Tel: 7676775624 | Mail: info@yellowandred.in

Language: EN KAN

    Follow us :


ಡಿಕೆಶಿ ಮತ್ತು ಕುಮಾರಸ್ವಾಮಿ ಬೆಂಬಲಿಗರಿಂದ ಚನ್ನಪಟ್ಟಣ ದಲ್ಲಿ ಯಶಸ್ವಿ ಬಂದ್

Posted Date: 04 Sep, 2019

ಡಿಕೆಶಿ ಮತ್ತು ಕುಮಾರಸ್ವಾಮಿ ಬೆಂಬಲಿಗರಿಂದ ಚನ್ನಪಟ್ಟಣ ದಲ್ಲಿ ಯಶಸ್ವಿ ಬಂದ್

ಚನ್ನಪಟ್ಟಣ: ಇ ಡಿ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಪರ ಹಾಗೂ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಯಶಸ್ವಿಗೊಂಡಿತು.


ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಪ್ರತಿಭಟನೆ ನಡೆಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಮೊದಲಿಗೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನಂತರ ನಗರ ಪೋಲಿಸ್ ಠಾಣೆಯ ಮುಂಭಾಗ (ಗಾಂಧಿಭವನ) ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಷೇರು ಹೋಟೆಲ್ ಸೇರಿದಂತೆ ಪ್ರತಿಭಟನೆಯ *ಎಲ್ಲಾ ಕಡೆಯೂ ಟೈರ್ ಗೆ ಬೆಂಕಿ ಹಚ್ಚುವ ಮೂಲಕ ಅವರ ಆರೋಗ್ಯ, ಪರಿಸರ ಮತ್ತು ಸುತ್ತಲಿನ ಜನರಿಗೂ ಆರೋಗ್ಯ ಕೆಡುವಂತೆ ಮಾಡಿದ್ದು ದುರದೃಷ್ಟಕರ.*


ಪ್ರತಿಭಟನೆ ವೇಳೆ ಹಚ್ಚಿದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಂದಿಸಿದರು. ನಗರದಾದ್ಯಂತ ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರ ಹೊರತು ಪಡಿಸಿ ಕೆಲವು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರದ ಎಸ್ ಪಿ ಅಭಿನವ್ ಖರೆ ಯವರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು ಡಿವೈಎಸ್ಪಿ ಮಲ್ಲೇಶ್ ಸೇರಿದಂತೆ ಸ್ಥಳೀಯ ಪೋಲೀಸ್ ಅಧಿಕಾರಿಗಳು ಸ್ಥಳದಲೇ ಮೊಕ್ಕಾಂ ಹೂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಎರಡು ಪಕ್ಷದ ಬಾವುಟಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆ ಹೊರಟ ಕಾರ್ಯಕರ್ತರು ತೆಗೆದಿದ್ದ ಹಲವಾರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ನಂತರ ಗಾಂಧಿ ಭವನದ ಬಳಿ ಸಭೆ ಸೇರಿದ ಮುಖಂಡರು ನಾಳೆ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಂಡರೆಂದು ಬಲ್ಲ ಮೂಲಗಳು ತಿಳಿಸಿದವು.


ಪ್ರತಿಭಟನೆ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಎರಡು ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅ

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳ

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್
ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವ

ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ
ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ

ಚನ್ನಪಟ್ಟಣ: ಇದೇ ತಿಂಗಳ ಹದಿನೇಳನೇ ತಾರೀಖಿನಂದು ವಿಶ್ವಕರ್ಮ ದಿನಾಚರಣೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯ

ಉಚಿತ \
ಉಚಿತ \"ಅಣಬೆ ಬೇಸಾಯ\" ತರಬೇತಿಗೆ ಅರ್ಜಿ ಆಹ್ವಾನ.

ಬಿಡದಿ ಬಳಿ ಇರುವ ಕೆನರಾ ಬ್ಯಾಂಕ್,  ಎ ಡಿ ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹತ್ತು (೧೦) ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜಿಸಲಾಗಿದೆ.

ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ

Top Stories »  


Top ↑