Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ

Posted Date: 20 Jun, 2019

ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಶಿಸ್ತಿನ ಪಾಠ ಮಾಡಿದ ಇಓ

ಸಮಸ್ಯೆಗಳನ್ನು ಹಿಡಿದು ಜಗ್ಗಾಡಿದ ಸದಸ್ಯರು

ಚನ್ನಪಟ್ಟಣ: ತಾಲ್ಲೂಕು ಪಂಚಾಯತಿ ಸಾಮಾನ್ಯ ಸಭೆಯು ಒಂದು ಗಂಟೆ ತಡವಾಗಿ ಆರಂಭಗೊಂಡಿತ್ತು ಈ ಸಭೆಗೆ ಬಹುತೇಕ  ಗ್ರಾಮ ಪಂಚಾಯತಿಗಳ ಮಹಿಳಾ ಅಧ್ಯಕ್ಷರಗಳು ಬಂದಿದ್ದು ವಿಶೇಷ ಎನಿಸಿತ್ತು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರು ನನ್ನ ಕಚೇರಿಗೆ ಬಂದ ಯಾವುದೇ ಅರ್ಜಿ ೨೪ ಗಂಟೆಗಳಲ್ಲಿ ಇತ್ಯರ್ಥ ಆಗಬೇಕು, ಕಳೆದ ಬಾರಿ ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ನೂರಾರು ಅರ್ಜಿಗಳು ಮಾತ್ರ ಬಂದಿದ್ದು ಈ ಬಾರಿ ಜನತಾ ದರ್ಶನದಲ್ಲಿ ೨,೪೦೦ ಅರ್ಜಿಗಳು ಬಂದಿವೆ. ಅಂದರೆ ಅಧಿಕಾರಿಗಳು ಯಾವ ರೀತಿ ಕೆಲಸ ಮಾಡಿ ದ್ದೀರಿ ಎಂದು ತಿಳಿಯುತ್ತದೆ. ಸರಿಯಾಗಿ ಕೆಲಸ ಮಾಡಿದರೆ ಮಾಡಿ ಇಲ್ಲವಾದರೆ ಬೇರೆಡೆ ಹೋಗಿ, ನನಗೆ ಮಾನಸಿಕವಾಗಿ ಹಿಂಸೆ ಆಗಿದೆ, ಎಂದು  ಗರಂ ಆಗಿ ಹೇಳಿದರು.


ಮುಖ್ಯಮಂತ್ರಿ ಭೇಟಿ ಸಮಯದಲ್ಲಿ ಚರಂಡಿ ಸಮೇತ ಯಾವುದೇ ಸ್ವಚ್ಚತೆ ಇರಲಿಲ್ಲ, ಮುಖ್ಯಮಂತ್ರಿ ಗಳು ಕಿಡಿ ಕಿಡಿಯಾದರು.

ಇ-ಸ್ವತ್ತು ಕಂಪ್ಲೇಟ್ ಗಳು ಹೆಚ್ಚಾಗಿವೆ

ಒಂದೊಂದು ಅರ್ಜಿ ವರ್ಷವಾದರೂ ವಿಲೇವಾರಿ ಆಗಿಲ್ಲ ಯಾಕೆ ? ಹತ್ತು ದಿನಗಳಲ್ಲಿ ಇ ಸ್ವತ್ತು ಮಾಡಬಹುದು, ನೀವು ಅದಕ್ಕೆ ಒಂದು ಡೈರಿ ಇಟ್ಟು ಒಂದು ತಿಂಗಳೊಳಗಾಗಿ ಇ ಸ್ವತ್ತು ಮಾಡಿಕೊಡಿ ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷ ರಾಜಣ್ಣ ಸೂಚಿಸಿದರು.


