Tel: 7676775624 | Mail: info@yellowandred.in

Language: EN KAN

    Follow us :


ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

Posted Date: 03 Jun, 2019

ಇಂದಿನ ಪೀಳಿಗೆಯ ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಗಾಳಿಯ ಅವಶ್ಯಕತೆ ಇದೆ ಶೈಲಾ ಶ್ರೀನಿವಾಸ

ರಾಮನಗರ: ಇಂದಿನ ಮತ್ತು ಮುಂದಿನ ಪೀಳಿಗೆಗೆ ಕೊಡುಗೆ ನೀಡುವುದಾದರೆ ಶುದ್ಧ ಗಾಳಿಯನ್ನು ಕೊಡುಗೆಯಾಗಿ ನೀಡಬೇಕು, ಶುದ್ಧ ಗಾಳಿ ದೊರಕಬೇಕಾದರೆ ಕಾಡು ಮೇಡಿನ ಜೊತೆಗೆ ಅವಶ್ಯ ಜಾಗವಿರುವ ಭೂಮಿಯಲ್ಲಿ ಆಯಾ ಮಣ್ಣು ಮತ್ತು ವಾತಾವರಣಕ್ಕನುಗುಣವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಜನಸಾಮಾನ್ಯರು ತಮ್ಮ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಎಂದು ಭಾವಿಸಿ ಭೂಮಂಡಲವನ್ನು ಹಸಿರುಕರಣ ಮಾಡುವ ಸಂಕಲ್ಪ ಮಾಡಬೇಕೆಂದು ಔಷಧೀಯ ಸಸ್ಯ ತಜ್ಞೆ  ಶಿಕ್ಷಕಿ ಶೈಲಾ ಶ್ರೀನಿವಾಸ್ ಹೇಳಿದರು.


ಅವರು ಕೈಲಾಂಚ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಹ ಶಿಕ್ಷಕರು ಮತ್ತು ಗ್ರಾಮಸ್ಥರ ಜೊತೆಗೂಡಿ ಗ್ರಾಮದ ಕೆರೆಯಂಚಿನಲ್ಲಿ  ವಿಶ್ವ ಪರಿಸರ ದಿನ ಜಾಗೃತಿಗಾಗಿ ಸಸ್ಯಗಳನ್ನು ನೆಟ್ಟು ಬಳಿಕ ಮಾತನಾಡಿದರು.


ವಿಶ್ವ ಪರಿಸರ ದಿನ ಕೇವಲ ನಾಮಾಕವಸ್ಥೆ ದಿನಾಚರಣೆಯಾಗದೇ ಜನ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ. ಈ ಬಾರಿಯ ವಿಶ್ವಸಂಸ್ಥೆಯ ಘೋಷವಾಕ್ಯ ವಾಯು ಮಾಲಿನ್ಯ, ಈ ಘೋಷ ವಾಕ್ಯವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.


ಮೆಗಾಸಿಟಿ ಜನರಿಂದ ಗ್ರಾಮೀಣ ಬದುಕಿನ ಜನರೂ ಬದಲಾಗುತ್ತಿದ್ದು ಅವರ ಇತ್ತೀಚಿನ ಜೀವನಶೈಲಿ ವಾಯು ಮಾಲಿನ್ಯಕ್ಕೆ ವಿಷಪೂರಿತ ಕೊಡುಗೆ ನೀಡುತ್ತಿದೆ, ಇದನ್ನು ತಡೆಗಟ್ಟದಿದ್ದರೆ ಭವಿಷ್ಯದ ದಿನಗಳು ದುರ್ಬರವಾಗಲಿದೆ, ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾನದಂಡಗಳ ಉಲ್ಲಂಘನೆಯಾಗುತ್ತಿದ್ದು ಜಗತ್ತಿನ ಹತ್ತು ಜನರಲ್ಲಿ ಒಂಭತ್ತು ಜನರು ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ.


ಕೈಗಾರಿಕೆಗಳು, ವಾಹನಗಳು, ಹೊರಹಾಕುವ ಹೊಗೆ ಅವೈಜ್ಞಾನಿಕವಾಗಿ ತ್ಯಾಜ್ಯವನ್ನು ಸುಡುವುದರಿಂದ ಸೃಷ್ಟಿಯಾಗುವ ವಿಷಗಾಳಿ, ಕಾಡಿನ ಬೆಂಕಿಯಿಂದ ಉಂಟಾಗುವ ಸಮಸ್ಯೆ, ಇವೆಲ್ಲದರ ಜೊತೆಗೆ ಅಡುಗೆ ಮನೆಗಳಲ್ಲೂ ಬಳಸುವ ನಾನಾ ವಿಧದ ಅಡುಗೆ ಎಣ್ಣೆ, ಉರುವಲುಗಳಿಂದಲೂ ವಾಯು ಮಾಲಿನ್ಯವುಂಟಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.


