ಮರಣಕ್ಕೆ ಮುಕ್ತ ಆಹ್ವಾನ ಧೂಮಪಾನ

ಇಂದು ವಿಶ್ವ ತಂಬಾಕು ದಿನ, ಇದರ ಅರ್ಥ ತಂಬಾಕನ್ನು ಉತ್ತೇಜಿಸುವುದಲ್ಲ, ಬದಲಾಗಿ ನಿಷೇಧಿಸುವ ದಿನ, ಇಂದಿನ ಅನೇಕ ಮಹಾನ್ ರೋಗಗಳಿಗೆ ಕಾರಣವೇ ಈ ಧೂಮಪಾನ, ಇದು ಖುದ್ದು ಧೂಮಪಾನ ಮಾಡುವವರಿಗಿಂತಲೂ ಧೂಮಪಾನ ಮಾಡುವವರ ಸನಿಹದವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.
ಧೂಮಪಾನ ಮಾಡುವುದರಿಂದ ವ್ಯಾಪಾರ ವಹಿವಾಟು ಮತ್ತು ಖಾಸಗಿ ವೈದ್ಯರಿಗೆ ಮಾತ್ರ ಲಾಭ, ಧೂಮಪಾನ ಮಾಡುವ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಶಾಶ್ವತ ಮರಣ ಶಾಸನವೇ ಸರಿ, ಧೂಮಪಾನ ಮಾಡುವುದರಿಂದ ಆತನಿಗೆ ಬರುವ ಕಾಯಿಲೆಗಳನ್ನು ಗಮನಿಸಿ;
*ದೀರ್ಘಕಾಲದ ಶ್ವಾಸಕೋಶದ ತೊಂದರೆ*
*ರಕ್ತದ ಏರೋತ್ತಡ, ಹೃದಯ ಮತ್ತು ರಕ್ತ ನಾಳಗಳ ಕಾಯಿಲೆ*
*ಹಲ್ಲುಗಳ ಅನಾರೋಗ್ಯ ಮತ್ತು ಹಳದಿ ಬಣ್ಣ*
*ಹಲವು ರೀತಿಯ ಕ್ಯಾನ್ಸರ್*
*ನರಮಂಡಲದ ಹಾನಿ ಇದರಿಂದಾಗಿ ಲಕ್ವ ಹೊಡೆಯುವ ಸಾಧ್ಯತೆ*
*ಬರ್ಗರ್ ಕಾಯಿಲೆ*
*ಲೈಂಗಿಕ ಅನಾರೋಗ್ಯ*
*ಗರ್ಭಿಣಿ ಮತ್ತು ಶಿಶುವಿನ ಮೇಲೆ ದುಷ್ಪರಿಣಾಮ*
ತಾನು ಅನುಭವಿಸುವ ಇನ್ನೂ ಅನೇಕ ಕಾಯಿಲೆಗಳ ಜೊತೆಗೆ ಅನೇಕ ಸಂಗಡಿಗರ ಮೇಲೆಯೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂದು ಸಂಶೋಧನೆಗಳ ಹೇಳುತ್ತವೆ.
ತಂಬಾಕು ಅದರಲ್ಲೂ ಬೀಡಿ ಮತ್ತು ಸಿಗರೇಟ್ ನಲ್ಲಿ *ನಿಕೋಟಿನ್* *ಇಂಗಾಲದ ಮಾನಾಕ್ಸೈಡ್ ಟಾರ್ ಬೆಂಜೋಪೈರಸ್* ನಂತಹ ೪,೦೦೦ ಕ್ಕೂ ಹೆಚ್ಚು ರಾಸಾಯನಿಕ ಕೆಟ್ಟ ಅಂಶಗಳು ಶ್ವಾಸಮಾರ್ಗದ ಮೇಲೆ ಶೇಖರಣೆಗೊಳ್ಳುತ್ತವೆ, ಹೆಚ್ಚು ವರ್ಷಗಳ ಕಾಲ ಧೂಮಪಾನ ಮಾಡಿದಷ್ಟೂ ಕಾಯಿಲೆಗಳ ಜೊತೆಗೆ ಆಯಸ್ಸು ಕ್ಷೀಣಿಸುತ್ತಾ ಬರುತ್ತದೆ, ಒಂದು ಪ್ಯಾಕ್ ಸಿಗರೇಟ್ ಸೇದಿದರೆ ಎಂಟು ಔನ್ಸ್ ಅಂದರೆ ಒಂದು ಲೋಟದಷ್ಟು ಟಾರ್ ಅನ್ನು ಒಳಕ್ಕೆ ಎಳೆದುಕೊಳ್ಳುತ್ತಾರೆ.
