Tel: 7676775624 | Mail: info@yellowandred.in

Language: EN KAN

    Follow us :

ಗಬ್ಬೆದ್ದು ನಾರುತ್ತಿರುವ ನಗರ, ವಿಷದ ಕಸ ತಿಂದು ಒದ್ದಾಡಿ ಪ್ರಾಣ ಬಿಡುತ್ತಿರುವ ಪ್ರಾಣಿಪಕ್ಷಿಗಳು

Posted Date: 04 Oct, 2019

ಗಬ್ಬೆದ್ದು ನಾರುತ್ತಿರುವ ನಗರ, ವಿಷದ ಕಸ ತಿಂದು ಒದ್ದಾಡಿ ಪ್ರಾಣ ಬಿಡುತ್ತಿರುವ ಪ್ರಾಣಿಪಕ್ಷಿಗಳು

ಚನ್ನಪಟ್ಟಣ: ನಗರಸಭೆ ಅಧಿಕಾರಿಗಳು ಮತ್ತು ಕೆಲ ದುಷ್ಕರ್ಮಿಗಳ ಬೇಜಾವಾಬ್ದಾರಿಯಿಂದ ನಗರದ ಮೂಲೆ ಮೂಲೆಯಲ್ಲಿಯೂ ರಾಶಿ ರಾಶಿ ಕಸದ ತ್ಯಾಜ್ಯ ಬಿದ್ದಿದ್ದು ಹಲವಾರು ಪ್ರಾಣಿಗಳು, ಪಕ್ಷಿಗಳು ಕೊಳೆತು ನಾರಿ ವಿಷವಾಗಿ ಪರಿವರ್ತನೆಯಾದ ತ್ಯಾಜ್ಯವನ್ನು ತಿಂದು ಜೀರ್ಣಿಸಿಕೊಳ್ಳಲಾಗದೆ ಒದ್ದಾಡಿ ಪ್ರಾಣ ಬಿಡುತ್ತಿರುವುದು ಶೋಚನೀಯವಾಗಿದೆ.

ನಗರದ ಎಂ ಜಿ ರಸ್ತೆಯ ಡೂಂ ಲೈಟ್‌ (ಐದು ದೀಪಗಳ ವೃತ್ತ) ಬಳಿಯ ಪೆಟ್ಟಾ ಶಾಲೆ ಮತ್ತು ಎಪಿಎಂಸಿ ಮಾರುಕಟ್ಟೆ ಯ ಹಿಂಭಾಗದಲ್ಲಿ ದೊಡ್ಡ ಸರ್ಕಾರಿ ಜಾಗವಿದ್ದು ಆ ಜಾಗದಲ್ಲೆ *ಕುಡಿಯುವ ನೀರಿನ ದೊಡ್ಡ ಟ್ಯಾಂಕ್, ಶುದ್ದ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಸರ್ಕಾರಿ ಶಾಲೆ* ಇದ್ದು ಈ ಜಾಗದಲ್ಲಿ ಪ್ರತಿನಿತ್ಯ ಸ್ಥಳೀಯರು ಕಸವನ್ನು ತಂದು ಸುರಿಯುತ್ತಿದ್ದಾರೆ, ಅಲ್ಲದೆ ಅಕ್ಕಪಕ್ಕಗಳಲ್ಲಿ ಇರುವ ಕೋಳಿ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ನೇರವಾಗಿ ಸುರಿಯುವ ತ್ಯಾಜ್ಯವನ್ನು ತಿಂದ ನಾಯಿಗಳು, ಬೆಕ್ಕುಗಳು ಮತ್ತು ಕಾಗೆಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡಿ ಪ್ರಾಣ ಬಿಡುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ವೂ ವಾಸನೆ ಸಹಿಸಲಾಗದೆ ನಗರಸಭೆ ಅಧಿಕಾರಿಗಳು ಮತ್ತು ಕಸ ಸುರಿಯುವವರಿಗೆ ಶಾಪ ಹಾಕಲಿಕ್ಕಷ್ಟೇ ಸೀಮಿತವಾಗಿರುವುದು ದುರದೃಷ್ಟಕರ.

