ಕೆರೆಯಲ್ಲಿ ಮುಳುಗಿ ಇಬ್ಬರ ಬಾಲಕರ ಸಾವು

ಚನ್ನಪಟ್ಟಣ:೨೭/೦೫/೨೦೧೯ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ನಡೆದಿದೆ. ೯ ವರ್ಷದ ನವನೀತ್ ಹಾಗೂ ೧೪ ವರ್ಷದ ಗಗನ್ ಮೃತ ಮಕ್ಕಳಾಗಿದ್ದು ಮಧ್ಯಾಹ್ನ ಕೆರೆಯಲ್ಲಿ ಇಬ್ಬರು ಮಕ್ಕಳು ಈಜಲು ಇಳಿದಿದ್ದಾರೆ.
ಮೊದಲು ಕೆರೆ ದಡದಲ್ಲಿ ಈಜಾಡುತ್ತಿದ ಇಬ್ಬರು ಹಾಗೆ ಕೆರೆಯ ಆಳಕ್ಕೆ ಇಳಿದಿದ್ದಾರೆ. ಇಬ್ಬರಿಗೂ ಈಜು ಬಾರದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತ್ತ ಜಾನುವಾರುಗಳಿಗೆ ನೀರು ಕುಡಿಸಲು ಬಂದ ಗ್ರಾಮಸ್ಥರು ಕೆರೆ ದಡದಲ್ಲಿ ಇಬ್ಬರ ಬಟ್ಟೆ ಚಪ್ಪಲಿ ಇದ್ದಿದ್ದನ್ನು ನೋಡಿ ಯಾರೊ ಕೆರೆಯಲ್ಲಿ ಮುಳುಗಿರಬಹುದು ಎಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮದ ಯುವಕರು ಶವಗಳನ್ನು ಮೇಲೆತ್ತಲು ಹರಸಾಹಸ ಪಟ್ಟರಾದರೂ ತುಂಬಾ ಆಳವಿದ್ದುದ್ದರಿಂದ ಸಾಧ್ಯವಾಗಿಲ್ಲ, ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಹಾಯ ದೊಂದಿಗೆ ಶವಗಳ ಹುಡುಕಾಟ ನಡೆಸಿ ಇಬ್ಬರ ಶವಗಳನ್ನ ಹೊರ ತೆಗೆದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಮೃತ ದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು, ಈ ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್
ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿ

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ
ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ

ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದ

ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾ
ಪ್ರತಿಕ್ರಿಯೆಗಳು