Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ

Posted Date: 03 Sep, 2019

ತಾಲ್ಲೂಕಿನೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಬೀದಿ ಬೀದಿಯಲ್ಲೂ ಗೌರಿ ಗಣೇಶ ಮೂರ್ತಿಗಳನ್ನು ಕೂರಿಸಿ ಪೂಜಿಸುವ ಮೂಲಕ ಗೌರಿ ಗಣೇಶ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸಿದರು.


ತಾಲ್ಲೂಕಿನ ಪ್ರತಿ ಹಳ್ಳಿಗೂ ಅಗತ್ಯತೆಯ ಮೇರೆಗೆ ತಾಲ್ಲೂಕಿನ ಮುಖಂಡರೊಬ್ಬರು ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ನೀಡಿದ್ದರಿಂದ ಬಹುತೇಕ ಎಲ್ಲಾ ಕಡೆಯೂ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು, ಪೂಜೆಗೆ ಬೇಕಾದ ಪೂಜಾ ಸಾಮಾಗ್ರಿಗಳಾದ ಹೂ, ಹಣ್ಣು ಮತ್ತಿತರ ವಸ್ತುಗಳು ದುಬಾರಿಯಾಗಿದ್ದರೂ ಉತ್ಸಾಹಿ ಯುವಕರು ಮತ್ತು ಗೃಹಿಣಿಯರು ಖರೀದಿಸಿದ್ದು ಅವರ ಭಕ್ತಿಭಾವವನ್ನು  ತೋರುತ್ತಿತ್ತು.


ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಲು ಬಳಸಿದ ಗೌರಿ ಗಣೇಶ ಹಬ್ಬವನ್ನು ಇಂದು ಕೆಲವರು ತಮ್ಮ ಪ್ರತಿಷ್ಠೆಗೋಷ್ಕರ ಮಾಡುತ್ತಿರುವುದು ದುರದೃಷ್ಟಕರ, ಕೆಲವರು ಇದನ್ನು ತಮ್ಮ ಭಕ್ತಿ ಭಾವ ತೋರಿಸಿ ಕೊಳ್ಳಲು ಆಚರಿಸುತ್ತಿರುವುದು ಸಮಾಧಾನದ ಸಂಗತಿ.


ತಮ್ಮ ಕೆಲಸದ ಒತ್ತಡದ ಮೇರೆಗೆ ಕೆಲವರು ಬೆಳಿಗ್ಗೆ ಕೂರಿಸಿ ಸಂಜೆಯ ವೇಳೆಗೆ ವಿಸರ್ಜಿಸಿದರೆ ಕೆಲವರು ಇಪ್ಪತ್ತೊಂದು ದಿನಗಳ ವರೆಗೂ ಪೂಜಿಸಿ ವಿಸರ್ಜಿಸುತ್ತಾರೆ, ವಿಸರ್ಜನೆಯ ವೇಳೆ ತರಹೇವಾರಿ ಕಮಾನುಗಳಲ್ಲಿ ಗಣೇಶನನ್ನು ಕೂರಿಸಿ ಭಾಜಭಜಂತ್ರಿ ಹಾಗೂ ಗಟ್ಟಿ ಹಿಮ್ಮೇಳದೊಂದಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುವುದು ಇಂದಿನ ಯುವಕರ ಟ್ರೆಂಡ್ ಆಗುತ್ತಿದೆ.


ತಾಲ್ಲೂಕಿನಾದ್ಯಂತ ಗಣೇಶ ಚತುರ್ಥಿ ದಿನದಂದು ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪರಿಪಾಠವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಆಚರಿಸಿಕೊಂಡು ಬಂದಿದ್ದು ನಗರದ ಕೆಲವು ಬಡಾಣೆಗಳಲ್ಲಿ ಅರ್ಧ ಶತಕ ವರ್ಷಗಳನ್ನೂ ಪೂರೈಸಿವೆ.

ನಗರದ ಕೋಟೆ ಪ್ರದೇಶ, ಮಂಗಳವಾರಪೇಟೆ ಹಾಗೂ ಕೆಲವು ದೇವಾಲಯಗಳು ಈ ಸಾಲಿನಲ್ಲಿ ಗುರುತಿಸಿಕೊಂಡಿವೆ.

ತಾಲ್ಲೂಕಿನ ಹೆಚ್ ಮೊಗೇನಹಳ್ಳಿಯ ಜೈ ಕರ್ನಾಟಕ ಯುವಕರ ಸಂಘವು ಕಳೆದ ನಲವತ್ತಾರು ವರ್ಷಗಳಿಂದ ಗಣೇಶೋತ್ಸವ ವನ್ನು ಅಚರಿಸಿಕೊಂಡು ಬಂದಿರುವುದು ಸಹ ಗ್ರಾಮೀಣ ಭಾಗದ ವಿಶೇಷ.


ಅತಿಯಾದ ಶಬ್ದ, ರಸ್ತೆ ತಡೆ ಮಾಡಿ ಗಣೇಶ ಕೂರಿಸುವುದು, ಮೆರವಣಿಗೆ ಯ ಸಮಯದಲ್ಲಿ ಹೆಚ್ಚು ಶಬ್ದವನ್ನುಂಟು ಮಾಡುವ ಸೌಂಡ್ ಸಿಸ್ಟಮ್ (ಡಿಜೆ) ಬಳಸುವುದು ಸೇರಿದಂತೆ ಅನೇಕ ರೀತಿಯ ಷರತ್ತುಗಳನ್ನು ಪೋಲೀಸರು ವಿಧಿಸಿರುವುದರಿಂದ ಯುವ ಉತ್ಸಾಹಿಗಳು ನಿರಾಸೆಗೊಂಡಿದ್ದಾರೆ.


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅ

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳ

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್
ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವ

ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ
ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ

ಚನ್ನಪಟ್ಟಣ: ಇದೇ ತಿಂಗಳ ಹದಿನೇಳನೇ ತಾರೀಖಿನಂದು ವಿಶ್ವಕರ್ಮ ದಿನಾಚರಣೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯ

ಉಚಿತ \
ಉಚಿತ \"ಅಣಬೆ ಬೇಸಾಯ\" ತರಬೇತಿಗೆ ಅರ್ಜಿ ಆಹ್ವಾನ.

ಬಿಡದಿ ಬಳಿ ಇರುವ ಕೆನರಾ ಬ್ಯಾಂಕ್,  ಎ ಡಿ ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹತ್ತು (೧೦) ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜಿಸಲಾಗಿದೆ.

ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ

Top Stories »  


Top ↑