Tel: 7676775624 | Mail: info@yellowandred.in

Language: EN KAN

    Follow us :


ವಿಶ್ವಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾರತದ ಯೋಗ ಹರೂರು ರಾಜಣ್ಣ

Posted Date: 21 Jun, 2019

ವಿಶ್ವಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾರತದ ಯೋಗ ಹರೂರು ರಾಜಣ್ಣ

ಚನ್ನಪಟ್ಟಣ: ನಮ್ಮ ಭಾರತ ದೇಶದ ಪುರಾತನ ವಿದ್ಯೆಯಾದ ಯೋಗವನ್ನು ವಿಶ್ವದ ಎಲ್ಲಾ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಿಶ್ವಕ್ಕೆ ಪರಿಚಯಿಸಿ ಯೋಗದಲ್ಲಿ "ವಿಶ್ವ ಗುರು* ಎನಿಸಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಹೇಳಿದರು.

ಅವರು ನಗರದ ಗುರುಕೃಪಾ ವಾಣಿಜ್ಯ ಸಂಕೀರ್ಣದಲ್ಲಿ ಏರ್ಪಡಿಸಿದ್ದ ದಿ ಆರ್ಟ್ ಆಫ್ ಲಿವಿಂಗ್ ನ ಚನ್ನಪಟ್ಟಣ ಶಾಖೆಯ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು ಮಸತನಾಡಿದರು.


ಯೋಗ ಎಂಬುದು ದೇಹದ ಆರೋಗ್ಯದ ಜೊತೆಗೆ ಮನಸ್ಸಿನಲ್ಲಿ ಆಹ್ಲಾದ ತುಂಬಲು ಸಹಕಾರಿಯಾಗಿದೆ, ಕಾಟಚಾರಕ್ಕೆಂದು‌ ಯೋಗ ಮಾಡದೇ ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ಮನೆಯಲ್ಲೇ ಯೋಗ ಮಾಡಬಹುದು ಎಂದು‌ ಸಲಹೆ ನೀಡಿದರು.


ದಿ ಆರ್ಟ್ ಆಫ್ ಲಿವಿಂಗ್‌ ನ ಸಂಚಾಲಕರು ಹಾಗೂ ಯೋಗ ಗುರುಗಳಾದ ರಾಧಿಕಾ ರವಿಕುಮಾರ್ ಗೌಡ ಮಾತನಾಡಿ ಈ ಬಾರಿಯ ವಿಶ್ವ ಯೋಗದ ಘೋಷಣೆ *ಹೃದಯಕ್ಕಾಗಿ ಯೋಗ* ಎಂಬುದಾಗಿದೆ, ಅಂದರೆ ನಿಮ್ಮ ಹೃದಯ ಆರಾಮವಾಗಿ ಮಿಡಿಯಬೇಕಾದರೆ ಯೋಗ ತೀರಾ ಅವಶ್ಯವಾಗಿದೆ.

ಯೋಗ ಕೇವಲ ಆರೋಗ್ಯ ಮಾತ್ರವಲ್ಲದೆ ಸಮಾಜದಲ್ಲಿ ದ್ವೇಷವನ್ನು ತೊಡೆದು ಸ್ನೇಹವನ್ನು ಸಂಪಾದಿಸಲು, ತಾಳ್ಮೆಯಿಂದ ನಡೆದುಕೊಳ್ಳಲು ಹಾಗೂ ಆರೋಗ್ಯವಾಗಿ ಧೀರ್ಘಕಾಲ ಜೀವಿಸಲು ಯೋಗ ಅತ್ಯವಶ್ಯಕವಾಗಿದೆ, ಇದನ್ನೇ ಪ್ರಧಾನಿ ಮೋದಿ ಯವರು ಸಹ ಕ್ರಿಕೆಟ್ ಆಟ ಆಡುವ ಭಾರತ ತಂಡದ ಸದಸ್ಯರಿಗೂ ಸಹ ಆಟ ಗೆಲ್ಲುವುದರ ಜೊತೆಗೆ ಅವರ ಹೃದಯವನ್ನು ಗೆದ್ದು ಸ್ನೇಹವನ್ನು ಸಂಪಾದಿಸಬೇಕೆಂಬ ಹಿತವಚನವನ್ನು‌ ಹೇಳಿದ್ದಾರೆ ಎಂದು ತಿಳಿಸಿದರು.


