Tel: 7676775624 | Mail: info@yellowandred.in

Language: EN KAN

    Follow us :


ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ

Posted Date: 28 Nov, 2019

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ

ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಏನೂ ಮಾಡಲಾಗದು ಎಂದು ಕೈಚೆಲ್ಲಿದ ನಗರಸಭೆಯ ಅಧಿಕಾರಿಗಳಿಂದ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆಯೊಳಗೆ ಮತ್ತು ಇಪ್ಪತ್ತು ಮೀಟರ್ ನಷ್ಟು ಉದ್ದದ ಹೆದ್ದಾರಿಯಲ್ಲಿ ಹರಿಯುತ್ತಿದ್ದರೆ, ಮಾರುತಿ ಬಡಾವಣೆ ಯಲ್ಲಿ ಮನೆಗಳಿಗೆ ನೀರು ಹರಿಯುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು. ಪಾದಚಾರಿ ಪ್ರಯಾಣಿಕರು ಸಂಚರಿಸಲು ಸಾಧ್ಯವಾಗದೇ ರೋಗರುಜಿನ ಬರುವುದೆಂದು ಹೆದರಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸ್ಪನ್ ಸಿಲ್ಕ್ ಮಿಲ್ ಪಕ್ಕದಲ್ಲಿರುವ ಕೊಳ ದ ಬಲಭಾಗದಿಂದ ಇಪ್ಪತ್ತು ಮೀಟರ್ ನಷ್ಟು ಉದ್ದದ ವರೆಗೂ ನಗರದಿಂದ ಮೋರಿಯಲ್ಲಿ ಹರಿದು ಬರುವ ನೀರಿನ ಜೊತೆಗೆ ಮಾರುತಿ ಬಡಾವಣೆ ಯ ನೀರು ಸಹ ಸೇರಿಕೊಂಡು ರಸ್ತೆಯ ಮೇಲ್ಭಾಗದಲ್ಲಿ ಹರಿಯುತ್ತಿದೆ. ನ್ಯಾಯಾಲಯದ ಆವರಣದ ಮುಂದಿನ ರಸ್ತೆಯ ಮೋರಿಯಲ್ಲಿ ನೀರು ನಿಂತು ಗಬ್ಬುನಾರುತ್ತಿದೆ. ಬಸ್ಸಿಗಾಗಿ ಕಾಯುವ ಪ್ರಯಾಣಿಕರು, ವಾಣಿಜ್ಯ ಮಳಿಗೆಗಳ ಮಾಲೀಕರು ಹಾಗೂ ನಿವಾಸಿಗಳು ನಗರಸಭೆ ಮತ್ತು ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.


ಹಿಂದುಳಿದ ವರ್ಗಗಳ ಪದವಿ ಪೂರ್ವ ಪುರುಷರ ವಿದ್ಯಾರ್ಥಿ ನಿಲಯ ಮತ್ತು ಇಂಡಿಯನ್ ಆಕ್ಸ್‌ಫರ್ಡ್ ಖಾಸಗಿ ಶಾಲೆಯು ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿದ್ದು ವಿದ್ಯಾನಿಕೇತನ ಶಾಲೆ ಮಾರುತಿ ಬಡಾವಣೆಯಲ್ಲಿದ್ದು ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಮೋರಿ ನೀರು ಮೇಲ್ಭಾಗದಲ್ಲೇ ಹರಿಯುತ್ತಿರುವುದರಿಂದ ಮನೆಗಳಲ್ಲಿ ವಾಸ ಮಾಡಲಾಗುತ್ತಿಲ್ಲ. ದಯಮಾಡಿ ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಒಳಚರಂಡಿಯಲ್ಲಿ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.


