಮೂಲಕ ನಡೆಯುತ್ತಿದೆ, ಹಾಗೂ ಇಂತಿಂತಹ ಕೆಲಸಕ್ಕೆ ಇಷ್ಟು ದುಡ್ಡು ಎಂದು ನಿಗದಿ ಮಾಡಿ ಮಧ್ಯವರ್ತಿಗಳ ಮೂಲಕ ಪಡೆದುಕೊಳ್ಳುತ್ತಿದ್ದಾರೆ, ರೈತರು ಯಾವ ಕೆಲಸಕ್ಕೆ ಕರೆ ಮಾಡಿದರೂ ಚನ್ನಪಟ್ಟಣಕ್ಕೆ ಬರಲು ಹೇಳುತ್ತಾರೆಂದು ದೂರಿದ್ದಾರೆ.


ವಿರುಪಾಕ್ಷಿಪುರ ಹೋಬಳಿಯು ಎರಡು ಜಿಲ್ಲಾ ಪಂಚಾಯತಿ ಕೇಂದ್ರಗಳನ್ನು ಹೊಂದಿದ್ದು ವಿದ್ಯಾರ್ಥಿಗಳು, ರೈತರು, ವೃದ್ದರು, ವಿಕಲಚೇತನರು ಮತ್ತು ಇನ್ನಿತರ ವರ್ಗದ ಸಾರ್ವಜನಿಕರು ನಾಡಕಛೇರಿಗೆ ಅಲೆದು ಸಾಕಾಗಿ ನಂತರ ಅವರಿರುವ ಸ್ಥಳಕ್ಕೆ ಹೋಗಿ ಲಂಚ ನೀಡಿ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಬೇಕಾಗಿದೆ.


೨೦೧೮ ರಲ್ಲಿ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ರವರು ಕೋಡಂಬಳ್ಳಿಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆ ಮತ್ತು ಚನ್ನಪಟ್ಟಣದ ಶಾಸಕ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರು ಇದೇ ಕೋಡಂಬಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜನಾತ ದರ್ಶನದಲ್ಲಿ ಲಿಖಿತ ದೂರು ನೀಡಲಾಗಿದ್ದು ಗಮನಿಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ದೂರು ನೀಡಿದ್ದಾರೆ.


ಈ ದೂರಿನ ಬಗ್ಗೆ ನೂತನ ದಂಡಾಧಿಕಾರಿ ಸುದರ್ಶನ್ ರವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ಇದು ಜಿಲ್ಲಾಧಿಕಾರಿಗಳ ಸುಪರ್ದಿಗೆ ಬರುತ್ತದೆ, ಅವರಿಗೆ ಇದರ ಮಾಹಿತಿಯೂ ಇದೆ, ಇಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ ಹಾಗೂ ಆ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆ ಆಗುವವರೆಗೂ ಅವರು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.


ಇದರ ಬಗ್ಗೆ ಮಾಹಿತಿ ಕೇಳಲು ಅಧಿಕಾರಿ ನಟರಾಜ್ ಮಧು ರವರ ಮೊಬೈಲ್ ಗೆ ಎರಡುಮೂರು ಬಾರಿ ಕರೆ ಮಾಡಿದರೂ ಸಹ ಕರೆ ಸ್ವೀಕರಿಸಲಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು
ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಮತಾಂತರಕ್ಕೆ ಪ್ರಚೋದನೆ ಮಿಷನರಿಗಳ ವಿರುದ್ಧ ಪ್ರಕರಣ ದಾಖಲು

ರಾಮನಗರ:ಡಿ/೧೪/೨೦೧೯/ಶನಿವಾರ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಅಣ್ಣಹಳ್ಳಿ ಗ್ರಾಮದಲ್ಲಿರುವ ಕೆಂಗಲ್ ಹನುಮಂತಯ್ಯ ಸರ್ಕಾರಿ ಪ್ರೌಢಶಾಲಾ ಆವರ

ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ
ತಾಲ್ಲೂಕಿನ ಇಬ್ಬರು ಸಂಘಟಕ ಕಲಾವಿದರಿಗೆ ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ ಲಭಿಸಿದೆ

ಚನ್ನಪಟ್ಟಣ: ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದ ನವ್ಯ ಸಂಗಮ ಸಾಮಾಜಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ರಿ ಸಂಸ್ಥಾಪಕ ಕಾರ್ಯದರ್ಶಿ ಜಯಸಿಂಹ

ತಹಶಿಲ್ದಾರ್ ಭರವಸೆ, ಸತ್ಯಾಗ್ರಹ ಹಿಂಪಡೆದ ರಮೇಶ್ ಕುಟುಂಬ
ತಹಶಿಲ್ದಾರ್ ಭರವಸೆ, ಸತ್ಯಾಗ್ರಹ ಹಿಂಪಡೆದ ರಮೇಶ್ ಕುಟುಂಬ

