Tel: 7676775624 | Mail: info@yellowandred.in

Language: EN KAN

    Follow us :


ಕ್ರೀಡೆ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸುತ್ತದೆ ಸವಿತಾ

Posted Date: 12 Sep, 2019

ಕ್ರೀಡೆ ವಿದ್ಯಾರ್ಥಿಗಳ ಮನೋಸ್ಥೈರ್ಯ ಹೆಚ್ಚಿಸುತ್ತದೆ ಸವಿತಾ

ಚನ್ನಪಟ್ಟಣ: ಕ್ರೀಡೆ ಎನ್ನುವುದು ಕೇವಲ ಗೆಲ್ಲುವ ಸೋಲುವ ಆಟವಲ್ಲ, ಅದು ವಿದ್ಯಾರ್ಥಿಗಳ ಮನೋಸ್ಥೈರ್ಯವನ್ನು ಬಡಿದೆಬ್ಬಿಸಿ ನಾನು ಗೆಲ್ಲಬೇಕು, ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲವನ್ನು ಹುಟ್ಟುಹಾಕುತ್ತದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸವಿತಾ ರವರು ನುಡಿದರು.

ಅವರು ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆ ರಾಮನಗರ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ, ಸಾರ್ವಜನಿಕ ಪದವಿ ಪೂರ್ವ ಕಾಲೇಜು ಮತ್ತೀಕೆರೆ-ಶೆಟ್ಟಿಹಳ್ಳಿ, ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ ಮತ್ತು ಎನ್ ಪಿ ಎಸ್ ಪಿಯು ಕಾಲೇಜು ದಬಾನ್ ಗುಂಡ ಚನ್ನಪಟ್ಟಣ ಇವರ ಸಂಯುಕ್ತಾಶ್ರಯ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಪಥಸಂಚಲನ ಗೌರವ ಸ್ವೀಕಾರ ಮಾಡಿ ಮಾತನಾಡಿದರು.


ಕ್ರೀಡಾ ಧ್ವಜವನ್ನು ಆರೋಹಣ ಮಾಡಿ ಮಾತನಾಡಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ನವರು ಕ್ರೀಡಾ ಮನೋಭಾವವನ್ನು ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಕಲಿಯಲು ಪ್ರೇರೇಪಿಸಬೇಕು, ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಮಕ್ಕಳ ಬುದ್ದಿವಂತಕೆಯ ಜೊತೆಗೆ ಆರೋಗ್ಯವು ಬಹಳ ಮುಖ್ಯವಾಗುತ್ತದೆ. ಕ್ರೀಡಾ ಮನೋಭಾವವುಳ್ಳ ಮಕ್ಕಳು ತಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯುತ್ತಾರೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಅಧೀಕ್ಷಕ ನರಸಿಂಹಯ್ಯ, ಜಿಲ್ಲಾ ಪ್ರಾಂಶುಪಾಲರ ಸಂಘದ ಬಸವಲಿಂಗಚಾರಿ, ನಾರಾಯಣಪ್ಪ, ನಿಂಗೇಗೌಡ, ಸಿಸ್ಟರ್ ಆ್ಯನ್ಬೆಬೆಟ್, ಕಾಳೇಗೌಡ, ಬಿ ವಿ ಜಯರಾಮೇಗೌಡ ಸೇರಿದಂತೆ ಅನೇಕ ಶಾಲೆಯ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಗೂ ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕ್ರೀಡೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅ

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳ

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್
ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವ

ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ
ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ

ಚನ್ನಪಟ್ಟಣ: ಇದೇ ತಿಂಗಳ ಹದಿನೇಳನೇ ತಾರೀಖಿನಂದು ವಿಶ್ವಕರ್ಮ ದಿನಾಚರಣೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯ

ಉಚಿತ \
ಉಚಿತ \"ಅಣಬೆ ಬೇಸಾಯ\" ತರಬೇತಿಗೆ ಅರ್ಜಿ ಆಹ್ವಾನ.

ಬಿಡದಿ ಬಳಿ ಇರುವ ಕೆನರಾ ಬ್ಯಾಂಕ್,  ಎ ಡಿ ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹತ್ತು (೧೦) ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜಿಸಲಾಗಿದೆ.

ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ

Top Stories »  


Top ↑