Tel: 7676775624 | Mail: info@yellowandred.in

Language: EN KAN

    Follow us :


ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ

Posted Date: 29 Nov, 2019

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ

ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ ಭಾನುವಾರ ನೆರವೇರಿಸಲಿರುವುದಾಗಿ ಮಹಾಸಭಾದ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ಬ್ರಾಹ್ಮಣ ಸಮುದಾಯವನ್ನು ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಒಗ್ಗೂಡಿಸುವ ಉದ್ದೇಶದಿಂದ ತಾಲೂಕು ಬ್ರಾಹ್ಮಣ ಮಹಾಸಭಾವನ್ನು ಸಮಾನ ಮನಸ್ಕರೊಡಗೂಡಿ ಸ್ಥಾಪಿಸಿದ್ದು, ಮಹಾಸಭಾದ ಉದ್ಘಾಟನೆ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ೩.೩೦ಕ್ಕೆ ನಗರದ ಕೋಟೆ ಶ್ರೀರಾಘವೇಂದ್ರ ಮಠದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.


ಕಾರ್ಯಕ್ರಮದಲ್ಲಿ  ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ, ಮೇಲುಕೋಟೆ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ರವರು  ದಿವ್ಯಸಾನಿಧ್ಯ ವಹಿಸಲಿದ್ದಾರೆ.

 

ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಉದ್ಘಾಟಿಸಲಿದ್ದು, ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಮಣ್ಯ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ರಾಜ್ಯ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ  ಲಕ್ಷ್ಮೀ ಕಾಂತ್ ಸಾಧಕರನ್ನು ಸನ್ಮಾನಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ರಾಜ್ಯ ಬ್ರಾಹ್ಮಣ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ರಾಮಪ್ರಸಾದ್, ಪತ್ರಕರ್ತ ವೇಣುಗೋಪಾಲ ಕೃಷ್ಣ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.


ಕಾರ್ಯಕ್ರಮದಲ್ಲಿ ಸಂಕ್ರಾಂತಿ ಟ್ರಸ್ಟ್‌ನ ಸಂಸ್ಥಾಪಕ ಅನಿಲ್ ಜಮದಗ್ನಿ ಅವರನ್ನು ಸನ್ಮಾನಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ, ವೇದಘೋಷ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್ ಮನವಿ ಮಾಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ  ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ
ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.


ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

ಚನ್ನಪಟ್ಟಣ:ಫೆ/೧೭/೨೦/ಸೋಮವಾರ.


ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಣ್ಣ ನೀರಾವರಿ ಇಲಾಖೆಯ ಎ ಇ

ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ
ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

ಚನ್ನಪಟ್ಟಣ:ಫೆ/೧೬/೨೦/ಶನಿವಾರ.


ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮ

ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ
ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ

ಬೀದಿ ನಾಯಿಗಳ ದಾಳಿಗೊಳಗಾದ ಯುವಕ
ಬೀದಿ ನಾಯಿಗಳ ದಾಳಿಗೊಳಗಾದ ಯುವಕ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ನಗರದ ಕನಕನಗರದ ಬಳಿ  ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ  ಘಟನೆ ನಡೆದಿದೆ.

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ
ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.


ತಾಲ್ಲೂಕಿನ ಕೆ

*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*
*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*

ರಾಮನಗರ:ಫೆ/೧೩/೨೦/ಗುರುವಾರ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಪುರ ಬಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳನ್ನು  ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ರಕ್ಷಿಸಿ 

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ
ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸ

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ
ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವ

*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*
*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*

ಚನ್ನಪಟ್ಟಣ:ಫೆ/೧೩/೨೦/ಗುರುವಾರ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಫೆಬ್ರವರಿ ೧೫ ರ ಶನಿವಾರ ಮಧ್ಯಾಹ್ನ ೦೧:೩೦ ಕ್ಕೆ ಕಾಲೇಜಿನ ಎಜುಸ್ಯಾಟ್ ಕೊ

Top Stories »  


Top ↑