ವಾಯುಮಾಲಿನ್ಯದಿಂದ ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಮೇಲೆ ಪರಿಣಾಮಗಳುಂಟಾಗುತ್ತಿವೆ. ವಿಶ್ವದ ಜನರಲ್ಲಿ ಆಸ್ತಮಾದಂತಹ ಸಮಸ್ಯೆಗಳು ಕಾಡುತ್ತಿರುವುದಲ್ಲದೇ ಪ್ರತಿ ವರ್ಷ 7 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇವೆಲ್ಲವನ್ನೂ ತಡೆಗಟ್ಟಲು ಇರುವ ಏಕೈಕ ದಾರಿಯೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವುದು. ನಮ್ಮದೇ ಜಿಲ್ಲೆಯ ಸಾಲು ಮರದ ತಿಮ್ಮಕ್ಕ ತಮ್ಮ ಸಾಧನೆಗಾಗಿ ದೇಶ ಮೆಚ್ಚುವ ಗೌರವ ಗಳಿಸಿರುವುದನ್ನು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮಾದರಿಯಾಗಿಸಿಕೊಂಡು ತಮ್ಮ ವಾಸಸ್ಥಳ, ದುಡಿಮೆಯ ಸ್ಥಳಗಳನ್ನು ಹಸಿರು ಮರಗಳಿಂದ ಆವೃತವಾಗಿರುವಂತೆ ನೋಡಿಕೊಳ್ಳಬೇಕು ಎಂದರು.


ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ಶಾಲಾವರಣ, ಕೆರೆಯಂಚು, ರಸ್ತೆಯ ಇಕ್ಕೆಲಗಳಲ್ಲಿ  ಗಿಡಗಳನ್ನು ನೆಟ್ಟು  ನೀರೆರೆದರು. ಹಿಂದಿನ ವರ್ಷ ವಿಶ್ವ ಪರಿಸರ ದಿನದಂದು ಶಾಲಾವರಣದಲ್ಲಿ ನೆಟ್ಟು ಬೇಸಿಗೆಯಲ್ಲೂ ಕಾಪಾಡಿಕೊಂಡಿದ್ದ ಗಿಡಗಳು ಇಂದು ನಳನಳಿಸುತ್ತಿರುವುದನ್ನು ವಿದ್ಯಾರ್ಥಿಗಳ ಸಾಧನೆ ಎಂದು ಇದೇ ಸಮಯದಲ್ಲಿ ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ
ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ದಾನ ದಾನಗಳಲ್ಲಿ ರಕ್ತದಾನ ಅತಿ ಶ್ರೇಷ್ಠ ದಾನವಾಗಿದೆ, ಬೇರೆ ರೀತಿಯ ಹಲವಾರು ದಾನಗಳು ತೋರ್ಪಡಿಕೆಗೆ ಅಥವಾ ಅಡಂಬರಕ್ಕೆ ಸೀಮೀತವಾದರೆ,

ಕೂಡಿಟ್ಟು ಪರರ ಪಾಲು ಮಾಡದೆ ಬದುಕಿದ್ದಾಗಲೆ ಸಮಾಜಕ್ಕೆ ಅರ್ಪಿಸಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ
ಕೂಡಿಟ್ಟು ಪರರ ಪಾಲು ಮಾಡದೆ ಬದುಕಿದ್ದಾಗಲೆ ಸಮಾಜಕ್ಕೆ ಅರ್ಪಿಸಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ಉಳ್ಳವರು ದಾನ ಮಾಡುವುದರ ಮೂಲಕ ಸಮಾಜದ ಏಳಿಗೆಗೆ ನೆರವಾಗಬೇಕು ಎಂದು ಶ್ರೀ ಆದಿ ಚುಂಚನಗಿರಿ ರಾಮನಗರ ಶಾಖಾ ಮಠದ ಕಾರ್ಯದರ್ಶಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.