ಉಪನ್ಯಾಸಕ ಡಾ ಮಧುಸೂದನಚಾರ್ಯಜೋಷಿ ಮಾತನಾಡಿ ವಿಶ್ವ ಗುರುವಾದ ಭಾರತ ಜಗತ್ತಿಗೆ ಅನೇಕ ರೀತಿಯ ಕೊಡುಗೆಗಳನ್ನು ನೀಡಿದೆ ವಿಶ್ವದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಶ್ರೇಷ್ಠ ಕೊಡುಗೆ ಯೋಗ ಎಂದು ಅಭಿಪ್ರಾಯಪಟ್ಟರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಲ್ಲಿನ ಆರ್ಟ್ಆಫ್ ಲಿವಿಂಗ್ ಶಾಖೆ ವಿಜಯವಾಣಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಮಾತನಾಡಿದ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಲಭವಾಗಿ ತಂದುಕೊಡುವಂತಹ ಸಾಧನ ಯೋಗವಾಗಿದೆ ಪತಂಜಲಿ ಮಹರ್ಷಿಗಳು ನೀಡಿದ ಈ ವಿದ್ಯೆ ಇಲ್ಲಿ ಅತ್ಯಂತ ಅವಶ್ಯಕ ಸಾಧನವಾಗಿದೆ, ಬದುಕುವುದನ್ನು ವಿಶ್ವಕ್ಕೆ ಕಲಿಸಿದ ದೇಶ ಭಾರತ ಕೋಲಾ ಪೆಪ್ಸಿ ಫಾಸ್ಟ್ ಫುಡ್ ಗಳ ಮೂಲಕ ಸಾಯುವುದು ಹೇಗೆಂಬ  ದಾರಿಯನ್ನು ಪಾಶ್ಚಾತ್ಯ ರಾಷ್ಟ್ರಗಳು ನಮಗೆ ಕಲಿಸಿಕೊಟ್ಟರೆ ಬದುಕುವುದು ಹೇಗೆಂಬ ದಾರಿಯನ್ನು ಆರ್ಟ್ ಆಫ್ ಲಿವಿಂಗ್ ನ ಪಂಡಿತ್ ರವಿಶಂಕರ್ ಗುರೂಜಿಯವರು ವಿಶ್ವಕ್ಕೆ ಕಲಿಸಿಕೊಡುತ್ತಿದ್ದಾರೆ ಎಂದು ಶ್ಲಾಘಿಸಿದರು.


ಆರೆಸ್ಸೆಸ್ ನ ಜಿಲ್ಲಾ ಸಂಚಾಲಕರಾದ ಹರೀಶ್ ರವರು ಗೀತೆಯಲ್ಲಿ ಉಪದೇಶಿಸಿದ ನಾಲ್ಕು ಯೋಗಗಳು ನಾಲ್ಕು ವೇದಗಳ ಮಹತ್ವ ಇತ್ಯಾದಿಗಳನ್ನು ಪ್ರಸ್ತಾಪಿಸಿದರು, ಭಾರತ ವಿಕಾಸ ಪರಿಷತ್ ನ ತಾಲ್ಲೂಕು ಅಧ್ಯಕ್ಷರಾದ ವಸಂತಕುಮಾರ್ ವೇದಿಕೆಯಲ್ಲಿ  ಉಪಸ್ಥಿತರಿದ್ದರು, ವಿಜಯ ವಾಣಿ ವರದಿಗಾರ ರಾದ ಅಭಿಲಾಷ್ ವಂದಿಸಿದರೆ ಯೋಗೇಶ ಚಕ್ಕೆರೆ ನಿರೂಪಿಸಿದರು. ಬೆಳಿಗ್ಗೆ ಆರು ಗಂಟೆಯಿಂದ ಏಳು ಮೂವತ್ತ ರವರೆಗೆ ಅನೇಕರು ಯೋಗ ಮಾಡುವುದರ ಮೂಲಕ ಐದನೇ ಅಂತರರಾಷ್ಟ್ರೀಯ ಯೋಗದಲ್ಲಿ ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಹಳ್ಳಿ ನಗರದಲ್ಲಿ ಹಂದಿ ನಾಯಿಗಳ ದರ್ಬಾರ್ ಕಣ್ಮುಚ್ಚಿ ಕುಳಿತ ಇಲಾಖೆಯ ಅಧಿಕಾರಿಗಳು
ಹಳ್ಳಿ ನಗರದಲ್ಲಿ ಹಂದಿ ನಾಯಿಗಳ ದರ್ಬಾರ್ ಕಣ್ಮುಚ್ಚಿ ಕುಳಿತ ಇಲಾಖೆಯ ಅಧಿಕಾರಿಗಳು

