Tel: 7676775624 | Mail: info@yellowandred.in

Language: EN KAN

    Follow us :


ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 

Posted Date: 01 Feb, 2018

ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಲು ಆಯುಕ್ತರ ಸಲಹೆ 

ರಾಮನಗರ : ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುವಂತೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಕೆ.ಎಂ. ಚಂದ್ರೇಗೌಡ ಅವರು ಕಿವಿಮಾತು ಹೇಳಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿ, ತದನಂತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್‍ಟಿಐ ಒಂದು ಉತ್ಕøಷ್ಟ ಕಾಯ್ದೆ. ಸಾರ್ವಜನಿಕರಿಗೆ ಅಗತ್ಯವಿರುವ ಅಥವಾ ಬಯಸುವ ಮಾಹಿತಿಯನ್ನು ಸರ್ಕಾರಿ ಇಲಾಖೆಗಳು ತಮ್ಮಲ್ಲಿ ಲಭ್ಯವಿದ್ದಲ್ಲೀ 30 ದಿನದೊಳಗೆ ನೀಡುವಂತೆ ಕಾಯ್ದೆ ತಿಳಿಸಿದೆ. ಹೊಸದಾಗಿ ಮಾಹಿತಿಯನ್ನು ಸೃಷ್ಟಿಸಿ ನೀಡುವ ಅಗತ್ಯವಿಲ್ಲ. ಇರುವ ಮಾಹಿತಿಯನ್ನೇ ಅಥವಾ ದಾಖಲಾತಿಗಳನ್ನೇ ನಿಗಧಿ ಪಡಿಸಲಾದ ಶುಲ್ಕ ಭರಿಸಿಕೊಂಡು ಅವಧಿಯೊಳಗೆ ನೀಡುವಂತೆ ತಿಳಿಸಿದ ಅವರು ಕಾಲಕಾಲಕ್ಕೆ ಕಾಯ್ದೆಯಲ್ಲಾಗುವ ಬದಲಾವಣೆಗಳನ್ನು ಓದಿಕೊಂಡು ಅಪ್‍ಡೇಟ್ ಆಗುವಂತೆ ಸೂಚಿಸಿದರು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊದಲು ಕಾಯ್ದೆಯಡಿ ದಾಖಲಾದ ಅರ್ಜಿಗಳನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು. ಅದಕ್ಕೆ ಪ್ರತ್ಯೇಕ ಕಡತವನ್ನಿರಿಸುವುದು ಉತ್ತಮ. ಕಾಯ್ದೆಯ 4(1)ಎ ಹಾಗೂ 4(1)ಬಿಯ ಮಾಹಿತಿಯನ್ನು ಸಂಪೂರ್ಣವಾಗಿ ಸಿದ್ದಪಡಿಸಿಟ್ಟುಕೊಂಡಿರಬೇಕು, ಅಲ್ಲದೇ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರ ಹಾಗೂ ದೂರವಾಣಿಯ ಸಂಖ್ಯೆಯ ವಿವರದ ಫಲಕವನ್ನು ನಮೂದಿಸಿರಬೇಕು ಎಂದು ಅವರು ಹೇಳಿದರು. 

ಆರ್.ಟಿ.ಐಗೆ ಅದರದೇ ಅದ ಬೆಲೆ ಹಾಗೂ ಗೌರವವಿದೆ, ಕೇಳಲಾದ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಿ, ಸರ್ಕಾರಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದ್ದು, ಪ್ರೀತಿ ವಿಶ್ವಾಸದಿಂದ ಜನಸೇವೆಯನ್ನು ಮಾಡುವಂತೆ ಅವರು ತಿಳಿಸಿದರು.

ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವ ವಿಧಾನವನ್ನು ಪರಿಶೀಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಆರ್. ಪ್ರಶಾಂತ್ ಅವರಿಗೆ ಇದೇ ಸಂದರ್ಭದಲ್ಲಿ ಆಯುಕ್ತರು ನಿರ್ದೇಶನ ನೀಡಿದರು.

59 ಪ್ರಕರಣ ಇತ್ಯರ್ಥ:  ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲೆಗೆ ಸಂಬಂಧಿಸಿದ 66 ವಿವಿಧ ಪ್ರಕರಣಗಳ ವಿಚಾರಣೆಯನ್ನು ನಡೆಸಲಾಯಿತು. ಅವುಗಳಲ್ಲಿ 59 ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥಗೊಂಡವು. ಉಳಿದ 7 ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು. 

ಮನಸ್ಥಿತಿ ಬದಲಾಗಲಿ:ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡುವ ವೇಳೆ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು. ಏಕೆಂದರೆ ಆ ಸಂದರ್ಭದಲ್ಲಿ ಅಧಿಕಾರಿಯೂ ಕೂಡ ಒಬ್ಬ ನ್ಯಾಯಾಧೀಶರ ರೀತಿ ಕೆಲಸ ನಿರ್ವಹಿಸಬೇಕಿರುತ್ತದೆ ಎಂದು ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ. ಕೆಂಪೇಗೌಡ ಅಭಿಪ್ರಾಯಪಟ್ಟರು. 

