ಹಿಂದುಳಿದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಮೊದಲ ಮುಖ್ಯಮಂತ್ರಿ ಸಂತಸ

ಚನ್ನಪಟ್ಟಣ: ನಗರದ ಮಹದೇಶ್ವರ ನಗರದಲ್ಲಿರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯಕ್ಕೆ, ವಿದ್ಯಾರ್ಥಿಗಳು ಮತ್ತು ನಿಲಯ ಪಾಲಕ ಮೋಹನ್ ರವರ ಮನವಿ ಮೇರೆಗೆ ರಾಜ್ಯದ ಮುಖ್ಯಮಂತ್ರಿ ಗಳಾದ ಕುಮಾರಸ್ವಾಮಿ ಯವರು ಆಗಮಿಸಿ ಈ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಪ್ರಥಮ ಮುಖ್ಯಮಂತ್ರಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಂತಸಪಟ್ಟರು.
೧೯೭೭ ರಲ್ಲಿ ಪ್ರಾರಂಭಗೊಂಡ ವಿದ್ಯಾರ್ಥಿ ನಿಲಯಕ್ಕೆ ೪೧ ವರ್ಷಗಳ ನಂತರ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭೇಟಿ ನೀಡಿ ನಿಲಯದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದಲ್ಲದೆ ವಿದ್ಯಾರ್ಥಿಗಳಿಗೆ ಶುಭಕೋರಿದ್ದು ಅತೀವ ಸಂತಸ ತಂದಿದೆ ಎಂದು ನಿಲಯ ಪಾಲಕ ಮೋಹನ್ ರವರು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದರಲ್ಲದೆ ಕೊಠಡಿ ಮತ್ತು ಗ್ರಂಥಾಲಯವನ್ನು ವೀಕ್ಷಿಸಿ ಸಂದರ್ಶನದ ಪುಸ್ತಕದಲ್ಲಿ *ನನ್ನ ನೆಚ್ಚಿನ ಪ್ರೀತಿಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿತವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ಉತ್ತಮ ಕಲಿಕೆ, ನಾಯಕತ್ವ ಗುಣ, ಗುರು ಹಿರಿಯರಲ್ಲಿ ಭಕ್ತಿ ವೃದ್ಧಿಗೆ ಸನ್ಮಂಗಳ ಉಂಟಾಗಲಿ* ಎಂದು ಬರೆದು ಸಹಿ ಮಾಡಿದರು.
ಮುಖ್ಯಮಂತ್ರಿ ಗಳ ಜನತಾ ದರ್ಶನದ ವೇಳೆ ಮನವಿ ಮೇರೆಗೆ ಆಗಮಿಸಿದ ಕುಮಾರಸ್ವಾಮಿ ಯವರು ಹಾಸ್ಟೆಲ್ ಗೆ ಏನಾದರೂ ಸವಲತ್ತುಗಳು ಬೇಕಾದರೆ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಭೇಟಿ ಸಮಯದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮುಲ್ಲೈಮುಹಿಲನ್, ಮತ್ತು ನಿಲಯದ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
Recent news in ramanagara »

ಅಕ್ರಮ ಗ್ರಾನೈಟ್ ಮತ್ತು ಎಂ ಸ್ಯಾಂಡ್ ಜಪ್ತಿ ಮಾಡಿದ ತಹಶಿಲ್ದಾರ್
ಕನಕಪುರ/ಚನ್ನಪಟ್ಟಣ: ಶುಕ್ರವಾರ ಮುಂಜಾನೆ ೧೨:೪೫ ರ ವೇಳೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಶಿಲ್ದಾರ್ ಸುದರ್ಶನ್ ಮತ

ನಗರಸಭೆ ವ್ಯಾಪ್ತಿಯಲ್ಲಿ ಕೆ ಆರ್ ಐ ಡಿ ಎಲ್ ನಿಂದ ಅರ್ಧಂಬರ್ಧ ಕೆಲಸ, ಸೊಂಟ ಮುರಿದುಕೊಂಡ ಅಂಧ ವೃದ್ಧ.
ಚನ್ನಪಟ್ಟಣ: ನಗರದ ಮಹಾತ್ಮ ಗಾಂಧಿ ರಸ್ತೆಯ ಐದು ದೀಪಗಳ (ಡೂಂಲೈಟ್ ಸರ್ಕಲ್) ವೃತ್ತ ದ ಚರಂಡಿ ಮತ್ತು ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಿದ ಕೆ ಆ