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಬೀದಿ ನಾಯಿಗಳು, ಹಿಂಡಿಂಡು ಹಂದಿಗಳ ಜೊತೆಗೆ ಬಿಡಾಡಿ ಜಾನುವಾರುಗಳು ಸಂಚರಿಸು

ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ನಿರ್ಗಮನ ಸುದರ್ಶನ್ ಆಗಮನ
ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ನಿರ್ಗಮನ ಸುದರ್ಶನ್ ಆಗಮನ

ಚನ್ನಪಟ್ಟಣ: ಕಳೆದ ವರ್ಷದ ಆರಂಭದಲ್ಲಿ ಕನಕಪುರ ದಿಂದ ತಾಲೂಕಿಗೆ ವರ್ಗಾವಣೆ ಗೊಂಡು ಚನ್ನಪಟ್ಟಣದ ಹೊಣೆ‌ಹೊತ್ತಿದ್ದ ತಹಶಿಲ್ದಾರ್ ಯೋಗಾನಂದ ರವರು ಇ

ಜನಪದ ಎಂದರೆ ಹಿರಿಯಜ್ಜನ ನೆನಪು ಶಿವಲಿಂಗಯ್ಯ
ಜನಪದ ಎಂದರೆ ಹಿರಿಯಜ್ಜನ ನೆನಪು ಶಿವಲಿಂಗಯ್ಯ

ಜನಪದ ಎಂದರೆ ನಮ್ಮ ಹಿರಿಯಜ್ಹ, ಮುತ್ತಜ್ಜರು ನೆನಪಿಗೆ ಬರುತ್ತಾರೆ, ನಮ್ಮ ಬಾಲ್ಯ ನೆನಪಿಗೆ ಬರುತ್ತದೆ, ಪುರಾಣ ಮತ್ತು ಇತಿಹಾಸದ ಕಥೆಗಳನ್ನು ಸಹ ಜಾನಪದ ಶೈಲಿಯಲ್ಲಿ ಹೇಳುತ್ತಿದ್ದ ನಮ್ಮ ಅಜ್ಜ ಅಜ್ಜಿಯರ

ಬಸ್ - ಕಾರು ನಡುವೆ ಅಪಘಾತ; ಮಹಿಳೆ ಸೇರಿ ಚನ್ನಪಟ್ಟಣದ ಮೂವರು ಸಾವು
ಬಸ್ - ಕಾರು ನಡುವೆ ಅಪಘಾತ; ಮಹಿಳೆ ಸೇರಿ ಚನ್ನಪಟ್ಟಣದ ಮೂವರು ಸಾವು

ಮಂಗಳೂರು: ಸುಳ್ಯ ಸಮೀಪದ ಅರಂಬೂರಿನಲ್ಲಿ ಭಾನುವಾರ ಬೆಳಗ್ಗೆ ಕಾರು ಹಾಗೂ ಬಸ್ಸು ಢಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿದ್ದಾರೆ.


ಸುಳ್ಯದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್

ನಾಡಪ್ರಭು ಹೆಸರಿಗಿಂತ ಸಾಮಂತ ಅಥವಾ ಮಹಾಮಂಡಲಾಧಿಪತಿ ಹೆಸರು ಸೂಕ್ತ ರಾಜಶೇಖರ
ನಾಡಪ್ರಭು ಹೆಸರಿಗಿಂತ ಸಾಮಂತ ಅಥವಾ ಮಹಾಮಂಡಲಾಧಿಪತಿ ಹೆಸರು ಸೂಕ್ತ ರಾಜಶೇಖರ

