Tel: 7676775624 | Mail: info@yellowandred.in

Language: EN KAN

    Follow us :

ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?

Posted Date: 20 May, 2020

ನಗರಸಭಾಧಿಕಾರಿಗಳೇ ಒಮ್ಮೆ ಸಾರ್ವಜನಿಕ ಕಕ್ಕಸು ಮನೆಯನ್ನು ನೀವು ಉಪಯೋಗಿಸಿ, ನಂತರ ಸಾರ್ವಜನಿಕರಿಗೆ ಬಿಡಿ !?

ಚನ್ನಪಟ್ಟಣ:ಮೇ/೨೦/೨೦/ಮಂಗಳವಾರ.ನಗರಸಭೆಯ ಕಮೀಷನರ್ ಸಾಹೇಬ್ರೇ ನೀವು ಮತ್ತು ನಿಮ್ಮ ಅಧಿಕಾರಿಗಳು ಒಮ್ಮೆಯಾದರೂ, ಕೇವಲ ಒಂದೇ ಒಂದು ಬಾರಿಯದರೂ ನಿಮ್ಮದೇ ಆವರಣದಲ್ಲಿರುವ *ಸ್ವಚ್ಚತೆಯ ಪ್ರತಿರೂಪ* ಎಂದೇ ಬೋಡ್೯ ಹಾಕಿಕೊಡಿರುವ ಸುಗಮ್ ಶೌಚಾಲಯ ಮತ್ತು ಸ್ನಾನದ ಗೃಹಗಳಲ್ಲಿ ಒಮ್ಮೆ, ಕನಿಷ್ಠ ಐದು ನಿಮಿಷಗಳ ಕಾಲವಾದರು ಕಕ್ಕಸು ಮಾಡಿ ಬನ್ನಿ, ನಂತರ ಸ್ನಾನದ ಗೃಹಗಳಲ್ಲಿ ಸ್ನಾನ ಮಾಡಿ ಬನ್ನಿ. ನಿಮಗೇ ಯಾವುದೇ ರೀತಿಯ ರೋಗ ಬರಲಿಲ್ಲವಾದರೆ ! ಅದೂ ಬೇಡ ಕಕ್ಕಸಾದರೂ ಸಾವಧಾನವಾಗಿ ಬಂದರೆ ಸಾರ್ವಜನಿಕರಿಗೆ ಅದನ್ನು ಉಪಯೋಗಿಸಲು ಅನುವು ಮಾಡಿಕೊಡಿ ಸ್ವಾಮಿ.

ಅಲ್ಲಿ ಸ್ನಾನದ ಮಾತು ಹಾಗಿರಲಿ, ಕಕ್ಕಸು ಮಾಡುವವರಿಗೂ ಸಹ ಕೊರೊನಾ ಗಿಂತಲೂ ಭಯಾನಕ ರೋಗ ಬರುವುದರಲ್ಲಿ ಅನುಮಾನವೇ ಇಲ್ಲ. ಅದೇ ಆವರಣದಲ್ಲಿ ಮಜಬೂತಾಗಿ ಕುಳಿತು ಕೆಲಸ ಮುಗಿಸಿ ಎಸಿ ಕಾರಿನೊಳಗೆ ಕುಳಿತು ಗ್ಲಾಸ್ ಏರಿಸಿಕೊಂಡು ಮನೆಗೆ ಹೋಗುವ ನಿಮಗೆ ಹೇಗೆ ತಿಳಿಯುತ್ತದೆ ಆ ದುರ್ವಾಸನೆ ಮತ್ತು ಸಾರ್ವಜನಿಕ ರ ಅಸಹನೆ ?

