Tel: 7676775624 | Mail: info@yellowandred.in

Language: EN KAN

    Follow us :


ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

Posted Date: 24 Jun, 2019

ಸಾವು ಬದುಕಿನ ಹೋರಾಟದಲ್ಲಿರುವ ರೋಗಿಗಳಿಗೆ ರಕ್ತ ಸಂಜೀವಿನಿ‌ ಇದ್ದಂತೆ ಸಿ ಪುಟ್ಟಸ್ವಾಮಿ

ಚನ್ನಪಟ್ಟಣ: ದಾನ ದಾನಗಳಲ್ಲಿ ರಕ್ತದಾನ ಅತಿ ಶ್ರೇಷ್ಠ ದಾನವಾಗಿದೆ, ಬೇರೆ ರೀತಿಯ ಹಲವಾರು ದಾನಗಳು ತೋರ್ಪಡಿಕೆಗೆ ಅಥವಾ ಅಡಂಬರಕ್ಕೆ ಸೀಮೀತವಾದರೆ, ರಕ್ತದಾನ ಸಾವು ಬದುಕಿನ ಹೋರಾಟದಲ್ಲಿ ತೊಯ್ದಾಡುತ್ತಿರುವ ರೋಗಿಗೆ ಜೀವ ಉಳಿಸಲು ನೆರವಾಗುತ್ತದೆ, ಆ ರಕ್ತ ಪಡೆದ ರೋಗಿಯ ಜೀವದ ಜೊತೆಗೆ ಆತನ ಕುಟುಂಬವೂ ಸಹ ತಮ್ಮ ಕುಡಿಯನ್ನು ಉಳಿಸಿಕೊಂಡಂತಾಗುತ್ತದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಹೇಳಿದರು.

ಅವರು ನಗರದ *ಮಾತೃಶ್ರೀ ಆರ್ಥೋಪೆಡಿಕ್ ಮತ್ತು ಟ್ರಾಮಾ ಸೆಂಟರ್* ನಲ್ಲಿ ಏಳನೇ ವರ್ಷದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ನಮ್ಮ ತಾಲ್ಲೂಕಿನಲ್ಲಿ ತಮ್ಮ ಸಮಯ ಮತ್ತು ಗಳಿಕೆಯನ್ನು ತಾವೇ ಉಪಯೋಗಿಸಿಕೊಳ್ಳದೇ ಸಮಾಜಕ್ಕೆ ಅರ್ಪಿಸುವ ಮನೋಭಾವ ಇರುವ ವ್ಯಕ್ತಿಗಳಲ್ಲಿ ಡಾ ಮಲವೇಗೌಡ ರ ಹೆಸರು ಮುಂಚೂಣಿಯಲ್ಲಿದೆ, ಕೇವಲ ರಕ್ತದಾನ ಶಿಬಿರವಲ್ಲದೆ, ಗಿಡಗಳನ್ನು ನೆಟ್ಟು ಪೋಷಿಸುವುದು, ಪರಿಸರ ಮಾಲಿನ್ಯದ ಬಗ್ಗೆ ಕಾಳಜಿ ವಹಿಸಿವುದು, ಆರ್ಥಿಕವಾಗಿ ಹಿಂದುಳಿದ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದು, ಮತ್ತು ಸೈಕಲ್ ಜಾಥಾ ಹಮ್ಮಿಕೊಳ್ಳುವುದರ ಜೊತೆಗೆ ಸಂಪೂರ್ಣವಾಗಿ ಕನ್ನಡದಲ್ಲಿ ವ್ಯವಹರಿಸುವುದು ಇವರ ಉತ್ತಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.


ಮಾತೃಶ್ರೀ ಆಸ್ಪತ್ರೆಯ ಮುಖ್ಯಸ್ಥ ಹಾಗೂ ರಕ್ತದಾನ ಶಿಬಿರದ ರೂವಾರಿ ಡಾ ಮಲವೇಗೌಡ ಮಾತನಾಡಿ

ವಿಶ್ವದಾದ್ಯಂತ ವಿಜ್ಞಾನ ಎಷ್ಟೇ ಬೆಳೆದು ನಿಂತರೂ ಪ್ರಕೃತಿಯ ಮುಂದೆ ಮನುಜರು ನಗಣ್ಯ.


