Tel: 7676775624 | Mail: info@yellowandred.in

Language: EN KAN

    Follow us :


ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

Posted Date: 17 May, 2019

ಮೂಲ ಆಶಯಗಳನ್ನು ಬದಿಗೊತ್ತಿ ಬಾಡಿಗೆಗೆ ಸೀಮಿತವಾದ ಶತಮಾನೋತ್ಸವ ಭವನ

ಚನ್ನಪಟ್ಟಣ: ಬೆಂಗಳೂರು ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಶತಮಾನದ ಹಿಂದೆಯೇ ಸರ್ಕಾರಿ ಬಾಲಕರ ಪ್ರೌಢಶಾಲೆ ಸ್ಥಾಪನೆಯಾಗಿದ್ದು, ಇಂದಿನ ಹಲವಾರು ಗಣ್ಯ ವ್ಯಕ್ತಿಗಳು ಆ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ, ಕ್ರಿ ಶ ೧೮೯೯ ರಲ್ಲಿ ಪ್ರಾರಂಭವಾದ ಈ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ತಡವಾಗಿಯಾದರೂ ಎಚ್ಚೆತ್ತುಕೊಂಡ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಂಘ (ರಿ) ಕಟ್ಟಿಕೊಂಡು ಅದೇ ಆವರಣದಲ್ಲಿ ಹಲವು ಮಹತ್ತರ ಆಶಯಗಳನ್ನು ಇಟ್ಟುಕೊಂಡು ಶತಮಾನೋತ್ಸವ ಭವನವನ್ನು ೨೦೧೫ ನಿರ್ಮಿಸಿದ್ದು ತಾಲ್ಲೂಕಿಗೆ ಹಿರಿಮೆಯ ಸಂಗತಿ ಎನ್ನಲಡ್ಡಿಯಿಲ್ಲ.


ಹಿರಿಯ ವಿದ್ಯಾರ್ಥಿಗಳು ಸಂಘ ಸ್ಥಾಪನೆಯ ಸಂದರ್ಭದಲ್ಲಿ ಬೈಲಾ ಬರೆಸಿದ್ದು, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅಂತಹ ಮಕ್ಕಳಿಗೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ನೇರ ತಲುಪಿಸುವ ಪ್ರಯತ್ನ, ಕೆಎಎಸ್, ಐಎಎಸ್‌ ಮತ್ತು ಐಪಿಎಸ್ ನಂತಹ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮಕ್ಕಳಿಗೆ ಉಚಿತ ವಾಗಿ ತರಗತಿ ನಡೆಸುವುದು, ಶಾಲೆಗೆ ಕೊಡುಗೆ ನೀಡಿದ ಶಿಕ್ಷಕರಿಗೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಗೌರಾವಾರ್ಪಣೆ, ಇದೇ ಶಾಲೆಯಲ್ಲಿ ಓದಿ ಹೊರ ರಾಜ್ಯ, ಹೊರ ದೇಶಗಳಲ್ಲಿ ಬದುಕು ಕಟ್ಟಿಕೊಂಡಿರುವವರನ್ನು ಹುಡುಕಿ ಒಂದೆಡೆ ಸೇರಿಸುವ ಪ್ರಯತ್ನ ಸೇರಿದಂತೆ ಅನೇಕ ಆಶಯಗಳನ್ನು ಮುಂದಿಟ್ಟುಕೊಂಡು ಸಂಘ ಮತ್ತು ಭವನ ಸ್ಥಾಪನೆ ಆಗಿದ್ದು ಯಾವುದೇ ರೀತಿಯ ಚಟುವಟಿಕೆಗಳು ನಡೆಯದೇ ಕೇವಲ ಬಾಡಿಗೆ ಕಟ್ಟಡವಾಗಿ ಮಾರ್ಪಾಡಾಗಿರುವುದು ದುರಂತವೇ ಸರಿ.


