Tel: 7676775624 | Mail: info@yellowandred.in

Language: EN KAN

    Follow us :


ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

Posted Date: 19 May, 2020

ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ

ಚನ್ನಪಟ್ಟಣ:ಮೇ/೧೯/೨೦/ಸೋಮವಾರ. ಇಲ್ಲಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಾಧೀಶರಾದ ನಟರಾಜು ಮತ್ತು ಅನ್ನಪೂಣೇಶ್ವರಿ ಯವರು ಬಡ್ತಿ ಮೇಲೆ ವರ್ಗಾವಣೆಯಾಗಿದ್ದಾರೆ. ಅವರನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎರ‍್ಮಲ್ ಕಲ್ಪನ ಅವರು ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನ ಮಾಡಿ ಬೀಳ್ಕೊಟ್ಟರು.


ಸಂದರ್ಭದಲ್ಲಿ ಅವರು ಮಾತನಾಡಿ, ನಿಮ್ಮ ಸೇವೆ ಹಾಗೂ ಜೀವನ ಪಯಣ ಸುಖಕರ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಟರಾಜು ಅವರು ಬೇರೆ ವೃತ್ತಿಗೂ ವಕೀಲ ವೃತ್ತಿಗೂ ಬಹಳ ವ್ಯತ್ಯಾಸವಿದೆ. ವಕೀಲ ವೃತ್ತಿಗೆ ಸಮಾಜದಲ್ಲಿ ವಿಶಿಷ್ಠ ಗೌರವವಿದೆ. ಆದರೆ ಪರಿ ಶ್ರಮ ಪಡಬೇಕು, ವೃತ್ತಿಪರತೆಯ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಸಹ ಮೈಗೂಡಿಸಿಕೊಳ್ಳ ಬೇಕು. ಸಾಮಾಜಿಕ ಕಳಕಳಿಯಿಂದ ವೃತ್ತಿ ಮಾಡಿದರೆ ಯಶಸ್ಸು ಎಂದರು.


ನ್ಯಾಯಾಧೀಶೆ ಅನ್ನಪೂಣೇಶ್ವರಿ ಮಾತನಾಡಿ, ನಾವು ಇಲ್ಲಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಎಲ್ಲರೂ ಉತ್ತಮವಾಗಿ ಸಹಕಾರ ನೀಡಿದ್ದೀರಿ ವಕೀಲರು, ಸಿಬ್ಬಂದಿವರ್ಗ ಇವರ ಸಹಕಾರ ಪ್ರೀತಿ, ವಿಶ್ವಾಸ ಸ್ಮರಣಾರ್ಹ ಎಂದರು.

ಬಡ್ತಿ ಹೊಂದಿ ವರ್ಗ ಆಗಿರುವ ಇಬ್ಬರು ನ್ಯಾಯಾ ಧೀಶರ ಸೇವೆಯ ಬಗ್ಗೆ ವಕೀಲರಾದ ಜೆ.ಟಿ ಪ್ರಕಾಶ್, ಟಿ.ಎಂ ಲಕ್ಷಣ್, ಧನಂಜಯ, ಪಿ.ಎಲ್ ನಾರಾಯಣಸ್ವಾಮಿ, ಸುವರ್ಣಮ್ಮ, ಎಂ.ಕೆ ನಿಂಗಪ್ಪ, ಬೋಜೇ ಗೌಡ, ರಂಗನಾಥ್, ವಕೀಲರ ಸಂಘದ ಅಧ್ಯಕ್ಷ ಗಿರೀಶ್ ಮತ್ತು ಕಾರ್ಯದರ್ಶಿ ಶಿವಶಂಕರ್  ಸ್ಮರಿಸಿದರು.


ಸಂದರ್ಭದಲ್ಲಿಕೊರೋನಾ ಸಾವಿಗೀಡಾದವರಿಗೆ ಒಂದು ನಿಮಿಷ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.ಈ ಸಮಾರಂಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?
ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?

ಚನ್ನಪಟ್ಟಣ:ಜೂ/೦೨/೨೦/ಮಂಗಳವಾರ. ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಕಟ್ಟೆಗಳನ್ನು ಹೂಳೆತ್ತಿಸಿ, ಪಿಚ್ಚಿಂಗ್ (ಕಲ್ಲುಕಟ್ಟಡ) ಮಾಡಿಸಿ, ಸುತ್ತ

ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ
ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ

ರಾಮನಗರ:ಜೂ/೦೧/೨೦/ಸೋಮವಾರ. ಕಳೆದ ೭೦ ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಎರಡನೇ ಅವಧಿಯ ಸರ್ಕಾರ ಮೊದಲ ವರ್ಷದಲ್ಲೇ ಸಾಧಿಸ

ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ
ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆ/ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಜಯರಾಮಯ್ಯ (ಜಯಣ್ಣ) ಎಂಬುವವರ ಮಾವಿನ ತೋಟಕ್ಕೆ ನಿನ್ನೆ ರಾತ್ರಿ ನ

ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು
ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸ. ಎಂಬ ಸುದ್ದಿಯು ನಮ್ಮ ಪ

ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ
ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತ

ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ
ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ

ರಾಮನಗರ:ಮೇ/೩೦/೨೦/ಶನಿವಾರ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿದ್ಯತಾ ನಿರ್

ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ರಾಮನಗರ:ಮೇ/೩೦/೨೦/ಶನಿವಾರ. ಜಾನಪದ ಲೋಕದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ೧೧೦ ಜಾನಪದ ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ಇಂದು ವಿತರಿಸಲಾಯಿ

ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ
ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ

ರಾಮನಗರ : ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿ

ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ
ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ

ರಾಮನಗರ:ಮೇ/೨೯/೨೦/ಶುಕ್ರವಾರ. ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರು ಮೇ ೩೦ ರ ಬೆಳಿಗ್ಗೆ ೧೦.೦೦ ಗಂಟೆಗೆ ರಾಮನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ

ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು
ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಕದರಮಂಗಲದ ಬಳಿಯ ಕಂಬದ ನರಸಿಂಹಸ್ವಾಮಿ ದೇವಾಲಯದ ಬಳಿ ಕೊರೊನಾ ಲಾಕ್‌ಡೌನ್ ನಿಯಮವನ್ನು ಗಾಳಿಗೆ ತೂ

Top Stories »  


Top ↑