Tel: 7676775624 | Mail: info@yellowandred.in

Language: EN KAN

    Follow us :


ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು

Posted Date: 15 Nov, 2019

ನೋಂದಣಿ ತಿರುಚಿದ ವಾಹನ ವಶ, ಕ್ರಮ ಕೈಗೊಳ್ಳದ ಪೋಲಿಸರು, ಬಾರದ ಮಾಲೀಕರು

ಚನ್ನಪಟ್ಟಣ: ನಗರದ ಪೋಲಿಸ್ ಠಾಣೆ ವ್ಯಾಪ್ತಿಯ ಪಾರ್ವತಿ ಟಾಕೀಸ್ ರಸ್ತೆಯಲ್ಲಿ ವಾರಸುದಾರರಿಲ್ಲದೆ ನಿಂತಿದ್ದ ಮಾರುತಿ ಓಮ್ನಿ ಕಾರನ್ನು ಗಸ್ತು ಪೋಲಿಸರು ವಶಪಡಿಸಿಕೊಂಡು ಠಾಣೆಯ ಮುಂದೆ ನಿಲ್ಲಿಸಿ ವಾಹನ ಮಾಲೀಕರನ್ನು (ನಿಜವಾದ ಮಾಲೀಕರಲ್ಲ) ಕರೆಸಿ ದಾಖಲೆ ಸರಿ ಇಲ್ಲದ ಕಾರಣ ಅವರನ್ನು ವಾಪಸು ಕಳುಹಿಸಿ, ಕಾರನ್ನು ಪರಿಶೀಲಿಸದೇ, ಬಂದಿದ್ದವರನ್ನು ವಿಚಾರಿಸದೇ ಬೇಜಾವಾಬ್ದಾರಿಯಿಂದ ಅವರು ಕೊಟ್ಟ ಹೇಳಿಕೆಯನ್ನು ಬರೆದುಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿ ಕಳೆದ ಮೂರು ತಿಂಗಳಿನಿಂದಲೂ  (೨೦/೦೭/೧೯) ನಿಲ್ಲಿಸಿಕೊಂಡಿರುವುದು ಅನುಮಾನಕ್ಕೆಡೆ ಮಾಡಿದೆ.


*ಕಾರಿನ ನೋಂದಣಿಯೇ ಸರಿ ಇಲ್ಲ*


ಕಾರಿನ ನೋಂದಣಿ ಸಂಖ್ಯೆ *KA 03 CKP 739* ಎಂಬ ಸಂಖ್ಯೆ ಹೊಂದಿದ್ದು ಕರ್ನಾಟಕದ ಯಾವ ಜಿಲ್ಲೆಯಲ್ಲೂ ಸಹ ಈ ನೋಂದಣಿ ಯ ಕಾರು ಇಲ್ಲ.

*CKP 739* ಅಥವಾ *KA 03 739* ಈ ಎರಡೂ ಸಂಖ್ಯೆ ಯಲ್ಲಿಯೂ ಸಹ ಮಾರುತಿ ಓಮ್ನಿ ಕಾರು ನೋಂದಣಿಯಾಗಿಲ್ಲ. *KA 03 CKP 739* ಈ ನೋಂದಣಿ ಇದೆಯಾ ಇಲ್ವಾ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಬಂದಿದ್ದ ಅನಾಮಧೇಯರನ್ನು ಬಿಟ್ಟು ಕಳುಹಿಸಿರುವುದು ಎಷ್ಟು ಸರಿ ?


