Tel: 7676775624 | Mail: info@yellowandred.in

Language: EN KAN

    Follow us :


ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ಸ್ಪಂದಿಸಬೇಕು ಸು ತ ರಾಮೇಗೌಡ

Posted Date: 01 Jul, 2019

ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ಸ್ಪಂದಿಸಬೇಕು ಸು ತ ರಾಮೇಗೌಡ

ಚನ್ನಪಟ್ಟಣ: ಹಗಲಿರುಳೆನ್ನದೆ ಅವಶ್ಯಕತೆ ಇದ್ದಾಗ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಹ ಧೈರ್ಯ ಗುಂದದೆ ಪ್ರಾಮಾಣಿಕವಾಗಿ ಬರೆಯುವ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಸರ್ಕಾರ ಸ್ಪಂದಿಸಿದರೇ ಇನ್ನೂ ಹೆಚ್ಚು ಕ್ರಿಯಾಶೀಲರಾಗಬಹುದು ಎಂದು ಹಿರಿಯ ಪತ್ರಕರ್ತ ಬಯಲು ಸೀಮೆ ಸಂಜೆ ದಿನ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.

ಅವರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಯ ರಾಜ್ಯಾಧ್ಯಕ್ಷ, ರೇಷ್ಮೆ ಸೀಮೆ ಪತ್ರಿಕೆಯ ಸಂಪಾದಕ ರಮೇಶ್ ಗೌಡ ರ ನೇತೃತ್ವದಲ್ಲಿ ನಡೆದ *ಪತ್ರಿಕಾ ದಿನಾಚರಣೆಯ* ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ವರದಿಗಾರರಿಗೆ ಕೈ ತುಂಬಾ ಸಂಬಳ ಇದ್ದರೆ ಹೆಚ್ಚು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ, ಆದರೆ ಪ್ರಾಮಾಣಿಕವಾಗಿ ಪತ್ರಿಕೆ ನಡೆಸುವುದೇ ದುಸ್ತರವಾಗಿರುವಾಗ ವರದಿ ನಿರೀಕ್ಷಿಸುವುದು ಕಷ್ಟವಾಗಿದೆಯಾದರೂ ಹಲವು ಪತ್ರಕರ್ತರು ರಾಜಿಯಾಗದೇ ಸುದ್ದಿ ಮಾಡುತ್ರಿರುವುದು ಶ್ಲಾಘನೀಯ ಹಾಗೂ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸುತ್ತಿರುವ ಸಂಘಟನೆಯ ಪದಾಧಿಕಾರಿಗಳು ಸಹ ಅಭಿನಂದನಾರ್ಹರು ಎಂದರು.


ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ ಸುದ್ದಿ ಮಾಡುವುದು ಎಂದರೆ ಸುಲಭದ ಕೆಲಸವಲ್ಲ, ಒಂದು ಸುದ್ದಿ ಬರೆಯಬೇಕಾದರೇ ಅದರ ಮೂಲ ದಾಖಲೆ, ಹಾಗೂ ವಸ್ತುಗಳನ್ನು ಪಡೆದು ವಸ್ತುನಿಷ್ಠವಾಗಿ ಬರೆಯಬೇಕಾಗುತ್ತದೆ, ಕೆಲವು ಬಾರಿ ಪತ್ರಕರ್ತರು ಸಂಕಷ್ಟಗಳಿಗೆ ಸಿಲುಕಿಕೊಂಡಿರುವ ಉದಾಹರಣೆಗಳಿವೆ, ಇಂತಹ ಪತ್ರಕರ್ತರಿಗೆ ನಮ್ಮ ಸಂಘಟನೆಯ ವತಿಯಿಂದ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.


ದೃಶ್ಯ ಮಾಧ್ಯಮದ ಹಿರಿಯ ಕ್ಯಾಮೆರಾಮನ್ ಗುರುಮೂರ್ತಿ ಮತ್ತು ಸಮಯ ಟಿವಿ ಜಿಲ್ಲಾ ವರದಿಗಾರ ನಟರಾಜ್ ಮಾತನಾಡಿದರು.