ಹೆಂಗಸರ ಮತ್ತು ಗಂಡಸರ ಯಾವುದೇ ಕಕ್ಕಸು ರೂಂಗಳಿಗೂ ಚಿಲಕವಿಲ್ಲ, ಬಾಗಿಲುಗಳೆಲ್ಲವೂ‌ ಸಿಗರೇಟು ಮತ್ತು ಬೀಡಿ ಸೇದುವವರ, ಹಾಳು ಮನಸ್ಥಿತಿ ಉಳ್ಳವರಿಂದ ಸುಟ್ಟು ತೂತು ಬಿದ್ದಿವೆ. ಅಗಿದುಗಿದ ತಂಬಾಕಿನಿಂದ ಗಬ್ಬು ನಾರುತ್ತಿವೆ. ಆ ಕಕ್ಕಸು ಮತ್ತು ಸ್ನಾನದ ಮನೆಗಳು‌‌ ನೀರನ್ನು ಹೊರತುಪಡಿಸಿ ಕನಿಷ್ಠ ಬ್ಲೀಚಿಂಗ್ ಕಂಡು ಅದೆಷ್ಟು ವರ್ಷಗಳಾಗಿದೆ ಎಂಬುದನ್ನು ಸಹ ಅಲ್ಲಿ ಕಕ್ಕಸಿಗೆ ಹೋಗಿ ಬರುವವರಿಂದ, ತಲಾ ಐದು ರೂಪಾಯಿಗಳನ್ನು ವಸೂಲಿ ‌ಮಾಡುವವನೇ ಹೇಳಬೇಕು.

ಶೌಚಗೃಹದೊಳಗೆ ನೀರಿನ ತೊಟ್ಟಿಯೊಂದಿದ್ದು, ಬಹುಶಃ ಅದನ್ನು ೨೦೦೪ ರಲ್ಲಿ ಕಟ್ಟಿದಾಗ ಮುಚ್ಚಿರಬೇಕು ಅನಿಸುತ್ತಿದೆ. ಕಾರಣ ಇಬ್ಬರು ಅದನ್ನು ಎತ್ತಲು ಪ್ರಯತ್ನಿಸಿದರೂ ಸಹ ಸಾಧ್ಯವಾಗಲೇ ಇಲ್ಲ. ತುಕ್ಕು ಹಿಡಿದು ವೆಲ್ಡಿಂಗ್ ಮಾಡಿದಂತಾಗಿದೆ. ಇನ್ನು ವಿಕಲಚೇತನರಿಗೆಂದು ನಿರ್ಮಿಸಿರುವ ಟಾಯ್ಲೆಟ್ ರೂಂ ಯಾವಾಗಲೂ ಬೀಗ ಜಡಿದು ನಿಂತಿದೆ.

ಕೇವಲ ಅಧಿಕಾರಿಗಳೆಂಬ ಕಾರಣಕ್ಕೆ ನಿಮಗೆ ಘಮ್ಮೆನ್ನುವ ಸುವಾಸನಾಯುಕ್ತ ಟಾಯ್ಲೆಟ್ ಗಳು ಬೇಕು ! ದುಡ್ಡು ಕೊಟ್ಟು ಕಕ್ಕಸಿಗೆ ಹೋಗುವ ಸಾರ್ವಜನಿಕರು ದುಡ್ಡು ಕೊಟ್ಟು ರೋಗ ಕೊಂಡು ಬರಬೇಕಾದ ಸ್ಥಿತಿ ಅವರದ್ದಾಗಿದೆ.

ನಗರಸಭೆ ಅಂದರೆ ಅದು ಸ್ವಚ್ಚತೆಯ ಪ್ರತಿರೂಪ ಅದು ನಿಮ್ಮಲ್ಲೇ ಇಲ್ಲವಾದರೇ ಎಲ್ಲಿ ಹುಡುಕುವುದು ?