ಅಂಧರ ಶಾಲೆ ಬಿಟ್ಟು ಎಲ್ಲಾ ಖಾಸಗಿ ಶಾಲೆಗಳು ಆಯಾಯ ಪಂಚಾಯತಿಗಳಿಗೆ ತೆರಿಗೆ ಕಟ್ಟಬೇಕು, ನೀರಿನ ತೆರಿಗೆ ಕ್ರಮಬದ್ಧವಾಗಿ ಸಂಗ್ರಹಿಸಬೇಕು, ಪಂಚಾ ಯತಿಗೆ ಯಾವ್ಯಾವ ಮೂಲ ಗಳಿಂದ ತೆರಿಗೆ ಸಂಗ್ರಹ ಮಾಡಬಹುದು ಎಂದು ತಿಳಿದುಕೊಂಡು ತೆರಿಗೆ ಸಂಗ್ರಹಿಸಿ ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಆದಾಯ ಹೆಚ್ಚಿಸಿ ಎಂದು ಅವರು ಖಡಕ್ ಆಗಿ ಸೂಚಿಸಿದರು.


*ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನುನೇಮಿಸಿ ಕೊಳ್ಳಲು ಸೂಚನೆ*


ಪ್ರತಿ ಗ್ರಾಮಪಂಚಾಯತಿಯಲ್ಲಿ ಇಬ್ಬರು ಸ್ವಚ್ಚತಾ ಕಾರ್ಮಿಕರನ್ನು ನೇಮಿಸಿಕೊಳ್ಳಿ, ಹದಿನೈದು ಸಾವಿರ ರೂ ಸಂಬಳ ನಿಗದಿ ಮಾಡಿ, ಹದಿನಾಲ್ಕನೇ ಹಣಕಾಸುಯೋಜನೆ ಅಡಿಯಲ್ಲಿ ಅವರಿಗೆ ಸಂಬ ಳ ನೀಡಿ, ಒಂದುಪಂಚಾಯ್ತಿ ಯಲ್ಲಿ ಐದ ರಿಂದ ಆರು ಹಳ್ಳಿಗಳಿ ಇರುತ್ತವೆ, ಪ್ರತಿ ಗ್ರಾಮಕ್ಕೂ ವಾರದಲ್ಲಿ ಒಂದು ದಿನ ಅವರು ಸ್ವಚ್ಚತೆ ಮಾಡಲಿ.

ಇದು ನಮ್ಮ ತಾಲ್ಲೂಕಿ ನಲ್ಲೇ ಪ್ರಥಮವಾಗಲಿ ಎಂದು ಗ್ರಾಮ ಪಂಚಾಯತಿ ಅಧಿಕಾರಿ ಗಳು ಮತ್ತು ಅಧ್ಯಕ್ಷ ರಿಗೆ ರಾಜಣ್ಣ ಸಲಹೆ ನೀಡಿದರು.


ನೀಲಕಂಠನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಭರತ್ ಮನವಿ ಮಾಡಿ, ಪರಿಶಿಷ್ಟ ಜಾತಿಯಲ್ಲಿ ಮರಣ ಹೊಂದಿದ್ದ ವ್ಯಕ್ತಿಗೆ ಶವ ಸಂಸ್ಕಾರಕ್ಜೆ ೫,೦೦೦ ರೂ ಕೊಡಬೇಕೆಂದು ಸರ್ಕಾರದ ಸುತ್ತೋಲೆ ಇದೆ, ಆದರೆ ಇದು ಪಾಲನೆ ಆಗುತ್ತಿಲ್ಲ, ಗಮನಹರಿಸಿ ಎಂದು ಮನವಿ ಮಾಡಿದರು.


ಮಳೂರುಪಟ್ಟಣ ತಾ ಪಂ ಸದಸ್ಯ ಸಿದ್ದರಾಮಯ್ಯ ಮನವಿ ಮಾಡಿ,ಪಿಡಿಓ ಗಳು ವಾರಕ್ಕೊಮ್ಮೆಯಾದರೂ ಗ್ರಾಮಗಳಿಗೆ ಭೇಟಿ ನೀಡಲಿ ಗ್ರಾಮಸಭೆ ಮತ್ತು ಸಾಮಾನ್ಯ ಸಭೆಗಳಲ್ಲಿ ಗ್ರಾಮದ ರಸ್ತೆ ಮತ್ತು ಸ್ವಚ್ಛತೆ ಬಗ್ಗೆಅರಿವುಮೂಡಿಸಿ ಎಂದರು.

