ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ಬ್ಯಾಡರಹಳ್ಳಿ ಗ್ರಾಮದ ರಸ್ತೆ ನುಂಗಿದ ಶಂಕರ್

ಲಕ್ಕಿ ಕಟ್ಟೆ ಮತ್ತು ಹೋಗುವ ರಸ್ತೆ
ರಾಮನಗರ ಜಿಲ್ಲಾ ಪಂಚಾಯತಿ ಚನ್ನಪಟ್ಟಣ ವಲಯದಲ್ಲಿ ಈ ಹಿಂದೆ ಇಂಜಿನಿಯರ್ ಆಗಿದ್ದ *ಚಿಕ್ಕವೆಂಕಟೇಶ ಮತ್ತು ಕುಮಾರಸ್ವಾಮಿ* ಎಂಬ ಇಂಜಿನಿಯರ್ ಗಳ ಹೆಸರು ಬಹಳ *ದೊಡ್ಡದು* ಕಾಮಗಾರಿ ಮಾಡದಿದ್ದರೂ, ಅರ್ಧದಷ್ಟು ಕೆಲಸ ಮಾಡಿದರೂ ಅಥವಾ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದರೂ ಸಹ ಹಿಂದುಮುಂದು ನೋಡದೆ ಚೆಕ್ ಮತ್ತು ಬಿಲ್ ಗೆ ಸಹಿ ಹಾಕಿ ಗುತ್ತಿಗೆದಾರರಿಗೆ ಕೊಟ್ಟು ಕಮೀಷನ್ ಪಡೆದು ನಂತರ ಇಲಾಖೆಯ ತನಿಖೆಗೊಳಪಟ್ಟು ಅಮಾನತು ಆದವರು, ಅವರ ಸಾಲಿಗೆ ಮತ್ತೋರ್ವ ಇಂಜಿನಿಯರ್ ಸೇರ್ಪಡೆಗೊಂಡು ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯತಿ ಅನುದಾನವನ್ನು ನುಂಗಿ ನೀರು ಕುಡಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಮ್ಮ ಸುದ್ದಿಯ ಹೀರೋ ಅದೇ ದೋಖಾ *ಶಂಕರ್*.
ಹೊಂಗನೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಳಪೆ ಕಾಮಗಾರಿಗಳಿಗೆ ಮತ್ತು ಕಾಮಗಾರಿ ಮಾಡದೇ ಬಿಲ್ ಮಾಡಿಕೊಟ್ಟಿರುವುದಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತ ವಂದಾರಗುಪ್ಪೆ ಕೃಷ್ಣೇಗೌಡ ಮತ್ತು ನಮ್ಮ ಪತ್ರಿಕೆಯ ಸರಣಿ ವರದಿಯ ಮೇರೆಗೆ ತನಿಖೆಗೊಳಪಟ್ಟು ಕಳೆದ ತಿಂಗಳು ಅಮಾನತು ಆಗಿರುವ ಶಂಕರ್ ಕೋಡಂಬಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯೂ ತನ್ನ ಕೈ ಚಳಕ ತೋರಿಸಿದ್ದು *ಜೆ ಬ್ಯಾಡರಹಳ್ಳಿ* ಪ್ರೌಢಶಾಲೆಗೆ *೪,೦೦,೦೦೦ ₹* ಹೆಚ್ಚು ದೋಖಾ ಎಸಗಿದರೆ ಅದೇ ಗ್ರಾಮದ *ಲಕ್ಕಿ ಕಟ್ಟೆ* ಗೆ ಹೋಗುವ ರಸ್ತೆ ಅಭಿವೃದ್ಧಿಗೆಂದು *೨,೦೦,೦೦೦*₹ ತುಂಡು ಗುತ್ತಿಗೆ ಕಾಮಗಾರಿಯನ್ನು ಮಾಡದೇ ಸರ್ಕಾರಕ್ಕೆ ದ್ರೋಹ ಎಸಗಿರುವುದು ದಾಖಲೆಗಳಿಂದ ತಿಳಿದುಬಂದಿದೆ.
೨೦೧೭/೧೮ ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯಡಿ (೩೦೫೪-೦೦-೧೦೧-೦-೨೯-೧೭೨) *ಜೆ ಬ್ಯಾಡರಹಳ್ಳಿ ಮುಖ್ಯ ರಸ್ತೆಯಿಂದ ಲಕ್ಕಿ ಕಟ್ಟೆ ಗೆ* ಹೋಗುವ ರಸ್ತೆ ಅಭಿವೃದ್ಧಿ ಡಿ ಆರ್ ನಂಬರ್ ೬೯೩/೨೦೧೭-೧೮, ಕೆ.ಅ.ಸಂಖ್ಯೆ ೬೩೭/೨೦೧೭-೧೮ ರ ಬಿಲ್ ಸಂಖ್ಯೆಯಲ್ಲಿ *ಗುತ್ತಿಗೆದಾರ ಶ್ರೀನಿವಾಸ* ಎಂಬುವವರಿಗೆ ದಿನಾಂಕ ೦೬/೦೩/೨೦೧೮ ರಂದು ೧,೮೦,೮೫೨ ರೂಪಾಯಿಗಳ ಬಿಲ್ ನೀಡಲಾಗಿದೆ.
೨೦೧೮/೧೯ ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ನರೇಗಾ ಯೋಜನೆಯಡಿ ಇದೇ ಲಕ್ಕಿ ಕಟ್ಟೆ ರಸ್ತೆಗೆ *೯,೫೦,೦೦೦*₹ ಅನುದಾನದ ಅಡಿಯಲ್ಲಿ ಕೆಲಸ ಮಾಡಲು ಅನುಮೋದನೆ ದೊರೆತಿರುವುದಾಗಿ ಅದೇ ರಸ್ತೆ ಬದಿಯಲ್ಲಿ ಫಲಕ ಅಳವಡಿಸಿದ್ದು ಕಳೆದ ವರ್ಷ ಮಾಡಿದ ರಸ್ತೆ ಅಭಿವೃದ್ಧಿ ಏನಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ.
ಕಳೆದ ವರ್ಷ ರಸ್ತೆ ಅಭಿವೃದ್ಧಿ ಮಾಡಿರುವುದಕ್ಕೆ ಸಣ್ಣ ಕುರುಹೂ ಸಹ ದೊರೆಯುವುದಿಲ್ಲ, ರಸ್ತೆಯ ಎರಡೂ ಬದಿಯಲ್ಲಿ ಚರಂಡಿಯನ್ನಾಗಲಿ ಕೊನೇಪಕ್ಷ ತಿಪ್ಪೆ ಗುಂಡಿಗಳನ್ನು ಎತ್ತಿಸದಿರುವುದು ಕಂಡುಬರುತ್ತದೆ, ಸ್ಥಳೀಯರನ್ನು ಈ ಬಗ್ಗೆ ಮಾತನಾಡಿಸಿದಾಗ ಖಡಾಖಂಡಿತವಾಗಿ ಕಳೆದ ಸಾಲಿನಲ್ಲಿ ಈ ರಸ್ತೆಗೆ ಒಂದು ಹಿಡಿ ಮಣ್ಣು ಸಹ ಹಾಕಿಲ್ಲವೆಂದು ದೂರುತ್ತಾರೆ.
ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಿಲ್ ಪಾವತಿಸಿರುವ ಹಣವನ್ನು ಹಿಂಪಡೆದುಕೊಳ್ಳಲಿ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಹತ್ತನೇ ರಾಜ್ಯಮಟ್ಟದ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಲು ಕರೆ
ಚನ್ನಪಟ್ಟಣ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಡಿ.೨೮

