Tel: 7676775624 | Mail: info@yellowandred.in

Language: EN KAN

    Follow us :


ಲೋಕಾಯುಕ್ತ ಸಭೆ, ಪ್ರಚಾರದ ಕೊರತೆ, ಕೇವಲ ಎಂಟು ಮಂದಿ ದೂರು

Posted Date: 09 Sep, 2019

ಲೋಕಾಯುಕ್ತ ಸಭೆ, ಪ್ರಚಾರದ ಕೊರತೆ, ಕೇವಲ ಎಂಟು ಮಂದಿ ದೂರು

ಚನ್ನಪಟ್ಟಣ: ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ರವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಲೋಕಾಯುಕ್ತ ದೂರುಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ಹಾಗೂ ದೂರುದಾರರ ಅರ್ಜಿ ಸ್ವೀಕಾರ ಮಾಡಿ ಸಂಬಂಧಿಸಿದ ಅಧಿಕಾರಿಗಳ ಬಳಿ ವಿವರಣೆ ಕೇಳಿ ದೂರು ದಾಖಲು ಮಾಡಿಕೊಂಡರು.


ತಾಲ್ಲೂಕು ಆಡಳಿತದಿಂದ ಪ್ರಚಾರ ಇಲ್ಲದ ಕಾರಣ ಅನೇಕ ಸಾರ್ವಜನಿಕರಿಗೆ ಲೋಕಾಯುಕ್ತ ಪೋಲಿಸರು ಬರುವ ಮಾಹಿತಿ ಇಲ್ಲದೆ ಕೇವಲ ಎಂಟು ಮಂದಿ ಮಾತ್ರ ದೂರು ದಾಖಲಿಸಿದ್ದು ಒಂದು ಸಿವಿಲ್ ಗೆ ಸಂಬಂಧಿಸಿದ ದಾವಾ ಆಗಿದ್ದರಿಂದ ಅರ್ಜಿದಾರರಿಗೆ ಸಲಹೆ ನೀಡಿ ಕಳುಹಿಸಲಾಯಿತು. ಎರಡು ಕನಕಪುರ ತಾಲೂಕಿಗೆ ಸಂಬಂಧಿಸಿದ ದೂರುಗಳಾದ್ದರಿಂದ ಅಲ್ಲಿನ ತಹಶಿಲ್ದಾರರ ಬಳಿ ಕಳುಹಿಸಿದರು. ಉಳಿದ ಐದು ದೂರುಗಳನ್ನು ಇಲ್ಲಿ ಸ್ವೀಕಾರ ಮಾಡಿ ದಾಖಲಿಸಿಕೊಳ್ಳಲಾಯಿತು.


*ಮೂರು ಎಕರೆ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ವೃದ್ದರೊಬ್ಬರು ದೂರು ದಾಖಲಿಸಿದರು.*

ಕಸಬಾ ಹೋಬಳಿ ಹೊನ್ನಿಗನಹಳ್ಳಿ ಸರ್ವೆ ನಂಬರ್ ೪೬ ರಲ್ಲಿ ೩ ಎಕರೆ ಜಮೀನಿನ ಬದಲಾಗಿ ಸರ್ವೇ ನಂಬರ್ ೨೧೧, ೨೧೨, ೨೧೩ ರಲ್ಲಿ ೩ ಎಕರೆ ಜಮೀನನ್ನು ಎಂ ಆರ್ ಹೆಚ್ ೧೮/೨೦೧೫/೧೬ ಮತ್ತು೨೯/೧೭/೧೮ ರಡಿ ಬೇರೊಬ್ಬರಿಗೆ ಕ್ರಯಪತ್ರ ಮಾಡಿಕೊಟ್ಟಿರುವ ಬಗ್ಗೆ ಮಂಗಳವಾರಪೇಟೆ ಯ ಕೃಷ್ಣಪ್ಪ ಎಂಬುವವರು ದೂರು ಸಲ್ಲಿಸಿದರು.


ತಾಲ್ಲೂಕಿನಾದ್ಯಂತ ಎಲ್ಲಾ ರೀತಿಯ ಕಾಮಗಾರಿಗಳು ಕುಂಠಿತವಾಗಿದ್ದು ಕಳಪೆ ಕಾಮಗಾರಿಗಳು ನಡೆಯುತ್ತಿವೆ, ಕಂದಾಯ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಮೌಖಿಕವಾಗಿ ದೂರು ಸಲ್ಲಿಸಿದರೆ ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಜಿಲ್ಲಾ ಪಂಚಾಯತಿ ಅನುದಾನ ದುರುಪಯೋಗ, ಕಳಪೆ ಕಾಮಗಾರಿ ಗಳ ಬಗ್ಗೆ ಸುಧೀರ್ಘ ಮಾಹಿತಿ ನೀಡಿ ದೂರು ಸಲ್ಲಿಸಿದರು.

ಇನ್ನುಳಿದಂತೆ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ರವರು ಶೆಟ್ಟಿಹಳ್ಳಿ ಕೆರೆ ಯ ಬಗ್ಗೆ, ಇಕ್ಬಾಲ್ ಹುಸೇನ್ ರವರು ಪ್ರಾಧಿಕಾರದ ಬಗ್ಗೆ, ಕಳ್ಳಿಹೊಸೂರಿನ ಸಂದೀಪ್ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವ ಬಗ್ಗೆ ಹಾಗೂ ವೈ ಟಿ ಹಳ್ಳಿಯ ವೈ ಎಸ್ ದೇವರಾಜು ರವರು ಪಿತ್ರಾರ್ಜಿತ ಆಸ್ತಿ ಖಾತೆ ಮಾಡಿಕೊಡದ ಬಗ್ಗೆ ದೂರು ದಾಖಲಿಸಿದರು.