*ಕಾರು ಮತ್ತು ಸಂಖ್ಯೆ ಪರಿಶೀಲಿಸದೇ ತಪ್ಪು ವರದಿ ಕೋಟ್೯ಗೆ*


ಕಾರಿನ ಹಿಂಬದಿ ಮತ್ತು ಮುಂಬದಿ ಎರಡೂ ಭಾಗದಲ್ಲಿ *KA 03 CK P739 (ಈ ನಂಬರನ್ನು ಸೂಕ್ಷ್ಮವಾಗಿ ಗಮನಿಸಿ)* ಈ ನೋಂದಣಿ ಇದ್ದು *MARUTI-SUZUKI OMNI* ಎಂದೇ ಇದ್ದರೂ ಸಹ ಪೋಲಿಸರು ಗಮನಿಸದೆ ಮಾಲೀಕರು ಎನಿಸಿಕೊಂಡವರು ನೀಡಿದ ವರದಿಯಾದ *MARUTI 800, Chassis no 71600. Engine no 120177, ಸಂತನು ಮುಖ್ಯೋಪಾಧ್ಯಾಯ, ಸಿ-೧೦/೧೪೨೫. ಬಿಡಿಎ ಫ್ಲಾಟ್ಸ್, ಆಸ್ಟಿನ್ ಟೌನ್, ಬೆಂಗಳೂರು ೪೩ ಎಂದು ನಮೂದಿಸಿ PF No 19/2019. L pet no 248/19* ಎಂದು ನ್ಯಾಯಾಲಯಕ್ಕೆ  ವರದಿ ಒಪ್ಪಿಸಿ ಕೈ ತೊಳೆದುಕೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.


ಈಗಾಗಲೇ ರಾಮನಗರ ದಲ್ಲಿ ಉಗ್ರರನ್ನು ಎರಡು ಬಾರಿ ಬಂಧಿಸಿದ್ದು ರಾಮನಗರ ಮತ್ತು ಚನ್ನಪಟ್ಟಣ ದಲ್ಲಿ ಬಾಂಗ್ಲಾ ವಲಸಿಗರು ಇರುವ ಸಾಧ್ಯತೆ ಇದ್ದು ಪೋಲಿಸರು ಇಂತಹ ಅನಾಮಧೇಯ ಹಾಗೂ ತಿರುಚಿದ ನೋಂದಣಿ ಯ ವಾಹನಗಳ ಮೇಲೆ ಕಣ್ಣಿಟ್ಟು ಅನುಮಾನ ಬಂದ ತಕ್ಷಣ ವಿಚಾರಣೆಗೆ ಒಳಪಡಿಸುವುದು ಸೂಕ್ತ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.


*ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಪರಶೀಲಿಸಿ ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇನೆ.*

*ರಾಮರಾಜನ್ ಐಪಿಎಸ್. ಎಸಿಪಿ ಚನ್ನಪಟ್ಟಣ*


*ಗೋಪಣ್ಣ ಎಂಬ ವ್ಯಕ್ತಿ ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಗೆ ಸ್ವೆಟರ್ ತಂದುಕೊಡುತ್ತಿದ್ದು ಆಗಾಗ್ಗೆ ತನ್ನ ಕಾರನ್ನು ಹದಿನೈದು ಇಪ್ಪತ್ತು ದಿನ ಇಲ್ಲೇ ಬಿಟ್ಟು ಹೋಗುತ್ತಿದ್ದರು. ಪೋಲಿಸರು ವಶಪಡಿಸಿಕೊಂಡ ನಂತರವೇ ನನಗೆ ಈ ನೋಂದಣಿ ಸರಿಯಲ್ಲ ಎಂದು ಗೊತ್ತಾಗಿದೆ. ಅವರ ವೈಯುಕ್ತಿಕ ಮಾಹಿತಿ ಇಲ್ಲ.*

*ಸುಬ್ಬಯ್ಯಚೆಟ್ಟಿ ಬಾಲು ಪಬ್ಲಿಕ್ ಶಾಲೆ ಮುಖ್ಯಸ್ಥ.*


*ನಾನು ಆ ವ್ಯಕ್ತಿಗಳನ್ನು ನೋಡಿದ್ದೇನೆ, ಸಭ್ಯರಂತೆ ಕಾಣಿಸುವುದಿಲ್ಲ. ನಂಬರ್ ಸರಿ ಇಲ್ಲದಿದ್ದರೂ ಪೋಲಿಸರು ಮಾಹಿತಿ ಸಂಗ್ರಹಿಸದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.*

*ಲ್ಯಾಬ್ ಚಂದ್ರು, ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಗಣರಾಜ್ಯೋತ್ಸವ ಪ್ರಯುಕ್ತ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಗಣರಾಜ್ಯೋತ್ಸವ ಪ್ರಯುಕ್ತ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚನ್ನಪಟ್ಟಣ: ೭೧ ನೇ ಗಣರಾಜ್ಯೋತ್ಸವ ದ ಪ್ರಯುಕ್ತ ರೋಟರಿ ಚನ್ನಪಟ್ಟಣ, ರೋಟರಿ ಬೆಂಗಳೂರು ನ್ಯಾಷನಲ್ ಪಾಕ್೯, ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಶ್ರೀ

ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.
ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.