ದೂರುಗಳ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೌರಾಯುಕ್ತ ಶಿವನಂಕಾರಿಗೌಡ, ಆರೋಗ್ಯ ಅಧಿಕಾರಿ ವರಲಕ್ಷ್ಮಿ, ಶಿವಕುಮಾರ್, ಎಇಇ ಭಗವಾನ್ ಮತ್ತು ಸ್ಥಳೀಯರಾದ ನಾಗರಾಜು ಎಂ.ಪಿ. ಸುಚೀಂದ್ರಕುಮಾರ್, ಜಯಲಿಂಗಣ್ಣ ಮತ್ತಿತರಿದ್ದರು.


*ಚನ್ನಪಟ್ಟಣ ದಲ್ಲಿ ಸಂಪೂರ್ಣ ರಾಜಕಾಲುವೆ ಮುಚ್ಚಿಹೋಗಿದ್ದು ಕಳೆದ ಬಾರಿ ಮೂವತ್ತೊಂದೂವರೆ ಕೋಟಿ ರೂಪಾಯಿಗಳಿಗೆ ಅನುಮೋದನೆ ದೊರೆತಿರುವುದಾಗಿ ಮಾಹಿತಿ ಇದೆ. ನಾಳೆ ಜಾಗ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ.*

*ಜಯಕುಮಾರ್ ಹೈವೇ ಎಇಇ*


*ಈಗತಾನೇ ಜಾಗವನ್ನು ಪರಿಶೀಲಿಸಿದ್ದೇನೆ, ಹೆದ್ದಾರಿ ಪ್ರಾಧಿಕಾರಕ್ಕೂ ಪತ್ರ ಬರೆದಿದ್ದೇನೆ, ನಮ್ಮ ಇಲಾಖೆ ಅಧಿಕಾರಿಗಳು ಮತ್ತು ಮತ್ತು ಸಂಬಂಧಿಸಿದ ಇತರೆ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.*

*ಶಿವನಂಕಾರಿಗೌಡ. ಪೌರಾಯುಕ್ತರು. ಚನ್ನಪಟ್ಟಣ.*


*ನಾನು ಅಧಿಕಾರ ವಹಿಸಿಕೊಂಡು ಎರಡುವಾರ ಆಗಿದೆ, ಸಂಪೂರ್ಣ ಮಾಹಿತಿ ಇಲ್ಲ. ನಾಳೆ ಬೆಳಿಗ್ಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ತೀರ್ಮಾನ ಕೈಗೊಳ್ಳುತ್ತೇವೆ.*

*ಸದಾಶಿವೇಗೌಡ. ಕಣ್ವ ಎಇಇ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ
ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ

ವಿಜೃಂಭಣೆಯಿಂದ ಜರುಗಿದ ಕೆಂಗಲ್ ರಥೋತ್ಸವ
ವಿಜೃಂಭಣೆಯಿಂದ ಜರುಗಿದ ಕೆಂಗಲ್ ರಥೋತ್ಸವ

ಚನ್ನಪಟ್ಟಣ: ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ (ಅಯ್ಯನಗುಡಿ) ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ

ನವ ಬೆಂಗಳೂರು ಬೇಡ, ರಾಮನಗರ ವೇ ಇರಲಿ ಹೋರಾಟಗಾರರ ಆಗ್ರಹ
ನವ ಬೆಂಗಳೂರು ಬೇಡ, ರಾಮನಗರ ವೇ ಇರಲಿ ಹೋರಾಟಗಾರರ ಆಗ್ರಹ

ಚನ್ನಪಟ್ಟಣ: ನಮಗೆ ನವ ಬೆಂಗಳೂರು ಬೇಡಾ, ಈಗಿರುವ ರಾಮನಗರ ವೇ ಇರಲಿ ಎಂದು ನವಕರ್ನಾಟಕ ಯುವಶಕ್ತಿ, ಕರ್ನಾಟಕ ರಾಜ್ಯ ರೈತ ಸಂಘ ದ ಪದಾಧಿಕಾರಿಗಳು ಹ

ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ
ಫೆಬ್ರವರಿ ೦೯ ಕ್ಕೆ ಮತ್ತೀಕೆರೆ ತಾಲ್ಲೂಕು ಪಂಚಾಯತಿ ಚುನಾವಣೆ ನಿಗದಿ

