Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ರಾರಾಜಿಸಿದ ಭಗವಾನ ಬಿರಸಾ ಮುಂಡಾ

Posted Date: 22 Nov, 2019

ರಾಮನಗರದಲ್ಲಿ ರಾರಾಜಿಸಿದ ಭಗವಾನ  ಬಿರಸಾ ಮುಂಡಾ

ಸಾರ್ಥಕಾಯಿತು ಗಿರಿಜನ ಸ್ವಾಭಿಮಾನ ದಿನ : ವನವಾಸಿ ಕಲ್ಯಾಣ, ಕರ್ನಾಟಕದ ವತಿಯಿಂದ ರಾಮನಗರ ಜಿಲ್ಲೆಯಲ್ಲೊಂದು ವಿಶೆಷ ರೀತಿಯಲ್ಲಿ ಗಿರಿಜನ ಸ್ವಾಭಿಮಾನ ದಿನ (ಭಗವಾನ್ ಬಿರಸಾ ಮುಂಡಾ ಜಯಂತಿ)  ವನ್ನು  ‌ ‌    ದಿನಾಂಕ 21/11/2019 ರಂದು ಆಚರಿಸಲಾಯಿತು.

ರಾಮನಗರ , ಕನಕಪುರ, ಮಾಗಡಿ ತಾಲೂಕುಗಳಲ್ಲಿ ಬುಡಕಟ್ಟು ಜನಾಂಗದ ಈರುಳಿಗರನ್ನು ಒಳಗೊಂಡ ರಾಮನಗರ ಜಿಲ್ಲೆಯು ಅದ್ಭುತವಾದ ವನವಾಸಿಗರ ಶೊಭಾಯಾತ್ರೆಗೆ ಸಾಕ್ಷಿಯಾಯಿತು.

ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಸಾಂಪ್ರದಾಯಿಕ ಹಾಡು , ನೃತ್ಯ, ವಾದ್ಯ , ಕುಣಿತದ ಮೂಲಕ   ವನವಾಸಿ ಬಂಧುಗಳು,  ಪುಟಾಣಿ ಮಕ್ಕಳು, ಯುವಕರು, ಮಾತೆಯರು ಸಮುದಾಯದ ಹಿರಿಯರು ಮತ್ತು ವನವಾಸಿ ಕಲ್ಯಾಣದ ಹಿರಿಯರನ್ನು ಒಳಗೊಂಡ ಶೋಭಾಯಾತ್ರೆಯು ...
ಭಗವಾನ್ ಬಿರಸಾ ಮುಂಡಾ ಕೀ ಜೈ.. ಭಾರತ್ ಮಾತಾ ಕೀ ಜೈ.. ವನವಾಸಿ ನಗರವಾಸಿ ಗ್ರಾಮವಾಸಿ ನಾವೆಲ್ಲರೂ ಭಾರತವಾಸಿ.. ಮುಂತಾದ ಘೊಷಣೆಗಳನ್ನು ಮೊಳಗಿಸುತ್ತಾ 1ಕಿಮಿ ದೂರದವರೆಗೂ ಸುಭದ್ರವಾದ ಆರಕ್ಷಕ (ಪೊಲಿಸ್) ಪಡೆಯೊಂದಿಗೆ ಹೊರಟ ಶೊಭಾಯಾತ್ರೆಯು.. ರಾಮನಗರದ ಗಲ್ಲಿ ಗಲ್ಲಿಗಳಲ್ಲಿ ಬುಡಕಟ್ಟು ಜನರ ಒಗ್ಗಟ್ಟು, ಸಾಂಪ್ರದಾಯಿಕ ಕಲೆ , ಮತ್ತು ಶಿಸ್ತಿನಮೂಲಕ ಭಗವಾನ್ ಬಿರಸಾ ಮುಂಡಾ ರವರನ್ನು ಪರಿಚಯಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಪ್ರೆಕ್ಷಕರಿಗೆ ಮನರಂಜನೆ ನೀಡುವಲ್ಲಿ ಸಾಕ್ಷಿಯಾಯಿತು.

ವೇದಿಕೆ ಕಾರ್ಯಕ್ರಮ :
ಶೊಭಾಯಾತ್ರೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ವನವಾಸಿ ಬಂಧುಗಳು ಮತ್ತು ನಗರದ ಜನರು ಭಾಗವಹಿಸಿ ಸಭಾಂಗಣ ಪೂರ್ತಿ ತುಂಬಿ ತುಳುಕಿತು.

