Tel: 7676775624 | Mail: info@yellowandred.in

Language: EN KAN

    Follow us :


ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ

Posted Date: 17 Aug, 2019

ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ

ಚನ್ನಪಟ್ಟಣ: ಕಾಟಾಚಾರದ ಸವಾರರು

ಚನ್ನಪಟ್ಟಣ ತಾಲೂಕಿನಾದ್ಯಂತ ಬಹುತೇಕ ದ್ವಿಚಕ್ರ 

ಸವಾರರ ತಲೆ ಮೇಲೆ ಬಣ್ಣಬಣ್ಣದ ತರಹೇವಾರಿ ಶಿರಸ್ತ್ರಾಣಗಳು (ಹೆಲ್ಮೆಟ್) ರಾರಾಜಿಸುತ್ತಿವೆ.

ಮನೆಯ ಮೂಲೆಯಲ್ಲಿ, ಅಟ್ಟದ ಮೇಲಿದ್ದ, ತಾತ್ಕಾಲಿಕವಾಗಿ ಇರಲೆಂದು ಹೊಸದಾಗಿ ಖರೀದಿಸಿದ ಹೆಲ್ಮೆಟ್ ಗಳೆಲ್ಲವೂ ತಲೆಯ ಮೇಲೆ ವಿರಾಜಮಾನಗೊಂಡಿವೆ, ನಮ್ಮ ಪ್ರಾಣ ಉಳಿಸಲೋಸುಗ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆಂಬುದನ್ನು ಮರೆತು ಪೋಲಿಸರನ್ನು ಬೈದುಕೊಂಡು ಹೀಯಾಳಿಸಿಕೊಂಡು ಒಳ್ಳೆಯದೋ, ಕೆಟ್ಟದ್ದೋ ದಂಡ ಕಟ್ಟದಂತಿರಲಿ ಎಂಬುದಷ್ಟೇ ಅವನ ತಲೆಯಲ್ಲಿ ಹೊಕ್ಕಿರುವುದು ಚಾಲಕನ ಕುಟುಂಬದ ದುರಾದೃಷ್ಟ ಎನ್ನಬಹುದು.*ಎರಡೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ*


ಮೊದಲ ದಿನ ಅಂದರೆ ಆಗಸ್ಟ್ ೧೫ ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಚಾರಿ ಪೋಲೀಸರೇ ೬೦೫ ದ್ವಿಚಕ್ರ ವಾಹನಗಳ ಸವಾರರಿಗೆ ತಲಾ ೧೦೦ ರೂಪಾಯಿ ದಂಡ ವಿಧಿಸಿದರೆ, ಇನ್ನಿತರ ಠಾಣೆಯ ಪೋಲಿಸರು ೨೫೦ ಸವಾರರಿಗೆ ದಂಡ ವಿಧಿಸಿದ್ದು ಇಂದೂ ಸಹ (೧೬/೦೮) ಅನೇಕ ಸವಾರರಿಗೆ ದಂಡ ವಿಧಿಸಲಾಗಿದ್ದು ೧,೫೦,೦೦೦ ದಂಡ ಸಂಗ್ರಹ ವಾಗಿರಬಹುದು ಎಂದು ಸಂಚಾರಿ ಪೋಲಿಸ್ ಠಾಣೆಯ ಪಿ ಎಸ್ ಐ ಶಿವಕುಮಾರ್ ತಿಳಿಸಿದ್ದಾರೆ.


*ಅರಿವು ಮೂಡಿಸಲು ಪೋಲಿಸರ ಜಾಥಾ*


ನಗರದಾದ್ಯಂತ ಎರಡು ಪೋಲಿಸ್ ಜೀಪುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿದ ಸಿಬ್ಬಂದಿಗಳು ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕೇವಲ ಕಾನೂನು ಮತ್ತು ಪೋಲಿಸರಿಗೆ ಹೆದರಿ ಹೆಲ್ಮೆಟ್ ಧರಿಸುವುದು ಬೇಡ, ತಮ್ಮ ಅತ್ಯಮೂಲ್ಯ ಪ್ರಾಣ ರಕ್ಷಣೆ ಹಾಗೂ ತಮ್ಮ ಕುಟುಂಬದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕೆಂದು ತಿಳಿಸಿದರು.