ನಗರದ ಸ್ವಚ್ಚತೆಯ ಬಗ್ಗೆ ತಹಶಿಲ್ದಾರ್ ಮತ್ತು ಆರೋಗ್ಯಾಧಿಕಾರಿಗಳ ಜವಾಬ್ದಾರಿಯೂ ಇದ್ದು, ಎಲ್ಲಿ ಸ್ವಚ್ಚತೆ ಇಲ್ಲವೋ ಅದನ್ನು ಗಮನಿಸಿ ಸಂಬಂಧಿಸಿದ ಇಲಾಖೆಗೆ ಕಿವಿ ಹಿಂಡಬೇಕಿದೆ. ಶೌಚಾಲಯಗಳನ್ನು ಉಪಯೋಗಿಸುವಾಗ ದೇಹದ ಸೂಕ್ಷ್ಮ ಅಂಗಗಳು ತೆರೆದಿದ್ದು, ಅದರ ಮೂಲಕ ಸೂಕ್ಷ್ಮಾಣುಗಳು ದೇಹಕ್ಕೆ ಸಂಚರಿಸುವ ಸಾಧ್ಯತೆ ಹೆಚ್ಚಿದ್ದು, ಇದು ಹೆಂಗಸರಲ್ಲಿ ನ ಕೆಲ ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ಮುಂದೆ ಅವರು ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗುವುದರಲ್ಲಿ ಅನುಮಾನವೇ ಇಲ್ಲ.

*ಸಾರ್ವಜನಿಕರ ಆರೋಗ್ಯದ ಮೇಲೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳು ಇನ್ನೂ ಮುಂದಾದರು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ.*

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?
ಜೆಸಿಬಿ ಮಾಲೀಕರು ಮತ್ತು ಗುತ್ತಿಗೆದಾರರ ಪಾಲಾದ ಮನರೇಗಾ ಕೂಲಿ ಹಣ. ಒತ್ತುವರಿ ತೆರವು ಮಾಡದೆ ಅಭಿವೃದ್ಧಿ!?

ಚನ್ನಪಟ್ಟಣ:ಜೂ/೦೨/೨೦/ಮಂಗಳವಾರ. ಚನ್ನಪಟ್ಟಣ ತಾಲ್ಲೂಕಿನಾದ್ಯಂತ ಇರುವ ಕಟ್ಟೆಗಳನ್ನು ಹೂಳೆತ್ತಿಸಿ, ಪಿಚ್ಚಿಂಗ್ (ಕಲ್ಲುಕಟ್ಟಡ) ಮಾಡಿಸಿ, ಸುತ್ತ

ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ
ಎಪ್ಪತ್ತು ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ: ಡಾ. ಅಶ್ವತ್ಥನಾರಾಯಣ

ರಾಮನಗರ:ಜೂ/೦೧/೨೦/ಸೋಮವಾರ. ಕಳೆದ ೭೦ ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಎರಡನೇ ಅವಧಿಯ ಸರ್ಕಾರ ಮೊದಲ ವರ್ಷದಲ್ಲೇ ಸಾಧಿಸ

ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ
ರಾಮನಗರ ಹೊಸದೊಡ್ಡಿಯಲ್ಲಿ ಕಲ್ಲುಕಂಬ ಮುರಿದು, ತಂತಿ ಹರಿದು ಮಾವು ನಾಶಮಾಡಿದ ಒಂಟಿ ಸಲಗ

ರಾಮನಗರ:ಮೇ/೩೦/೨೦/ಶನಿವಾರ. ರಾಮನಗರ ಜಿಲ್ಲೆ/ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಜಯರಾಮಯ್ಯ (ಜಯಣ್ಣ) ಎಂಬುವವರ ಮಾವಿನ ತೋಟಕ್ಕೆ ನಿನ್ನೆ ರಾತ್ರಿ ನ

ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು
ದಳೀಯರಿಬ್ಬರೂ ಹೊರಹೋಗುತ್ತಾರೆಂಬ ನಿನ್ನೆಯ ಸುದ್ದಿಗೆ ಖುಷಿಗೊಂಡ ಉಳಿದ ನಾಯಕರು

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಬಿಜೆಪಿ ಬಾಗಿಲು ತಟ್ಟುತ್ತಿರುವ ಇಬ್ಬರು ದಳೀಯರು ? ಹೋದರೆ ಆನಂದ ! ಉಳಿದ ದಳೀಯರ ಸಂತಸ. ಎಂಬ ಸುದ್ದಿಯು ನಮ್ಮ ಪ

ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ
ಕೊರೊನಾ ಗೆ ಹೆದರದ ನಗರಿಗರು ಕರಡಿಗೆ ಹೆದರಿದ್ದು, ಕನಸಿನಲ್ಲೂ ಕನವರಸಿತ್ತಿದ್ದಾರೆ. ಇಲಾಖೆ ಧೈರ್ಯ ತುಂಬಬೇಕಿದೆ

ಚನ್ನಪಟ್ಟಣ:ಮೇ/೩೦/೨೦/ಶನಿವಾರ. ಇಡೀ ಜಗತ್ತನ್ನೇ ಆವರಿಸಿ ಬಲಿ ಪಡೆಯುತ್ತಿರುವ ಮಹಾಮಾರಿ ಕೊರೊನಾ (ಕೋವಿಡ್-೧೯) ಗೆ ಅಂಜದೆ, ಅಳುಕದೆ ಅವರಿಷ್ಟದಂತ

ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ
ಜಿಲ್ಲೆಯಲ್ಲಿ ಜೀವ ವೈವಿದ್ಯತಾ ನಿರ್ವಹಣಾ ಸಮಿತಿಯನ್ನು ಚುರುಕುಗೊಳಿಸಿ: ಅನಂತ ಹೆಗಡೆ ಅಶೀಸರ

ರಾಮನಗರ:ಮೇ/೩೦/೨೦/ಶನಿವಾರ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಜೀವ ವೈವಿದ್ಯತಾ ನಿರ್

ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ಜಾನಪದ ಲೋಕದ ವತಿಯಿಂದ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

ರಾಮನಗರ:ಮೇ/೩೦/೨೦/ಶನಿವಾರ. ಜಾನಪದ ಲೋಕದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ೧೧೦ ಜಾನಪದ ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ಇಂದು ವಿತರಿಸಲಾಯಿ

ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ
ಇಂಡಿಯಾ ಬುಕ್ ಆಪ್ ರೆಕಾಡ್ರ್ಸ್’ ನಲ್ಲಿ ಸ್ಥಾನ ಪಡೆದಿರುವ ವಿಜಯ್ ರಾಂಪುರ ಅವರಿಗೆ ಸನ್ಮಾನ

ರಾಮನಗರ : ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಸಮಾಜ ಸೇವಕ ಸಿ.ಆರ್. ಅರುಣ್ ಕುಮಾರ್ ತಿಳಿಸಿ

ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ
ಮೇ ೩೦ ರಂದು ಜಿಲ್ಲಾ ಮಟ್ಟದ ಜನತಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸಭೆ

ರಾಮನಗರ:ಮೇ/೨೯/೨೦/ಶುಕ್ರವಾರ. ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರು ಮೇ ೩೦ ರ ಬೆಳಿಗ್ಗೆ ೧೦.೦೦ ಗಂಟೆಗೆ ರಾಮನಗರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ

ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು
ಲಾಕ್ಡೌನ್ ಸಮಯದಲ್ಲಿ ರಾಜಕೀಯ ಗೌಪ್ಯ ಸಭೆ; ಶಿಕ್ಷಕರು ಮತ್ತು ವಕೀಲರ ವಿರುದ್ಧ ದೂರು ದಾಖಲು

ಚನ್ನಪಟ್ಟಣ:ಮೇ/೨೯/೨೦/ಶುಕ್ರವಾರ. ತಾಲ್ಲೂಕಿನ ಕದರಮಂಗಲದ ಬಳಿಯ ಕಂಬದ ನರಸಿಂಹಸ್ವಾಮಿ ದೇವಾಲಯದ ಬಳಿ ಕೊರೊನಾ ಲಾಕ್‌ಡೌನ್ ನಿಯಮವನ್ನು ಗಾಳಿಗೆ ತೂ

Top Stories »  

Top ↑