ನಗರದ ಕೋಳಿ ಅಂಗಡಿ ಕಸಗಳೆಲ್ಲವೂ ಗ್ರಾಮದ ರಸ್ತೆ ಬದಿಗಳಲ್ಲಿ ಮತ್ತು ಕೆರೆ ಏರಿಗಳ ಮೇಲೆ ಬಂದು ಬೀಳುತ್ತಿದೆ, ನಗರ ಸಭೆಗೆ ಎಚ್ಚರಿಕೆ ನೀಡ ಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಸಭೆಗೆ ಮನವಿ ಮಾಡಿದರು.


ಹೀಗೆ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯು ಈ ಸಾರಿ ಸ್ವಲ್ಪ ಚುರುಕಿನಿಂದ ಸಂವಹನ ಗೊಂಡಿತ್ತು. ಸಂದರ್ಭದಲ್ಲಿ ಇಓ ಪ್ರತಿಕ್ರಿಯಿಸಿ  ಪಿ.ಎಂ. ಐ.ಜಿ.ಡಿ ಯೋಜನೆಯಡಿ ೧೨೧೫ಮನೆಗಳು ಮಂಜೂ ರಾಗಿದ್ದು ಹಂಚಲು ಸಮಸ್ಯೆ ಯಾಗಿದೆ,ಜಾನುವಾರಗಳಿಗೆ  ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂ ಧಿಸಿದಂತೆ ಉತ್ತರಿಸಲು ಅಧಿಕಾರಿಗಳೇ ಬಂದಿರಲಿಲ್ಲ.


ತಾಲ್ಲೂಕಿನಾದ್ಯಾಂತ ೧೫೪ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ದ ವಾಗಿದೆ ಎಂದು ಅವರು ಪ್ರಕಟಿಸಿದರು. ನಂತರ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ನೌಕರರರ ಕೊರತೆ ಇದ್ದು ಆದಷ್ಟು ಬೇಗ ನೇಮಕಾತಿಯ ಮೂಲಕ ಸಮಸ್ಯೆ ಬಗೆ ಹರಿಸಲು ಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಲಾಗಿದೆ. ಇದೇ ವೇಳೆ ಇಲಾಖೆಯ ಹಲವಾರು ಕಾಮಗಾರಿಗಳನ್ನು ಅನುಮೋದನೆ ಮಾಡಲಾಯಿತು. ಸಮಯಕ್ಕೆ ಸರಿಯಾಗಿ ಅನುದಾನ ಬಳಸ ಲಾಗದೆ ಹಿಂದಿರುಗಿಸ ಲಾಗಿದೆ ಎಂದು ಇಓ ಅವರು ವಿಷಾದದಿಂದನುಡಿದರು.


ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮಾದಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯರು,  ಗ್ರಾಮ ಪಂಚಾಯ್ತಿ ಯ ಅಧ್ಯಕ್ಷರು ಹಾಗೂ ಉಪಾ ಧ್ಯ ಕ್ಷರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಸದಾ ಸುರಿಯುವ ತೊಂಬೆಯನ್ನು ಸರಿಪಡಿಸಿದ ಹೆಂಗಳೆಯರು
ಸದಾ ಸುರಿಯುವ ತೊಂಬೆಯನ್ನು ಸರಿಪಡಿಸಿದ ಹೆಂಗಳೆಯರು