ಆರ್ ಜೆ ಎಸ್ ಪಿಯು ಕಾಲೇಜಿನ ಶಿಬಿರಾರ್ಥಿಗಳಿಂದ ಶ್ರಮದಾನ
ಚನ್ನಪಟ್ಟಣ: ಬೆಂಗಳೂರಿನ ಕೋರಮಂಗಲ್ಲಿರುವ ಆರ್ ಜೆ ಎಸ್ ಪದವಿ ಪೂರ್ವ ಕಾಲೇಜಿನ ಶಿಬಿರಾರ್ಥಿಗಳು ನಗರದಲ್ಲಿರುವ ಶಿಕ್ಷಣಾಧಿಕಾರಿಗಳ ಕಛೇರಿ ಆವರಣವನ

ಸಾರ್ವಜನಿಕ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ಲಕ್ಷಾಂತರ ರೂ ವಸ್ತು ಕಳವು
ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಪ್ರತಿನಿತ್ಯ ಸಹಸ್ರಾರು ಮಂದಿ ಓಡಾಡುವ ಸಾರ್ವಜನಿಕ ಆಸ್ಪತ್ರೆಯ ಆವರಣದ ಆಂಬುಲೆನ್ಸ್ ವಾಹನ ನಿಲುಗಡೆಯ ಗೋಡ

ಸುದ್ದಿ ಎಫೆಕ್ಟ್ ನಕಲಿ ಬಾಬಾ ಆರೆಸ್ಟ್
ಚನ್ನಪಟ್ಟಣ: ಸಾಯಿಬಾಬಾ ನ ಪುನರವತಾರ ಪ್ರೇಮಸಾಯಿ ಎಂದು ನಗರದೆಲ್ಲೆಡೆ ಓಡಾಡಿಕೊಂಡು ಅಂಧ ಭಕ್ತರಿಗೆ ಜಾದೂ ಮೂಲಕ ಭಸ್ಮ ನೀಡಿ ದೇವಾತೀಥ್ಯ ಸ್ವೀಕರಿ

ಭಾನುವಾರ ತಾಲೂಕು ಬ್ರಾಹ್ಮಣ ಮಹಾಸಭಾ ಉದ್ಘಾಟನೆ
ಚನ್ನಪಟ್ಟಣ: ತಾಲೂಕಿನಲ್ಲಿ ಇದೇ ಮೊದಲಬಾರಿಗೆ ಅಸ್ಥಿತ್ವಕ್ಕೆ ಬಂದಿರುವ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ತ್ರಿಮಸ್ಥ ಯತಿಗಳ ಅಮೃತ ಹಸ್ತದಿಂದ

ದೂರು ಮತ್ತು ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಕೊಳಚೆ ನೀರಿಗೆ ತಾತ್ಕಾಲಿಕ ರಿಲೀಫ್
ಚನ್ನಪಟ್ಟಣ: ಮಾರುತಿ ಬಡಾವಣೆಯಲ್ಲಿ ಕೊಳಚೆ ನೀರು ಹರಿಯುತಿದ್ದು ಮನೆಗಳಿಗೆ ನುಗ್ಗುತಿದ್ದರ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ದೂರು ನೀಡಿದ್ದ

ಡಾ. ಚನ್ನಣ್ಣ ವಾಲೀಕರಾರವರಿಗೆ ಶ್ರದ್ಧಾಂಜಲಿ ಸಭೆ
ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರಾಮನಗರದ ಸ್ಪೂರ್ತಿ ಭವನದಲ್ಲಿ ದಿನಾಂಕ 30ರ ಶನಿವಾರ ಬೆಳಿಗ್ಗೆ 10 ಗಂಟಗೆ ಈಚೆಗೆ ನಿಧನರಾದ ಬಂಡಾಯದ ದನಿ, ಜನಪರ, ಜೀವಪರ ಹೋರಾಟದ ಮುಂಚೂಣಿ ನಾಯಕ ಡಾ. ಚನ್ನಣ್ಣ ವಾಲೀ

ಕಟ್ಟಿದ ಮೋರಿ ಮಾರುತಿ ಮತ್ತು ಅನ್ನಪೂರ್ಣೇಶ್ವರಿ ಬಡಾವಣೆ ಕೊಳಚೆ ನೀರು ಮನೆ ಮತ್ತು ಹೆದ್ದಾರಿಗೆ
ಚನ್ನಪಟ್ಟಣ:ನ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯ ರಸ್ತೆಯ ವಿಳಂಬದಿಂದ ಹಾಗೂ ರಸ್ತೆ ಕಾಮಗಾ
ಪ್ರತಿಕ್ರಿಯೆಗಳು