Tel: 7676775624 | Mail: info@yellowandred.in

Language: EN KAN

    Follow us :


ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

Posted Date: 07 Nov, 2019

ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು. ಈಗಾಗಲೇ ಸರ್ವೇ ನಡೆದು ಗುರುತು ಮಾಡಿದ್ದರೂ ಸಹ ತಾಲ್ಲೂಕು ಆಡಳಿತ, ನಗರಸಭೆ, ಜಿಲ್ಲಾ ಪಂಚಾಯತಿ ಹಾಗೂ ದೂರುದಾರರ ಸಮಕ್ಷಮದಲ್ಲಿ ಸರ್ವೇ ಮಾಡಿಸಿ ಒತ್ತುವರಿ ಮಾಡಿಕೊಂಡಿರುವ ಒಟ್ಟು ಇಪ್ಪತ್ತಾರು ಮಂದಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ.


ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಎಲ್ಲಾ ಅಧಿಕಾರಿಗಳು ಸೇರಿ ಸರ್ವೇ ಕೆಲಸದಲ್ಲಿ ಭಾಗವಹಿಸಿ ಕೆರೆ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿರುವವರಿಗೆ ಶೀಘ್ರವಾಗಿ ತಮ್ಮ ಮನೆಯ ದಾಖಲೆಗಳನ್ನು ಒದಗಿಸುವಂತೆ ಹಾಗೂ ನೋಟೀಸ್ ಗೆ ಉತ್ತರಿಸುವಂತೆ ಸೂಚಿಸಿದರು.


ಸರ್ವೇ ನಂಬರ್ ೧೩ ರಲ್ಲಿರುವ ಶೆಟ್ಟಿಹಳ್ಳಿ ಕೆರೆಯು ಒಟ್ಟು ಒಟ್ಟು ೨೦ ಎಕರೆ ೧೪ ಗುಂಟೆ ಇದ್ದು ೦೧ ಎಕರೆ ೨೮ ಗುಂಟೆ ಒತ್ತುವರಿಯಾಗಿದೆ. ರಸ್ತೆಯ ವಿಸ್ತೀರ್ಣ ೨೬ ಗುಂಟೆಯಿದ್ದು ಹಾಲಿ ೧೮ ಎಕರೆ ಮಾತ್ರ ಉಳಿದಿದ್ದು ಸಾಮಾಜಿಕ ಕಾರ್ಯಕರ್ತರಾದ ವಕೀಲ ಸುರೇಶ್ ಮತ್ತು ಗಜೇಂದ್ರ ಸಿಂಗ್ ರವರು ದಾಖಲೆಗಳ ಸಮೇತ ಬಹುತೇಕ ಇಲಾಖೆಗಳಿಗೆ ದೂರು ಸಲ್ಲಿಸಿದರು. ಲೋಕಾಯುಕ್ತ ಅಧಿಕಾರಿಗಳು ಆಸ್ಥೆ ವಹಿಸಿದ ಕಾರಣ ತಾಲ್ಲೂಕು ಅಧಿಕಾರಿಗಳು ಇಂದು ಸಂಪೂರ್ಣ ಸರ್ವೇ ಮಾಡಿ ಗುರುತಿಸಿ ನೋಟೀಸ್ ನೀಡಲು ತಯಾರಿ ನಡೆಸಿದ್ದಾರೆ.


*ಇದು ಶೆಟ್ಟಿಹಳ್ಳಿ ಕೆರೆಯಲ್ಲ ? ಮಂಗಳವಾರಪೇಟೆ ಕೆರೆ ?*


*ನಮ್ಮ ಇಲಾಖೆಗೆ ಬರುವುದೇ ಇಲ್ಲ ಎಂದು ವಾದ ಮಾಡುತ್ತಿದ್ದ ಜಿಲ್ಲಾ ಪಂಚಾಯತಿ ಎಇಇ ಚನ್ನಪ್ಪ ರವರು ನಮ್ಮ ಇಲಾಖೆಗೆ ಬರುತ್ತದೆ ಎಂದು ಒಪ್ಪಿಕೊಂಡರಲ್ಲದೆ ಇದು ಆಡು ಮಾತಿನಲ್ಲಿ ಶೆಟ್ಟಿಹಳ್ಳಿ ಕೆರೆ ಎಂದು ದಾಖಲೆಗಳಲ್ಲಿ ಮಂಗಳವಾರಪೇಟೆ ಕೆರೆ ಎಂದು ಇದೆ. ಹಾಗಾಗಿ ನಮಗೆ ಗೊಂದಲವಿತ್ತು ಎಂದರು.*


*ಸರ್ವೇ ಕಾರ್ಯ ಮುಗಿದಿದ್ದು ಒತ್ತುವರಿದಾರರಿಗೆ ನೋಟೀಸ್ ನೀಡಲಾಗುವುದು. ನೋಟೀಸ್ ಗೆ ಉತ್ತರಿಸಿದ ನಂತರ ಚರ್ಚಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.*

*ಸುದರ್ಶನ್ ತಹಶಿಲ್ದಾರ್.*


*ಒತ್ತುವರಿದಾರರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಶೀಘ್ರವಾಗಿ ನೋಟೀಸ್ ಜಾರಿ ಮಾಡಲಾಗುವುದು. ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.*

