Tel: 7676775624 | Mail: info@yellowandred.in

Language: EN KAN

    Follow us :


ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

Posted Date: 18 Feb, 2020

ಕಾಶಿ ವಿಶ್ವನಾಥಸ್ವಾಮಿ ದೇವಾಲಯದಲ್ಲಿ  ವಿಜೃಂಭಣೆಯ ಶಿವರಾತ್ರಿ ರಾಂಪುರ ರಾಜಣ್ಣ

ಚನ್ನಪಟ್ಟಣ:ಫೆ/೧೮/೨೦/ಮಂಗಳವಾರ.


ನಗರದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಟ್ರಸ್ಟ್ ವತಿಯಿಂದ ೨೧ ರ ಶುಕ್ರವಾರ ಮಹಾ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.

ಅವರು ಇಂದು ದೇವಾಲಯದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಸರಿಸುಮಾರು ೪೦೦ ವರ್ಷಗಳ ಹಿಂದೆ ನೇರವಾಗಿ ಕಾಶಿ ಯಿಂದಲೇ ತಂದು ಪ್ರತಿಷ್ಠಾಪಿಸಲಾಗಿರುವ ದೇವರ ವಿಗ್ರಹ ಇದಾಗಿದ್ದು ಅಂದಿನ ಮೈಸೂರು ಮಹಾರಾಜರು ಬೆಂಗಳೂರು ಮೈಸೂರು ನಡುವೆ ಓಡಾಡುವ ಸಮಯದಲ್ಲಿ ತಪ್ಪದೆ ಬಂದು ದರ್ಶನ ಮಾಡಿಹೋಗುತ್ತಿದ್ದುದಾಗಿ ಹಿರಿಯರು ಹೇಳುತ್ತಾರೆ ಎಂದು ಸ್ಮರಿಸಿದರು.


ಶ್ರೀ ಸ್ವಾಮಿಯ ಹಬ್ಬದ ಸಂದರ್ಭದಲ್ಲಿ ರಾತ್ರಿ ಪೂರ್ಣ ಜಾಗರಣೆ ಹಮ್ಮಿಕೊಳ್ಳಲಾಗಿದ್ದು ಆಹೋರಾತ್ರಿ ಹಲವಾರು ಸಂಘ ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶುಕ್ರವಾರ ಬೆಳಿಗ್ಗೆ ಯಿಂದ ಶನಿವಾರ ಸಹ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳನ್ನು ಹಮ್ಮಿಕೊಂಡಿದ್ದು ದಾನಿಗಳ ಸಹಾಯದಿಂದ ಹದಿನೈದು ಸಾವಿರ ಮಂದಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ ದಶವಾರ, ಕಾರ್ಯದರ್ಶಿ ಪುಟ್ಟಮಾದಯ್ಯ, ಖಜಾಂಚಿ ಪುಟ್ಟಸ್ವಾಮಿ, ಅರ್ಚಕ ಶಿವರಾಮು, ಸದಸ್ಯರಾದ ಸುಜೇಂದ್ರ ಬಾಬು, ನಗರಸಭೆ ಮಾಜಿ ಸದಸ್ಯ ಮಧು ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು
ವಂದಾರಗುಪ್ಪೆ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಎಫ್ಐಆರ್ ದಾಖಲು

ಚನ್ನಪಟ್ಟಣ:ಮಾ/೨೯/೨೦/ಭಾನುವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದ ಕಣ್ವ ರಸ್ತೆಯಲ್ಲಿರುವ ಖಾಸಗಿಯವರ ತೆಂಗಿನ ತೋಟವೊಂದರಲ್ಲಿ ಜೂಜು ಆಡುತ್ತಿದ್

ಬೀದಿಗೆ ಬಂದ ಹೋಂ ಕ್ವಾರಂಟೈನ್ ಚಿತ್ರ ವೈರಲ್, ದಿಗಿಲುಬಿದ್ದ ಸಾರ್ವಜನಿಕರು, ದೂರು ದಾಖಲು
ಬೀದಿಗೆ ಬಂದ ಹೋಂ ಕ್ವಾರಂಟೈನ್ ಚಿತ್ರ ವೈರಲ್, ದಿಗಿಲುಬಿದ್ದ ಸಾರ್ವಜನಿಕರು, ದೂರು ದಾಖಲು

ಚನ್ನಪಟ್ಟಣ:ಮಾ/೨೯/೨೦/ಭಾನುವಾರ.

ನಗರದ ಕಲಾನಗರದಲ್ಲಿ ಹದಿನಾಲ್ಕು ದಿನಗಳ ಕಾಲ ಕೊರೊನಾ ಶಂಕಿತ ಹೋಂ ಕ್ವಾರಂಟೈನ್ ನಲ್ಲಿದ್ದ ಅಮಾನುಲ್ಲಾ ಖಾನ್ ರವರ ಪುತ್ರ ಸಹೀದ್ ಅಮಾನ್ (೩೨) ಎಂಬ ಯುವ

ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ
ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ದೂರು ಸಲ್ಲಿಸಿ

