Tel: 7676775624 | Mail: info@yellowandred.in

Language: EN KAN

    Follow us :


ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ವೀರೇಂದ್ರ ಸೆಹ್ವಾಗ್ ನೆರವು

Posted Date: 07 Apr, 2018

ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ವೀರೇಂದ್ರ ಸೆಹ್ವಾಗ್ ನೆರವು

ಪಾಲಕ್ಕಾಡ್: ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಜನರ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಜನಾಂಗದ ಯುವಕ ಮಧುವಿನ ಕುಟುಂಬಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹಾಯಧನ ನೀಡಿದ್ದಾರೆ. ಮಧುವಿನ ಅಮ್ಮ ಮಲ್ಲಿ ಅವರಿಗೆ ಸೆಹ್ವಾಗ್ ರೂ. 1.5 ಲಕ್ಷ ಚೆಕ್ ನೀಡಿದ್ದಾರೆ ಎಂದು ಕೇರಳದ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಅವರ ಫೌಂಡೇಶನ್ ಈ ಚೆಕ್ ನೀಡಿದ್ದು ಇದನ್ನು ಏಪ್ರಿಲ್ 11ರಂದು ಮಲ್ಲಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ದ ನ್ಯೂಸ್ ಮಿನಿಟ್ ಸುದ್ದಿ ತಾಣ ವರದಿ ಮಾಡಿದೆ.

ನಾನು ಮಧು ಅವರ ಕುಟುಂಬ ಮತ್ತು ಮಲ್ಲಿ ಅವರನ್ನು ಭೇಟಿ ಮಾಡಲಿದ್ದೇನೆ. ನನ್ನೊಂದಿಗೆ ಡಿವೈಎಸ್‍ಪಿ ಅಗಳಿ ಸುಬ್ರಮಣ್ಯನ್ ಸರ್ ಇರಲಿದ್ದಾರೆ. ಬುಡಕಟ್ಟು ಜನರ ಸಮಸ್ಯೆಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಿದೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.

ಸೆಹ್ವಾಗ್ ಅವರ ಈ ಸಹಾಯಕ್ಕೆ ಸಾಮಾಜಿಕ ತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಧು ಹತ್ಯೆಯಾದಾಗ ಸೆಹ್ವಾಗ್ ಮಾಡಿದ ಟ್ವೀಟ್ ವಿವಾದ ಸೃಷ್ಟಿಸಿತ್ತು. ಫೆಬ್ರವರಿ 24 ರಂದು ಟ್ವೀಟ್ ಮಾಡಿದ್ದ ಸೆಹ್ವಾಗ್  ಬುಡಕಟ್ಟು ಜನಾಂಗದ ಮಧು 1 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಿದ್ದಕ್ಕೆ ಉಬೈದ್, ಹುಸೈನ್, ಅಬ್ದುಲ್ ಕರೀಂ ಥಳಿಸಿ ಹತ್ಯೆ ಮಾಡಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿ ನಡೆದಿದ್ದು ಇದೊಂದು ತಲೆ ತಗ್ಗಿಸುವ ಪ್ರಕರಣ ಎಂದು ಟ್ವೀಟ್ ಮಾಡಿದ್ದರು. ಆದಾಗ್ಯೂ, ಈ ಟ್ವೀಟ್‍ನಲ್ಲಿ ಸೆಹ್ವಾಗ್ ಆರೋಪಿಗಳನ್ನು ಧರ್ಮದ ಆಧಾರದಲ್ಲಿ ನೋಡಿದ್ದು ತಪ್ಪು ಎಂದು ನೆಟಿಜನ್‍ಗಳು ಟೀಕಾಪ್ರಹಾರ ನಡೆಸಿದ್ದರು.

ಪ್ರಕರಣದ ವಿವರ : ಮುಕ್ಕಾಲಿ ಎಂಬಲ್ಲಿ ಆಹಾರವನ್ನು ಕಳ್ಳತನ ಮಾಡಿದ್ದಕ್ಕಾಗಿ ಅಟ್ಟಪ್ಪಾಡಿ ಕಡುಕಮಣ್ಣ ಎಂಬಲ್ಲಿ ವಾಸಿಸುತ್ತಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಗ್ರಾಮಸ್ಥರು ಸೆರೆ ಹಿಡಿದು ಥಳಿಸಿದ್ದರು. ನಂತರ ಪೊಲೀಸರ ವಶಕ್ಕೊಪ್ಪಿಸಿದ್ದರು. ಗ್ರಾಮಸ್ಥರಿಂದ ತೀವ್ರ ಹಲ್ಲೆಗೊಳಗಾದ ಮಧು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಧುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

(ಸಂಗ್ರಹ ವರದಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in sports »

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ

ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. 

ಟಾಸ್ ಸೋತು

ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್
ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್

ಮಾಸ್ಕೋ(ರಷ್ಯಾ): ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಫೈನಲ್

ಭಾರತದ ವಿರುದ್ಧ ಇಂಗ್ಲೆಂಡ್ ಗೆ ಜಯ
ಭಾರತದ ವಿರುದ್ಧ ಇಂಗ್ಲೆಂಡ್ ಗೆ ಜಯ

ಲಾರ್ಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 86 ರನ್ ಗಳಿಂದ ಜಯ ಗಳಿಸಿದೆ.  

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಎರಡನ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ನಾಟಿಂಗ್ ಹ್ಯಾಮ್: ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ನೀಡಿದ್ದ 269 ರನ್ ಗ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಲ್ಕು ರನ್ ಜಯ

ನವದೆಹಲಿ: ಐಪಿಎಲ್​ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ನಾಲ್ಕು ರನ್ ಗಳ ಗೆಲುವು ದಾಖಲಿಸಿದೆ.

ಇಂದು ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ನ

ಆರ್ ಸಿ ಬಿ ತಂಡಕ್ಕೆ ಜಯ

ಬೆಂಗಳೂರು: ಎಬಿಡಿ ವಿಲಿಯರ್ಸ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್ ಸಿಬಿ) ತಂಡ ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ಆರು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.  

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 9 ವಿಕೆಟ್‌ಗಳ ಜಯ

ಕೋಲ್ಕತಾ: ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​,  ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 9 ವಿಕೆಟ್ ಗಳ ಭ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 9 ವಿಕೆಟ್‌ಗಳ ಜಯ

ಕೋಲ್ಕತಾ: ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​,  ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 9 ವಿಕೆಟ್ ಗಳ ಭ

ಕ್ರಿಸ್ ಗೇಲ್ ಶತಕ : ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಜಯ
ಕ್ರಿಸ್ ಗೇಲ್ ಶತಕ : ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಜಯ

ಮೊಹಾಲಿ: ಮೊಹಾಲಿಯಲ್ಲಿ ಗುರುವಾರ  ನಡೆದ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವಿನ ಐಪಿಎಲ್​ ಟಿ20 ಪಂದ್ಯದಲ್ಲಿ ಪಂಜಾಬ್​ ತಂಡ 15 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಜಯ

ಮೊಹಾಲಿ: ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನಾಲ್ಕು ರನ್ ಗಳ ರೋಚಕ ಜಯ ಸಾಧಿಸಿದೆ.

ಪಂಜಾಬ್ ನೀಡಿದ್ದ 197 ರನ್

Top Stories »  


Top ↑