Tel: 7676775624 | Mail: info@yellowandred.in

Language: EN KAN

    Follow us :


ಲೋಕಾಯುಕ್ತ ಸಭೆ, ಪ್ರಚಾರದ ಕೊರತೆ, ಕೇವಲ ಎಂಟು ಮಂದಿ ದೂರು

Posted Date: 09 Sep, 2019

ಲೋಕಾಯುಕ್ತ ಸಭೆ, ಪ್ರಚಾರದ ಕೊರತೆ, ಕೇವಲ ಎಂಟು ಮಂದಿ ದೂರು

ಚನ್ನಪಟ್ಟಣ: ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ರವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಲೋಕಾಯುಕ್ತ ದೂರುಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ಹಾಗೂ ದೂರುದಾರರ ಅರ್ಜಿ ಸ್ವೀಕಾರ ಮಾಡಿ ಸಂಬಂಧಿಸಿದ ಅಧಿಕಾರಿಗಳ ಬಳಿ ವಿವರಣೆ ಕೇಳಿ ದೂರು ದಾಖಲು ಮಾಡಿಕೊಂಡರು.


ತಾಲ್ಲೂಕು ಆಡಳಿತದಿಂದ ಪ್ರಚಾರ ಇಲ್ಲದ ಕಾರಣ ಅನೇಕ ಸಾರ್ವಜನಿಕರಿಗೆ ಲೋಕಾಯುಕ್ತ ಪೋಲಿಸರು ಬರುವ ಮಾಹಿತಿ ಇಲ್ಲದೆ ಕೇವಲ ಎಂಟು ಮಂದಿ ಮಾತ್ರ ದೂರು ದಾಖಲಿಸಿದ್ದು ಒಂದು ಸಿವಿಲ್ ಗೆ ಸಂಬಂಧಿಸಿದ ದಾವಾ ಆಗಿದ್ದರಿಂದ ಅರ್ಜಿದಾರರಿಗೆ ಸಲಹೆ ನೀಡಿ ಕಳುಹಿಸಲಾಯಿತು. ಎರಡು ಕನಕಪುರ ತಾಲೂಕಿಗೆ ಸಂಬಂಧಿಸಿದ ದೂರುಗಳಾದ್ದರಿಂದ ಅಲ್ಲಿನ ತಹಶಿಲ್ದಾರರ ಬಳಿ ಕಳುಹಿಸಿದರು. ಉಳಿದ ಐದು ದೂರುಗಳನ್ನು ಇಲ್ಲಿ ಸ್ವೀಕಾರ ಮಾಡಿ ದಾಖಲಿಸಿಕೊಳ್ಳಲಾಯಿತು.


*ಮೂರು ಎಕರೆ ಜಮೀನನ್ನು ಬೇರೆಯವರಿಗೆ ಖಾತೆ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ವೃದ್ದರೊಬ್ಬರು ದೂರು ದಾಖಲಿಸಿದರು.*

ಕಸಬಾ ಹೋಬಳಿ ಹೊನ್ನಿಗನಹಳ್ಳಿ ಸರ್ವೆ ನಂಬರ್ ೪೬ ರಲ್ಲಿ ೩ ಎಕರೆ ಜಮೀನಿನ ಬದಲಾಗಿ ಸರ್ವೇ ನಂಬರ್ ೨೧೧, ೨೧೨, ೨೧೩ ರಲ್ಲಿ ೩ ಎಕರೆ ಜಮೀನನ್ನು ಎಂ ಆರ್ ಹೆಚ್ ೧೮/೨೦೧೫/೧೬ ಮತ್ತು೨೯/೧೭/೧೮ ರಡಿ ಬೇರೊಬ್ಬರಿಗೆ ಕ್ರಯಪತ್ರ ಮಾಡಿಕೊಟ್ಟಿರುವ ಬಗ್ಗೆ ಮಂಗಳವಾರಪೇಟೆ ಯ ಕೃಷ್ಣಪ್ಪ ಎಂಬುವವರು ದೂರು ಸಲ್ಲಿಸಿದರು.


ತಾಲ್ಲೂಕಿನಾದ್ಯಂತ ಎಲ್ಲಾ ರೀತಿಯ ಕಾಮಗಾರಿಗಳು ಕುಂಠಿತವಾಗಿದ್ದು ಕಳಪೆ ಕಾಮಗಾರಿಗಳು ನಡೆಯುತ್ತಿವೆ, ಕಂದಾಯ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಮೌಖಿಕವಾಗಿ ದೂರು ಸಲ್ಲಿಸಿದರೆ ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಜಿಲ್ಲಾ ಪಂಚಾಯತಿ ಅನುದಾನ ದುರುಪಯೋಗ, ಕಳಪೆ ಕಾಮಗಾರಿ ಗಳ ಬಗ್ಗೆ ಸುಧೀರ್ಘ ಮಾಹಿತಿ ನೀಡಿ ದೂರು ಸಲ್ಲಿಸಿದರು.

ಇನ್ನುಳಿದಂತೆ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ರವರು ಶೆಟ್ಟಿಹಳ್ಳಿ ಕೆರೆ ಯ ಬಗ್ಗೆ, ಇಕ್ಬಾಲ್ ಹುಸೇನ್ ರವರು ಪ್ರಾಧಿಕಾರದ ಬಗ್ಗೆ, ಕಳ್ಳಿಹೊಸೂರಿನ ಸಂದೀಪ್ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವ ಬಗ್ಗೆ ಹಾಗೂ ವೈ ಟಿ ಹಳ್ಳಿಯ ವೈ ಎಸ್ ದೇವರಾಜು ರವರು ಪಿತ್ರಾರ್ಜಿತ ಆಸ್ತಿ ಖಾತೆ ಮಾಡಿಕೊಡದ ಬಗ್ಗೆ ದೂರು ದಾಖಲಿಸಿದರು.