ನ್ನಪಟ್ಟಣ: ನಗರದ ಯುವಕರು ಒಡಗೂಡಿ ಪರಿಸರ ಕಾಳಜಿಯಿಂದ ಕಟ್ಟಿಕೊಂಡಿರುವ ಸಂಸ್ಥೆ *ಒನ್ ಭೂಮಿ ಫೌಂಡೇಶನ್*. ಈ ಸಂಸ್ಥೆಯ ಕಾರ್ಯಕರ್ತರು ಇಂದು ನಗರದ

ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್
ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್

ಚನ್ನಪಟ್ಟಣ: ನಾವುಗಳು ಇಂದು ರಾಜಾರೋಷವಾಗಿ, ಸ್ವತಂತ್ರವಾಗಿ, ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರೆ ಅದಕ್ಕೆ ನಮ್ಮ ಸಂವಿಧಾನವೇ ಕ

ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ
ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ

ಚನ್ನಪಟ್ಟಣ: ಎಲ್ಲಾ ಧರ್ಮದ, ಸಮುದಾಯದ ಜನರಿಗೆ ಪ್ರಶ್ನಿಸುವ ಹಕ್ಕು ನೀಡಿದ್ದೇ ನಮ್ಮ ಸಂವಿಧಾನ ಎಂದು ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.

<

ವಿಶ್ವದಲ್ಲೇ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ದಂಡಾಧಿಕಾರಿ ಸುದರ್ಶನ್
ವಿಶ್ವದಲ್ಲೇ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಶ್ರೇಷ್ಠ ಸಂವಿಧಾನ ನಮ್ಮ ಸಂವಿಧಾನ ಎಂದು ತಹಶಿಲ್ದಾರ್ ಸುದರ್ಶನ್ ರವರು ಮಕ್ಕಳನ್ನು ಉದ್

ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ
ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ

ಚನ್ನಪಟ್ಟಣ: ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ಒಟ್ಟಾರೆ ಪೌರತ್ವ ಸಾಬೀತು ಕಾನೂನು ಬಹಿಸ್ಕರಿಸಿ ನಗರದ ಮುಸ್ಲಿಮರು ಮತ್ತು ಕೆಲ ಕಾಂಗ್ರೆಸ್ ಮು

ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ
ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ

ಚನ್ನಪಟ್ಟಣ: ಇಂದು ಇಲ್ಲಿನ ನಗರಸಭೆಯ ಆವರಣದಲ್ಲಿ ೨೦ ೨೦-೨೧ನೇ ಸಾಲಿನ ಆಯವ್ಯಯಕ್ಕೆ ಸಂಬಂಧಪಟ್ಟಂತೆ ನಗರಪ್ರದೇಶದಲ್ಲಿ ಕೈಗೊಳ್ಳ ಬೇಕಾದ ಅಭಿವೃದ್ಧಿ ಕಾ

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಗ್ರಾಮಸ್ಥರಿಂದ ರಸ್ತೆತಡೆ ಪ್ರತಿಭಟನೆ.
ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಗ್ರಾಮಸ್ಥರಿಂದ ರಸ್ತೆತಡೆ ಪ್ರತಿಭಟನೆ.

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕುಣಿಗಲ್ ಮುಖ್ಯರಸ್ತೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕುಂತೂರುದೊಡ್ಡಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ನ

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ತಹಶಿಲ್ದಾರ್ ದಾಳಿ ವಶ
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ತಹಶಿಲ್ದಾರ್ ದಾಳಿ ವಶ

ಚನ್ನಪಟ್ಟಣ: ನಗರದ ತಾಜ್ ಹೋಟೆಲ್ ಮುಂಭಾಗದ ಮನೆಯೊಂದರಲ್ಲಿ ಗೃಹ ಬಳಕೆಯ (ಇಂಡೇನ್ ಗ್ಯಾಸ್) ಹದಿನೈದು ಗ್ಯಾಸ್ ಸಿಲಿಂಡರ್ ಗಳನ್ನು ತಹಶಿಲ್ದಾರ್ ಸು

ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ
ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ

Top Stories »  


Top ↑