ಚನ್ನಪಟ್ಟಣ:ಡಿ/೧೪/೨೦೧೯/ಶನಿವಾರ. ಕಳೆದ ಎರಡು ದಿನಗಳಿಂದ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಅನ್ಯಾಯದ ವಿರುದ್ಧ ಆಹೋರಾತ್ರಿ ಧ

ಮುಂದುವರೆದ ಆಹೋರಾತ್ರಿ ಧರಣಿ ಸತ್ಯಾಗ್ರಹ, ಸ್ಪಂದಿಸದ ಅಧಿಕಾರಿ ವರ್ಗ, ಪಿಡಿಓ ಪಿತೂರಿ ಆರೋಪ
ಮುಂದುವರೆದ ಆಹೋರಾತ್ರಿ ಧರಣಿ ಸತ್ಯಾಗ್ರಹ, ಸ್ಪಂದಿಸದ ಅಧಿಕಾರಿ ವರ್ಗ, ಪಿಡಿಓ ಪಿತೂರಿ ಆರೋಪ

ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಗೆ ಸೇರಿದ ಮೈಲನಾಯಕನಹಳ್ಳಿ ಹೊಸಹಳ್ಳಿ ಗ್ರಾಮದ ರಮೇಶ್ ಎಂಬುವವರು

ವಿಭಿನ್ನ ನ್ಯಾಯಗಳು ಮತ್ತು ಅವ್ಯವಹಾರ ಖಂಡಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ
ವಿಭಿನ್ನ ನ್ಯಾಯಗಳು ಮತ್ತು ಅವ್ಯವಹಾರ ಖಂಡಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

ಚನ್ನಪಟ್ಟಣ: ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಯಲ್ಲಿ ಉಳ್ಳವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ ನೀಡುತ್ತಿರುವುದಲ್ಲದೆ ಅವ್ಯವಹಾರ

ಜಾಲತಾಣದಲ್ಲಿ ಮಹಿಳಾ ಮತ್ತು ಜನಾಂಗೀಯ ವಿರುದ್ದ ಬರಹ, ಭೂಹಳ್ಳಿ ಪುಟ್ಟಸ್ವಾಮಿ ಹುಡುಕುತ್ತಿರುವ ಪೋಲಿಸರು.
ಜಾಲತಾಣದಲ್ಲಿ ಮಹಿಳಾ ಮತ್ತು ಜನಾಂಗೀಯ ವಿರುದ್ದ ಬರಹ, ಭೂಹಳ್ಳಿ ಪುಟ್ಟಸ್ವಾಮಿ ಹುಡುಕುತ್ತಿರುವ ಪೋಲಿಸರು.

ಚನ್ನಪಟ್ಟಣ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಮುಖಪುಸ್ತಕ (Facebook) ದಲ್ಲಿ ನಾಲ್ಕೈದು ವರ್ಷಗಳಿಂದ ಹಿಂದೂ ಮಹಿಳೆಯರು, ಹಿಂದುಪರ ಸಂಘಟನೆಗಳು, ಮುಖ್ಯವಾಗಿ

ಹತ್ತನೇ ರಾಜ್ಯಮಟ್ಟದ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಲು ಕರೆ
ಹತ್ತನೇ ರಾಜ್ಯಮಟ್ಟದ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಲು ಕರೆ

ಚನ್ನಪಟ್ಟಣ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಡಿ.೨೮

ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ
ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರೈತ ಮೂರ್ತಿ ಎಂಬುವವರು ತಾನು ಬೆಳೆದ ರೇಷ್ಮೆ ಗೂಡನ್ನು ಚಂದ್ರಿಕೆಯಿಂದ ಬಿಡಿಸಿ ಮಾರುಕಟ್ಟೆಗ

ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಆರೋಪಿ ಸೆರೆ
ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಆರೋಪಿ ಸೆರೆ

ಚನ್ನಪಟ್ಟಣ: ಚನ್ನಪಟ್ಟಣ ಪ್ರಾದೇಶಿಕ ಅರಣ್ಯ ವಲಯದ ಚಿಕ್ಕಮಣ್ಣುಗುಡ್ಡೆ ಮೀಸಲು ಅರಣ್ಯದ ಕೆಂಪಿಕಟ್ಟೆ  ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್

ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್
ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್

ರಾಮನಗರ: ಮುಖಪುಸ್ತಕ (Facebook) ದಲ್ಲಿ ಸಂತ್ರಸ್ತೆ ಪಶುವೈದ್ಯೆ ಡಾ ಪ್ರಿಯಾಂಕರೆಡ್ಡಿ ವಿರುದ್ದ ಜನಾಂಗೀಯ ದ್ವೇಷ ಹಾಗೂ ಕೆಟ್ಟ ಭ

Top Stories »  


Top ↑