Tel: 7676775624 | Mail: info@yellowandred.in

Language: EN KAN

    Follow us :


ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್

Posted Date: 03 Jun, 2019

ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ದೋಖಾ ಎಸಗಿರುವ ಶಂಕರ್

ಶಾಲೆಯ ಮುಂಭಾಗಕ್ಕೆ ಮಾತ್ರ ಬಣ್ಣ ಹಚ್ಚಿದ್ದು ನಾಮಫಲಕ ಹಾಗೆ ಇದೆ

ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯ ಕಿರಿಯ ಇಂಜಿನಿಯರ್ ಶಂಕರ್ ಹೊಂಗನೂರು ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವ ಸಂಬಂಧ ಸರದಿ ವರದಿಗಳು ಮತ್ತು ಕೃಷ್ಣೇಗೌಡ ರ ದೂರಿನ ಮೇರೆಗೆ ಜಿಲ್ಲಾ ಪಂಚಾಯತಿ ಸಿಇಓ ರವರು ತನಿಖೆಗೆ ಆದೇಶಿಸಿ ಮೇಲ್ನೋಟಕ್ಕೆ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಕಿರಿಯ ಇಂಜಿನಿಯರ್ ಶಂಕರ್ ನನ್ನು ಕಳೆದ ತಿಂಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕೇವಲ ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಗಷ್ಟೇ ಸೀಮಿತ ಎಂದುಕೊಂಡಿದ್ದ ನಮಗೆ ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲೂ ಆತ ಅಕ್ರಮ ಎಸಗಿರುವುದು ಕಂಡು ಬಂದಿತು, ಅದರ ಸಂಪೂರ್ಣ ವಿವರ ಈ ಕೆಳಗಿನಂತಿದೆ.


ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಜೆ ಬ್ಯಾಡರಹಳ್ಳಿ ಗ್ರಾಮದ ಪ್ರೌಢಶಾಲೆಗೆ ಚುರಕಿ, ಸುಣ್ಣಬಣ್ಣ ಮತ್ತು ರ್ಯಾಂಪ್ ನಿರ್ಮಾಣಕ್ಕೆಂದು ಒಂದೇ ದಿನಾಂಕದಲ್ಲಿ *೩,೦೦,೦೦೦ ಮತ್ತು ೯೦,೦೦೦ ಹಾಗೂ ಐದು ದಿನಗಳ ಅಂತರದಲ್ಲಿ ೩೦,೦೦೦ ರೂಪಾಯಿಗಳನ್ನು ಗುತ್ತಿಗೆದಾರ ಬಿ ಟಿ ಅನಂತಕುಮಾರ ಹೆಸರಿನಲ್ಲಿ ಕಿರಿಯ ಇಂಜಿನಿಯರ್ ಶಂಕರ್ ಮತ್ತು ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ಕುಮಾರಸ್ವಾಮಿ* ಕಾರಣಾಗಿರುವುದು ದಾಖಲೆಗಳ ಮೂಲಕ ಸಾಬೀತಾಗಿದೆ.


ಚನ್ನಪಟ್ಟಣ ತಾಲ್ಲೂಕು ಜೆ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಜೆ ಬ್ಯಾಡರಹಳ್ಳಿ ಪ್ರೌಢಶಾಲೆಯ ಕಟ್ಟಡ ದುರಸ್ತಿ ಹಾಗೂ ರ್ಯಾಂಪ್ ನಿರ್ಮಾಣ ಕಾಮಗಾರಿ D.R.No.:517/2017-18, W.O No.:559/2017-18 ರ ಸಂಖ್ಯೆಯಲ್ಲಿ ದಿನಾಂಕ ೦೯/೦೩/೨೦೧೮ ರಲ್ಲಿ ೨,೯೨,೨೮೭ ರೂಪಾಯಿಗಳ ಬಿಲ್ ಪಾವತಿ ಮಾಡಿಕೊಂಡಿದ್ಧಾರೆ,


ಅದೇ ದಿನಾಂಕದಲ್ಲಿ ಅದೇ ಪ್ರೌಢಶಾಲೆ ಕಟ್ಟಡಕ್ಕೆ ಸುಣ್ಣ ಬಣ್ಣ ಹಾಗೂ ರಿಪೇರಿಗೆಂದು D.R.No.:846/2017-18, W.O.No.:732/2017-18, ಸಂಖ್ಯೆಯಲ್ಲಿ ೮೮,೪೬೯ ರೂಪಾಯಿಗಳ ಬಿಲ್ ಪಾವತಿ ಮಾಡಿಕೊಂಡಿದ್ದಾರೆ.