ನಂತರ ಮಾತನಾಡಿದ ಡಿವೈಎಸ್ಪಿ ಗೌತಮ್ ರವರು ಕಳೆದ ತಿಂಗಳು ೧೫ ಅರ್ಜಿಗಳ ಬಂದಿದ್ದು ಮೂರು ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ, ಎರಡು ಅರ್ಜಿದಾರರಿಗೆ ೧&೨ ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ, ಶೆಟ್ಟಿಹಳ್ಳಿ ಕೆರೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ಶೀಘ್ರದಲ್ಲೇ ಅಧಿಕಾರಿಗಳ ತಂಡ ಬಂದು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.


ಸಭೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ತನ್ವೀರ್ ಮತ್ತು ಸಿಬ್ಬಂದಿಗಳು, ಶಿರಸ್ತೇದಾರ ಮಹದೇವಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ಚನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಕೃಷಿ ಅಧಿಕಾರಿ ಅಪರ್ಣಾ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಕಿರಣಕುಮಾರ್, ಶಿಶು ಅಭಿವೃದ್ಧಿ ಇಲಾಖೆಯ ಕಾಂತರಾಜು, ಪಶು ಇಲಾಖೆಯ ಜಯರಾಮ್, ತೋಟಗಾರಿಕೆ ಯ ವಿವೇಕ್, ಅಬಕಾರಿ ಇಲಾಖೆಯ ರಾಜೇಂದ್ರ ಸೇರಿದಂತೆ ಅನೇ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ
ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ

ವಿಜೃಂಭಣೆಯಿಂದ ಜರುಗಿದ ಕೆಂಗಲ್ ರಥೋತ್ಸವ
ವಿಜೃಂಭಣೆಯಿಂದ ಜರುಗಿದ ಕೆಂಗಲ್ ರಥೋತ್ಸವ

ಚನ್ನಪಟ್ಟಣ: ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ (ಅಯ್ಯನಗುಡಿ) ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ

ನವ ಬೆಂಗಳೂರು ಬೇಡ, ರಾಮನಗರ ವೇ ಇರಲಿ ಹೋರಾಟಗಾರರ ಆಗ್ರಹ
ನವ ಬೆಂಗಳೂರು ಬೇಡ, ರಾಮನಗರ ವೇ ಇರಲಿ ಹೋರಾಟಗಾರರ ಆಗ್ರಹ

ಚನ್ನಪಟ್ಟಣ: ನಮಗೆ ನವ ಬೆಂಗಳೂರು ಬೇಡಾ, ಈಗಿರುವ ರಾಮನಗರ ವೇ ಇರಲಿ ಎಂದು ನವಕರ್ನಾಟಕ ಯುವಶಕ್ತಿ, ಕರ್ನಾಟಕ ರಾಜ್ಯ ರೈತ ಸಂಘ ದ ಪದಾಧಿಕಾರಿಗಳು ಹ

ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ
ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಿನ ತಿಂಗಳು ೦೯ ರಂದು ಚುನಾವಣೆನ್ನು ಘೋಷಿಸಿ

ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ
ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ

ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ, ಕೆಲಸ ಮಾಡಲು ಸತಾಯಿಸುತ್ತಿದ್ದರೆ, ಸಕಾರಣ ನೀಡದೆ ಅಲೆದಾಡಿಸುತ್ತಿದ್ದರೆ ಇನ್ನಿತರ ಯಾವುದೇ ರ

ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.
ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.

ಚನ್ನಪಟ್ಟಣ: ಕೆಲವರ ಮನಸ್ಥಿತಿಯೇ ಹಾಗೇ ! ‌ಜನರಿಗೆ ಕಿರಿಕಿರಿ ಅನುಭವಿಸುವಲು ಏನೇನು ದುಸ್ಕೃತ್ಯಗಳನ್ನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾರೆ, ಅದ

ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ
ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಅಯ್ಯನಗುಡಿ (ಕೆಂಗಲ್) ಜಾತ್ರೆಗೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದಲೇ ದೂರದೂರುಗಳಿಂದ ಜಾನುವಾರುಗಳು ಆಗಮಿಸುತ್ತಿ

ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ
ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ

ಚನ್ನಪಟ್ಟಣ: ಸಂಕ್ರಾಂತಿ ಹಬ್ಬ ಎಂದರೆ ರೈತನಿಗೆ ಸಡಗರವೋ ಸಡಗರ, ವರ್ಷಕ್ಕೊಮ್ಮೆ ಬರುವ ಈ ಸುಗ್ಗಿ ಹಬ್ಬದಲ್ಲಿ ರೈತ ಮತ್ತು ರೈತ ಕುಟುಂಬವಲ್ಲದೆ ತಾನು ಸಾಕಿರು

ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ
ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ರಾಮನಗರ: ಹೈಕೋರ್ಟ್ ನಿರ್ದೇಶನದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಧಾರ್ಮಿಕ ಕಟ್ಟಡಗಳನ್ನು ಗುರುತಿಸಿ, ಸರ್ವೆ ಕಾರ್ಯ ನಡೆಸ

ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ
ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ

ಚನ್ನಪಟ್ಟಣ: ಇದೇ ತಿಂಗಳ ಸಂಕ್ರಾಂತಿ ಹಬ್ಬದ ಸಡಗರ ದೊಂದಿಗೆ ನಡೆಯಲಿರುವ ಈ ಬಾರಿಯ ಅಯ್ಯನಗುಡಿ (ಕೆಂಗಲ್) ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ

Top Stories »  


Top ↑