Tel: 7676775624 | Mail: info@yellowandred.in

Language: EN KAN

    Follow us :


ತಪ್ಪು ಮಾಡುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ನ್ಯಾಯಾಧೀಶೆ ಕಲ್ಪನಾ

Posted Date: 30 Sep, 2019

ತಪ್ಪು ಮಾಡುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ನ್ಯಾಯಾಧೀಶೆ ಕಲ್ಪನಾ

ಚನ್ನಪಟ್ಟಣ: ಒಬ್ಬ ವ್ಯಕ್ತಿ ಒಂದು ವಾಹನ ಸವಾರಿ ಮಾಡಬೇಕೆಂದರೆ ಎಲ್ಲಾ ದಾಖಲೆಗಳಿರಬೇಕು, ಇಲ್ಲಾಂದ್ರೆ ಹೆಚ್ಚು ದಂಡ ಬೀಳುತ್ತೆ, ಇಬ್ಬರೂ ಸವಾರಿ ಮಾಡುವ ಬೈಕ್ ನಲ್ಲಿ ಮೂರು ಜನ ಹೋಗಿ ಹೆಚ್ಚು ಕಡಿಮೆಯಾದರೆ ಮೂರನೇ ವ್ಯಕ್ತಿಗೆ ಯಾರು ಪರಿಹಾರ ನೀಡುತ್ತಾರೆ, ಆತನ ಮುಂದಿನ ಜೀವನ ಹೇಗೆ ಎಂಬುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡುವ ಮುನ್ನಾ ಎಚ್ಚೆತ್ತುಕೊಂಡರೆ ಮಾತ್ರ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಚನ್ನಪಟ್ಟಣ ಜೆ ಎಂ ಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯರ್ ಮಾಲ್ ಕಲ್ಪನಾ ರವರು ತಿಳಿಸಿದರು.

ಅವರು ನಗರದ ಮಹದೇಶ್ವರ ನಗರದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತೆಯ ರಥ ಮತ್ತು ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್ ನಟರಾಜು ರವರು ಮಾತನಾಡಿ ನಿಮಗೆ ಬೇಕಾದ ವಸ್ತುಗಳನ್ನು ನಿಮಗಿಷ್ಟವಾದ ಆಯ್ಕೆಗಳು ಇದ್ದರೆ ಮಾತ್ರ ತೆಗೆದುಕೊಳ್ಳಬೇಕು, ಮಾರುವವನ ಮತ್ತು ತಯಾರಕನ ಇಷ್ಟದ ವಸ್ತು ಕೊಳ್ಳಬೇಕಿಲ್ಲ,  ನಾವು ಏನು ಪದಾರ್ಥ ಕೊಂಡರು ಅದರಿಂದ ಏನು ಉಪಯೋಗ ಎನ್ನುವುದನ್ನು ಮನಗಾಣಬೇಕು, ಕಿರಾಣಿ ಅಂಗಡಿಯಲ್ಲಿ ಒಂದು ಪದಾರ್ಥ ಖರೀದಿಸಿದರೆ ಮಾಮೂಲಿ ಬೆಲೆ, ಪ್ರವಾಸಿ ತಾಣ ಇನ್ನಿತರೆ ತಾಣಗಳಲ್ಲಿ ಗರಿಷ್ಠ ಮಟ್ಟದ ಹಣ ವಸೂಲಿ ಮಾಡುತ್ತಾರೆ ಗ್ರಾಹಕರು ಪ್ರಶ್ನಿಸುವುದಿಲ್ಲ, ಸಣ್ಣ ಪದಾರ್ಥಗಳಿಂದ ಹಿಡಿದು ಕಾರು, ಬೈಕು, ಕ್ಲಿನಿಕ್  ಯಾವುದೇ ಪದಾರ್ಥ ಮತ್ತು ಸೇವೆ ಗಳ ಮೂಲ ಬೆಲೆಗಿಂತ ಹೆಚ್ಚು ಕೇಳಿದರೆ ನೀವು ಕೇಳಬಹುದು ಜೊತೆಗೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದರು. ನೀವು ಯಾವ ಸ್ಥಳದಲ್ಲಿ ವಸ್ತು ಖರೀದಿ ಮಾಡಿರುತ್ತೀರೋ ಆ‌ ನಗರದ ವ್ಯಾಪ್ತಿಯಲ್ಲಿ ಮಾತ್ರ ದೂರು ನೀಡಬೇಕು, ಕೆಲವು ವಸ್ತುಗಳಿಗೆ ಎರಡು ವರ್ಷಗಳು ಕೆಲವು ವಸ್ತುಗಳಿಗೆ ಎರಡು ವರ್ಷಗಳ ನಂತರವೂ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿ ವಕೀಲರಿಲ್ಲದೆಯೂ ನೀವೆ ವಾದ ಮಾಡಿ ಗೆಲ್ಲಬಹುದು, ಖರೀದಿಸುವ ಪದಾರ್ಥಗಳ ಸಂಪೂರ್ಣ ದಾಖಲೆ ಸಲ್ಲಿಸಬೇಕು ಎಂದರು.