ಕ್ರಿ ಶ ೧೮೯೯ ರಲ್ಲಿ ಪ್ರಾರಂಭವಾದ ಶಾಲೆಗೆ ೧೯೯೯ ಕ್ಕೆ ನೂರು ವರ್ಷ ತುಂಬಿದರೇ, ೨೦೦೮ ರಲ್ಲಿ ಸಂಘ ಉದ್ಘಾಟನೆಗೊಂಡಿತು, ೨೦೧೧ ರಲ್ಲಿ ಶತಮಾನೋತ್ಸವ ಭವನ ಕಟ್ಟಲು ಅಡಿಗಲ್ಲು ಹಾಕಿ ಕೆಲಸ ಪ್ರಾರಂಭಿಸಿದ ಪದಾಧಿಕಾರಿಗಳು ೨೦೧೫ ಕ್ಕೆ ಪೂರ್ಣಗೊಳಿಸಿ ೨೩/೧೧/೨೦೧೫ ರಂದು ಅಂದಿನ ಅನ್ನದಾನೇಶ್ವರನಾಥ ಸ್ವಾಮೀಜಿ, ಎಸ್ ಎಂ ಕೃಷ್ಣ, ಸಿ ಪಿ ಯೋಗೇಶ್ವರ್, ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಸ್ತರು ಮತ್ತು ಮಾಜಿ ಗಳಾದಿಯಾಗಿ ಎಲ್ಲರೂ ಸೇರಿ ೧೬ ವರ್ಷಗಳ ತಡವಾಗಿ ಆದರೂ ಶತಮಾನೋತ್ಸವ ಭವನ ತಲೆ ಎತ್ತುವಂತಾಗಿದ್ದು ಶ್ರಮಿಸಿದ ಎಲ್ಲರಿಗೂ ತಾಲ್ಲೂಕಿನ ಜನತೆ ಋಣಿಗಳಾಗಿದ್ದಾರೆ.


೨೦೦೮ ರಿಂದ ೨೦೧೨ ರ ಅವಧಿಯಲ್ಲಿ ಸಿ ಪಿ ಯೋಗೇಶ್ವರ್ ಮತ್ತು ರವಿಕುಮಾರಗೌಡ ಅಧ್ಯಕ್ಷ ಮತ್ತು ಕಾರ್ಯದರ್ಶಿ ಮತ್ತಿತರರು ಪದಾಧಿಕಾರಿಗಳಾಗಿದ್ದರೆ ೨೦೧೨ ರಿಂದ ೨೦೧೫ ರ ಅವಧಿಯಲ್ಲಿ ಯೋಗೇಶ್ವರ್ ಜೊತೆಗೆ ಬಹುತೇಕ ಎಲ್ಲಾ ಪದಾಧಿಕಾರಿಗಳು ಬದಲಾವಣೆಗೊಂಡು ಸಂಘ ಕುಂಠಿತವಾಗಲು ಕಾರಣವಾಗಿರಬಹುದು.


ಒಂದೂವರೆ ಕೋಟಿ ರೂಪಾಯಿಗಳನ್ನು ಸರ್ಕಾರದ ಹಲವಾರು ಮಂತ್ರಿಗಳು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ, ನಗರಸಭೆ ಸೇರಿದಂತೆ ಕೆಲವು ಇಲಾಖೆಗಳ ಮೂಲಕ ಸಂಗ್ರಹವಾದರೆ ಹದಿಮೂರುವರೆ ಲಕ್ಷ ರೂಪಾಯಿಗಳು ದಾನಿಗಳಿಂದ ಸಂಗ್ರಹವಾಗಿ ಕಟ್ಟಡ ನಿರ್ಮಾಣಗೊಂಡಿದೆ.