*ಐಎಸ್ಐ ಇಲ್ಲದ ಹೆಲ್ಮೆಟ್ ದಂಧೆ*


ಪೋಲಿಸರು ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಅನೇಕ ಹೆಲ್ಮೆಟ್ ವ್ಯಾಪಾರಿಗಳು *ಐಎಸ್ಐ* ಮುದ್ರೆ ಇಲ್ಲದ ಕನಿಷ್ಠ ಗುಣಮಟ್ಟದ ಕೇವಲ ೧೫೦ ರೂಪಾಯಿಗಳ ಹೆಲ್ಮೆಟ್ ಗಳನ್ನು ಮಾರುವ ಮೂಲಕ ಸವಾರರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ಪೋಲಿಸರ ಎದುರೇ ನಡೆಯುತ್ತಿದ್ದರೂ ಸಹ ಪೋಲಿಸರು ಅವರ ವಿರುದ್ಧ ಕ್ರಮ ಕೈಗೊಳ್ಳದೇ ಗ್ರಾಹಕರ ವಿರುದ್ಧ ಮಾತ್ರ ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಸಾರ್ವಜನಿಕರು.


*ಕಳಪೆ ಹೆಲ್ಮೆಟ್ ನಿಂದ ತಲೆಗೆ ಪೆಟ್ಟು ಮಾಡಿಕೊಂಡ ಶಿಕ್ಷಕಿ*


ಇಂದು (೧೬/೦೮) ಬೆಳಿಗ್ಗೆ ತನ್ನ ಮಗಳ ಜೊತೆ ಶಾಲೆಗೆ ಹೊರಟಿದ್ದ ಹಾರಿಜ್ಹಾನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾರಾಜ್ ರವರು ಸಾತನೂರು ವೃತ್ತ ದ ಬಳಿ ಬರುತ್ತಿದ್ದಂತೆ ಆಕಸ್ಮಿಕ ಅಪಘಾತವಾಗಿದ್ದು ಆಕೆಯ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾರೆ, ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಚೇತರಿಕೆ ತುಸು ಕಷ್ಟವಾಗಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ.

*ಅಪಘಾತ ಸಂದರ್ಭದಲ್ಲಿ ಅವರು ಕಳಪೆಯ ಅರ್ಧ ಭಾಗವಿರುವ ಹೆಲ್ಮೆಟ್ ಧರಿಸಿದ್ದರು, ಐಎಸ್ಐ ಮುದ್ರೆ ಇರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಪೆಟ್ಟು ಬೀಳುತ್ತಿರಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು*


*ವ್ಹೀಲಿಂಗ್ ಕ್ರಮಕೈಗೊಳ್ಳಿ*


ದ್ವಿಚಕ್ರ ವಾಹನ ಸವಾರರಿಗೆ ಕೇವಲ ಹೆಲ್ಮೆಟ್ ಒಂದೇ ಅಲ್ಲದೆ ಹಲವಾರು ವಿದ್ಯಾರ್ಥಿಗಳು ಮತ್ತು ಕೆಲವು ಯುವಕರು *ವ್ಹೀಲಿಂಗ್* ಮಾಡುವುದು *ಸೈಲೆನ್ಸರ್ ನ ಫಿಲ್ಟರ್* ತೆಗೆದು ಜೋರಾದ ಶಬ್ದದೊಂದಿಗೆ ಅಡ್ಡಾದಿಡ್ಡಿ ಯಾಗಿ ಸಾಗಿ ದಾರಿಹೋಕರು ಮತ್ತು ಇನ್ನಿತರ ವಾಹನ ಸವಾರರಿಗೆ ಪ್ರಾಣ ಭೀತಿ ಉಂಟು ಮಾಡುತ್ತಿದ್ದು ಇವರ ಮೇಲೆ ನಿಗಾ ಇರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.


*ಗುಣಮಟ್ಟದ ಪೂರ್ಣಪ್ರಮಾಣದ ಹೆಲ್ಮೆಟ್ ಧಾರಣೆ ನಿಮ್ಮ ಪ್ರಾಣ ರಕ್ಷಣೆಗೆ ಹೊರತು ಪೋಲಿಸರ ಉದ್ದಾರಕ್ಕಲ್ಲ*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅ

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳ

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್
ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವ

ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ
ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ

ಚನ್ನಪಟ್ಟಣ: ಇದೇ ತಿಂಗಳ ಹದಿನೇಳನೇ ತಾರೀಖಿನಂದು ವಿಶ್ವಕರ್ಮ ದಿನಾಚರಣೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯ

ಉಚಿತ \
ಉಚಿತ \"ಅಣಬೆ ಬೇಸಾಯ\" ತರಬೇತಿಗೆ ಅರ್ಜಿ ಆಹ್ವಾನ.

ಬಿಡದಿ ಬಳಿ ಇರುವ ಕೆನರಾ ಬ್ಯಾಂಕ್,  ಎ ಡಿ ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹತ್ತು (೧೦) ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜಿಸಲಾಗಿದೆ.

ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ

Top Stories »  


Top ↑