ಐದು ದಿನಗಳ ನಂತರ ಅಂದರೆ ೧೪/೦೩/೨೦೧೮ ರಂದು ಅದೇ ಪ್ರೌಢಶಾಲೆಗೆ ರ್ಯಾಂಪ್ ನಿರ್ಮಾಣ ಮಾಡಲು D.R.766.:/2017-18. ಕೆ.ಅ.ಸಂ 734/2018-18 ರ ಸಂಖ್ಯೆಯಲ್ಲಿ ೨೮,೩೮೫ ರೂಪಾಯಿಗಳ ಬಿಲ್ ಪಡೆದು ಕೊಂಡಿದ್ದಾರೆ.


ಈ ಮೇಲಿನ ಎಲ್ಲಾ ಕಾಮಗಾರಿಗಳು ೨೦೧೭/೧೮ ನೇ ಸಾಲಿನ ಜಿಲ್ಲಾ ಪಂಚಾಯತಿ ಅನುದಾನದ ಕಾಮಗಾರಿಗಳಾಗಿದ್ದು ಎಲ್ಲಾ ಬಿಲ್ ಗಳನ್ನು ಜೆ ಬ್ಯಾಡರಹಳ್ಳಿ ಗ್ರಾಮದ ಮೂರನೇ ದರ್ಜೆ ಗುತ್ತಿಗೆದಾರ *ಅನಂತಕುಮಾರ ಬಿ ಟಿ* ಎಂಬುವವರ ಹೆಸರಿಗೆ ಪರೀಕ್ಷಾರ್ಥ ಸೇವಾವಧಿಯಲ್ಲಿದ್ದ ಕಿರಿಯ ಇಂಜಿನಿಯರ್ *ಶಂಕರ್* ಮತ್ತು ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ *ಕುಮಾರಸ್ವಾಮಿ* ಯವರೇ ಕಾಮಗಾರಿಯನ್ನು ಪರೀಕ್ಷಿಸಿ ಬಿಲ್ ಪಾವತಿ ಮಾಡಿದ್ದೇವೆಂದು ಸಹಿ ಮಾಡಿದ್ದಾರೆ.


ಈ ಎಲ್ಲಾ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿ  ಸಂಬಂಧಿಸಿದ ಇಂಜಿನಿಯರ್ ಮುಖೇನ ಪರೀಕ್ಷಿಸಲಾಗಿ ಕಟ್ಟಡದ ಮುಂದಿನ ಭಾಗಕ್ಕೆ ಮಾತ್ರ ಬಣ್ಣ ಹಚ್ಚಿದ್ದು ಸಂಪೂರ್ಣ ಕಟ್ಟಡಕ್ಕೆ ಬಣ್ಣ, ಕಟ್ಟಡದ ರಿಪೇರಿ, ಮೇಲ್ಭಾಗಕ್ಕೆ ಚುರಕಿಯನ್ನು ಹಾಕಿಲ್ಲ, ಬಹಳ ಮುಖ್ಯವಾಗಿ ಎರಡೂ ಬಿಲ್ ನಲ್ಲಿ ರ್ಯಾಂಪ್ ಗೆಂದು ಹಣ ಪಡೆದಿದ್ದು ರ್ಯಾಂಪ್ ನಿರ್ಮಿಸಿಲ್ಲ.