ಕೆಂಪೇಗೌಡರನ್ನು ನಾಡಪ್ರಭು ಎನ್ನುವ ಬಿರುದುಗಿಂತ ಸಾಮಂತ ರಾಜ ಅಥವಾ ಮಹಾಂಮಡಲಾಧಿಪತಿ ಎಂಬ ಬಿರುದಿನಿಂದ ಕರೆಯುವುದು ಸೂಕ್ತ ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಶಿಕ್ಷಕ ರಾಜಶೇಖರ ರವರು ಅಭಿಪ್ರಾಯ ಪಟ್ಟರು, ಅವರು ಇಂದು ಮಹದೇಶ್ವರ ನಗರದಲ್ಲಿ

ಪುರಾಣ ಪ್ರಸಿದ್ಧ ಸಂಜೀವರಾಯ ಜಾತ್ರೆ ಆರಂಭ
ಪುರಾಣ ಪ್ರಸಿದ್ಧ ಸಂಜೀವರಾಯ ಜಾತ್ರೆ ಆರಂಭ

ಚನ್ನಪಟ್ಟಣ: ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿರುವ ಶ್ರೀ ಸಂಜೀವರಾಯ ದ

ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳು ಸಿದ್ದರಾಗಿ ವೈದ್ಯಾಧಿಕಾರಿ ಡಾ ರಾಜು
ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳು ಸಿದ್ದರಾಗಿ ವೈದ್ಯಾಧಿಕಾರಿ ಡಾ ರಾಜು

ಚನ್ನಪಟ್ಟಣ:  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹರೂರು ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆರೋಗ್ಯ

ಕೂಡ್ಲೂರು ಸೋಪಾನ ಕಾಮಗಾರಿಯಲ್ಲಿ ಎರಡೂವರೆ ಲಕ್ಷ ಗುಳುಂ ಮಾಡಿದ ಶಂಕರ್
ಕೂಡ್ಲೂರು ಸೋಪಾನ ಕಾಮಗಾರಿಯಲ್ಲಿ ಎರಡೂವರೆ ಲಕ್ಷ ಗುಳುಂ ಮಾಡಿದ ಶಂಕರ್

ಚನ್ನಪಟ್ಟಣ: ಶಂಕರ್ ಎಂದರೆ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ತುಂಡು ಗುತ್ತಿಗೆ ಕಾಮಗಾರಿಗಳೆಲ್ಲ ಕಿಸಕ್ ಎಂದು‌ ನಗುತ್ತವೆ,* ಅವರಿಂದ ಬಿಲ್ ಬಿಡುಗಡೆ ಮಾಡ

ಕಲಾವಿದರ ಹಕ್ಕುಗಳನ್ನು ಕಸಿದುಕೊಳ್ಳಬೇಡಿ ಒಕ್ಕೂಟ ಮನವಿ
ಕಲಾವಿದರ ಹಕ್ಕುಗಳನ್ನು ಕಸಿದುಕೊಳ್ಳಬೇಡಿ ಒಕ್ಕೂಟ ಮನವಿ

ಚನ್ನಪಟ್ಟಣ: ಭಾರತವು ಸಾಂಸ್ಕೃತಿಕ ದೇಶವಾಗಿದ್ದು, ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕರ್ನಾಟಕದ ಕಲ

ಚನ್ನಪಟ್ಟಣ ನಗರಸಭೆಗೆ ಎಸಿಬಿ ದಾಳಿ ಪೌರಾಯುಕ್ತ ಸೇರಿದಂತೆ ಮೂವರ ಬಂಧನ
ಚನ್ನಪಟ್ಟಣ ನಗರಸಭೆಗೆ ಎಸಿಬಿ ದಾಳಿ ಪೌರಾಯುಕ್ತ ಸೇರಿದಂತೆ ಮೂವರ ಬಂಧನ

ಚನ್ನಪಟ್ಟಣ: ನಗರದ ನಿವಾಸಿಯೊಬ್ಬರ ವಾಸದ ಮನೆಯ ಇ-ಖಾತಾ ಮತ್ತು ಮ್ಯುಟೇಷನ್ ಮಾಡಿಕೊಡಲು ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಸಹ ಇ-ಖಾತಾ ಮಾಡಿಕೊಡದೇ

Top Stories »  


Top ↑