ನಂತರ ಮಾತನಾಡಿದ ಡಿವೈಎಸ್ಪಿ ಗೌತಮ್ ರವರು ಕಳೆದ ತಿಂಗಳು ೧೫ ಅರ್ಜಿಗಳ ಬಂದಿದ್ದು ಮೂರು ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ, ಎರಡು ಅರ್ಜಿದಾರರಿಗೆ ೧&೨ ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ, ಶೆಟ್ಟಿಹಳ್ಳಿ ಕೆರೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ಶೀಘ್ರದಲ್ಲೇ ಅಧಿಕಾರಿಗಳ ತಂಡ ಬಂದು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.


ಸಭೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ತನ್ವೀರ್ ಮತ್ತು ಸಿಬ್ಬಂದಿಗಳು, ಶಿರಸ್ತೇದಾರ ಮಹದೇವಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ಚನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಕೃಷಿ ಅಧಿಕಾರಿ ಅಪರ್ಣಾ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಕಿರಣಕುಮಾರ್, ಶಿಶು ಅಭಿವೃದ್ಧಿ ಇಲಾಖೆಯ ಕಾಂತರಾಜು, ಪಶು ಇಲಾಖೆಯ ಜಯರಾಮ್, ತೋಟಗಾರಿಕೆ ಯ ವಿವೇಕ್, ಅಬಕಾರಿ ಇಲಾಖೆಯ ರಾಜೇಂದ್ರ ಸೇರಿದಂತೆ ಅನೇ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ
ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ

ಚನ್ನಪಟ್ಟಣ: ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು, ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಅನೇಕ, ಇವುಗಳ ನಡುವೆ ಶ

ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ
ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ

ಚನ್ನಪಟ್ಟಣ: ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರವೂ ಒಂದಾಗಿದ್ದು ಮೂಢನಂಬಿಕೆ ಬಿಟ್ಟು ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬ

ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್
ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ವಾಲ್ಮೀಕಿ ಹೆಸರೇ ಒಂದು ರೋಮಾಂಚನ, ದರೋಡೆಕಾರನಾಗಿದ್ದ ವಾಲ್ಮೀಕಿ ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ತಪಸ್ಸನ್ನಾಚರಿಸಿ ಪ್ರಪಂಚ

ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ
ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ

ರಾಮನಗರ: ಪಾರಂಪರಿಕ ವೈದ್ಯ ಪದ್ದತಿಗೆ ಮಂಡಳಿ ರಚಿಸಿ, ಎಲ್ಲಾ ಪಾರಂಪರಿಕ ವೈದ್ಯರಿಗೆ ವೈದ್ಯ ಮಾನ್ಯತೆ ಮತ್ತು ಸೌಲಭ್ಯಗಳನ್ನು ಒದಗಿಸಿ ಸರ್ಕಾರ ಮಾನ್ಯತೆ ದೊರಕಿಸಿಕೊಡಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ಗೌರವ ಉಪಾಧಕ್ಷ ಗಾ.ನಂ.ಶ್

ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್
ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್

ಚನ್ನಪಟ್ಟಣ: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರಕ್ಕಾಗಿ ಮನೆಯ ಹಿತ್ತಲಿನಲ್ಲಿ ಕೋಳಿ ಸಾಕುವುದು ಉತ್ತಮ ಎಂದು ಪಶು

ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ
ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ

ಭಾರತ ಜಗತ್ತಿನ ಜನಕ, ಭಾರತ ಇಲ್ಲದಿದ್ದರೆ ಜಗತ್ತೇ ಇಲ್ಲ, ಪಾರಂಪರಿಕ ವೈದ್ಯವನ್ನು ಹೇಳಿಕೊಟ್ಟವರು ಭಾರತೀಯರು, ಜಗತ್ತಿಗೆ ಲೆಕ್ಕ ಬರೆದಿಡಲು ಅಂಕಿ ಅಂಶಗಳನ್ನು ಹೇಳಿಕೊಟ್ಡವರು ನಮ್ಮ ದೇಶದ ಮಹಾನ್ ಇತಿಹಾ

ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ
ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ

ಚನ್ನಪಟ್ಟಣ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಲವಾರು ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿದೆ, ನಗರದ ಸಾತನೂರು ರಸ್ತೆಯ ಲಾಳಾಘಟ್ಟ ವೃತ್ತದಲ್ಲಿರ

ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್
ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್

ಚನ್ನಪಟ್ಟಣ: ಕಲೆ ಎಂಬುದು ಕೇವಲ ಕೆಲವು ಗಂಟೆಗಳಿಗೆ ಸೀಮಿತವಾಗದೆ ತಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು, ಆಗಲೇ ಕಲೆಗೆ ಜೀವಂತಿಕೆ ತುಂಬಲು ಸಾಧ್

ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಕನಸನ್ನು ನನಸು ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರು ಹರೂರು ರಾಜಣ್ಣ
ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಕನಸನ್ನು ನನಸು ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರು ಹರೂರು ರಾಜಣ್ಣ

ಚನ್ನಪಟ್ಟಣ: ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧೀಜಿಯವರ ಜೊತೆಗೆ ಡಾ ರಾಧಾಕೃಷ್ಣನ್ ರವರು ಕನಸು ಕಾಣುವ ಮೂಲಕ ಜನರ

Top Stories »  


Top ↑