ಸಾರ್ವಜನಿಕ ಸಂಪರ್ಕ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯ ಅಧಿನಿಯಮಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ಅರಿತುಕೊಳ್ಳಬೇಕು, ನಿರಂತರ ಅಧ್ಯಯನದಿಂದ ಮಾತ್ರ ಮಾಹಿತಿ ಹಕ್ಕು ಕಾಯ್ದೆಯಡಿ ಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ಎಂದರು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಈ ಕಾಯ್ದೆಯನ್ನು ಎಲ್ಲರೂ ಸೇರಿ ಬಲಪಡಿಸಬೇಕು, ತಡಮಾಡಿ ಮಾಹಿತಿ ನೀಡಿದರೆ ಅನುಮಾನ ವ್ಯಕ್ತವಾಗುತ್ತದೆ, ಹೀಗಾಗಿ ನಿಗಧಿ ಪಡಿಸಲಾಗಿರುವ 30ದಿನಗಳಿಗೂ ಮುಂಚಿತವಾಗಿಯೇ ಮಾಹಿತಿಯನ್ನು ಒದಗಿಸುವಂತೆ ತಿಳಿಸಿದ ಅವರು ಆರ್.ಟಿ.ಐ ಜರ್ನಲ್‍ಗಳು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ನ ಹೊಸ ಹೊಸ ತೀರ್ಪುಗಳನ್ನು ಅಧ್ಯಯನ ಮಾಡುವಂತೆ ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಹಿತಿ ಹಕ್ಕು ಕಾಯ್ದೆಯ ಅರ್ಜಿದಾದರರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ
ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣ:ಜು/೦೭/೨೦/ಮಂಗಳವಾರ. ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಸರಣಿ ಕಳ್ಳ

ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ೨೯ ಸೋಂಕು ದೃಢ ಜಿಲ್ಲಾಧಿಕಾರಿ

ರಾಮನಗರ:ಜು/೦೬/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ೨೯ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಟ್ಟು ೨೬೩ ಕ್ಕೆ ಏರಿಕೆಯಾಗಿವ

ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು
ರಾಮನಗರದಲ್ಲಿ ಮಂಗಳವಾರ ನಡೆಯಲಿವೆ ಏಳು ಕರಗಗಳು

ರಾಮನಗರ : ನಗರದಲ್ಲಿ ಈ ಬಾರಿ ಏಳು ಕರಗಗಳು ಇದೇ 7 ರಂದು ಮಂಗಳವಾರ ನಡೆಯಲಿವೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಕರಗಗಳು ದೇವಸ್ಥಾನದ ಆವರಣದಲ್ಲೇ ಸರಳವಾಗಿ ನಡೆಯಲಿವೆ. ಈ ಬಾರಿ ಕೊಂಡೋತ್ಸವ ನಡೆಯುತ್ತಿಲ್ಲ.

ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.
ಕೊರೊನಾ: ಚನ್ನಪಟ್ಟಣ ದ ಮೂರು ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಆರು ಪ್ರಕರಣ ದಾಖಲು. ಜಿಲ್ಲಾಧಿಕಾರಿ.

ರಾಮನಗರ:ಜು/೦೫/೨೦/ಭಾನುವಾರ. ಚನ್ನಪಟ್ಟಣ ದ ಮೂರು ಪಾಸಿಟಿವ್ ಸೇರಿ  ಜಿಲ್ಲೆಯ

ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ
ರಾಮನಗರ ನಗರಸಭೆ ಕಣ್ಣಿಗೆ ಕಾಣದಾಯಿತೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅವ್ಯವಸ್ಥೆ

10 ದಿನಗಳಿಂದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು ಟಾಯ್ಲೆಟ್ ನ ಚೇಂಬರ್ ನಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿದ್ದರೂ ನಗರಸಭೆಯವರು ಯಾವುದೇ ರೀತಿಯ ದುರಸ್ತಿ ಕಾರ್ಯ ಮಾಡದೇ ಅಸಡ್ಡೆ ತೋರಿದ್ದಾರೆ ಇದರ ಪರಿಣಾಮ ಮೈಸೂರು ಕಡೆ ಹೋಗುವ ಪ್

ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ
ತಮ್ಮ ಜೀವನದ ದುಡಿಮೆಯನ್ನು ಪತ್ರಿಕೆಗಳನ್ನು ಕೊಳ್ಳಲು ಉಪಯೋಗಿಸಿದ್ದ ಕಾಮಗೆರೆ ಲ. ಕೃಷ್ಣೇಗೌಡ

ರಾಮನಗರ : ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲಾ ಸಮಯದಲ್ಲ

ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ
ನೀಲಕಂಠನಹಳ್ಳಿ ಭರತ್ ರ ಸ್ವ ರಾಜಕೀಯ ಹಿತಕ್ಕಾಗಿ ನೀರಿನ ಘಟಕಕ್ಕೆ ವಿದ್ಯುತ್ ಬೋರ್ಡ್. ಗ್ರಾಮದ ಮುಖಂಡರ ಆಕ್ರೋಶ

ಚನ್ನಪಟ್ಟಣ:ಜು/೦೨/೨೦ಗುರುವಾರ. ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಭರತ್ ರವರು ಮುಂದಿನ ೨೦೨೦ ರ ಗ್ರಾಮ ಪಂಚಾಯಿತ

ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು
ಕಳೆಯಿಲ್ಲದ ತಾಲ್ಲೂಕು ಕಾಂಗ್ರೆಸ್ ಕಛೇರಿ, ಅಲ್ಲಲ್ಲಿ ಡಿಕೆಶಿ ಪದಗ್ರಹಣ ಸಂಭ್ರಮ ಕಣ್ತುಂಬಿಕೊಂಡ ಅಭಿಮಾನಿಗಳು

ಚನ್ನಪಟ್ಟಣ:ಜು/೦೨/೨೦/ಗುರುವಾರ. ಇಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪ

ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ
ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರೆ ರದ್ದುಪಡಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ:ಜು/೦೧/೨೦/ಬುಧವಾರ. ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಾಗೂ ಪುರಾಣ ಪ್ರಸಿದ್ದ ದೇವರಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ಜಾತ್ರೆ

ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ
ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮಂಗಳವಾರ

ರಾಮನಗರ : ನಗರದ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರು ನಗರದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ನಾನೂರು ವರ್ಷ

Top Stories »  


Top ↑