ಜಿಲ್ಲಾ ಪಂಚಾಯತಿ ಗೆ ಬಿಲ್ ಪಡೆಯಲು ಕೊಟ್ಟಿರುವ ಪೋಟೋಗಳಿಗೂ ಅಲ್ಲಿರುವ ಕಟ್ಟಡದ ಬಿಲ್ ಗೂ ಸಂಬಂಧವೇ ಇಲ್ಲ, ಹೆಂಚಿನ ಮನೆಯ ಶಾಲೆಯ ಚಿತ್ರವೊಂದನ್ನು ನೀಡಿದ್ದು ಪ್ರೌಢಶಾಲೆಯಲ್ಲಿ ಹೆಂಚಿನ ಮನೆಯ ಶಾಲೆ ಇರದಿರುವುದು ಇವರ ಅಕ್ರಮಗಳನ್ನು ತೋರಿಸುತ್ತವೆ.


ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ಸಂಬಂಧಿಸಿದವರಿಂದ ಹಣ ವಸೂಲಿ ಮಾಡಿ ಪಾರದರ್ಶಕತೆ ಮೆರೆಯಲಿ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಜಾಲತಾಣದಲ್ಲಿ ಮಹಿಳಾ ಮತ್ತು ಜನಾಂಗೀಯ ವಿರುದ್ದ ಬರಹ, ಭೂಹಳ್ಳಿ ಪುಟ್ಟಸ್ವಾಮಿ ಹುಡುಕುತ್ತಿರುವ ಪೋಲಿಸರು.
ಜಾಲತಾಣದಲ್ಲಿ ಮಹಿಳಾ ಮತ್ತು ಜನಾಂಗೀಯ ವಿರುದ್ದ ಬರಹ, ಭೂಹಳ್ಳಿ ಪುಟ್ಟಸ್ವಾಮಿ ಹುಡುಕುತ್ತಿರುವ ಪೋಲಿಸರು.

ಚನ್ನಪಟ್ಟಣ: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಮುಖಪುಸ್ತಕ (Facebook) ದಲ್ಲಿ ನಾಲ್ಕೈದು ವರ್ಷಗಳಿಂದ ಹಿಂದೂ ಮಹಿಳೆಯರು, ಹಿಂದುಪರ ಸಂಘಟನೆಗಳು, ಮುಖ್ಯವಾಗಿ

ಹತ್ತನೇ ರಾಜ್ಯಮಟ್ಟದ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಲು ಕರೆ
ಹತ್ತನೇ ರಾಜ್ಯಮಟ್ಟದ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಲು ಕರೆ

ಚನ್ನಪಟ್ಟಣ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಡಿ.೨೮

ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ
ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ

ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರೈತ ಮೂರ್ತಿ ಎಂಬುವವರು ತಾನು ಬೆಳೆದ ರೇಷ್ಮೆ ಗೂಡನ್ನು ಚಂದ್ರಿಕೆಯಿಂದ ಬಿಡಿಸಿ ಮಾರುಕಟ್ಟೆಗ

ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಆರೋಪಿ ಸೆರೆ
ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಆರೋಪಿ ಸೆರೆ

ಚನ್ನಪಟ್ಟಣ: ಚನ್ನಪಟ್ಟಣ ಪ್ರಾದೇಶಿಕ ಅರಣ್ಯ ವಲಯದ ಚಿಕ್ಕಮಣ್ಣುಗುಡ್ಡೆ ಮೀಸಲು ಅರಣ್ಯದ ಕೆಂಪಿಕಟ್ಟೆ  ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್

ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್
ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್

ರಾಮನಗರ: ಮುಖಪುಸ್ತಕ (Facebook) ದಲ್ಲಿ ಸಂತ್ರಸ್ತೆ ಪಶುವೈದ್ಯೆ ಡಾ ಪ್ರಿಯಾಂಕರೆಡ್ಡಿ ವಿರುದ್ದ ಜನಾಂಗೀಯ ದ್ವೇಷ ಹಾಗೂ ಕೆಟ್ಟ ಭ

ಬಿಜೆಪಿ ಗೆಲುವು ಸಂಭ್ರಮಾಚರಣೆ
ಬಿಜೆಪಿ ಗೆಲುವು ಸಂಭ್ರಮಾಚರಣೆ

ಚನ್ನಪಟ್ಟಣ: ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಿ, ಸರ್ಕಾರ ಉರುಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾಗಿ ಅನರ್ಹ ರ ಚುನಾವಣೆ ಎಂದ

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್

ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.

ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ

ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

Top Stories »  


Top ↑