Tel: 7676775624 | Mail: info@yellowandred.in

Language: EN KAN

    Follow us :


ಯಾರ ಒತ್ತಡಕ್ಕೂ ಮಣಿಯದೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮ್ಮ ರಕ್ಷಣೆ ನನ್ನ ಹೊಣೆ ಕುಮಾರಸ್ವಾಮಿ

Posted Date: 12 Sep, 2019

ಚನ್ನಪಟ್ಟಣ:.ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ, ಯಾರದೋ ‌ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ, ನಿಮ್ಮ ರಕ್ಷಣೆಗೆ ನಾನಿದ್ದೀನಿ, ಕೋಟ್೯ ಗೆ ಸಂಬಂಧಿಸಿದ ಕೆಲಸ ಬಿಟ್ಟು ಮಿಕ್ಕೆಲ್ಲ ಕೆಲಸಗಳಿಗೆ ಕಂದಾಯ ಮತ್ತು ಇತರ ಇಲಾಖೆಯವರು ರೈತರ ಹಾಗೂ ಜನಸಾಮಾನ್ಯರ ಕೆಲಸವನ್ನು ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಹೆಚ್ ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ನೀರಾವರಿ ಇಲಾಖೆಯವರು ಹೆಚ್ಚು ಕೆಲಸ ಮಾಡಿ, ಚನ್ನಪಟ್ಟಣದ ರಾಜಕೀಯ ನಿಂತಿರುವುದೇ ನೀರಿನ ಮೇಲೆ, ಈಗ ನೀರಿನ ಕೊರತೆ ಇಲ್ಲ, ಆದರೂ ಏಕೆ ಸಕಾಲದಲ್ಲಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.


ಪೋಲೀಸ್ ಇಲಾಖೆಗೆ ಕಿವಿಮಾತು ಹೇಳಿದ ಅವರು ನಾನೆಂದೂ ಯಾರ ಪರವಾಗಿಯೂ ನಿಮಗೆ ಫೋನ್ ಮಾಡುವುದಿಲ್ಲ, ನನ್ನ ಕಾರ್ಯಕರ್ತ ರು ಮರಳುಗಾರಿಕೆ  ಮಾಡಿದರೂ ನಾನು ಹೇಳುವುದಿಲ್ಲ. ಅದು ಯಾವುದೇ ರೀತಿಯ ದಾವೆಯಾದರೂ ಸರಿ

ಎಫ್ ಐ ಆರ್ ಹಾಕಿ ನ್ಯಾಯಾಲಯಕ್ಕೆ ಅಲೆಸುವ ಬದಲು ಇಬ್ಬರನ್ನೂ ರಾಜಿ ಮಾಡಿ ಕಳುಹಿಸುವ ಪ್ರಯತ್ನ ಮಾಡಿ ಎಂದು ಹೇಳಿದರು.


ನಾನು ಯಾವ ಅಧಿಕಾರಿಗೂ ಏಕವಚನದಲ್ಲಿ ಮಾತನಾಡುವುದಿಲ್ಲ. ಬಹುತೇಕ ದೂರುಗಳು ಕಂದಾಯ ಮತ್ತು ರೆವಿನ್ಯೂ ಇಲಾಖೆಗೆ ಸಂಬಂಧಿಸಿದ್ದು ಶೀಘ್ರವಾಗಿ ಬಗೆಹರಿಸಿ.

ನಿಮ್ಮ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಸಿಕೊಂಡು ಒಳ್ಳೆಯ ಕೆಲಸ ಮಾಡಿ, ನಿಮ್ಮ ಮೇಲೆ ಯಾರೇ ಒತ್ತಡ ಹೇರಿದರೆ, ತಿಂಗಳ ವಂತಿಗೆ ಕೇಳಿದರೆ ಕೊಡಬೇಡಿ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ.

ನನಗೆ ಜಾತಿ ಇಲ್ಲ, ಜಾತಿ ಪರ ಕೆಲಸ ಮಾಡುವುದಿಲ್ಲ ಕೆಲಸ ಮಾಡುವ ಅಧಿಕಾರಿಗಳ ಪರ ಇರುತ್ತೇನೆ, ಜನರ ವಿಶ್ವಾಸಗಳಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


ಪ್ರತಿ ಇಲಾಖೆಯ ಅಧಿಕಾರಿಗಳ ಅಹವಾಲನ್ನು ಕೇಳಿ ತಿಳಿದುಕೊಂಡ ಶಾಸಕರು ತಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದಾಖಲೆ ಸಮೇತ ನನಗೆ ಸಲ್ಲಿಸಿ, ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರಯತ್ತಿಸುತ್ತೇನೆ ಎಂದರು.