*ಪ್ರತಿನಿತ್ಯ ಕಸ ಸುರಿಯುವುದರ ಜೊತೆಗೆ ಮಾಂಸದ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ, ಮಾಂಸದ ತ್ಯಾಜ್ಯದ ಜೊತೆಗೆ ವಿಷ ಬೆರೆಸಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುತ್ತಿರಬಹುದು ಎಂಬ ಗುಮಾನಿ ಇದ್ದು ಸತ್ತು ಬಿದ್ದಿರುವ ಪ್ರಾಣಿ ಪಕ್ಷಿಗಳನ್ನು ಪರೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಪ್ರಾಣಿ ದಯಾಸಂಘದವರು ಇತ್ತ ಗಮನಹರಿಸಲಿ*
*ನವೀನಕುಮಾರ್, ಸ್ಥಳೀಯ ನಿವಾಸಿ.*

ಶಾಲೆಯ ಅಕ್ಕಪಕ್ಕಗಳಲ್ಲಿ ಮತ್ತು ಹಿಂಭಾಗ ಕಸದ ರಾಶಿ ಹಾಕಿದ್ದು ಪ್ರಾಣಿ ಪಕ್ಷಿಗಳು ತಿಂದ ನಂತರ ಶಾಲೆಯ ಮುಂಭಾಗವೇ ಸತ್ತುಬೀಳುತ್ತಿವೆ. ಇದರಿಂದ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾಗುವ ಸಂಭವ ಹೆಚ್ಚಿದ್ದು ಅಧಿಕಾರಿಗಳು ಗಮನಹರಿಸಬೇಕಾಗಿದೆ.*
*ಲಕ್ಷ್ಮಮ್ಮ ಮುಖ್ಯೋಪಾಧ್ಯಾಯಿನಿ ಪೆಟ್ಟಾ ಶಾಲೆ.*

*ಕೋಳಿ ಅಂಗಡಿ ಮಾಲೀಕರಿಗೇ ಈಗಾಗಲೇ ನೋಟೀಸ್ ನೀಡಿದ್ದೇವೆ, ಶೀಘ್ರವಾಗಿ ಅವರೆಲ್ಲರನ್ನೂ ಕರೆದು ಸಭೆ ನಡೆಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ ವೈಜ್ಞಾನಿಕವಾಗಿ ಒಂದೆಡೆ ಸುರಿಯಲು ಕ್ರಮ ಕೈಗೊಳ್ಳುವಂತೆ ತಿಳುವಳಿಕೆ ನೀಡುತ್ತೇವೆ. ಇನ್ನಿತರ ಮಾಂಸದಂಗಡಿಗಳಿಗೆ ನಗರಸಭೆಯ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.*
*ಮಾಯಣ್ಣಗೌಡ ಪ್ರಭಾರ ಆಯುಕ್ತ ನಗರಸಭೆ.*

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ
ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ

ರಾಮನಗರ : ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿ

ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ
ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ

ರಾಮನಗರ:ಮೇ/೨೯/೨೦/ಶುಕ್ರವಾರ. ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರು ಮೇ ೩೦ ರ ಬೆಳಿಗ್ಗೆ ೧೦.೦೦ ಗಂಟೆಗೆ ರಾಮನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ

ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು
ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಕದರಮಂಗಲದ ಬಳಿಯ ಕಂಬದ ನರಸಿಂಹಸ್ವಾಮಿ ದೇವಾಲಯದ ಬಳಿ ಕೊರೊನಾ ಲಾಕ್‌ಡೌನ್ ನಿಯಮವನ್ನು ಗಾಳಿಗೆ ತೂ

ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸದ ನುಡಿ.
ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸದ ನುಡಿ.