ಮನೆಯಲ್ಲಿಟ್ಟಿದ್ದ ರೇಷ್ಮೆ ಗೂಡು ಕದ್ದ, ಪಸ್೯ ಬೀಳಿಸುವ ಮೂಲಕ ಸುಳಿವು ಬಿಟ್ಟ
ಚನ್ನಪಟ್ಟಣ: ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ರೈತ ಮೂರ್ತಿ ಎಂಬುವವರು ತಾನು ಬೆಳೆದ ರೇಷ್ಮೆ ಗೂಡನ್ನು ಚಂದ್ರಿಕೆಯಿಂದ ಬಿಡಿಸಿ ಮಾರುಕಟ್ಟೆಗ

ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಶ್ರೀಗಂಧ ಕಳವು ಆರೋಪಿ ಸೆರೆ
ಚನ್ನಪಟ್ಟಣ: ಚನ್ನಪಟ್ಟಣ ಪ್ರಾದೇಶಿಕ ಅರಣ್ಯ ವಲಯದ ಚಿಕ್ಕಮಣ್ಣುಗುಡ್ಡೆ ಮೀಸಲು ಅರಣ್ಯದ ಕೆಂಪಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್

ಸಂತ್ರಸ್ತೆ ಪ್ರಿಯಾಂಕರೆಡ್ಡಿ ವಿರುದ್ಧ ಜಾತಿ ನಿಂದನೆ ಲೇಖನ ಹಾಕಿದ ಭೂಹಳ್ಳಿ ಪುಟ್ಟಸ್ವಾಮಿ ವಿರುದ್ಧ ಎಫ್ ಐ ಆರ್
ರಾಮನಗರ: ಮುಖಪುಸ್ತಕ (Facebook) ದಲ್ಲಿ ಸಂತ್ರಸ್ತೆ ಪಶುವೈದ್ಯೆ ಡಾ ಪ್ರಿಯಾಂಕರೆಡ್ಡಿ ವಿರುದ್ದ ಜನಾಂಗೀಯ ದ್ವೇಷ ಹಾಗೂ ಕೆಟ್ಟ ಭ

ಬಿಜೆಪಿ ಗೆಲುವು ಸಂಭ್ರಮಾಚರಣೆ
ಚನ್ನಪಟ್ಟಣ: ಸಮ್ಮಿಶ್ರ ಸರ್ಕಾರಕ್ಕೆ ರಾಜೀನಾಮೆ ನೀಡಿ, ಸರ್ಕಾರ ಉರುಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾಗಿ ಅನರ್ಹ ರ ಚುನಾವಣೆ ಎಂದ

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಡಾ. ಚನ್ನಣ್ಣ ವಾಲೀಕಾರ ಹಾಗೂ ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆ
ರಾಮನಗರ : ವಾಲೀಕಾರ ಅವರು ಶ್ರಮಿಕ ವರ್ಗದ ಜನರಿಗಾಗಿ ಸರ್ವತ್ವವನ್ನು ತೊರೆದ ಸಾಹಿತಿ. ಮೂಲೆಗುಂಪಾದ ಜನರ ನೋವುಗಳಿಗೆ ಪ್ರತಿಸ್ಪಂದಿಸುವ ಗುಣ ಹೊಂದಿರುವ ಅವರ ಬದುಕು ಇತರರಿಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ ತಿಳಿಸಿದ
ಪ್ರತಿಕ್ರಿಯೆಗಳು