ತಹಶಿಲ್ದಾರ್ ಸುದರ್ಶನ್ ರವರು ಋಣ ಮುಕ್ತ ಕಾಯ್ದೆಯ ಐದು ಸಾವಿರ ಅರ್ಜಿಗಳನ್ನು ಸಾರ್ವಜನಿಕರಿಗೆ ವಿರಿಸಲಾಗಿದೆ, ಕಂದಾಯ ಇಲಾಖೆಗೆ ಸಂಬಂಧಿಸಿದ ಸಹಸ್ರಾರು ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಿದ್ದು ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದರು.


ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ, ತಹಶಿಲ್ದಾರ್ ಸುದರ್ಶನ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ, ಎ ಸಿ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಮಾತೃಭಾಷೆ ಗೆ ಆದ್ಯತೆ ನೀಡಿ ಇಲ್ಲವಾದರೆ ಶೀಘ್ರದಲ್ಲೇ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿದೆ ಡಾ ಬೆಟ್ಟಕೋಟೆ ನಾಗೇಶ್
ಮಾತೃಭಾಷೆ ಗೆ ಆದ್ಯತೆ ನೀಡಿ ಇಲ್ಲವಾದರೆ ಶೀಘ್ರದಲ್ಲೇ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿದೆ ಡಾ ಬೆಟ್ಟಕೋಟೆ ನಾಗೇಶ್

ಚನ್ನಪಟ್ಟಣ: ಮಾತೃಭಾಷೆ ಗೆ ಒತ್ತು ನೀಡಬೇಕು, ಅನ್ನದ ಭಾಷೆ ಇಂಗ್ಲಿಷ್ ಭಾಷೆ ಎಂದು ಯಾರೋ ಅವಿವೇಕಿಗಳು ಹೇಳಿದ್ದಾರೆ. ತನ್ನ ಮಾತೃಭಾಷೆಯನ್ನೇ ಮರೆತ

ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?
ತಾಳೆಯೋಲೆ ೧೬೬: ಸೇವಾ ಕಾರ್ಯಕ್ರಮವನ್ನು ಮೊದಲು ಮನೆಯಲ್ಲಿ ಮಾಡಬೇಕು ಏಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್: ನಗರಸಭಾ ಮಾಜಿ   ಉಪಾಧ್ಯಕ್ಷೆ ಪತಿ ವಿರುದ್ಧ ದೂರು ಬಂಧನ
ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್: ನಗರಸಭಾ ಮಾಜಿ ಉಪಾಧ್ಯಕ್ಷೆ ಪತಿ ವಿರುದ್ಧ ದೂರು ಬಂಧನ

ಚನ್ನಪಟ್ಟಣ: ನಗರಸಭಾ ಮಾಜಿ ಸದಸ್ಯರೋರ್ವರ ಪತಿ 

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುವಾಗ ತಾಲ್ಲೂಕು ದಂಡಾಧಿಕಾರಿ ಸುದರ

ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್
ನಿಮ್ಮ ಸಮಸ್ಯೆಗಳನ್ನು ಕಂದಾಯ ಅದಾಲತ್‍ನಲ್ಲಿ ಸರಿಪಡಿಸಿಕೊಳ್ಳಿ ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ಒಂದೇ ಸೂರಿನಡಿ ನಡೆಯುವ ಈ ರೀತಿಯ 

ಅದಾಲತ್‍ಗಳಲ್ಲಿ ತಮ್ಮ ಯಾವುದೇ ರೀತಿಯ 

ಸಮಸ್ಯೆಗಳನ್ನು ಮನವಿ ಮುಖ

ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ  ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.
ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.