*ಶಿವನಾಂಕರಿಗೌಡ. ಪೌರಾಯುಕ್ತ.*


*ನಮ್ಮ ಹೋರಾಟಕ್ಕೆ ಜಯ ದೊರಕುವ ಸಾಧ್ಯತೆ ಅಗಾಧವಾಗಿದ್ದು ಅಧಿಕಾರಿಗಳು ಸಾಮಾಜಿಕ ನ್ಯಾಯ ಒದಗಿಸಿಕೊಡುವ ವಿಶ್ವಾಸವಿದೆ. ಶೆಟ್ಟಿಹಳ್ಳಿ ಕೆರೆ ಅಷ್ಟೇ ಅಲ್ಲದೇ ಜಿಲ್ಲಾದ್ಯಂತ ಒತ್ತುವರಿ ಆಗಿರುವ ಸರ್ಕಾರದ ಎಲ್ಲಾ ಜಾಗದ ವಿರುದ್ಧ ಹೋರಾಡಲು ನಾವು ಬದ್ದರಾಗಿದ್ದೇವೆ.*

*ಸುರೇಶ್ ಮತ್ತು ಗಜೇಂದ್ರ ಸಿಂಗ್.*


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಧೂಳು ತುಂಬಿ, ಬೀಗ ಜಡಿಸಿಕೊಂಡು ನಿಂತಿರುವ ಅನಾಮಧೇಯ ಕಾರು !?!
ಧೂಳು ತುಂಬಿ, ಬೀಗ ಜಡಿಸಿಕೊಂಡು ನಿಂತಿರುವ ಅನಾಮಧೇಯ ಕಾರು !?!

ಚನ್ನಪಟ್ಟಣ: ನಗರ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ಸರಿಯಾದ ವಾರಸುದಾರರಿಲ್ಲದೆ ನೋಂದಣಿ ತಿರುಚಿದ ಮಾರುತಿ ಓಮ್ನಿ ಕಾರ

ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು
ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು

ಚನ್ನಪಟ್ಟಣ: ನಗರದ ಪೋಲಿಸ್ ಠಾಣೆ ವ್ಯಾಪ್ತಿಯ ಪಾರ್ವತಿ ಟಾಕೀಸ್ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ಮಾರುತಿ ಓಮ್ನಿ ಕಾರನ್ನು ಗಸ್ತು ಪೋಲಿಸರು ವಶಪಡ

ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು  ಬೇಡ ಆಚಾರ್ಯ ಮಹಾ ಶ್ರಮಣಜೀ
ಬದುಕು ವ್ಯಸ್ತ ವಾಗಿರಲಿ ಅಸ್ತವ್ಯಸ್ತವಾಗುವದು ಬೇಡ ಆಚಾರ್ಯ ಮಹಾ ಶ್ರಮಣಜೀ

ಚನ್ನಪಟ್ಟಣ: ನಮ್ಮ ಇಂದಿನ ಸಾಮಾಜಿಕ ಬದುಕು ವ್ಯಸ್ತವಾಗಿರಬೇಕು, ಅಲ್ಲ ಸಲ್ಲದ ವಿಚಾರಗಳಲ್ಲಿ  ಮುಳುಗಿ ಅಸ್ತವ್ಯಸ್ತವಾಗುವದು ಬೇಡ ಎಂದು ಜೈನ

ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ
ಸೃಜನಾತ್ಮಕ ಮಹಾ ಕಾವ್ಯಗಳ ಮೂಲಕವೇ ಕನಕದಾಸರು ಇಂದಿಗೂ ಜೀವಂತ. ಭೂಹಳ್ಳಿ ಪುಟ್ಟಸ್ವಾಮಿ

ಚನ್ನಪಟ್ಟಣ: ಪುರಾತನ ಕಾಲದಿಂದ ಇಂದಿನವರೆಗೂ ಕುವೆಂಪು ರವರ ಆದಿಯಾಗಿ ಎಲ್ಲಾ ಕವಿಗಳು ಒಂದು ಅಥವಾ ಎರಡು ಮಹಾ ಕಾವ್ಯಗಳನ್ನಷ್ಟೇ ರಚಿಸಿದ್ದಾರೆ. ಕನಕದಾಸ

ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ
ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ

ಚನ್ನಪಟ್ಟಣ: ಇಂದಿರಾಗಾಂಧಿ ಆವಾಸ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ, ವಾಜಪೇಯಿ ವಸತಿ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಫಲ

ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !
ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !

ಚನ್ನಪಟ್ಟಣ: ರಾಜ್ಯ ಹೆದ್ದಾರಿ ಸಾತನೂರು ರಸ್ತೆಯಲ್ಲಿ ಕಿರಿದಾದ ರಸ್ತೆಗಳು, ಕಿರಿದಾದ ಸೇತುವೆಗಳು ಹಾಗೂ ಕುಸಿದ ಸೇತುವೆಗಳದ್ದೇ ದರ್ಬಾರು ಎಂಬುದು

ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು
ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಐತಿಹಾಸಿಕ ಕೆಂಗಲ್ ದೇವಾಲಯದ ಮುಂಭಾಗದಲ್ಲಿ ಇರುವ ಪುರಾಣ ಪ್ರಸಿದ್ಧ ಕಲ್ಯಾಣಿ (ಕೊಳ) ಯಲ್ಲಿ ಕಾಲು ಜಾರಿ ಬಿದ್ದು

ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ
ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳ ಹದಿನೈದನೇ ತಾರೀಖು ನಡೆಯಲಿರುವ ಕನಕ ಜಯಂತಿ ಯ ಪೂ

ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ
ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು.

ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.
ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖ

Top Stories »  


Top ↑