ಚನ್ನಪಟ್ಟಣ: ತಾಲ್ಲೂಕಿನ ಮತ್ತಿಕೆರೆ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಮುಂದಿನ ತಿಂಗಳು ೦೯ ರಂದು ಚುನಾವಣೆನ್ನು ಘೋಷಿಸಿ

ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ
ಭ್ರಷ್ಟಾಚಾರ ನಿಗ್ರಹ ದಳ ಸಭೆ, ದೂರುದಾರರ ನಿರಾಸಕ್ತಿ

ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ, ಕೆಲಸ ಮಾಡಲು ಸತಾಯಿಸುತ್ತಿದ್ದರೆ, ಸಕಾರಣ ನೀಡದೆ ಅಲೆದಾಡಿಸುತ್ತಿದ್ದರೆ ಇನ್ನಿತರ ಯಾವುದೇ ರ

ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.
ಅಮಾನವೀಯ ಕೃತ್ಯ, ಕಣ್ಣಿದ್ದು ಕುರುಡಾದ ಜನ.

ಚನ್ನಪಟ್ಟಣ: ಕೆಲವರ ಮನಸ್ಥಿತಿಯೇ ಹಾಗೇ ! ‌ಜನರಿಗೆ ಕಿರಿಕಿರಿ ಅನುಭವಿಸುವಲು ಏನೇನು ದುಸ್ಕೃತ್ಯಗಳನ್ನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾರೆ, ಅದ

ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ
ಕಳೆಗಟ್ಟುತ್ತಿರುವ ಅಯ್ಯನಗುಡಿ ಜಾತ್ರೆ

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಅಯ್ಯನಗುಡಿ (ಕೆಂಗಲ್) ಜಾತ್ರೆಗೆ ಸಂಕ್ರಾಂತಿ ಹಬ್ಬದ ಹಿಂದಿನ ದಿನದಿಂದಲೇ ದೂರದೂರುಗಳಿಂದ ಜಾನುವಾರುಗಳು ಆಗಮಿಸುತ್ತಿ

ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ
ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ

ಚನ್ನಪಟ್ಟಣ: ಸಂಕ್ರಾಂತಿ ಹಬ್ಬ ಎಂದರೆ ರೈತನಿಗೆ ಸಡಗರವೋ ಸಡಗರ, ವರ್ಷಕ್ಕೊಮ್ಮೆ ಬರುವ ಈ ಸುಗ್ಗಿ ಹಬ್ಬದಲ್ಲಿ ರೈತ ಮತ್ತು ರೈತ ಕುಟುಂಬವಲ್ಲದೆ ತಾನು ಸಾಕಿರು

ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ
ಅನಧಿಕೃತ ಧಾರ್ಮಿಕ ಕಟ್ಟಡ ದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಮನವಿ

ರಾಮನಗರ: ಹೈಕೋರ್ಟ್ ನಿರ್ದೇಶನದಂತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಿರುವ ಧಾರ್ಮಿಕ ಕಟ್ಟಡಗಳನ್ನು ಗುರುತಿಸಿ, ಸರ್ವೆ ಕಾರ್ಯ ನಡೆಸ

ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ
ಸಂಕ್ರಾಂತಿಯಂದು ಅಯ್ಯನಗುಡಿ (ಕೆಂಗಲ್) ಜಾತ್ರೆ, ಸಮಿತಿಯಿಂದ ಸಕಲ ಸಿದ್ದತೆ

ಚನ್ನಪಟ್ಟಣ: ಇದೇ ತಿಂಗಳ ಸಂಕ್ರಾಂತಿ ಹಬ್ಬದ ಸಡಗರ ದೊಂದಿಗೆ ನಡೆಯಲಿರುವ ಈ ಬಾರಿಯ ಅಯ್ಯನಗುಡಿ (ಕೆಂಗಲ್) ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ

Top Stories »  


Top ↑