ಮಾನವನ ದೇಹದ ಬಹುತೇಕ ಎಲ್ಲಾ ಅಂಗಗಳನ್ನು ಕೃತಕವಾಗಿ ಜೋಡಿಸಬಹುದಾದರು ದೇಹಕ್ಕೆ ಬೇಕಾದ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ, ಅದೆಷ್ಟೋ ವಿಜ್ಞಾನಿಗಳು ಕೃತಕ ರಕ್ತ ಸೃಷ್ಟಿಸುವಲ್ಲಿ ಅನುತ್ತೀರ್ಣರಾಗಿದ್ದರೂ ಸಹ ತಮ್ಮ ಪ್ರಯತ್ನವನ್ನು ಬಿಡದೆ ಛಲದಂಕ ಮಲ್ಲರಂತೆ ಪ್ರಯತ್ನ ಮುಂದುವರಿಸಿದ್ದಾರೆ.


ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾದರೆ ಅಪಘಾತ ಮತ್ತು ಗರ್ಭಿಣಿ ಸ್ತ್ರೀಯರ ಸಾವಿನ ಸಂಖ್ಯೆ ಇಳಿಮುಖವಾಗುತ್ತದೆ, ಆದರೆ ಅದು ಅಸಾಧ್ಯ, ಹಾಗಾಗಿ ಆರೋಗ್ಯವಂತ ಯುವಕರು ರಕ್ತದಾನ ಮಾಡುವುದರ ಮೂಲಕ ರಕ್ತದ ಕೊರತೆಯಿಂದ ಬಳಲುತ್ತಿರುವ ರೋಗಿಗೆ ನೆರವಾಗಬೇಕು ಎಂದರು.

ರಕ್ತದಾನ ಮಾಡಿದ ವ್ಯಕ್ತಿ ಮತ್ತಷ್ಟು ಬಲಿಷ್ಠನಾಗುತ್ತಾನೆ, ರಕ್ತದಾನ ಮಾಡಿದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ಎಂದು ಅವರು ತಿಳಿಸಿದರು.


ಶಿಬಿರದಲ್ಲಿ ರೆಡ್ ಕ್ರಾಸ್ ನ ವೈದ್ಯೆ ಡಾ ವರ್ಷಾ ಮತ್ತು ಸಿಬ್ಬಂದಿ, ಮಾತೃಶ್ರೀ ಆಸ್ಪತ್ರೆಯ ಸಿಬ್ಬಂದಿ ವರ್ಗ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ಗೋ ರಾ ಶ್ರೀನಿವಾಸ, ಸಾಹಿತಿ ವಿಜಯ್ ರಾಂಪುರ ಮತ್ತು ಎಂ ಕುಮಾರ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ
ಗ್ರಾಮ ಪಂಚಾಯತಿ ವಸತಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆ ಭಾಗ್ಯವಿಲ್ಲ ಆರೋಪ

ಚನ್ನಪಟ್ಟಣ: ಇಂದಿರಾಗಾಂಧಿ ಆವಾಸ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ, ವಾಜಪೇಯಿ ವಸತಿ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವತಿಯಿಂದ ಫಲ

ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !
ನಗರ ವ್ಯಾಪ್ತಿಯ ಸಾತನೂರು ರಸ್ತೆ ಗುಂಡಿಗಳ ಆಗರ ಹೆಸರಿಗಷ್ಟೇ ದ್ವಿಪಥ ರಸ್ತೆ !

ಚನ್ನಪಟ್ಟಣ: ರಾಜ್ಯ ಹೆದ್ದಾರಿ ಸಾತನೂರು ರಸ್ತೆಯಲ್ಲಿ ಕಿರಿದಾದ ರಸ್ತೆಗಳು, ಕಿರಿದಾದ ಸೇತುವೆಗಳು ಹಾಗೂ ಕುಸಿದ ಸೇತುವೆಗಳದ್ದೇ ದರ್ಬಾರು ಎಂಬುದು

ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು
ಕೆಂಗಲ್ ದೇವಾಲಯದ ಕಲ್ಯಾಣಿಗೆ ಜಾರಿ ಬಿದ್ದು ಸಾವು

ಚನ್ನಪಟ್ಟಣ: ತಾಲ್ಲೂಕಿನ ಸುಪ್ರಸಿದ್ಧ ಐತಿಹಾಸಿಕ ಕೆಂಗಲ್ ದೇವಾಲಯದ ಮುಂಭಾಗದಲ್ಲಿ ಇರುವ ಪುರಾಣ ಪ್ರಸಿದ್ಧ ಕಲ್ಯಾಣಿ (ಕೊಳ) ಯಲ್ಲಿ ಕಾಲು ಜಾರಿ ಬಿದ್ದು

ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ
ಕನಕ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ

ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಇದೇ ತಿಂಗಳ ಹದಿನೈದನೇ ತಾರೀಖು ನಡೆಯಲಿರುವ ಕನಕ ಜಯಂತಿ ಯ ಪೂ

ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ
ಇಪ್ಪತ್ತಾರು ಮಂದಿಯಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ನೋಟೀಸ್ ಜಾರಿ

ಚನ್ನಪಟ್ಟಣ: ನಗರದ ಶೆಟ್ಟಿಹಳ್ಳಿ ಕೆರೆಯ ಒತ್ತುವರಿ ಸರ್ವೇ ಕಾರ್ಯವು ಜಿಲ್ಲಾ ಪಂಚಾಯತಿ ಮತ್ತು ನಗರಸಭೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಿತು.

ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.
ಲಂಚ ಸ್ವೀಕಾರದಷ್ಟೇ ಲಂಚ ಕೊಡುವುದು ಶಿಕ್ಷಾರ್ಹ ಅಪರಾಧ ಎಸಿಪಿ ಚಂದ್ರಶೇಖರ.

ಚನ್ನಪಟ್ಟಣ: ಲಂಚ ಸ್ವೀಕರಿಸುವುದು ಎಷ್ಟು ಅಪರಾಧವೋ ಲಂಚ ಕೊಡುವುದು ಅಷ್ಟೇ ಶಿಕ್ಷಾರ್ಹ ಅಪರಾಧ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ಚಂದ್ರಶೇಖ

ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ
ಶೆಟ್ಟಿಹಳ್ಳಿ ಕೆರೆ ಯಾವ ಇಲಾಖೆ ಗೆ ಸೇರಿದ್ದು ? ಬಗೆಹರಿಯದ ಗೊಂದಲ ! ಲೋಕಾಯುಕ್ತ ಬೇಸರ

ಚನ್ನಪಟ್ಟಣ: ಶೆಟ್ಟಿಹಳ್ಳಿ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಅರ್ಜಿದಾರರ ದೂರಿನ ಮೇರೆಗೆ ದೂರು ದಾಖಲಿಸಿಕೊಂಡು ಸರ್ವೇ ಮಾಡಿಸಲು ಸೂಚನೆ ನೀಡಿದ

ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್
ಕನ್ನಡವನ್ನು ಬಳಸಿ ಬೆಳೆಸಿದರೆ ಶಾಶ್ವತವಾಗಿ ಉಳಿಯಲಿದೆ ಕೆ ಸುಚೇಂದ್ರಪ್ರಸಾದ್

ಚನ್ನಪಟ್ಟಣ: ಕನ್ನಡ ಭಾಷೆಯನ್ನು ಬಳಸಿದಷ್ಟಾದರೂ ಬೆಳೆಸಬೇಕಾಗಿದೆ. ಕನ್ನಡ ನಾಡಿಗೆ ಚನ್ನಪಟ್ಟಣ ತಾಲ್ಲೂಕಿನ ಹಲವಾರು ಹಿರಿಯರು ಕೊಟ್ಟ ಕೊಡುಗೆ ಅಪಾ

ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ
ತಾಲ್ಲೂಕಿನಾದ್ಯಂತ ವಿಜೃಂಭಿಸಿದ ಕನ್ನಡದ ಹಬ್ಬ

ಚನ್ನಪಟ್ಟಣ: ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಶಾಲೆಗಳು, ಸಂಘ ಸಂಸ್ಥೆಗಳು, ಹೋರಾಟಗಾರರು ಮತ್ತು ವಾಹನಗಳ ಮಾಲೀಕರು ಸಹ ೬೪ ನೇ ಕನ್ನಡ ರ

ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು
ನಾಡು ನುಡಿ ಯ ಕೀಳರಿಮೆ ಪರದೇಶಿಗಳಿಂದಲ್ಲ, ನಮ್ಮಿಂದಲೇ ಆಗಿದೆ. ಉಪನ್ಯಾಸಕ ದೇವರಾಜು

ಚನ್ನಪಟ್ಟಣ: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ನಾಡು ನುಡಿ ಜಲ ನಮ್ಮ ಹಕ್ಕು, ನಾವು ಕೊಡುಗೈ ದಾನಿಗಳೇ ವಿನಹ ಬೇಡಿ ಪಡೆಯುವರಲ್ಲ, ಕನ್ನಡ ನಾ

Top Stories »  


Top ↑