ಶತಮಾನೋತ್ಸವ ಭವನದಲ್ಲಿ ಇನ್ನೂ ಅನೇಕ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ, ಮುಂಬಾಗಿಲು ಸೇರಿದಂತೆ ಎಲ್ಲಾ ಬಾಗಿಲುಗಳು ಪ್ಲೇವುಡ್ ಶೀಟ್ ಗಳಾಗಿದ್ದು ಬಿಸಿಲು ಮತ್ತು ಮಳೆಗೆ ಹಾಳಾಗುತ್ತಿವೆ, ಎ ಸಿ ಕೆಲಸ ಸಂಪೂರ್ಣವಾಗಿ ಮುಗಿದಿಲ್ಲ, ಕೆಲವು ಕಾರ್ಯಕ್ರಮಗಳು ಐದಾರು ಗಂಟೆಗಳ ಕಾಲ ನಡೆಯುವುದರಿಂದ ಮಧ್ಯ ಭಾಗದಲ್ಲಿ ಕಾಫಿ ತಿಂಡಿ ವ್ಯವಸ್ಥೆ ಇರುತ್ತದೆ, ಆದರೆ ಕುಳಿತು ತಿನ್ನಲು ಯೋಗ್ಯವಾದ ವ್ಯವಸ್ಥೆ ಇಲ್ಲ, ಭವನದ ಎಡಭಾಗದಲ್ಲಿ ನಿಂತು ತಿನ್ನಲು ಸ್ವಲ್ಪ ಜಾಗವಿದ್ದು ಮಳೆ ಬಂದರೆ ಅದೂ ಆಗದು, ಕಕ್ಕಸು ಮನೆಗೆ ಹೋಗಲು ಮಳೆಗಾಲದಲ್ಲಿ ಆಗುವುದೇ ಇಲ್ಲ, ಯಾಕೆಂದರೆ ಅದು ಭವನದ ಹಿಂದೆ ಇರುವುದರಿಂದ ಉದ್ದಕ್ಕೂ ಮೇಲ್ಛಾವಣಿಯ ಅವಶ್ಯಕತೆ ಇದೆ, ಕಸ ಹಾಕಲು ಸೂಕ್ತವಾದ ತೊಟ್ಟಿ ಇಲ್ಲದೆ ಎಲ್ಲೆಂದರಲ್ಲಿ ಹರಡಿದೆ, ಸೌಂಡ್ ಸಿಸ್ಟಂ ಇನ್ನೂ ಆಧುನೀಕರಣಗೊಳ್ಳಬೇಕಾಗಿದೆ, ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರಿಗಾಗಿ ಸೂಕ್ತ ಕುರ್ಚಿಗಳೂ ಇಲ್ಲದಿರುವುದು ಶೋಚನೀಯ.


(ಶತಮಾನೋತ್ಸವ ಭವನಕ್ಕೆ ಯಾವುದೇ ರೀತಿಯ ಹಣ ಬರುತ್ತಿಲ್ಲ, ಸದ್ಯ ಎಸಿ ನಿರ್ಮಾಣ ಹಂತದಲ್ಲಿದೆ, ಅದು ಸಂಪೂರ್ಣವಾಗಲು ಹೆಚ್ಚು ಹಣ ಬೇಕಾಗಿರುವುದರಿಂದ ದಾನಿಗಳ ಮೂಲಕ ಪಡೆದು ಮುಂದಿನ ಕೆಲಸ ಮಾಡುತ್ತೇವೆ, ಮುಂದಿನ ತಿಂಗಳಿಂದ ಚನ್ನಪಟ್ಟಣದಲ್ಲೇ ಇದ್ದು ಸಮಿತಿಯ ಎಲ್ಲರನ್ನೂ ಸೇರಿಸಿಕೊಂಡು ಕೆಲಸ ಮಾಡುತ್ತೇನೆ.