ಹೆದ್ದಾರಿಯು ತನ್ನ ಸುತ್ತಮುತ್ತಲಿನ ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ನುಂಗಿ ಹಾಕುತ್ತಿದ್ದು, ಈ ದಿಕ್ಕಿನಲ್ಲಿ ಯುವ ಸಮೂಹ ತಮ್ಮ ನೆಲಮೂಲದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾಯಕಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲ

ಬಿಎಸ್ ಪೆಟ್ರೋಲ್ ಬಂಕ್ ನಲ್ಲಿ ಅಳತೆ ಮೋಸ, ಗ್ರಾಹಕ ದೂರು, ಆಹಾರ ನಿರೀಕ್ಷಕಿ ಭೇಟಿ ಪರಿಶೀಲನೆ
ಬಿಎಸ್ ಪೆಟ್ರೋಲ್ ಬಂಕ್ ನಲ್ಲಿ ಅಳತೆ ಮೋಸ, ಗ್ರಾಹಕ ದೂರು, ಆಹಾರ ನಿರೀಕ್ಷಕಿ ಭೇಟಿ ಪರಿಶೀಲನೆ

ಚನ್ನಪಟ್ಟಣ:ಫೆ/೨೪/೨೦/ಸೋಮವಾರ.


ನಗರದ ಸಾತನೂರು ರಸ್ತೆಯಲ್ಲಿರುವ ಎಸ್ ಬಿ ಸರ್ವೀಸ್ ಸ್ಟೇಷನ್ (ಪೆಟ್ರೋಲ್ ಬಂಕ್) ನಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರಿನ ಮೇ

ಬಾಲಕಿಗೆ ಆಮಿಷ ಒಡ್ಡಿ ಅತ್ಯಚಾರ, ಬಂಧನ
ಬಾಲಕಿಗೆ ಆಮಿಷ ಒಡ್ಡಿ ಅತ್ಯಚಾರ, ಬಂಧನ

ಚನ್ನಪಟ್ಟಣ: ಪೆನ್ಸಿಲ್ ನೀಡುವುದಾಗಿ ಹೇಳಿ ೦೮ ವರ್ಷದ ಬಾಲಕಿಯನ್ನು ಪುಸಲಾಯಿಸಿ ಮನೆಯೊಳಗೆ ಕರೆದು ಕೊಂಡು ಹೋದ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ

ಶಿವರಾತ್ರಿ ಜಾಗರಣೆ, ಕಾರ್ಯಕ್ರಮಗಳ ಆಚರಣೆ, ಪ್ರಸಾದ ವಿತರಣೆ
ಶಿವರಾತ್ರಿ ಜಾಗರಣೆ, ಕಾರ್ಯಕ್ರಮಗಳ ಆಚರಣೆ, ಪ್ರಸಾದ ವಿತರಣೆ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.


ಶಿವರಾತ್ರಿ ಹಬ್ಬದ ಪ್ರಯುಕ್ತ ಬಹುತೇಕ ಶಿವನ ದೇವಾಲಯಗಳಲ್ಲಿ ಭಕ್ತಾಧಿಗಳು ಜಾಗರಣೆ ಮಾಡಿದರು.

ಜಾಗರಣೆಯ ನಿಮಿತ್ತ ದೇವರ ನಾಮ, ಭಜನೆ

ನಗರದೇವತೆ ಕೊಲ್ಲಾಪುರದಮ್ಮನಿಗೆ ವಿಶೇಷ ಅಲಂಕಾರ
ನಗರದೇವತೆ ಕೊಲ್ಲಾಪುರದಮ್ಮನಿಗೆ ವಿಶೇಷ ಅಲಂಕಾರ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.


ನಗರ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿ ಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲ

ಸರಳ ಸಜ್ಜನ, ಹೃದಯವಂತ ವೇದಮೂರ್ತಿ ಗೆ ಶುಭಾಶಯಗಳ ಸುರಿಮಳೆ
ಸರಳ ಸಜ್ಜನ, ಹೃದಯವಂತ ವೇದಮೂರ್ತಿ ಗೆ ಶುಭಾಶಯಗಳ ಸುರಿಮಳೆ

ಚನ್ನಪಟ್ಟಣ:ಫೆ/೨೨/೨೦/ಶನಿವಾರ.


ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಫಾರ್ಮಾಸಿಸ್ಟ್ ಆಗಿ ಪ್ರಾಮಾಣಿಕ ಹಾಗೂ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೇದಮೂರ್ತಿ ಯ

Top Stories »  


Top ↑