ಏಳನೇ ವರ್ಷದ ರಕ್ತದಾನ ಶಿಬಿರ ಉದ್ಘಾಟನೆ, ರಕ್ತದಾನ ಪ್ರಾಣದಾನ ಡಾ ಮಲವೇಗೌಡ
ಏಳನೇ ವರ್ಷದ ರಕ್ತದಾನ ಶಿಬಿರ ಉದ್ಘಾಟನೆ, ರಕ್ತದಾನ ಪ್ರಾಣದಾನ ಡಾ ಮಲವೇಗೌಡ

ದಿನಾಂಕ ೨೩/೦೬/೧೯ ರ ಭಾನುವಾರ ಬೆಳಿಗ್ಗೆ ೧೦:೩೦ ಕ್ಕೆ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಗೋ ರಾ ಶ್ರೀನಿವಾಸ

ಜಾಲಿ ಫೆಲೋಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ
ಜಾಲಿ ಫೆಲೋಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ಚನ್ನಪಟ್ಟಣ ದ ಜಾಲಿ ಫೆಲೋಸ್ ಕ್ಲಬ್ ವತಿಯಿಂದ ಹತ್ತನೇ ಮತ್ತು ಹನ್ನೆರಡನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ತಾಲ್ಲೂಕಿನ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ

ಚನ್ನಂಕೇಗೌಡನದೊಡ್ಡಿ ಮರಿಯಣ್ಣ ನಿಧನ
ಚನ್ನಂಕೇಗೌಡನದೊಡ್ಡಿ ಮರಿಯಣ್ಣ ನಿಧನ

ಚನ್ನಪಟ್ಟಣ: ತಾಲ್ಲೂಕಿನ ಚನ್ನಂಕೇಗೌಡನದೊಡ್ಡಿ ಗ್ರಾಮದ ಲೇಟ್ ನಾಥೇಗೌಡರ ಪುತ್ರ ಚನ್ನಂಕೇಗೌಡನದೊಡ್ಡಿ ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕ ಚಲುವೇಗೌಡ (ಪ

ಮಹಾಭಾರತದ ಶ್ರೀ ಕೃಷ್ಣ ನಿಂದ ಪ್ರಾರಂಭವಾದ ಯೋಗ ಇಂದು ಕಲಿಯುಗದಲ್ಲಿ ವಿಶ್ವವಿಖ್ಯಾತವಾಗಿದೆ ಮೋಹನ್
ಮಹಾಭಾರತದ ಶ್ರೀ ಕೃಷ್ಣ ನಿಂದ ಪ್ರಾರಂಭವಾದ ಯೋಗ ಇಂದು ಕಲಿಯುಗದಲ್ಲಿ ವಿಶ್ವವಿಖ್ಯಾತವಾಗಿದೆ ಮೋಹನ್

ಚನ್ನಪಟ್ಟಣ: ಮಹಾಭಾರತದ ಶ್ರೀಕೃಷ್ಣ ನಿಂದ ಮೊದಲ್ಗೊಂಡು ಪತಂಜಲಿ ಗುರುಗಳು, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಯೋಗ ಸೇರಿದಂತೆ ಇಂದಿನ ಆಧುನಿಕತೆಯ ಗುರು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಪಡೆದುಕೊಳ್ಳಲು ರೈತರಿಗೆ ಕೃಷಿ ಅಧಿಕಾರಿ ಕರೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಪಡೆದುಕೊಳ್ಳಲು ರೈತರಿಗೆ ಕೃಷಿ ಅಧಿಕಾರಿ ಕರೆ

ಚನ್ನಪಟ್ಟಣ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ,(PM- KISAN) ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತ

ವಿಶ್ವಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾರತದ ಯೋಗ ಹರೂರು ರಾಜಣ್ಣ
ವಿಶ್ವಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾರತದ ಯೋಗ ಹರೂರು ರಾಜಣ್ಣ

ಚನ್ನಪಟ್ಟಣ: ನಮ್ಮ ಭಾರತ ದೇಶದ ಪುರಾತನ ವಿದ್ಯೆಯಾದ ಯೋಗವನ್ನು ವಿಶ್ವದ ಎಲ್ಲಾ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿಶ್ವಕ್ಕೆ ಪರಿಚಯಿಸಿ ಯೋ

ಹಿಂದುಳಿದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಮೊದಲ ಮುಖ್ಯಮಂತ್ರಿ ಸಂತಸ
ಹಿಂದುಳಿದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಮೊದಲ ಮುಖ್ಯಮಂತ್ರಿ ಸಂತಸ

ಚನ್ನಪಟ್ಟಣ: ನಗರದ ಮಹದೇಶ್ವರ ನಗರದಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯಕ್ಕೆ, ವಿದ್ಯಾರ್ಥಿಗಳ

ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ
ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ

ಸಮಸ್ಯೆಗಳನ್ನು ಹಿಡಿದು ಜಗ್ಗಾಡಿದ ಸದಸ್ಯರು

ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯು ಒಂದು ಗಂಟೆ ತಡವಾಗಿ ಆರಂಭಗೊಂಡಿತ್ತು ಈ ಸಭೆಗೆ ಬಹುತೇಕ  ಗ್ರಾಮ ಪಂಚಾಯತಿಗಳ ಮಹಿಳ

Top Stories »  


Top ↑