ಸಿ ಪಿ ಯೋಗೇಶ್ವರ್ ಮಾಜಿ ಶಾಸಕರು


(೨೦೦೮ ರಿಂದ ೨೦೧೨ ರ ತನಕ ಅಂದರೆ ಸದಾನಂದಗೌಡ ಮತ್ತು ರಾಮಚಂದ್ರೇಗೌಡರ ಅನುದಾನ ಬರುವ ತನಕ ಮಾತ್ರ ನನ್ನನ್ನು ಕಾರ್ಯಾಧ್ಯಕ್ಷರನ್ನಾಗಿ ದುಡಿಸಿಕೊಂಡು ರಾಜಕೀಯ ಚಿತಾವಣೆಯಿಂದ ನನ್ನನ್ನು ತೆಗೆದು ಹಾಕಲಾಯಿತು, ಒಟ್ಟಾರೆ ಸಕ್ರಿಯ ಸಮಿತಿ ಮಾಡಿ, ಬಾಡಿಗೆಯನ್ನು ಹೆಚ್ಚು ಮಾಡಿ ರಾಜಕೀಯ ಹಿತಾಸಕ್ತಿ ಬದಿಗೊತ್ತಿ ಕೆಲಸ ಮಾಡಿದರೆ ಬೈಲಾ ದಲ್ಲಿ ಇರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಬಹುದು.


ರವಿಕುಮಾರಗೌಡ ಮಾಜಿ ಕಾರ್ಯಾಧ್ಯಕ್ಷರು


ಹಳೆಯ ವಿದ್ಯಾರ್ಥಿಗಳ ಸಂಘವು ಈಗ ಅಸ್ತಿತ್ವದಲ್ಲಿಲ್ಲ ಎಂದೇ ಭಾವಿಸಬೇಕಾಗಿದೆ, ಅದು ನವೀಕೃತ ಗೊಂಡಿಲ್ಲ, ಎರಡು ವರ್ಷಗಳ ಹಿಂದೆ ಕ್ರೋಢೀಕರಿಸಿದ ನಾಲ್ಕು ಲಕ್ಷ ಹಣವನ್ನು ಎಸಿ ಅಳವಡಿಸಲು ಕೊಟ್ಟಿದೆ, ಹಣ ಇಲ್ಲದ್ದರಿಂದ ಕೆಲಸ ನಿಂತುಹೋಗಿದೆ, ನಿರ್ವಹಣೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯಿಂದಲೇ ನಿರ್ವಹಿಸಲಾಗುತ್ತಿದೆ, ಸಂಘವು ಸಕ್ರಿಯವಾದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ.


ಸಿದ್ದರಾಜೇಗೌಡ ಪ್ರಾಂಶುಪಾಲರು ಬಾ ಪ ಪೂ ಕಾಲೇಜು


(ಹಳೆಯ ವಿದ್ಯಾರ್ಥಿಗಳ ಸಂಘವನ್ನು ಪುನರುಜ್ಜೀವನಗೊಳಿಸಿ, ಕಾಲೇಜಿನ ಪ್ರಾಂಶುಪಾಲರು, ಸಕ್ರಿಯ ಹಳೆಯ ವಿದ್ಯಾರ್ಥಿಗಳು, ಇನ್ನಿತರರನ್ಮು ಸೇರಿಸಿಕೊಂಡು ನಿರ್ವಹಣಾ ಸಮಿತಿ ಮಾಡಿ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಬೈಲಾ ದಲ್ಲಿ ಉಲ್ಲೇಖಿಸಿರುವ ಎಲ್ಲಾ ಔಚಿತ್ಯ ಪೂರ್ಣ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತದೆ.