ಎಲ್ಲಾ ರೀತಿಯ ತಂಬಾಕು ಅಂದರೆ *ಜಗಿಯುವ, ಒತ್ತರಿಸಿಕೊಳ್ಳುವ ಮತ್ತು ಸೇದುವ* ವ್ಯಕ್ತಿಗಳಿಗೆ ಕೇವಲ ಐದು ಸೆಕೆಂಡ್ ಗಳಲ್ಲಿ ಹೃದಯದ ಬಡಿತ ಹೆಚ್ಚಾಗುತ್ತದೆ, ಪ್ರತಿ ನಿಮಿಷಕ್ಕೆ ೧೦ ರಿಂದ ೧೫ ಬಾರಿ ಹೆಚ್ಚು ಬಡಿದುಕೊಳ್ಳಲು ಪ್ರಾರಂಭಿಸುತ್ತದೆ, *ಶ್ವಾಸಕೋಶ, ತುಟಿ, ಧ್ವನಿಪೆಟ್ಟಿಗೆ, ಬಾಯಿ, ಕೆನ್ನೆ, ಅನ್ನನಾಳ, ಮೂತ್ರಚೀಲ (urinary bladder) ಪ್ಯಾಂಕ್ರಿಯಾಸ್ (pancreas) ಕಾಯಿಲೆಗಳು ದವಡೆ ಮತ್ತು ತುಟಿಗಳಲ್ಲಿ ಒತ್ತರಿಸಿಕೊಳ್ಳುವವರ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ.*
ಬೀಡಿ ಸಿಗರೇಟಿನ ಹೊಗೆ ಮಾನವನಿಗೆ ಹಗೆ ಎಂಬ ಮಾತಿನಂತೆ ರಕ್ತದೊತ್ತಡ ಏರುವುದು, ರಕ್ತದೊಳಗೆ ಕೊಬ್ಬಿನ ಆಮ್ಲಗಳು ಸುರಿಯುವುದು, ಇದರಿಂದ ರಕ್ತ ಹೆಪ್ಪುಗಟ್ಟುವುದು, ರಕ್ತ ಸಂಚಾರಕ್ಕೆ ಅಡ್ಡಿಯಾಗಿ ಹೃದಯಘಾತ, ಬಾಯಿಯ ದುರ್ವಾಸನೆ, ಜಠರದಲ್ಲಿ ಹುಣ್ಣು, ಹಲ್ಲು ಮತ್ತು ಒಸಡುಗಳು ಹಾನಿಯಾಗಿ ಶ್ವಾಸಕೋಶ ಮತ್ತು ಶ್ವಾಸನಾಳಗಳ ಸೋಂಕು ಹೆಚ್ಚಾಗುತ್ತದೆ.
ತಂದೆ ತಾಯಿ ಮತ್ತು ಪೋಷಕರು ಮಕ್ಕಳ ಮುಂದೆ ತಂಬಾಕು ಸೇವನೆ ಮಾಡಿದರೆ ಬಾಲ್ಯ ಮತ್ತು ಹರೆಯದಲ್ಲಿ ಮಕ್ಕಳು ಚಟ ಅಂಟಿಸಿಕೊಳ್ಳುತ್ತಾರೆ, ಇವರಲ್ಲಿ ಶಿಕ್ಷಕರ ಪಾತ್ರವೂ ದೊಡ್ಡದಿದೆ, ದೊಡ್ಡವರು ಚಟದಿಂದ ಮುಕ್ತರಾದರೆ ಮಾತ್ರ ಭವಿಷ್ಯದ ಪ್ರಜೆಗಳನ್ನು ಸಂರಕ್ಷಿಸಿಸಬಹುದಾಗಿದೆ.