ರಾಮನಗರ:ಮಾ/೨೯/೨೦/ಭಾನುವಾರ. ರಾಮನಗರ ಜಿಲ್ಲೆಯಲ್ಲಿ ಕೋರೋನಾ ವೈರಸ್ (ಕೊವೀಡ್-೧೯) ತಡೆಗಟ್ಟುವ ಸಲುವಾಗಿ ರಾಮನಗರ ಜಿಲ್ಲೆಯಾದ್ಯಂತ ಮಾ ೩೧ ರವರೆಗ

ಗ್ರಾಮದವರ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿ ಒದಗಿಸಲು ಚಕ್ಕೆರೆ ಪಂಚಾಯತಿಯಿಂದ ಸಿದ್ಧತೆ
ಗ್ರಾಮದವರ ಮನೆ ಬಾಗಿಲಿಗೆ ಅಡುಗೆ ಸಾಮಗ್ರಿ ಒದಗಿಸಲು ಚಕ್ಕೆರೆ ಪಂಚಾಯತಿಯಿಂದ ಸಿದ್ಧತೆ

ಕೋವಿಡ್-೧೯ ಹರಡದಂತೆ ೨೧ ದಿನಗಳ ಕಾಲ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಾರ್ವಜನಿಕರು ತಮಗೆ ಬೇಕಿರುವ ಅಡುಗೆ ಸಾಮಗ್ರಿಗಳನ್ನು ಪಡೆಯಲು ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಡೆಯ

ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು
ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ‌ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು

ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ೪ ಸಾವಿರ ಮಂದಿ ವಲಸೆ ಬಂದ ಕೂಲಿ ಕಾರ್ಮಿಕರು ನೆಲೆಸಿದ್ದು ಚನ್ನಪಟ್ಟಣ ದಲ್ಲಿ ಒಂದು ಸಾವಿರದ ಇನ್ನೂರು ಮಂದಿ

ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು
ದಿನಗೂಲಿ, ಭಿಕ್ಷುಕ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡಿದ ಸಾಮಾನ್ಯ ನಾಗರೀಕರು

ಚನ್ನಪಟ್ಟಣ:ಮಾ/೨೭/೨೦/ಶುಕ್ರವಾರ.ನಗರದ ಹೊರವಲಯದಲ್ಲಿ ಕೂಲಿಗಾಗಿ ವಲಸೆ ಬಂದು ಗುಡಿಸಲು ಹಾಕಿಕೊಂಡಿರುವವರಿಗೆ, ಬಾಗಿಲು ಮುಚ್ಚಿದ ದೇವಾಲಯದ ಬಳಿಯ ಭಿಕ್ಷುಕರಿ

ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು
ಯುಗಾದಿ ಹೊಸತೊಡಕಿಗೆ ಅಡ್ಡಿಯಾಗದ ಕರೋನ, ಎಚ್ಚರಿಕೆಯ ನಡೆ ಇರಿಸಿದ ಮಾಂಸಪ್ರಿಯರು

ಚನ್ನಪಟ್ಟಣ:ಮಾ/೨೬/೨೦/ಗುರುವಾರ.ಶಾರ್ವರಿ ಸಂವತ್ಸರದ ಯುಗಾದಿ ಹಬ್ಬದ ಮೊದಲ ಸಿಹಿಯೂಟ ಸರಳವಾಗಿ ನಡೆದರೆ ಮಾರನೆಯ ದಿನದ ಹೊಸತೊಡಕು ಹಬ್ಬವೂ ವಿಜೃಂಭಣೆಯಿಂ

ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು
ನಾಳೆ ಮಾಂಸದಂಗಡಿಗಳಿಗೆ ಎಚ್ಚರಿಕೆಯ ಪರ್ಮಿಷನ್ ನೀಡಿದ ಅಧಿಕಾರಿಗಳು

ನ್ನಪಟ್ಟಣ: ಯುಗಾದಿ ಹಬ್ಬದ ಮಾರನೆಯ ದಿನ ನಡೆಯುವ ಹೊಸತೊಡಕು ಗಿಗೆ ಅನುಕೂಲವಾಗುವಂತೆ ಹಾಗೂ ಮಾಂಸ ಪ್ರಿಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಮಾ

ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ
ಪಬ್ಬು ಕ್ಲಬ್ಬು ಬಂದ್, ಸರಳಾಚರಣೆಯ ಯುಗಾದಿ

ಚನ್ನಪಟ್ಟಣ: ಇಂದಿನ ಚಾಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ ನಾಗರೀಕರು ಪ್ರಬುದ್ದಗೈದರು.

ನಿನ್ನೆ ಬೆಳಿಗ್ಗೆ ಮತ್ತು ಇ

ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು
ಖಾಲಿ ಹೊಡೆದ ಹೆದ್ದಾರಿ, ಹಬ್ಬದ ಖರೀದಿಗೆ ಪೇಟೆಗೆ ಮುಗಿಬಿದ್ದ ಗ್ರಾಹಕರು

ಚನ್ನಪಟ್ಟಣ: ಕರ್ನಾಟಕ ಲಾಕ್ ಡೌನ್ ಹಿನ್ನೆಲೆಯಲ್ಲಿ‌ ಬಿಗಿ ಕ್ರಮ ವಹಿಸಿರುವ ತಾಲ್ಲೂಕು ದಂಡಾಧಿಕಾರಿ ಸುದರ್ಶನ್, ಪೌರಾಯುಕ್ತ ಶಿವನಂಕಾರಿಗೌಡ ಮತ್ತು ಡ

Top Stories »  


Top ↑