ಶಿವರಾಮೇಗೌಡ ನಾಗವಾರ ನಿವೃತ್ತ ಪ್ರಾಂಶುಪಾಲರು ಮತ್ತು ಶತಮಾನದ ಸಿರಿ ಸ್ಮರಣ ಸಂಚಿಕೆ ಯ ಪ್ರಧಾನ ಸಂಪಾದಕರು


(ಸಂಘ ಸಕ್ರಿಯವಾಗಿಲ್ಲ, ಮೊದಲು ಎಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸಬೇಕು, ಮೂಲ ಉದ್ದೇಶಗಳನ್ನು ಅವಲೋಕಿಸಿ ಕಾರ್ಯರೂಪಕ್ಕೆ ತರಬೇಕು, ಈ ಬದ್ದತೆ ಬಹುತೇಕ ಯಾರಲ್ಲೂ ಇಲ್ಲದಿರುವುದರಿಂದ ಮೂಲ ಆಶಯಗಳು ಹಾಗೆಯೇ ಉಳಿದು ಬಿಡುವ ಸಾಧ್ಯತೆ ಇದೆ.


ಮಾದಯ್ಯ, ಮಾಜಿ ಕಾರ್ಯಾಧ್ಯಕ್ಷರು


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?
ತಾಳೆಯೋಲೆ ೨೦: ಮನೆಯ ಪರಿಸರದಲ್ಲಿ ಔಷಧೀಯ ಗಿಡಗಳನ್ನು ಯಾಕಾಗಿ ಬೆಳೆಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ
ಕಡೇ ಶ್ರಾವಣ ದಲ್ಲಿ ಭ(ಕ್ತಿ)ಕ್ತ ಸಾಗರ

ಚನ್ನಪಟ್ಟಣ: ಈ ವರ್ಷದ ನಾಲ್ಕು ಶ್ರಾವಣ ಮಾಸದ ಶನಿವಾರ ಗಳಲ್ಲಿ ಕಡೇ ಶ್ರಾವಣ ವಾದ ಇಂದು ತಾಲ್ಲೂಕಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳನ್ನು ಅತಿ

ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು
ಹಿಂದುಳಿದ ವರ್ಗಗಳ ಆಶಾಕಿರಣ ಡಿ ಡಿ ಅರಸು, ಡಾ ಅಣ್ಣಯ್ಯ ತೈಲೂರು

ಚನ್ನಪಟ್ಟಣ: ಹಿಂದುಳಿದ ವರ್ಗಗಳ ಆಶಾಕಿರಣ, ಬಡವರ ಬಂಧು, ಬಡವರ ಪರವಾದ ಹಲವು ಇಲಾಖೆಗಳನ್ನು ಹುಟ್ಟು ಹಾಕಿ ಭದ್ರ ಬುನಾದಿ ಹಾಕಿದ ಅಂದಿನ ಪ್ರಧಾನಮಂ

ಕಳಪೆ ಕಾಮಗಾರಿ ವಿರೋಧಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ರೈತಸಂಘ ಪ್ರತಿಭಟನೆ.
ಕಳಪೆ ಕಾಮಗಾರಿ ವಿರೋಧಿಸಿ ಲೋಕೋಪಯೋಗಿ ಇಲಾಖೆ ವಿರುದ್ಧ ರೈತಸಂಘ ಪ್ರತಿಭಟನೆ.

ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಮತ್ತು ಇತ್ತೀಚೆಗೆ ನಡೆದಿರುವ ಶೇಕಡಾ ೯೫ ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಕಳಪೆ ಕಾಮಗಾರಿಗಳಿಗೆ ಗುತ್ತಿಗೆದಾರರು, ಇಂಜಿನಿಯರ್ ಗಳು ಸೇರಿದಂತ

ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?
ತಾಳೆಯೋಲೆ ೧೪: ಸಾವಿಗೆ ಹೋಗಿ ಬಂದು ಸ್ನಾನ ಮಾಡದೆ ಮನೆಯೊಳಗೆ ಪ್ರವೇಶಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ
ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ

ಚನ್ನಪಟ್ಟಣ: ಕಾಟಾಚಾರದ ಸವಾರರು

ಚನ್ನಪಟ್ಟಣ ತಾಲೂಕಿನಾದ್ಯಂತ ಬಹುತೇಕ ದ್ವಿಚಕ್ರ 

ಸವಾರರ ತಲೆ ಮೇಲೆ ಬಣ್ಣಬಣ್ಣದ ತರ

ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ
ಸ್ವಾತಂತ್ರ್ಯ ಸ್ವೇಚ್ಚಕಾರಿ ಸಲ್ಲ, ಅದು ಭಾರತೀಯ ಹೋರಾಟಗಾರರ ರಕ್ತದಿಂದ ಬಂದದ್ದು, ರಂಗಸ್ವಾಮಿ

ಚನ್ನಪಟ್ಟಣ: ನಮಗಿಂದು ಸಂದಿರುವ ಸ್ವಾತಂತ್ರ್ಯ ವನ್ನು ಸ್ವೇಚ್ಚಕಾರಿಗಾಗಿ ಬಳಸದೇ ಅದರ ಹಿಂದಿರುವ ಭಾರತೀಯರ ರಕ್ತದೋಕುಳಿಯ ಇತಿಹಾಸ ಅರಿಯುವ ಮೂಲಕ

ವಿದ್ಯಾರ್ಥಿಗಳ ನಡಿಗೆ ದೇಶದ ಏಳ್ಗೆಯ ಕಡೆಗೆ ತಹಶಿಲ್ದಾರ್ ಸುದರ್ಶನ್
ವಿದ್ಯಾರ್ಥಿಗಳ ನಡಿಗೆ ದೇಶದ ಏಳ್ಗೆಯ ಕಡೆಗೆ ತಹಶಿಲ್ದಾರ್ ಸುದರ್ಶನ್

ಚನ್ನಪಟ್ಟಣ: ಇಂದಿನ ವಿದ್ಯಾರ್ಥಿಗಳೇ ಮುಂದಿನ ರಾಷ್ಟ್ರ ನಿರ್ಮಾತೃಗಳು, ಇಂದಿನ ಶಿಸ್ತು, ಜೀವನದ ಮತ್ತು ದೇಶದ ಸಂಪತ್ತು, ತಮ್ಮ ಜೀವನದ ಶಕ್ತಿಯನ್ನ

ಎಚ್ಚರಿಕೆಯ ಜೊತೆಗೆ ಸಾಧಾರಣ ದಂಡಕ್ಕೆ ಚಾಲನೆ ನೀಡಿದ ಪೋಲಿಸರು
ಎಚ್ಚರಿಕೆಯ ಜೊತೆಗೆ ಸಾಧಾರಣ ದಂಡಕ್ಕೆ ಚಾಲನೆ ನೀಡಿದ ಪೋಲಿಸರು

ಚನ್ನಪಟ್ಟಣ: ನಗರದ ಸುತ್ತಮುತ್ತಲಿನ ಬಹುತೇಕ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಸವಾರರಿಗೆ ಎಚ್ಚರಿಕೆಯ ಸಂದೇಶ ನೀಡಿ ಸಾಧಾರಣ ದಂ

ಇಂದಿನಿಂದ ಹೆಲ್ಮೆಟ್ ಕಡ್ಡಾಯ, ತಪ್ಪಿದರೆ ಭಾರಿ ದಂಡ ಡಿಎಲ್ ರದ್ದು.
ಇಂದಿನಿಂದ ಹೆಲ್ಮೆಟ್ ಕಡ್ಡಾಯ, ತಪ್ಪಿದರೆ ಭಾರಿ ದಂಡ ಡಿಎಲ್ ರದ್ದು.

ರಾಮನಗರ: ಆಗಸ್ಟ್ ೧೫ ಭಾರತ ಸ್ವತಂತ್ರವಾದ ದಿನ, ಈ ಸ್ವಾತಂತ್ರ್ಯ ಬ್ರಿಟೀಷರಿಂದ ಮುಕ್ತಿ ದೊರಕಿಸಿ ಭಾರತೀಯರೆಲ್ಲರೂ ಸ್ವತಂತ್ರವಾಗಿ ಬದುಕಲು ಅನುವ

Top Stories »  


Top ↑