ವೈದ್ಯರ ಮಾತಿನ ಮೇಲೆ ರೋಗಿಗಳಿಗೆ ತುಸು ನಂಬಿಕೆ ಹೆಚ್ಚು, ಅವರು ದೃಢವಾಗಿ ಹೇಳಿದರೆ ರೋಗಿಗಳು ಕೇಳುತ್ತಾರೆ, ಕಂಪೆನಿಗಳು ಲಾಭದ ದೃಷ್ಟಿಯಿಂದ ಇದನ್ನು ನೋಡದೆ ಭವಿಷ್ಯ ಭಾರತ ದೇಶದ ಹಿತದೃಷ್ಟಿಯಿಂದಲಾದರೂ ತಮ್ಮ ವಹಿವಾಟನ್ನು ಬದಲಾಯಿಸಿಕೊಳ್ಳಬೇಕು, ತಂಬಾಕು ಬೆಳೆಯುವ ರೈತರಿಗೆ ಪರ್ಯಾಯ ಬೆಳೆ ಬೆಳಯುವಂತೆ ಬೆಳೆದ ಬೆಳೆಗೆ ಖಾತ್ರಿ ನೀಡಿದರೆ ಲಾಭದ ತಂಬಾಕು ವ್ಯವಸಾಯ ನಿಲ್ಲಿಸುವುದರಲ್ಲಿ ಅನುಮಾನವೇ ಇಲ್ಲ.
ಕೆಲವು ಅಂಕಿ ಅಂಶಗಳ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರವು ತಂಬಾಕಿನಿಂದ ಬರುವ ಆದಾಯಕ್ಕಿಂತಲೂ ತಂಬಾಕು ನಿಷೇಧಿಸುವ ಜಾಹೀರಾತುಗಳು ಮತ್ತು ಅದರಿಂದುಂಟಾಗುವ ಕಾಯಿಲೆಗಳಿಗೆ ಹೆಚ್ಚು ಹಣ ಖರ್ಚು ಮಾಡುತ್ತಿವೆ, ಇದರ ಬದಲು ತಂಬಾಕು ಬೆಳೆ ನಿಷೇಧದ ಜೊತೆಗೆ ಉತ್ಪಾದಕ ಕಂಪೆನಿಗಳನ್ನು ಶಾಶ್ವತವಾಗಿ ಮುಚ್ಚಿಸಲು ಕ್ರಮಕೈಗೊಂಡರೆ ಈ ಮೇಲಿನ ಎಲ್ಲಾ ಕಾಯಿಲೆಗಳನ್ನು ಹತೋಟಿಗೆ ತಂದು ವಿಶ್ವದಲ್ಲೇ ಕ್ಯಾನ್ಸರ್ ಮುಕ್ತ ಭಾರತ ಮಾಡಬಹುದಾಗಿದೆ.
*ತಂಬಾಕು ಕೇವಲ ಸೇವಿಸುವ ವ್ಯಕ್ತಿಗಷ್ಟೇ ಅಲ್ಲದೆ ಅವಲಂಬಿತರು ಮತ್ತು ಅಭಿವೃದ್ಧಿಗೂ ಮಾರಕವೇ, ಈ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕೈಜೋಡಿಸಿ ತಂಬಾಕು ಮುಕ್ತ ಭಾರತ ನಿರ್ಮಿಸಲು ಬದ್ದರಾಗೋಣವೇ ?*
ಗೋ ರಾ ಶ್ರೀನಿವಾಸ..
ಮೊ:9845856139.
Recent news in ramanagara »

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್
ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿ

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ
ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ

ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದ

ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾ
ಪ್ರತಿಕ್ರಿಯೆಗಳು