Tel: 7676775624 | Mail: info@yellowandred.in

Language: EN KAN

    Follow us :


ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ

Posted Date: 27 Jun, 2020

ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಚನ್ನಪಟ್ಟಣದ ನಗರಿಗರಿಗೆ ಕರಡಿ ಯ ಭಯ ಇನ್ನೂ ಹೋಗಿಲ್ಲಾ ಎನ್ನುವುದಕ್ಕೆ ಇಂದು ಕುವೆಂಪು ನಗರದ ಎರಡನೇ ತಿರುವಿನ ಕೊನೆಯ, ಮಾರುತಿ ದೇವಾಲಯದ ಹಿಂಭಾಗದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳ ನಡುವೆ ಕಂಡ ಹಂದಿಯನ್ನು ನೋಡಿ ಭಯಭೀತರಾಗಿ, ಗುಂಪು ಸೇರಿದ್ದರು.


ಇತ್ತೀಚೆಗೆ ನಗರದ ರೈಲ್ವೇ ನಿಲ್ದಾಣದ ಬಳಿ ಮಾವಿನ ಹಣ್ಣಿನ ರುಚಿಗೆ ಎಪಿಎಂಸಿ ಬಳಿ ಬಂದು ನಂತರ ರೈಲ್ವೆ ನಿಲ್ದಾಣದ ಹತ್ತಿರ ಬಂದ ಸಂದರ್ಭದಲ್ಲಿ ಜನರನ್ನು ನೋಡಿ ಭಯಭೀತರಾಗಿ ಮಾಜಿ ನಗರಸಭಾ ಸದಸ್ಯೆಯೊಬ್ಬರ ಮನೆಯ ಕಾಂಪೌಂಡ್ ಒಳಗೆ ಅವಿತಿದ್ದು, ಬೆಳಗಿನ ಜಾವ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಇಡೀ ಮುಖವನ್ನು ವಿರೂಪಗೊಳಿಸಿತ್ತು.


ಅದಾದ ಹದಿನೈದು ದಿನಗಳ ತನಕ ಇಡೀ ನಗರದ ಜನತೆ ಭಯಭೀತರಾಗಿದ್ದಲ್ಲದೆ, ಕಪ್ಪು ಬಣ್ಣದ ನಾಯಿ, ಹಂದಿ ಕಂಡರೂ ಸಹ ಕರಡಿಯನ್ನೇ ನೋಡಿದೆ ಎಂದೇ ಹೇಳುವ ಮಟ್ಟಿಗೆ ಭಯ ಹುಟ್ಟಿಸಿಕೊಂಡಿದ್ದರು. ಇಂದು ಸಹ ಅಂತಹದೇ ಘಟನೆ ನಡೆದಿದ್ದು, ಯಾರೋ ಅನಾಮಧೇಯರು ಗಾಳಿ ಸುದ್ದಿ ಹಬ್ಬಿಸಿ ಆ ರಸ್ತೆಯ ಜನರನ್ನು ಭಯಗೊಳಿಸಿದ್ದು ಜನರು ಸಂದಿಗೊಂದಿಗಳನ್ನು ಹುಡುಕುವಂತೆ ಮಾಡಿದ್ದು ಹಾಸ್ಯಾಸ್ಪದ ವಾದರೂ ಸತ್ಯ.


ಅದೇ ಬೀದಿಯಲ್ಲಿ ವಾಸ ಮಾಡುತ್ತಿರುವ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ಮಾತನಾಡಿ ಯಾರೋ ತಿಳಿಗೇಡಿಗಳು ಜನರನ್ನು ಭಯ ಬೀಳಿಸಲು ಮಾಡಿರುವ ಕುತಂತ್ರವಿದು. ಕರಡಿ ಯಾವ ಕಾರಣಕ್ಕು ಜನನಿಬಿಡ ಪ್ರದೇಶಗಳಿಗೆ ಅದರಲ್ಲೂ ಬೆಳಕಿನ ಸಮಯದಲ್ಲಿ ಬರುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೋಲಿಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