ವೇದಿಕೆಯನ್ನು ಅಲಂಕರಿಸಿದ
ವನವಾಸಿ ಕಲ್ಯಾಣದ ಹಿರಿಯರಾದ ಶ್ರೀ ಶ್ರೀಪಾದ್ ( ಕ್ಷೆತ್ರಿಯ ಸಂಘಟನಾ ಕಾರ್ಯದರ್ಶಿ) ಬಿರಸಾ ಮುಂಡಾರವರ ಕುರಿತು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಶ್ರೀ ವೆಂಕಟೇಶ್ ಸಾಗರ್ ( ರಾಜ್ಯಧ್ಯಕ್ಷರು) ಪ್ರಸ್ತಾವಣಾ ಭಾಷಣವನ್ನು ಮಾಡಿದರು.
ಶ್ರೀ ಸತ್ಯಕಿರ್ತೀ ( ಪ್ರಾಂತದ ಸಹ ಕಾರ್ಯದರ್ಶಿಗಳು) ಕಾರ್ಯಕ್ರಮ ಪೂರ್ತಿ ಉಪಸ್ತಿತರಿದ್ದರು.
ಹಾಗು ಅಧಿಕಾರಿಗಳಾದ
ಶ್ರೀಮತಿ ಎಂ ಎಸ್ ಅರ್ಚನಾ ( ರಾಮನಗರ ಜಿಲ್ಲಾಧಿಕಾರಿಗಳು)
ಪ್ರೋ ಟಿ ಬಿ  ಬಸವನಗೋಡ ( ನಿರ್ದೇಶಕರು, ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು)
ಶ್ರೀ ಕೃಷ್ಣಮೂರ್ತಿ ( ರಾಮನಗರ  ಜಿಲ್ಲಾಧ್ಯಕ್ಷರು , ವನವಾಸಿ ಕಲ್ಯಾಣ)
ಇವರೆಲ್ಲರೂ..
ಮಾತನಾಡಿ ಸಮೂದಾಯದ ಸಮಸ್ಯೆಗಳನ್ನು   ಮತ್ತು ಮುಂದಿನ ದಿನಗಳಲ್ಲಿ ವನವಾಸಿ ಕಲ್ಯಾಣದ ಜೊತೆಯಲ್ಲಿ ಮಾಡಬಹುದಾದ ಕೆಲವು ಕಾರ್ಯಗಳನ್ನು ಪ್ರಸ್ತುತಪಡಿಸಲಾಯಿತು.
ಶ್ರೀ ರಾಜು (ಕಾರ್ಯಕ್ರಮದ ನಿರ್ವಹಣೆ ಮಾಡಿದರು)
ಶ್ರೀ ಸತೀಶ್ ( ಸ್ವಾಗತ ಪರಿಚಯ ನಡೆಸಿಕೊಟ್ಟರು.)
ಶ್ರೀ ಮಂಜುನಾಥ ( ರಾಮನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ.) ವಂದನಾರ್ಪನೆ ನಡೆಸಿಕೊಟ್ಟರು.
ಶ್ರೀ ದೊಂಡು ಪಾಟೀಲ ( ರಾಜ್ಯ ಹಿತರಕ್ಷಾ ಪ್ರಮುಖರು, ವನವಾಸಿ ಕಲ್ಯಾಣ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಗಣರಾಜ್ಯೋತ್ಸವ ಪ್ರಯುಕ್ತ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಗಣರಾಜ್ಯೋತ್ಸವ ಪ್ರಯುಕ್ತ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚನ್ನಪಟ್ಟಣ: ೭೧ ನೇ ಗಣರಾಜ್ಯೋತ್ಸವ ದ ಪ್ರಯುಕ್ತ ರೋಟರಿ ಚನ್ನಪಟ್ಟಣ, ರೋಟರಿ ಬೆಂಗಳೂರು ನ್ಯಾಷನಲ್ ಪಾಕ್೯, ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಶ್ರೀ

ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.
ಗಿಡ ನೆಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ ಒನ್ ಭೂಮಿ ಫೌಂಡೇಶನ್ ಕಾರ್ಯಕರ್ತರು.