ವಕೀಲ ಹೆಚ್ ಕೃಷ್ಣೇಗೌಡರು ಮೋಟಾರು ವಾಹನ ಕಾಯ್ದೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಕಾಂತರಾಜು ರವರು ಪೌಷ್ಟಿಕಾಂಶ ಆಹಾರದ ಬಗ್ಗೆ ಮತ್ತು ನಿಲಯ ಪಾಲಕ ಎನ್ ಮೋಹನ್ ರವರು ವಿದ್ಯಾರ್ಥಿ ಗಳ ಕಾನೂನು ತಿಳುವಳಿಕೆ ಬಗ್ಗೆ ಉಪನ್ಯಾಸ ನೀಡಿದರು.

ಕಾನೂನು ಸಾಕ್ಷರತೆಯ ರಥ ಮತ್ತು ಜನತಾ ನ್ಯಾಯಾಲಯದ ಕಾರ್ಯಕ್ರಮವನ್ನು ಚನ್ನಪಟ್ಟಣ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ೯:೩೦ ರಲ್ಲಿ ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡು ಎಲೆಕೇರಿ ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂತರ ಬಿಸಿಎಂ ಹಾಸ್ಟೆಲ್ ನಲ್ಲಿ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶೆ ಕು ಬಿ ಟಿ ಅನ್ನಪೂರ್ಣೇಶ್ವರಿ, ಸಹಾಯಕ ಸರ್ಕಾರಿ ಅಭಿಯೋಜಕಿ ಎಲ್ ರೂಪ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಗಿರೀಶ್, ಪದಾಧಿಕಾರಿಗಳಾದ ಕೆ ಆರ್ ರವಿ, ಸಿ ಎಲ್ ಶಿವರಾಜು, ಶಿಕ್ಷಣ ಇಲಾಖೆಯ ಇಸಿಓ ತಮ್ಮಣ್ಣ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಶ್ನೋತ್ತರ ದ ಮೂಲಕ ತಮ್ಮ ಕಾನೂನು ತಿಳುವಳಿಕೆ ಹೆಚ್ಚಿಸಿಕೊಂಡಿದ್ದಲ್ಲದೆ ಸಮಸ್ಯೆಗಳನ್ನು ಪರಿಹರಿಸಿಕೊಂಡರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ
ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ

ಚನ್ನಪಟ್ಟಣ: ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು, ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಅನೇಕ, ಇವುಗಳ ನಡುವೆ ಶ

ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ
ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ

ಚನ್ನಪಟ್ಟಣ: ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರವೂ ಒಂದಾಗಿದ್ದು ಮೂಢನಂಬಿಕೆ ಬಿಟ್ಟು ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬ

ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್
ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ವಾಲ್ಮೀಕಿ ಹೆಸರೇ ಒಂದು ರೋಮಾಂಚನ, ದರೋಡೆಕಾರನಾಗಿದ್ದ ವಾಲ್ಮೀಕಿ ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ತಪಸ್ಸನ್ನಾಚರಿಸಿ ಪ್ರಪಂಚ

ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ
ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ

ರಾಮನಗರ: ಪಾರಂಪರಿಕ ವೈದ್ಯ ಪದ್ದತಿಗೆ ಮಂಡಳಿ ರಚಿಸಿ, ಎಲ್ಲಾ ಪಾರಂಪರಿಕ ವೈದ್ಯರಿಗೆ ವೈದ್ಯ ಮಾನ್ಯತೆ ಮತ್ತು ಸೌಲಭ್ಯಗಳನ್ನು ಒದಗಿಸಿ ಸರ್ಕಾರ ಮಾನ್ಯತೆ ದೊರಕಿಸಿಕೊಡಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ಗೌರವ ಉಪಾಧಕ್ಷ ಗಾ.ನಂ.ಶ್

ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್
ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್

ಚನ್ನಪಟ್ಟಣ: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರಕ್ಕಾಗಿ ಮನೆಯ ಹಿತ್ತಲಿನಲ್ಲಿ ಕೋಳಿ ಸಾಕುವುದು ಉತ್ತಮ ಎಂದು ಪಶು

ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ
ಭಾರತ ಜಗತ್ತಿನ ಜನಕ, ಜಗತ್ತಿಗೆ ಪಾರಂಪರಿಕ ವೈದ್ಯಕೀಯ ಪರಿಚಯಿಸಿದ ಹೆಗ್ಗಳಿಕೆ ಭಾರತದ್ದು ನಿರ್ಮಲಾನಂದ ಶ್ರೀ

ಭಾರತ ಜಗತ್ತಿನ ಜನಕ, ಭಾರತ ಇಲ್ಲದಿದ್ದರೆ ಜಗತ್ತೇ ಇಲ್ಲ, ಪಾರಂಪರಿಕ ವೈದ್ಯವನ್ನು ಹೇಳಿಕೊಟ್ಟವರು ಭಾರತೀಯರು, ಜಗತ್ತಿಗೆ ಲೆಕ್ಕ ಬರೆದಿಡಲು ಅಂಕಿ ಅಂಶಗಳನ್ನು ಹೇಳಿಕೊಟ್ಡವರು ನಮ್ಮ ದೇಶದ ಮಹಾನ್ ಇತಿಹಾ

ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ
ಮಳೆಯಲ್ಲಿ ಕೊಚ್ಚಿಹೋದ ಬದುಕು, ನೆರವಿನ ಹಸ್ತಕ್ಕಾಗಿ ಕಾದು ನಿಂತ ವಯೋವೃದ್ದೆ

ಚನ್ನಪಟ್ಟಣ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಲವಾರು ಜನಸಾಮಾನ್ಯರ ಬದುಕು ಕೊಚ್ಚಿ ಹೋಗಿದೆ, ನಗರದ ಸಾತನೂರು ರಸ್ತೆಯ ಲಾಳಾಘಟ್ಟ ವೃತ್ತದಲ್ಲಿರ

ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್
ಕಲೆ ಎಂಬುದು ಜೀವನದ ಭಾಗವಾಗಬೇಕು ಉಪನ್ಯಾಸಕ ಪಿ ಸುರೇಶ್

ಚನ್ನಪಟ್ಟಣ: ಕಲೆ ಎಂಬುದು ಕೇವಲ ಕೆಲವು ಗಂಟೆಗಳಿಗೆ ಸೀಮಿತವಾಗದೆ ತಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು, ಆಗಲೇ ಕಲೆಗೆ ಜೀವಂತಿಕೆ ತುಂಬಲು ಸಾಧ್

ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಕನಸನ್ನು ನನಸು ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರು ಹರೂರು ರಾಜಣ್ಣ
ಗಾಂಧೀಜಿಯವರ ಗ್ರಾಮೀಣಾಭಿವೃದ್ಧಿ ಕನಸನ್ನು ನನಸು ಮಾಡುತ್ತಿರುವ ವೀರೇಂದ್ರ ಹೆಗ್ಗಡೆಯವರು ಹರೂರು ರಾಜಣ್ಣ

ಚನ್ನಪಟ್ಟಣ: ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಗಾಂಧೀಜಿಯವರ ಜೊತೆಗೆ ಡಾ ರಾಧಾಕೃಷ್ಣನ್ ರವರು ಕನಸು ಕಾಣುವ ಮೂಲಕ ಜನರ

Top Stories »  


Top ↑