ಚನ್ನಪಟ್ಟಣ: ತಾಲ್ಲೂಕಿನ ಹೊನ್ನಾಯಕನಹಳ್ಳಿ‌ ಗ್ರಾಮದ ನೀರಿನ ತೊಂಬೆಯು ಸದಾ ಸುರಿಯುತ್ತಿದ್ದು ಗ್ರಾಮ ಪಂಚಾಯತಿ ಯ ಅಧಿಕಾರಿಗಳಿಗೆ ದೂರು ನೀಡಿದರೂ

ಕುಸಿಯುತ್ತಿರುವ ಸೇತುವೆ ಜೀವ ಕೈಲಿಡಿದು ಓಡಾಡುತ್ತೊರುವ ಪ್ರಯಾಣಿಕರು
ಕುಸಿಯುತ್ತಿರುವ ಸೇತುವೆ ಜೀವ ಕೈಲಿಡಿದು ಓಡಾಡುತ್ತೊರುವ ಪ್ರಯಾಣಿಕರು

ಚನ್ನಪಟ್ಟಣ: ತಾಲ್ಲೂಕಿನ ಹೆಚ್ಚು ಭಾರ ಉಳ್ಳ (ನಗರದಿಂದ ಕವಲೊಡೆದು ಹೆಚ್ಚು ವಾಹನಗಳು ಓಡಾಡುವ) ರಾಜ್ಯ ಹೆದ್ದಾರಿಯಾದ ಸಾತನೂರು ರಸ್ತೆಯ ಭೈರಶೆಟ್ಟ

ಹೋರಾಟದ ಫಲಶೃತಿ:ಮೂರು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗಾಂಧಿ ಭವನ ನಿರ್ಮಾಣಕ್ಕೆ ನೀಲನಕ್ಷೆ ತಯಾರಿ ಶಂಕರಪ್ಪ
ಹೋರಾಟದ ಫಲಶೃತಿ:ಮೂರು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗಾಂಧಿ ಭವನ ನಿರ್ಮಾಣಕ್ಕೆ ನೀಲನಕ್ಷೆ ತಯಾರಿ ಶಂಕರಪ್ಪ

ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಶಿಥಿಲವಾದ ಗಾಂಧಿ ಭವನ ಕಟ್ಟಡವನ್ನು ತೆರವುಗೊಳಿಸಿ ಎರಡಂತಸ್ತಿನ ಸುಸಜ್ಜಿತ ಕಟ್ಟಡವನ್ನು ಮೂರು ಕೋಟಿ ರೂಪ

ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ

ಚನ್ನಪಟ್ಟಣ: ತಾಲ್ಲೂಕಿನ ಇಗ್ಗಲೂರು ಡ್ಯಾಂ ಬಳಿಯ ಕೊಂಬಿನಕಲ್ಲು ಅರಣ್ಯ ವಲಯದ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನ

ಪ್ರತಿ ವರ್ಷ ಬೊಂಬೆ ಉತ್ಸವ, ತಯಾರಕರು ಮತ್ತು ಪ್ರವಾಸಿಗರ ನಡುವೆ ವೇದಿಕೆ ಕಲ್ಪಿಸಲ ಬದ್ದ ಡಿಸಿಎಂ ಅಶ್ವಥ್ ನಾರಾಯಣ
ಪ್ರತಿ ವರ್ಷ ಬೊಂಬೆ ಉತ್ಸವ, ತಯಾರಕರು ಮತ್ತು ಪ್ರವಾಸಿಗರ ನಡುವೆ ವೇದಿಕೆ ಕಲ್ಪಿಸಲ ಬದ್ದ ಡಿಸಿಎಂ ಅಶ್ವಥ್ ನಾರಾಯಣ

**


ಚನ್ನಪಟ್ಟಣ:ಅ/೨೧/೨೦೧೯/ಸೋಮವಾರ.