ನ್ನಪಟ್ಟಣ: ನಗರದ ಯುವಕರು ಒಡಗೂಡಿ ಪರಿಸರ ಕಾಳಜಿಯಿಂದ ಕಟ್ಟಿಕೊಂಡಿರುವ ಸಂಸ್ಥೆ *ಒನ್ ಭೂಮಿ ಫೌಂಡೇಶನ್*. ಈ ಸಂಸ್ಥೆಯ ಕಾರ್ಯಕರ್ತರು ಇಂದು ನಗರದ

ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್
ನಮ್ಮನ್ನು ಸ್ವತಂತ್ರವಾಗಿ ಜೀವಿಸಲು ತಮ್ಮನ್ನೇ ಸಮರ್ಪಿಸಿಕೊಂಡವರನ್ನು ನೆನೆಯೋಣಾ ನ್ಯಾ ನಟರಾಜ್

ಚನ್ನಪಟ್ಟಣ: ನಾವುಗಳು ಇಂದು ರಾಜಾರೋಷವಾಗಿ, ಸ್ವತಂತ್ರವಾಗಿ, ನಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರೆ ಅದಕ್ಕೆ ನಮ್ಮ ಸಂವಿಧಾನವೇ ಕ

ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ
ಸರ್ವರಿಗೂ ಹಕ್ಕು ನೀಡಿದ್ದೇ ಸಂವಿಧಾನ ಪೌರಾಯುಕ್ತ ಶಿವನಂಕಾರಿಗೌಡ

ಚನ್ನಪಟ್ಟಣ: ಎಲ್ಲಾ ಧರ್ಮದ, ಸಮುದಾಯದ ಜನರಿಗೆ ಪ್ರಶ್ನಿಸುವ ಹಕ್ಕು ನೀಡಿದ್ದೇ ನಮ್ಮ ಸಂವಿಧಾನ ಎಂದು ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.

<

ವಿಶ್ವದಲ್ಲೇ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ದಂಡಾಧಿಕಾರಿ ಸುದರ್ಶನ್
ವಿಶ್ವದಲ್ಲೇ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ ನಮ್ಮದು ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಹಾಗೂ ಶ್ರೇಷ್ಠ ಸಂವಿಧಾನ ನಮ್ಮ ಸಂವಿಧಾನ ಎಂದು ತಹಶಿಲ್ದಾರ್ ಸುದರ್ಶನ್ ರವರು ಮಕ್ಕಳನ್ನು ಉದ್

ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ
ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ವಿರುದ್ದ ಪ್ರತಿಭಟನೆ, ತಹಶಿಲ್ದಾರ್ ಗೆ ಮನವಿ

ಚನ್ನಪಟ್ಟಣ: ಸಿ ಎ ಎ, ಎನ್ ಆರ್ ಸಿ, ಎನ್ ಪಿ ಆರ್ ಒಟ್ಟಾರೆ ಪೌರತ್ವ ಸಾಬೀತು ಕಾನೂನು ಬಹಿಸ್ಕರಿಸಿ ನಗರದ ಮುಸ್ಲಿಮರು ಮತ್ತು ಕೆಲ ಕಾಂಗ್ರೆಸ್ ಮು

ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ
ನಗರಸಭೆ ಪೂರ್ವಭಾವಿ ಆಯವ್ಯಯ ಸಭೆ, ಸಾರ್ವಜನಿಕರಿಂದ ದೂರಿನ ಸುರಿಮಳೆ

ಚನ್ನಪಟ್ಟಣ: ಇಂದು ಇಲ್ಲಿನ ನಗರಸಭೆಯ ಆವರಣದಲ್ಲಿ ೨೦ ೨೦-೨೧ನೇ ಸಾಲಿನ ಆಯವ್ಯಯಕ್ಕೆ ಸಂಬಂಧಪಟ್ಟಂತೆ ನಗರಪ್ರದೇಶದಲ್ಲಿ ಕೈಗೊಳ್ಳ ಬೇಕಾದ ಅಭಿವೃದ್ಧಿ ಕಾ

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಗ್ರಾಮಸ್ಥರಿಂದ ರಸ್ತೆತಡೆ ಪ್ರತಿಭಟನೆ.
ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಗ್ರಾಮಸ್ಥರಿಂದ ರಸ್ತೆತಡೆ ಪ್ರತಿಭಟನೆ.

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕುಣಿಗಲ್ ಮುಖ್ಯರಸ್ತೆಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕುಂತೂರುದೊಡ್ಡಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ನ

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ತಹಶಿಲ್ದಾರ್ ದಾಳಿ ವಶ
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ತಹಶಿಲ್ದಾರ್ ದಾಳಿ ವಶ

ಚನ್ನಪಟ್ಟಣ: ನಗರದ ತಾಜ್ ಹೋಟೆಲ್ ಮುಂಭಾಗದ ಮನೆಯೊಂದರಲ್ಲಿ ಗೃಹ ಬಳಕೆಯ (ಇಂಡೇನ್ ಗ್ಯಾಸ್) ಹದಿನೈದು ಗ್ಯಾಸ್ ಸಿಲಿಂಡರ್ ಗಳನ್ನು ತಹಶಿಲ್ದಾರ್ ಸು

ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ
ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ

Top Stories »  


Top ↑