Tel: 7676775624 | Mail: info@yellowandred.in

Language: EN KAN

    Follow us :


ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

Posted Date: 13 Feb, 2020

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸಸ್ ಎಂಟರ್ ಪ್ರೈಸಸ್ ಮಳಿಗೆಯನ್ನು ತೆರೆದಿದ್ದಾರೆ. ಈ ಮಳಿಗೆಯಲ್ಲಿ ಅವರು ರಚಿಸಿರುವ ವಿವಿಧ ಕಲಾಕೃತಿಗಳು ಸಿಗಲಿವೆ. ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಸ್ತುಗಳು ದೊರೆಯಲಿವೆ.
ಬುಧವಾರ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸಸ್ ಮಳಿಗೆಯನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಕುಂಚ ಕಲಾವಿದರಾದ ನಾರಾಯಣ ಭಂಡಾರಿ ಅವರನ್ನು ಗೌರವಿಸಲಾಯಿತು. ದಾರಿದೀಪ ವೃದ್ಧಾಶ್ರಮದ ಸಂಸ್ಥಾಪಕಿ ಕವಿತಾರಾವ್, ಉದಯೋನ್ಮುಖ ಕಲಾವಿದೆ ಚಿತ್ರಾರಾವ್, ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟಿ ಕಾರ್ಯದರ್ಶಿ ಟಿ.ರಮೇಶ್, ಸಾಹಿತ್ಯ, ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ, ಶ್ರೀ ದುರ್ಗ ಪರಮೇಶ್ವರಿ ಎಂಟರ್ ಪ್ರೈಸಸ್ ನ ಎನ್. ರಶ್ಮಿ, ಜಯಕುಮಾರ್ ಇದ್ದರು.
ನಾರಾಯಣ ಭಂಡಾರಿ ರವರ ಕಿರು ಪರಿಚಯ : ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.  ಜಲವರ್ಣ ಚಿತ್ರದ ಜೊತೆಗೆ ಪಕ್ಷಿಗಳ ವರ್ಣ ಚಿತ್ರಗಳನ್ನು ರಚಿಸಿದ್ದಾರೆ. ಮೈಕ್ರೋ ಆರ್ಟ್ ನಲ್ಲಿ ಅಕ್ಕಿಕಾಳು, ಬೇಳೆ, ಸಾಸಿವೆ, ಗಸಗಸೆಗಳಲ್ಲಿ ಸೂಕ್ಷ್ಮ ಚಿತ್ರಗಳನ್ನು ರಚಿಸಿದ್ದಾರೆ. ಪಕ್ಷಿ ಸಂಕುಲಕ್ಕೆ ಸೇರಿರುವ 800 ಪಕ್ಷಿಗಳ ಚಿತ್ರವನ್ನು ಜಲವರ್ಣದಲ್ಲಿ ರಚಿಸುವ ಜತೆಗೆ ಅವುಗಳ ಬಗೆಗಿನ ಮಾಹಿತಿಯನ್ನು ಬರೆದಿದ್ದಾರೆ.