ಮತ್ತೋರ್ವ ಪತ್ರಕರ್ತ ಲಕ್ಷ್ಮಿಪತಿ ಮಾತನಾಡಿ ನಗರಾದದ್ಯಂತ ಅನೇಕ ಖಾಲಿ‌ ನಿವೇಶನಗಳಿದ್ದು, ಅದರಲ್ಲಿ ಕಾಲಿಡಲು ಸಾಧ್ಯವಾಗದಂತೆ ಗಿಡಮರಗಳು ಬೆಳೆದು ನಿಂತಿವೆ. ನಗರದ ಮಂದಿ ತಮ್ಮ ಮನೆಯ ಕಸವನ್ನು ತಂದು ಅಲ್ಲಿಯೇ ಸುರಿಯುವುದರಿಂದ ಗಬ್ಬು ವಾಸನೆಯ ಜೊತೆಗೆ ಹಂದಿಗಳು ಮತ್ತು ನಾಯಿಗಳ ಕಾಟ ಹೆಚ್ಚಾಗಿದೆ. ನಗರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ
ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ:ಜು/೦೧/೨೦/ಬುಧವಾರ. ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಪುರಾಣ ಪ್ರಸಿದ್ದ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರೆ

ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ
ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರು ನಗರದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ನಾನೂರು ವರ್ಷ

ನಾವು ಬದುಕಿರುವುದೇ ಪ್ರಕೃತಿಯಿಂದ, ಅದನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದೆ ಡಾ ಮಲವೇಗೌಡ
ನಾವು ಬದುಕಿರುವುದೇ ಪ್ರಕೃತಿಯಿಂದ, ಅದನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದೆ ಡಾ ಮಲವೇಗೌಡ

ಚನ್ನಪಟ್ಟಣ:ಜೂ/೨೮/೨೦/ಭಾನುವಾರ. ಪ್ರಕೃತಿಯೇ ಇಲ್ಲವೆಂದರೆ ಮನುಷ್ಯನು ಸೇರಿದಂತೆ ಯಾವುದೇ ಜೀವಚರಗಳು ಬದುಕಲು ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂ

ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ
ಹಂದಿ ನೋಡಿ ಕರಡಿ ಎಂದು ಹೆದರಿದ ಮಂದಿ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಚನ್ನಪಟ್ಟಣದ ನಗರಿಗರಿಗೆ ಕರಡಿ ಯ ಭಯ ಇನ್ನೂ ಹೋಗಿಲ್ಲಾ ಎನ್ನುವುದಕ್ಕೆ ಇಂದು ಕುವೆಂಪು ನಗರದ ಎರಡನೇ ತಿರುವಿನ

ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ
ನಗರದ ತ್ಯಾಜ್ಯವೆಲ್ಲಾ ಮೋರಿಯಲ್ಲಿ, ಸರಾಗವಾಗಿ ನೀರು ಹರಿಯದೇ ಬಂದ್. ಒನ್ ವೇ ಆದ ಹೆದ್ದಾರಿ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ನಗರದ ಹೆದ್ದಾರಿಯ ಸಾತನೂರು ವೃತ್ತದ ಬಳಿ ಇರುವ ದೊಡ್ಡ ಮೋರಿ

ಹೆದ್ದಾರಿ ಬದಿಯ ಅಂಗಡಿಗಳು ಖುಲ್ಲಾ, ಪೇಟೆ ಬೀದಿ ಬಹುತೇಕ ಬಂದ್, ಸ್ವಯಂ ಘೋಷಿತ ಲಾಕ್ಡೌನ್ ಗೆ ಮಿಶ್ರ ಪ್ರತಿಕ್ರಿಯೆ
ಹೆದ್ದಾರಿ ಬದಿಯ ಅಂಗಡಿಗಳು ಖುಲ್ಲಾ, ಪೇಟೆ ಬೀದಿ ಬಹುತೇಕ ಬಂದ್, ಸ್ವಯಂ ಘೋಷಿತ ಲಾಕ್ಡೌನ್ ಗೆ ಮಿಶ್ರ ಪ್ರತಿಕ್ರಿಯೆ