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಈರ್ವ ಜನತಾ ದಳದ ನಾಯಕರು ಮಾಜಿ ಶಾಸಕರ ಬಣ್ಣದವರು ಎಂದೇ ಪರಿಚಿತರಾಗಿರುವ ಆಪ್ತನ ಸಹಾಯದಿಂದ ಮಾಜಿ

ಅಕ್ರಮ ಫಿಲ್ಟರ್ ಮರಳು ದಂಧೆ; ದಾಳಿ ಮಾಡಿದ ತಹಶಿಲ್ದಾರ್, ಅಕ್ಕೂರು ಠಾಣೆಯಲ್ಲಿ ದೂರು ದಾಖಲು
ಅಕ್ರಮ ಫಿಲ್ಟರ್ ಮರಳು ದಂಧೆ; ದಾಳಿ ಮಾಡಿದ ತಹಶಿಲ್ದಾರ್, ಅಕ್ಕೂರು ಠಾಣೆಯಲ್ಲಿ ದೂರು ದಾಖಲು

ಚನ್ನಪಟ್ಟಣ:ಮೇ/೨೮/೨೦/ಗುರುವಾರ. ಇಂದು ಮುಂಜಾನೆ ನಾಲ್ಕು ಗಂಟೆಯ ಸಮಯದಲ್ಲಿ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿಯ ಸಾಮಂದಿಪುರ ಗ್ರಾಮದ ಕಣ್ವ ನದಿ

ಮೇ ೨೯ ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಜಿಲ್ಲಾ ಪ್ರವಾಸ
ಮೇ ೨೯ ರಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೮/೨೦/ಗುರುವಾರ. ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ ಮತ್ತು ಬ

ಮೇ ೨೯ ರಂದು ಗ್ರಾಮೀಣಾಭಿವೃದ್ಧಿ ಸಚಿವ  ಕೆ ಎಸ್ ಈಶ್ವರಪ್ಪ ಜಿಲ್ಲಾ ಪ್ರವಾಸ
ಮೇ ೨೯ ರಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಜಿಲ್ಲಾ ಪ್ರವಾಸ

ರಾಮನಗರ:ಮೇ/೨೮/೨೦/ಗುರುವಾರ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕಸ ಸಂಗ್ರಹಣಾ ವಾಹನಗಳ ವಿತರಣಾ ಕಾ

ಮಕ್ಕಳ ಲಸಿಕಾ ಕಾರ್ಯಕ್ರಮ ಹೆಚ್ಚಿನ ಆದ್ಯತೆ ನೀಡಿ: ಜಗದೀಶ್
ಮಕ್ಕಳ ಲಸಿಕಾ ಕಾರ್ಯಕ್ರಮ ಹೆಚ್ಚಿನ ಆದ್ಯತೆ ನೀಡಿ: ಜಗದೀಶ್

ರಾಮನಗರ:ಮೇ/೨೮/೨೦/ಗುರುವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ಏಪ್ರಿಲ್ ಮಾಹೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲು ತೊಂದರೆಯಾಗಿರುತ್ತದೆ. ಜಿಲ

ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa
ಸಾಕವ್ವ ನಿಗೆ ಸಾಂತ್ವನ; ಪ್ರಾಣಕ್ಕೆ ತೊಂದರೆಯಿಲ್ಲ. ಇನ್ನೂ ಇಪ್ಪತ್ನಾಲ್ಕು ಗಂಟೆ ಕಣ್ಣಿನ ಬಗ್ಗೆ ಹೇಳಲಾಗುವುದಿಲ್ಲa

ಬೆಂಗಳೂರು/ಚನ್ನಪಟ್ಟಣ:ಮೇ/೨೮/೨೦/ಗುರುವಾರ. ನಿನ್ನೆ ಬೆಳಿಗ್ಗೆ ತನ್ನ ಮನೆಯ ಕಾಂಪೌಂಡ್ ನೊಳಗೆ ಕರಡಿಯೊಂದು ಅವಿತು ಕುಳಿತು ದಾಳಿ ಮಾಡಿದ್ದರಿಂದ ಒ

ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಇಕ್ರಂ
ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಇಕ್ರಂ

ರಾಮನಗರ:ಮೇ/೨೭/೨೦/ಬುಧವಾರ. ಇರುಳಿಗ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾ ಪಂಚಾಯಿ

Top Stories »  

Top ↑