ರಾಜ್ಯದ ಹಲೆವೆಡೆ ಪಕ್ಷಿಗಳ ಪ್ರದರ್ಶವನ್ನು ಏರ್ಪಡಿಸಿದ್ದಾರೆ. ಎಲ್ಲಾ ಕಡೆಯೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಮನುಷ್ಯನ ದುರಾಸೆಯಿಂದ ಪರಿಸರದಲ್ಲಿ ಮಾಂಸದ ಮುದ್ದೆಯಾಗಿ ಬೀಳುತ್ತಿರುವ ಪಕ್ಷಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಮಾತನಾಡುವವರು ಬಹುತೇಕ ಮಂದಿ ಇದ್ದಾರೆ. ಆದರೆ ಕಾಳಜಿಯನ್ನು ತೋರಿ ರಚನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳುವವರು ಕೆಲವು ಮಂದಿ ಮಾತ್ರ. ಅವರಲ್ಲಿ ನಾರಾಯಣ ಭಂಡಾರಿ ಅವರೂ ಒಬ್ಬರು.
ನಾರಾಯಣ ಭಂಡಾರಿ ಅವರ ಯಶಸ್ಸಿನ ಜೀವನಕ್ಕೆ ಪತ್ನಿ ಮಮತಾಮಣಿ ಅವರ ಪರಿಶ್ರಮವು ಸೇರಿಕೊಂಡಿದೆ. ಮೂಲತಃ ಮಂಗಳೂರಿನ ಕಟೀಲು ಗ್ರಾಮದ ಅವರು ರಾಮನಗರದಲ್ಲಿ ನೆಲೆಸಿರುವುದು ಹೆಮ್ಮೆ ಎನಿಸುತ್ತದೆ. ವಿನಾಶದ ಅಂಚಿನಲ್ಲಿರುವ ಹಕ್ಕಿಗಳನ್ನು ಕುಂಚದಲ್ಲಿ, ಪುನರ್ ಸೃಷ್ಟಿಸುವ ಕೆಲಸವನ್ನು ಭಂಡಾರಿ ಅವರು ಶ್ರದ್ಧೆಯಿಂದಲೇ ಬೆಳೆಸಿಕೊಂಡಿದ್ದಾರೆ. ಕೇವಲ ಚಿತ್ರ ರಚಿಸುವುದಷ್ಟೇ  ಇವರ ಗುರಿಯಲ್ಲ. ಆ ಪಕ್ಷಿಯ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ದಾಖಲಿಸಿದ್ದಾರೆ. ಹಕ್ಕಿಯ ಜೀವನ ಕ್ರಮ, ಚಲನವಲನ, ಆಹಾರ ವಿಧಾನ ಮುಂತಾದ ಮಾಹಿತಿಯನ್ನೆಲ್ಲ ಅತ್ಯಂತ ವೈಜ್ಞಾನಿಕವಾಗಿ ಕಲೆ ಹಾಕಿ, ಪ್ರದರ್ಶನದ ವೇಳೆ ತಿಳಿಸುತ್ತಾರೆ. ರಾಮನಗರಕ್ಕೆ ಸಾಂಸ್ಕೃತಿಕ ಚೌಕಟ್ಟನ್ನು ತಂದುಕೊಟ್ಟವರಲ್ಲಿ ನಾರಾಯಣ ಭಂಡಾರಿ ಒಬ್ಬರು.
ಈಗಾಗಲೇ ಕಾಲಗರ್ಭದಲ್ಲಿ ನಾಶವಾಗಿರುವ ಹಕ್ಕಿಗಳು, ದೇಶವಿದೇಶಗಳ ಚಿತ್ರವಿಚಿತ್ರ ಪಕ್ಷಿಗಳು, ಅತಿದೊಡ್ಡ, ಅತಿಚಿಕ್ಕ ಹಕ್ಕಿ ಪ್ರಭೇದಗಳು, ಸಸ್ಯಾಹಾರಿ, ಮಾಂಸಾಹಾರಿ, ಮೋಹಕವಾಗಿ ಹಾರುವ, ಗತ್ತಿನಿಂದ ನಡೆದಾಡುವ ಪಕ್ಷಿಗಳನ್ನು ಕುಂಚದ ಮೂಲಕ ಚಿತ್ರಿಸಿದ್ದಾರೆ. ಹಲವು ಹಕ್ಕಿಗಳ ಕೊಕ್ಕು, ಕಾಲು, ಗರಿ ಇತ್ಯಾದಿ ಅಂಗಗಳನ್ನು ಪ್ರತ್ಯೇಕವಾಗಿ ಚಿತ್ರಿಸಿ ಅವುಗಳ ವೈಶಿಷ್ಟ್ಯವನ್ನು ದಾಖಲಿಸುವ ಅಪರೂಪದ ಪ್ರಯತ್ನ ಮಾಡಿದ್ದಾರೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ  ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ
ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.


ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ.

ಚನ್ನಪಟ್ಟಣ:ಫೆ/೧೭/೨೦/ಸೋಮವಾರ.


ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಣ್ಣ ನೀರಾವರಿ ಇಲಾಖೆಯ ಎ ಇ

ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ
ಟಿವಿ, ಮೊಬೈಲ್ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿ ಬಿಡಿ, ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ರಾಜಣ್ಣ

ಚನ್ನಪಟ್ಟಣ:ಫೆ/೧೬/೨೦/ಶನಿವಾರ.


ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿ ಮೋಹಕ್ಕೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು ಈ ವ್ಯಾಮ

ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ
ಬಲಿಗಾಗಿ ಕಾದಿರುವ ರಾಜ್ಯ ಹೆದ್ದಾರಿಯಲ್ಲಿನ ಗುಂಡಿ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಪದೋನ್ನತಿ ಹೊಂದಲು ಅಣಿಯಾಗುತ್ತಿರುವ ಸಾತನೂರು ರಸ್ತೆಯ ನಗರ ವ್ಯಾಪ್ತಿಯ ರಸ್ತೆಯ ಅವ್ಯವಸ

ಬೀದಿ ನಾಯಿಗಳ ದಾಳಿಗೊಳಗಾದ ಯುವಕ
ಬೀದಿ ನಾಯಿಗಳ ದಾಳಿಗೊಳಗಾದ ಯುವಕ

ಚನ್ನಪಟ್ಟಣ:ಫೆ/೧೫/೨೦/ಶನಿವಾರ.


ನಗರದ ಕನಕನಗರದ ಬಳಿ  ಬೈಕ್‌ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ  ಘಟನೆ ನಡೆದಿದೆ.

ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ
ಹಲವಾರು ತಿಂಗಳುಗಳಿಂದ ಧೂಳು ತಿನ್ನುತ್ತಾ ನಿಂತಿರುವ ಸರ್ಕಾರಿ ವಾಹನ

ಚನ್ನಪಟ್ಟಣ:

ನಗರದ ಸಾತನೂರು ವೃತ್ತ ದ ಬಳಿಯ ಮದೀನಾ ಚೌಕ ರಸ್ತೆಯಲ್ಲಿ *ಕೆಎ ೦೪ ಜಿ 178* ನೋಂದಣಿ ಸಂಖ್ಯೆಯ ಸರ್ಕಾರಿ ಒಡೆತನದ ಮಹೀಂದ್ರ ಜೀಪ್ ವಾಹನವು ಧೂಳು ತಿನ್ನುತ್ತಾ ತಿಂಗಳುಗಳಿಂದ ನಿಂತಿದೆ.


ತಾಲ್ಲೂಕಿನ ಕೆ

*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*
*ಅಕ್ರಮ ಗೋವು ಸಾಗಣೆ, ಹಿಂದೂ ಜಾಗರಣಾ ವೇದಿಕೆಯಿಂದ ರಕ್ಷಣೆ*

ರಾಮನಗರ:ಫೆ/೧೩/೨೦/ಗುರುವಾರ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಭಾಪುರ ಬಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳನ್ನು  ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ರಕ್ಷಿಸಿ 

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ
ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರ ಕಲಾಕೃತಿ ಮಳಿಗೆ

ಖ್ಯಾತ ಕುಂಚ ಕಲಾವಿದ ನಾರಾಯಣ ಭಂಡಾರಿ ರವರು ರಾಮನಗರದ ಕೆಂಪೇಗೌಡ ವೃತ್ತದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಎಂಟರ್ ಪ್ರೈಸ

ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ
ಯುವ ಪೀಳಿಗೆಯ ಆದರ್ಶಪ್ರಾಯ ಮಾರ್ಗದರ್ಶಕ ವ್ಯಕ್ತಿತ್ವದ ವ್ಯಕ್ತಿ ಎಸ್. ರುದ್ರೇಶ್ವರ

ಮಾಜದಲ್ಲಿಂದು ಸ್ವಾರ್ಥ  ಮೇರೆ ಮೀರಿದೆ. ನಾಗರಿಕತೆ ಮರೆಯಾಗಿ ಸದಾಚಾರ ಸಂಸ್ಕೃತಿ ನೀತಿ ನಡವಳಿಕೆಗಳು ಮಾಯವಾಗಿವ

*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*
*೧೫ ರಂದು ಹಿರಿಯ ವಿದ್ಯಾರ್ಥಿಗಳ ಸಭೆ*

ಚನ್ನಪಟ್ಟಣ:ಫೆ/೧೩/೨೦/ಗುರುವಾರ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಫೆಬ್ರವರಿ ೧೫ ರ ಶನಿವಾರ ಮಧ್ಯಾಹ್ನ ೦೧:೩೦ ಕ್ಕೆ ಕಾಲೇಜಿನ ಎಜುಸ್ಯಾಟ್ ಕೊ

Top Stories »  


Top ↑