ಚನ್ನಪಟ್ಟಣ:ಜೂ/೨೬/೨೦/ಶುಕ್ರವಾರ. ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರ ಪತ್ರ ‌ಮುಖೇನ ಮನವಿಗೆ ನಗರದ ವರ್ತಕರ ಸಂಘದ ಪದಾಧಿಕಾರಿಗಳು ಸ್ಪಂದಿಸಿ ಇದೇ

ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಣೆಗೊಂಡ ಕೆಂಪೇಗೌಡ ಜಯಂತಿ
ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಣೆಗೊಂಡ ಕೆಂಪೇಗೌಡ ಜಯಂತಿ

**


ನಾಡಪ್ರಭು ಕೆಂಪೇಗೌಡ ರ ೫೧೧ ನೇ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಇಂದು ಸರಳವಾಗಿ ಆಚರಿಸಲಾಯಿತು.


ಕೊರೊನಾ (ಕೋವಿಡ್-೧೯) ಭಯದಿಂದ ಸಭೆಸಮಾರಂಭಗಳಿಗೆ ನಿಷೇಧ ಇರುವುದರಿಂದ ಹಾಗೂ ೧೪೪ ನೇ ಸೆಕ್ಷನ್

ನಾಳೆಯಿಂದ ತಿಂಗಳ ಕೊನೆಯವರೆಗೂ ರಾಮನಗರ ಸ್ವಯಂಪ್ರೇರಿತ ಲಾಕ್ಡೌನ್
ನಾಳೆಯಿಂದ ತಿಂಗಳ ಕೊನೆಯವರೆಗೂ ರಾಮನಗರ ಸ್ವಯಂಪ್ರೇರಿತ ಲಾಕ್ಡೌನ್

ರಾಮನಗರ:ಜೂ/೨೩/೨೦/ಮಂಗಳವಾರ. ನಾಳೆ ಜೂನ್ ೨೪ ರಿಂದ ಜೂನ್‍ ೩೦ ೨೦೨೦ ರ  ಮಾಸಾಂತ್ಯದವರೆಗೆ ಸ್ವಯಂ ಪ್ರೇರಿತ ಲಾಕ್‍ಡೌನ್‍ ಮಾಡಲು ಜಿಲ್ಲಾ ಕ

ಅಕ್ರಮವಾಗಿ ನಿರ್ಮಿಸಿದ ಶಿಲುಬೆಯನ್ನು ತೆರವುಗೊಳಿಸಿದ ರಾಮನಗರ ಜಿಲ್ಲಾಡಳಿತ
ಅಕ್ರಮವಾಗಿ ನಿರ್ಮಿಸಿದ ಶಿಲುಬೆಯನ್ನು ತೆರವುಗೊಳಿಸಿದ ರಾಮನಗರ ಜಿಲ್ಲಾಡಳಿತ

ರಾಮನಗರ:ಜೂ/೨೩/೨೦/ಮಂಗಳವಾರ. ರಾಮನಗರ ಜಿಲ್ಲಾ ಕೇಂದ್ರದಿಂದ ಕೂಗಳತೆಯ ದೂರದ ಗೊಲ್ಲರ ಚೆನ್ನಯ್ಯನ ದೊಡ್ಡಿ ಗ್ರಾಮದಲ್ಲಿರುವ ಹಾರ್ನ ಬೆಟ್ಟದಲ್ಲಿ ಸೆಬಾಸ

ತಹಶಿಲ್ದಾರ್ ರವರು ಮನಸ್ಸು ಮಾಡಿದ್ರೆ ಮಾತ್ರ ಒತ್ತುವರಿ ತೆರವು ಸಾಧ್ಯ
ತಹಶಿಲ್ದಾರ್ ರವರು ಮನಸ್ಸು ಮಾಡಿದ್ರೆ ಮಾತ್ರ ಒತ್ತುವರಿ ತೆರವು ಸಾಧ್ಯTop Stories »  


Top ↑