Tel: 7676775624 | Mail: info@yellowandred.in

Language: EN KAN

    Follow us :


ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

Posted Date: 21 Jan, 2020

ಎಂ ಕೆ ದೊಡ್ಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಹಶಿಲ್ದಾರ್ ಮತ್ತು ಪಿ ಎಸ್ ಐ ದಾಳಿ

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಖಚಿತ ಮಾಹಿತಿಯನ್ನಾಧರಿಸಿದ ತಹಶಿಲ್ದಾರ್ ಸುದರ್ಶನ್ ಮತ್ತು ತಂಡ ಹಾಗೂ ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಪಿ ಎಸ್ ಐ ಕೆ ಸದಾನಂದ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಎಲ್ಲಾ ಮಾದರಿಯ ಒಟ್ಟು ಮೂವತ್ತು ಲೀಟರ್‌ ಗೂ ಹೆಚ್ಚು ಮದ್ಯವನ್ನು ವಶಪಡಿಸಿಕೊಂಡು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.


ಕೆಲಗೆರೆ ಗ್ರಾಮದ ರಾಜಣ್ಣ ಬಿನ್ ಲಿಂಗೇಗೌಡ ರ ಅಂಗಡಿಯಲ್ಲಿ ೦೪ ಲೀಟರ್, ಹೆಚ್ ಮೊಗೇನಹಳ್ಳಿ ಯ ಚಂದ್ರಶೇಖರ ಬಿನ್ ಮರಿಗೌಡ ರ ಅಂಗಡಿಯಲ್ಲಿ ೦೫ ಲೀಟರ್, ಗೌಡಗೆರೆ ಗ್ರಾಮದ ಶ್ರೀನಿವಾಸ ಬಿನ್ ಚಲುವಮೂರ್ತಿ ಅಂಗಡಿಯಲ್ಲಿ ೦೩ ಲೀಟರ್ ಮದ್ಯವನ್ನು ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ಕೆ ಸದಾನಂದ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.


ಹರೂರು ಗ್ರಾಮದ ಅನಿಲ್ ಅಲಿಯಾಸ್ ಗುಂಡ ನ ಅಂಗಡಿಯಲ್ಲಿ ೧೦ ಲೀಟರ್, ಕನ್ನಸಂದ್ರದ ಗೋಪಾಲರಾಜು ಬಿನ್ ಗುರುಲಿಂಗಯ್ಯ ನ ಅಂಗಡಿಯಿಂದ ೦೩ ಲೀಟರ್, ಕೆ ವಿ ಶಿವರಾಜು ಬಿನ್ ಬೋರೇಗೌಡ ನ ಹಳ್ಳಿಮನೆ ಹೋಟೆಲ್ ನಿಂದ ೦೫ ಲೀಟರ್ ಮದ್ಯವನ್ನು ತಹಶಿಲ್ದಾರ್ ಸುದರ್ಶನ್ ಮತ್ತು ಚಾಲಕ ನಾಗರಾಜು ದಾಳಿ ಮಾಡಿ ವಶಪಡಿಸಿಕೊಂಡಿದ್ದು ಎಂ ಕೆ ದೊಡ್ಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.


ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಮಿಕ್ಕವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಕೆ ಸದಾನಂದ ರವರು ತಿಳಿಸಿದರು.

ದಾಳಿಯಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎ ಎಸ್ ಐ ರಾಮಕೃಷ್ಣಪ್ಪ, ಪೇದೆಗಳಾದ ಧನಂಜಯ, ರವೀಶ ಮತ್ತು ಗೋಪಾಲರಾಜು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ  ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ
ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.


ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

ಚನ್ನಪಟ್ಟಣ:ಫೆ/೧೭/೨೦/ಸೋಮವಾರ.


ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಣ್ಣ ನೀರಾವರಿ ಇಲಾಖೆಯ ಎ ಇ

ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ
ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

ಚನ್ನಪಟ್ಟಣ:ಫೆ/೧೬/೨೦/ಶನಿವಾರ.


ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮ

ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ
ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ

ಬೀದಿ ನಾಯಿಗಳ ದಾಳಿಗೊಳಗಾದ ಯುವಕ
ಬೀದಿ ನಾಯಿಗಳ ದಾಳಿಗೊಳಗಾದ ಯುವಕ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ನಗರದ ಕನಕನಗರದ ಬಳಿ  ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ  ಘಟನೆ ನಡೆದಿದೆ.

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ
ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.


ತಾಲ್ಲೂಕಿನ ಕೆ

*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*
*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*

ರಾಮನಗರ:ಫೆ/೧೩/೨೦/ಗುರುವಾರ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಪುರ ಬಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳನ್ನು  ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ರಕ್ಷಿಸಿ 

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ
ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸ

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ
ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವ

*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*
*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*

ಚನ್ನಪಟ್ಟಣ:ಫೆ/೧೩/೨೦/ಗುರುವಾರ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಫೆಬ್ರವರಿ ೧೫ ರ ಶನಿವಾರ ಮಧ್ಯಾಹ್ನ ೦೧:೩೦ ಕ್ಕೆ ಕಾಲೇಜಿನ ಎಜುಸ್ಯಾಟ್ ಕೊ

Top Stories »  


Top ↑