Tel: 7676775624 | Mail: info@yellowandred.in

Language: EN KAN

    Follow us :


ಜನ್ಮ ದಿನದಂದೇ ಮಣ್ಣಲ್ಲಿ ಮಣ್ಣಾದ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್

Posted Date: 18 Jun, 2019

ಜನ್ಮ ದಿನದಂದೇ ಮಣ್ಣಲ್ಲಿ ಮಣ್ಣಾದ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್

ಚನ್ನಪಟ್ಟಣ:೧೭/೦೬/೨೦೧೯/ಸೋಮವಾರ.

ಚನ್ನಪಟ್ಟಣ ತಾಲ್ಲೂಕಿನ ಹಿರಿಯ ಪತ್ರಕರ್ತ ದಿನೇಶ್ ಸುದರ್ಶನ್ ರವರು (೫೪) ಅನಾರೋಗ್ಯ ದಿಂದ ಭಾನುವಾರ ಇಹಲೋಕ ತ್ಯಜಿಸಿದರು, ಮೃತರ ಅಂತ್ಯಕ್ರಿಯೆಯನ್ನು ಅವರ ಜನ್ಮದಿನವೂ ಆದ ೧೭/೦೬/೨೦೧೯ ರ ಸೋಮವಾರ ಬೆಳಿಗ್ಗೆ ನಗರದ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದಲ್ಲಿ ನೆರವೇರಿಸಲಾಯಿತು.


ಮೃತ ದಿನೇಶ್ ಸುದರ್ಶನ್ ರವರು ಕಾಲೇಜಿನ ದಿನಗಳಲ್ಲಿ *ಬಯಲು ಸೀಮೆ* ಪತ್ರಿಕೆ ಸೇರಿದಂತೆ ಹಲವಾರು ಪತ್ರಿಕೆಗಳನ್ನು ಹಂಚುವ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟು ನಂತರ ಮಲ್ಲಿಕಾರ್ಜುನೇಗೌಡರ ಸಂಪಾದಕತ್ವದ  *ಪೋಲಿಸ್ ನ್ಯೂಸ್* ಪತ್ರಿಕೆಯಲ್ಲಿ ವರದಿಗಾರರಾಗಿ ನಂತರ ಚನ್ನಪಟ್ಟಣದಲ್ಲಿ ಅವರ ಸಂಪಾದಕತ್ವದಲ್ಲೇ *ದಿನೇಶ್* ಪತ್ರಿಕೆ ಆರಂಭಿಸಿದರು.


ದಿನೇಶ್ ಪತ್ರಿಕೆಯನ್ನು ಕೆಲವು ತಿಂಗಳ ನಂತರ ಸ್ಥಗಿತಗೊಳಿಸಿ ಹಲವಾರು ಸ್ಥಳೀಯ ಪತ್ರಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು, ಬರವಣಿಗೆಯಲ್ಲಿ ಉತ್ತಮ ಹಿಡಿತ ಹೊಂದಿದ್ದ ದಿನೇಶ್ ರವರು *ನಿರೀಕ್ಷೆ* ಎಂಬ ಮತ್ತೊಂದು ಪತ್ರಿಕೆಯನ್ನು ಹೊರ ತಂದರಾದರು ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಂಪೂರ್ಣವಾಗಿ ನಡೆಸಲು ಸಾಧ್ಯವಾಗದೇ ಬಯಲು ಸೀಮೆ ಪತ್ರಿಕೆಯಲ್ಲಿ ತಾತ್ಕಾಲಿಕ ವರದಿಗಾರರಾಗಿ ೨೦೧೮ ರ ಪ್ರಾರಂಭದವರೆಗೂ ಸೇವೆ ಸಲ್ಲಿಸಿದರು.


ಮೃತರು ತಮ್ಮ ಜನ್ಮ ದಿನಕ್ಕೆ ಒಂದು ದಿನ ಮುಂಚಿತವಾಗಿ ಮರಣ ಹೊಂದಿದ್ದರೂ ಸಹ ಅವರ ಅಂತ್ಯ ಸಂಸ್ಕಾರವು ಅವರ ೫೪ ನೇ ಜನ್ಮ ದಿನದಂದೇ ನಡೆದದ್ದು ಮಾತ್ರ ಕಾಕತಾಳೀಯ ಎನ್ನಬಹುದು.


ಅಪಾರ ಬಂಧುಬಳಗವನ್ನು ಅಗಲಿದ ದಿನೇಶ್ ಸುದರ್ಶನ್ ರವರ ಅಂತಿಮ ಯಾತ್ರೆಯಲ್ಲಿ  ಸಮಕಾಲೀನ ಹಾಗೂ ಹಿರಿಯ ಕಿರಿಯ ಪತ್ರಕರ್ತರು, ಸ್ಥಳೀಯ ರಾಜಕಾರಣಿಗಳು, ನಾಡು-ನುಡಿ, ಜಲ ಪರ ಹೋರಾಟಗಾರರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್

ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.

ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ

ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್
ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್

ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿ

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ
ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ

ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ

ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್

ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದ

ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ

ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾ

Top Stories »  


Top ↑