ಬಯಲುಸೀಮೆ ಪತ್ರಿಕೆಯ ವರದಿಗಾರ ಗೋ ರಾ ಶ್ರೀನಿವಾಸ, ಕ್ರಾಂತಿರಂಗ ಪತ್ರಿಕೆಯ ಸಂಪಾದಕ ಡಿ ಟಿ ತಿಲಕರಾಜು, ಕಲಾಪ್ರಿಯ ಪತ್ರಿಕೆ ಯ ಸಂಪಾದಕಿ ಸುಧಾರಾಣಿ, ಕರ್ನಾಟಕ ಆವಾಜ್ ಉರ್ದು ಪತ್ರಿಕೆಯ ಸಂಪಾದಕ ಕರೀಂ, ಇನ್ನಿತರ ಪತ್ರಿಕೆಯ ವರದಿಗಾರರಾದ ಎಲೇಕೇರಿ ಮಂಜು, ಕುಮಾರ್, ಬಿಟಿವಿ ರವಿ, ಕೃಷ್ಣಮೂರ್ತಿ ಸೇರಿದಂತೆ ಅನೇಕ ಪತ್ರಕರ್ತರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ಮಳೂರುಪಟ್ಟಣ ರವಿ, ರೇಷ್ಮೆ ಸೀಮೆ ಪತ್ರಿಕೆಯ ಶಂಕರ್, ಬೋರ್ ವೆಲ್ ರಂಗನಾಥ , ಅಕ್ಕೂರು ರಮೇಶ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಬಾಲಕ ನಾಪತ್ತೆ
ಬಾಲಕ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಕಳ್ಳಿಹೊಸೂರು ಗ್ರಾಮದ ಲೋಕೇಶ್ ಮತ್ತು ಸರಿತಾ ದಂಪತಿಗಳ ಪುತ್ರ ಮಹೇಶ್ (೭) ಇಂದು ನಗರದ ಕೆನರಾ ಬ್ಯಾಂಕ್ ಬಳಿ ತನ್ನ ಅಜ್

ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ
ಭವಿಷ್ಯದಲ್ಲಿ ದೇಶ ಕಟ್ಟುವವರೇ ವಿದ್ಯಾರ್ಥಿಗಳು ಇಂದಿನ ರಾಜಕೀಯದ ವಿರುದ್ಧ ನೀವೇ ದಂಗೆ ಏಳಬೇಕು ಕುಮಾರಸ್ವಾಮಿ

ಚನ್ನಪಟ್ಟಣ: ಭವಿಷ್ಯದ ದೇಶೋದ್ದಾರಾಕರೇ ಇಂದಿನ ವಿದ್ಯಾರ್ಥಿಗಳು. ರಾಜಕೀಯ ಮತ್ತು ನಾಯಕರ ಪರ ಓಲೈಕೆ ಬಿಟ್ಟು ಓದಿನ ಬಗ್ಗೆ ಗಮನ ನೀಡಿ, ಉನ್ನತ ದರ್

ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ಒತ್ತುವರಿ ತಿಂಗಳೊಳಗೆ ಸರ್ವೇ ಮಾಡಿ ವರದಿ ನೀಡಿ ಲೋಕಾಯುಕ್ತ

*ಚನ್ನಪಟ್ಟಣ: ನಗರದ ಮಧ್ಯ ಭಾಗದಲ್ಲಿ ಇರುವ ಪುರಾತನ ಶೆಟ್ಟಿಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಶೀಘ್ರವಾಗಿ ಸರ್ವೇ ಮಾಡುವಂತೆ ಭೂ ಸ್ವಾಧೀನ ಅ

ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!
ನೀಲಕಂಠನಹಳ್ಳಿ ಕೂಡ್ಲೂರು ರಸ್ತೆಯ ನಾಲ್ಕು ಲಕ್ಷ ನುಂಗಿದ ಶಂಕರ್ & ಟೀಂ!

