ತೆಂಗು ಅಭಿವೃದ್ಧಿ ಮಂಡಳಿಯ ಅನುದಾನ ಸಂಪೂರ್ಣ

ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಿಂದ ನೇರವಾಗಿ ತೆಂಗು ಅಭಿವೃದ್ಧಿ ಸಂಘಗಳಿಗೆ ಹನ್ನೆರಡು ವರ್ಷಗಳ ಈಚೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ದಶ ಕೋಟಿ ಗೂ ಹೆಚ್ಚು ಹಣ ಗುಳುಂ ಆಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಸಮಾಜ ಸೇವಕ ಮೊಗಳ್ಳಿದೊಡ್ಡಿ ರೋಹಿತ್ ಒತ್ತಾಯಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ಏಳು ತೆಂಗು ಅಭಿವೃದ್ಧಿ ಸಂಘಗಳಿದ್ದು ಆರು ಸಂಘಗಳು ಸಕ್ರಿಯವಾಗಿವೆ, ಒಂದು ಸಂಘ ನಾಮಕಾವಸ್ಥೆಯದಾಗಿದ್ದು ಹಣ ಸಂದಾಯವಾಗಿದೆ, ಕೇವಲ ನಾಲ್ಕು ವರ್ಷಗಳಲ್ಲಿ ಅಂದರೆ ೨೦೧೪ ರಿಂದ ೨೦೧೮ ರ ಅವಧಿಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಏಳು ಸಂಘಗಳಿಗೆ *೪,೦೮,೫೨,೯೨೪₹* ಗಳು ಸಂದಾಯವಾಗಿದೆ, ಇಲ್ಲಿ ಸಂಘದ ಬಲಾಢ್ಯರು ಮಾತ್ರ ತಮ್ಮ ವೈಯುಕ್ತಿಕ ಅಭಿವೃದ್ಧಿ ಹೊಂದಿದ್ದಾರೆ ವಿನಹ ಎರಡು ನೂರಕ್ಕೂ ಹೆಚ್ಚು ಸದಸ್ಯರಿಗೆ ಅದರ ಅರಿವೇ ಇಲ್ಲ ಎಂದರು.
ಪ್ರತಿ ಸಂಘಗಳಿಗೂ ಟ್ರ್ಯಾಕ್ಟರ್, ಟಿಲ್ಲರ್, ಟ್ರೈಲರ್, ಟ್ಯಾಂಕರ್ ಗಳಲ್ಲದೇ ತೆಂಗುಬೆಳೆ ಬೆಳೆದಿರುವ ಜಮೀನುಗಳಲ್ಲಿ ಬೆಳೆಯುವಂತಹ ಬಾಳೆ ಸಸಿಗಳು, ಮುಸುಕಿನ ಜೋಳ, ಹುರುಳಿಬೀಜ ದಂತಹ ಅನೇಕ ಬೀಜಗಳನ್ನು ಸಹ ಟನ್ ಗಟ್ಟಲೆ ಕೊಟ್ಟಿರುವುದು, ಅವುಗಳಿಗೆ ರಾಸಾಯನಿಕ ಮತ್ತು ರಸಗೊಬ್ಬರಗಳನ್ನು ಸಹ ಕೊಟ್ಟಿರುವುದು ದಾಖಲೆಗಳಿಂದ ತಿಳಿಯುತ್ತದೆ, ಈ ಎಲ್ಲಾ ಸರಕು ಸರಂಜಾಮುಗಳನ್ನು ಇಲಾಖೆ ವಿತರಿಸಿದ್ದು ಬಲಾಢ್ಯರು ಮಾತ್ರ ಉಪಯೋಗಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ ಎಂದು ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಚನ್ನಪಟ್ಟಣ ತಾಲೂಕು ಒಂದರಲ್ಲೇ ಕೇವಲ ನಾಲ್ಕು ವರ್ಷಗಳಲ್ಲಿ ನಾಲ್ಕು ಕೋಟಿಗೂ ಹೆಚ್ಚು ಹಣ ದುರುಪಯೋಗ ಆಗಿದೆ ಎಂದರೆ ೨೦೦೭ ರಿಂದ ೨೦೧೯ ರ ವರೆಗೆ ಎಷ್ಟು ದುರುಪಯೋಗ ಆಗಿದೆ, ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶತಕೋಟಿಗೂ ಹೆಚ್ಚು ಹಣ ದುರುಪಯೋಗ ಆಗಿರಬಹುದು ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ, ಇದನ್ನು ಉನ್ನತ ಮಟ್ಟದ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ನೈಜ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಮೋಹನ್, ರಾಮಕೃಷ್ಣ, ಚನ್ನೇಗೌಡ ಮತ್ತು ಬಸವರಾಜು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್
ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿ

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ
ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ

ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದ

ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾ
ಪ್ರತಿಕ್ರಿಯೆಗಳು