*ಬೊಂಬೆಗಳ ಉತ್ಸವ*


ವಿಶ್ವ ಪ್ರಸಿದ್ಧಿ ಪಡೆದಿರುವ ಚನ್ನಪಟ್ಟಣ ದ ಗೊಂಬೆಗಳ ಉತ್ಸವವನ್ನು ಪ್ರತಿ ವರ್ಷ ನಡೆಸಲು ತೀರ್ಮಾನ ಕೈಗೊಳ್ಳಲಾಗುವುದು,

ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ
ದೊಡ್ಡನಹಳ್ಳಿ ಸರ್ಕಾರಿ ಶಾಲಾ ಜಾಗ ಒತ್ತುವರಿ ತೆರವುಗೊಳಿಸಿಕೊಡಲು ತಹಶಿಲ್ದಾರ್ ರವರಿಗೆ ಮನವಿ

ಚನ್ನಪಟ್ಟಣ: ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರು, ಮಕ್ಕಳಿಲ್ಲದೆ ಬಾಗಿಲು ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಅನೇಕ, ಇವುಗಳ ನಡುವೆ ಶ

ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ
ಮೂಢನಂಬಿಕೆ ಬಿಟ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಿ ಹರೂರು ರಾಜಣ್ಣ

ಚನ್ನಪಟ್ಟಣ: ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರವೂ ಒಂದಾಗಿದ್ದು ಮೂಢನಂಬಿಕೆ ಬಿಟ್ಟು ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಕಾಪಾಡಬ

ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್
ಆದರ್ಶ ವ್ಯಕ್ತಿತ್ವದ ಮಹಾಮುನಿ ವಾಲ್ಮೀಕಿ. ದಂಡಾಧಿಕಾರಿ ಸುದರ್ಶನ್

ಚನ್ನಪಟ್ಟಣ: ವಾಲ್ಮೀಕಿ ಹೆಸರೇ ಒಂದು ರೋಮಾಂಚನ, ದರೋಡೆಕಾರನಾಗಿದ್ದ ವಾಲ್ಮೀಕಿ ಮುಂದೊಂದು ದಿನ ತನ್ನ ತಪ್ಪಿನ ಅರಿವಾಗಿ ತಪಸ್ಸನ್ನಾಚರಿಸಿ ಪ್ರಪಂಚ

ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ
ಪಾರಂಪರಿಕ ವೈದ್ಯಪದ್ದತಿಗೆ ಸರ್ಕಾರ ಮಾನ್ಯತೆ ನೀಡಲಿ, ಗಾ ನಂ ಶ್ರೀಕಂಠಯ್ಯ

ರಾಮನಗರ: ಪಾರಂಪರಿಕ ವೈದ್ಯ ಪದ್ದತಿಗೆ ಮಂಡಳಿ ರಚಿಸಿ, ಎಲ್ಲಾ ಪಾರಂಪರಿಕ ವೈದ್ಯರಿಗೆ ವೈದ್ಯ ಮಾನ್ಯತೆ ಮತ್ತು ಸೌಲಭ್ಯಗಳನ್ನು ಒದಗಿಸಿ ಸರ್ಕಾರ ಮಾನ್ಯತೆ ದೊರಕಿಸಿಕೊಡಬೇಕು ಎಂದು ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ಗೌರವ ಉಪಾಧಕ್ಷ ಗಾ.ನಂ.ಶ್

ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್
ಗ್ರಾಮೀಣ ಜನರ ಪೌಷ್ಟಿಕ ಆಹಾರಕ್ಕಾಗಿ ಹಿತ್ತಲ ಕೋಳಿ ಸಾಕಿ ಡಾ ಜಯರಾಮ್

ಚನ್ನಪಟ್ಟಣ: ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಪ್ರೋಟೀನ್ ಯುಕ್ತ ಪೌಷ್ಟಿಕ ಆಹಾರಕ್ಕಾಗಿ ಮನೆಯ ಹಿತ್ತಲಿನಲ್ಲಿ ಕೋಳಿ ಸಾಕುವುದು ಉತ್ತಮ ಎಂದು ಪಶು

Top Stories »  


Top ↑