ಚನ್ನಪಟ್ಟಣ: ಜಿಲ್ಲಾ ಪಂಚಾಯತಿಯ ಪ್ರೊಬೆಷನರಿ ಕಿರಿಯ ಇಂಜಿನಿಯರ್ ಆಗಿದ್ದ *ಶಂಕರ್* ಜಿಲ್ಲಾ ಪಂಚಾಯತಿ ಅನುದಾನದ ಬಳಕೆಯ ಹಣವನ್ನು ತಾಲ್ಲೂಕಿನ ತುಂಡು ಗುತ್ತಿಗೆ ಕಾಮಗಾರಿಗಳ ಹೆಸರಿನಲ್ಲಿ ಲೂಟಿ ಹೊಡೆದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿವೆ, ಅ

ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ
ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ವಿಜಯಶಾಲಿಗಳಾಗಿ ಬನ್ನಿ ಹರೂರು ರಾಜಣ್ಣ

ಚನ್ನಪಟ್ಟಣ: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಕ್ರೀಡಾ ಪಟುಗಳು ವಿಜಯಶಾಲಿಗಳಾಗಿ ತಾಲ್ಲೂಕಿನ ಹೆಸರನ್ನು ಅಜರಾಮರಗೊಳ

ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್
ಹಾಸ್ಟೆಲ್ ನಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಜಿಲ್ಲಾ ಅಧಿಕಾರಿ ಬಸವರಾಜ್

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟು ಹಾಕಿದ ಇಂತಹ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದುಕೊಂಡು ಓದಿದ ಬಹುತೇಕ ವ

ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ
ಹದಿನೇಳ ರಂದು ವಿಶ್ವಕರ್ಮ ದಿನಾಚರಣೆ

ಚನ್ನಪಟ್ಟಣ: ಇದೇ ತಿಂಗಳ ಹದಿನೇಳನೇ ತಾರೀಖಿನಂದು ವಿಶ್ವಕರ್ಮ ದಿನಾಚರಣೆಯನ್ನು ತಾಲ್ಲೂಕು ಕಛೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯ

ಉಚಿತ \
ಉಚಿತ \"ಅಣಬೆ ಬೇಸಾಯ\" ತರಬೇತಿಗೆ ಅರ್ಜಿ ಆಹ್ವಾನ.

ಬಿಡದಿ ಬಳಿ ಇರುವ ಕೆನರಾ ಬ್ಯಾಂಕ್,  ಎ ಡಿ ಪೈ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹತ್ತು (೧೦) ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜಿಸಲಾಗಿದೆ.

ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ
ನಲವತ್ತೈದು ವರ್ಷದ ಹಿಂದೆ ಖರೀದಿ ಮಾಡಿದ ಜಮೀನಿಗೆ ಹುರುಳಿಲ್ಲದ ದೂರು ಆರೋಪ

ಚನ್ನಪಟ್ಟಣ: ನಲವತ್ತೈದು ವರ್ಷಗಳ ಹಿಂದೆ ಸಮುದಾಯದ ಮುಖಂಡರೊಬ್ಬರು ಮೂರು ಎಕರೆ ಜಮೀನು ಖರೀದಿ ಮಾಡಿದ್ದು ಅವರಿಂದ ಬೀಡಿ ಕಾರ್ಮಿಕರ ಶ್ರೇಯೋಭಿವೃದ್

ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್
ಮಕ್ಕಳಲ್ಲಿ ಅತಿಸಾರ ಭೇದಿ ತಡೆಗಟ್ಟಲು ರೋಟಾ ಲಸಿಕೆ ಹಾಕಿಸಿ ಡಾ ಅಶೋಕ್

ಚನ್ನಪಟ್ಟಣ: ರಾಷ್ಟ್ರದಲ್ಲೇ ಪ್ರಥಮವಾಗಿ ಶಿಶುಗಳಿಗೆ ಹಾಕಲ್ಪಡುತ್ತಿರುವ *ರೋಟಾ* ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ

Top Stories »  


Top ↑